ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಿಳಾ ಟಿ20 ಲೀಗ್: ವಿಭಿನ್ನ ರೀತಿಯಲ್ಲಿ ಬೌಲಿಂಗ್ ಮಾಡಿ ಗಮನಸೆಳೆದ ಮಾಯಾ ಸೋನಾವಾನೆ

Maya Sonawane

ಮಹಾರಾಷ್ಟ್ರ ಮೂಲದ ಯುವ ಮಹಿಳಾ ಕ್ರಿಕೆಟರ್ ಮಾಯಾ ಸೋನಾವಾನೆ ರಾತ್ರೋ ರಾತ್ರಿ ಸುದ್ದಿಯಾಗಿದ್ದಾರೆ, ಇದಕ್ಕೆ ಕಾರಣ ಅವರ ವಿಭಿನ್ನ ರೀತಿಯ ಬೌಲಿಂಗ್ ಶೈಲಿಯಾಗಿದೆ. ಐಪಿಎಲ್ ಪ್ಲೇ ಆಫ್ ನಡುವೆ ನಡೆಯುತ್ತಿರುವ ಮಹಿಳಾ ಟಿ20 ಲೀಗ್‌ನಲ್ಲಿ ಮಂಗಳವಾರ ವೆಲಾಸಿಟಿ ಪರ ಚೊಚ್ಚಲ ಪಂದ್ಯವನ್ನಾಡಿದ ಈ ಬೌಲರ್‌ನ ಬೌಲಿಂಗ್ ಶೈಲಿ ಸಾಕಷ್ಟು ವೈರಲ್ ಆಗಿದೆ.

ಮಹಾರಾಷ್ಟ್ರದ 23 ವರ್ಷದ ಕ್ರಿಕೆಟ್ ಆಟಗಾರ್ತಿ ಮಾಯಾ ಸೋನಾವಾನೆ ಅವರು ವೆಲಾಸಿಟಿ ಮತ್ತು ಸೂಪರ್‌ನೋವಾಸ್ ನಡುವಿನ ಮಹಿಳಾ ಟಿ20 ಚಾಲೆಂಜ್ 2022 ರ ಎರಡನೇ ಪಂದ್ಯದಲ್ಲಿ ಗಮನ ಸೆಳೆದರು. ಸೋನಾವಾನೆ ಪಂದ್ಯಾವಳಿಯಲ್ಲಿ ತನ್ನ ಚೊಚ್ಚಲ ಪ್ರವೇಶ ಮಾಡಿದರು ಮತ್ತು ವೆಲೋಸಿಟಿಯ ಬೌಲಿಂಗ್ ಲೈನ್-ಅಪ್‌ನ ಭಾಗವಾಗಿದ್ದರು. ಆಕೆಯ ಅಸಾಂಪ್ರದಾಯಿಕ ಬೌಲಿಂಗ್ ಶೈಲಿಯು ಎಲ್ಲರನ್ನು ದಿಗ್ಭ್ರಮೆಗೊಳಿಸಿತು , ಇದು ಮಾಜಿ ದಕ್ಷಿಣ ಆಫ್ರಿಕಾದ ಟೆಸ್ಟ್ ಆಟಗಾರ ಪಾಲ್ ಆಡಮ್ಸ್ ಬೌಲಿಂಗ್ ಶೈಲಿಗೆ ಹೋಲುವಂತಿತ್ತು.

ಸಂಪೂರ್ಣವಾಗಿ ಬಾಗಿ ಬೌಲಿಂಗ್ ಮಾಡುವ ಸೋನಾವಾನೆ

ಯುವ ಬೌಲರ್ ಬೌಲಿಂಗ್ ಶೈಲಿಯನ್ನು ಗಮನಿಸಿದ್ರೆ, ಸೋನಾವಾನೆ ಸಂಪೂರ್ಣವಾಗಿ ನಡು ಬಗ್ಗಿಸಿ ಬೌಲಿಂಗ್ ಮಾಡುವುದರ ಜೊತೆಗೆ ಸರಿಯಾದ ಲೈನ್ & ಲೆಂಥ್‌ನೊಂದಿಗೆ ಬೌಲಿಂಗ್ ಮಾಡುವ ಮೂಲಕ ಗಮನಸೆಳೆದರು. ಇದೇ ರೀತಿ ದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ನರ್ ಆ್ಯಡಮ್ಸ್ ಕೂಡ ಬೌಲಿಂಗ್ ಮಾಡುತ್ತಿದ್ದನ್ನ ನಾವು ಇಲ್ಲಿ ನೆನಪಿಸಿಕೊಳ್ಳಬಹುದು.

IPL 2022: ಈ ಐವರು ಆಟಗಾರರು ಮುಂದಿನ ಐಪಿಎಲ್‌ ಸೀಸನ್ ಆಡುವುದು ಡೌಟ್

ಆರಂಭದಲ್ಲಿ ಬ್ಯಾಟರ್‌ಗಳನ್ನ ದಿಕ್ಕು ತಪ್ಪಿಸಿದ್ದ ಪಾಲ್ ಆಡಮ್ಸ್‌

ಆರಂಭದಲ್ಲಿ ಬ್ಯಾಟರ್‌ಗಳನ್ನ ದಿಕ್ಕು ತಪ್ಪಿಸಿದ್ದ ಪಾಲ್ ಆಡಮ್ಸ್‌

ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಪಾಲ್ ಆಡಮ್ಸ್‌ ಕೂಡ ಆರಂಬಿಕ ದಿನಗಳಲ್ಲಿ ವಿಭಿನ್ನ ಶೈಲಿಯ ಅಸಂಪದ್ರಾಯಿಕ ಬೌಲಿಂಗ್ ಮೂಲಕ ವಿಶ್ವ ಬ್ಯಾಟರ್‌ಗಳನ್ನು ಆಶ್ಚರ್ಯಗೊಳಿಸಿದರು. ಆದ್ರೆ ನಂತರದ ಪಂದ್ಯಗಳಲ್ಲಿ ಅವರ ವೈವಿಧ್ಯತೆಯ ಕೊರತೆಯನ್ನು ತ್ವರಿತವಾಗಿ ಬಹಿರಂಗಪಡಿಸಿದರು. ಪರಿಣಾಮವಾಗಿ, ಅವರು ನಿಷ್ಪರಿಣಾಮಕಾರಿಯಾಗಿದ್ದರ ಜೊತೆಗೆ ಎದುರಾಳಿ ಬ್ಯಾಟರ್‌ಗಳು ಸುಲಭವಾಗಿ ರನ್‌ಗಳಿಸಲು ಶುರು ಮಾಡಿದರು.

ಡು ಪ್ಲೆಸಿಸ್ ಮಾಡುತ್ತಿರುವ ಈ ತಪ್ಪು ಆರ್‌ಸಿಬಿಯ ಟ್ರೋಫಿ ಕನಸನ್ನು ಭಗ್ನಗೊಳಿಸಬಹುದು; ಕೊಹ್ಲಿಗೂ ಹಿಂಸೆ!

 ಚೊಚ್ಚಲ ಮಹಿಳಾ ಟಿ20 ಕಪ್ ಗೆಲ್ಲುವ ಗುರಿ ಹೊಂದಿರುವ ವೆಲಾಸಿಟಿ

ಚೊಚ್ಚಲ ಮಹಿಳಾ ಟಿ20 ಕಪ್ ಗೆಲ್ಲುವ ಗುರಿ ಹೊಂದಿರುವ ವೆಲಾಸಿಟಿ

ಬಿಸಿಸಿಐ ಮೊದಲ ಬಾರಿಗೆ ಈ ಪಂದ್ಯಾವಳಿಯನ್ನು 2018 ರಲ್ಲಿ ಆಯೋಜಿಸಿದಾಗ ಕೇವಲ ಎರಡು ತಂಡಗಳು ಭಾಗವಹಿಸಿದ್ದು, ಒಂದು ಪಂದ್ಯದೊಂದಿಗೆ ಪ್ರಾರಂಭಿಸಿತು. 2019 ರಲ್ಲಿ, ಬಿಸಿಸಿಐ ಮತ್ತೊಂದು ಹೊಸ ತಂಡವನ್ನು ಪರಿಚಯಿಸಿತು, ಅಲ್ಲಿ ಪ್ರತಿ ತಂಡವು ಇನ್ನೊಂದನ್ನು ಒಮ್ಮೆ ಆಡಿತು ಮತ್ತು ಅಗ್ರ ಎರಡು ತಂಡಗಳು ಫೈನಲ್‌ಗೆ ಮುನ್ನಡೆದವು.

ಆದ್ರೆ ಒಂದು ವರ್ಷದ ನಂತರ ಮಹಿಳಾ ಟಿ20 ಚಾಲೆಂಜ್ ಆಡಲಾಗುತ್ತಿದೆ. ಭಾರತದಲ್ಲಿನ ಕೋವಿಡ್-19 ಸನ್ನಿವೇಶಗಳಿಂದಾಗಿ ಇದನ್ನು ಕೊನೆಯದಾಗಿ 2020 ರಲ್ಲಿ ಯುಎಇಯಲ್ಲಿ ಆಡಲಾಯಿತು ಮತ್ತು ಭಾರತದ ಅಂತರರಾಷ್ಟ್ರೀಯ ಪ್ರವಾಸಗಳು ದಿನಾಂಕಗಳೊಂದಿಗೆ ಘರ್ಷಣೆಗೊಂಡಿದ್ದರಿಂದ ಕಳೆದ ವರ್ಷ ರದ್ದುಗೊಳಿಸಲಾಯಿತು.

Story first published: Thursday, May 26, 2022, 10:37 [IST]
Other articles published on May 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X