ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಮೆನ್ಸ್ ಟಿ20 ಚಾಲೆಂಜ್: ಸಹ ಆಟಗಾರ್ತಿಯರಿಗೆ ಸಲಹೆ ನೀಡಿದ ಮಿಥಾಲಿ ರಾಜ್

Womens T20 Challenge: Mithali Raj suggests teammates to focus on basics

ವಿಮೆನ್ಸ್ ಟಿ20 ಚಾಲೆಂಜ್‌ನಲ್ಲಿ ಪಾಲ್ಗೊಳ್ಳಲು ಮಹಿಳಾ ತಂಡದ ಆಟಗಾರ್ತಿಯರು ಈಗಾಗಲೇ ಯುಎಇಗೆ ತಲುಪಿದ್ದು ಆರು ದಿನಗಳ ಕ್ವಾರಂಟೈನ್‌ನಲ್ಲಿದ್ದಾರೆ. ಈ ಅವಧಿ ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದ್ದು ಬಳಿಕ ಎಲ್ಲಾ ಆಟಗಾರ್ತಿಯರು ಬಯೋ ಬಬಲ್‌ಗೆ ಸೇರ್ಪಡೆಗೊಂಡು ಅಭ್ಯಾಸದಲ್ಲಿ ನಿರತರಾಗಲಿದ್ದಾರೆ.

ವಿಮೆನ್ಸ್ ಟಿ20 ಚಾಲೆಂಜ್‌ನಲ್ಲಿ ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ವೆಲಾಸಿಟಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ನವೆಂಬರ್ 4-9ರ ಮಧ್ಯೆ ಈ ಟೂರ್ನಿ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಮಿಥಾಲಿ ರಾಜ್ ತಮ್ಮ ತಂಡದ ಸಹ ಆಟಗಾರ್ತಿಯರಿಗೆ ಸಲಹೆಯನ್ನು ನೀಡಿದ್ದಾರೆ. ನಿಮ್ಮ ಮೂಲಭೂತ ಬಲಗಳ ಬಗ್ಗೆ ನೀವು ಗಮನಹರಿಸಿ ಎಂದಿದ್ದಾರೆ.

ಉಪನಾಯಕನಾಗಿ ರಾಹುಲ್ ಆಯ್ಕೆಗೂ ಮುನ್ನ ಇನ್ನಷ್ಟು ಕಾಯಬಹುದಿತ್ತು: ದೀಪ್‌ದಾಸ್‌ ಗುಪ್ತಉಪನಾಯಕನಾಗಿ ರಾಹುಲ್ ಆಯ್ಕೆಗೂ ಮುನ್ನ ಇನ್ನಷ್ಟು ಕಾಯಬಹುದಿತ್ತು: ದೀಪ್‌ದಾಸ್‌ ಗುಪ್ತ

ಸುದೀರ್ಘ ಕಾಲದಿಂದ ನಾವು ಕ್ರಿಕೆಟ್ ಆಡಿಲ್ಲ. ಹೀಗಾಗಿ ಮತ್ತೆ ಅಂಗಳಕ್ಕಿಳಿದು ಆಡುವುದು ಸುಲಭವಲ್ಲ. ಹಾಗಾಗಿ ಎಲ್ಲ ಆಟಗಾರ್ತಿಯರೂ ತಮ್ಮ ಮೂಲಭೂತ ಸಂಗತಿಗಳತ್ತ ಗಮನ ನೀಡಿ ಎಂದಿದ್ದಾರೆ ಟೀಮ್ ಇಮಡಿಯಾದ ಮಾಜಿ ನಾಯಕಿಯೂ ಆದ ಮಿಥಾಲಿ ರಾಜ್.

"ನಾವು ಇಲ್ಲಿ ಯಾರ ಬಗ್ಗೆಯೂ ತೀರ್ಪು ನೀಡಲು ಬಂದಿಲ್ಲ. ನಾವೆಲ್ಲರೂ ಕ್ವಾರಂಟೈನ್ ಅವಧಿಯಿಂದ ಬಂದಿರುವುದರಿಂದಾಗಿ ನಮ್ಮ ಮೂಲಭೂತ ಆಟದತ್ತ ಗಮನಹರಿಸಬೇಕಿದೆ. ಒಂದು ಬಾರಿ ಆಟದ ಲಯ ದೊರೆತ ಬಳಿಕ ಅದರೊಳಗೆ ಹೋಗಲು ಸುಲಭವಾಗುತ್ತದೆ" ಎಂದು ಮಿಥಾಲಿ ರಾಜ್ ಹೇಳಿದ್ದಾರೆ.

ಭಾರತ vs ಆಸ್ಟ್ರೇಲಿಯಾ: ಟೆಸ್ಟ್, ಟಿ20, ಏಕದಿನ ಪಂದ್ಯಗಳ ಸಮಯ ಪ್ರಕಟಭಾರತ vs ಆಸ್ಟ್ರೇಲಿಯಾ: ಟೆಸ್ಟ್, ಟಿ20, ಏಕದಿನ ಪಂದ್ಯಗಳ ಸಮಯ ಪ್ರಕಟ

ವಿಮೆನ್ಸ್ ಟಿ20 ಚಾಲೆಂಜ್‌ನಲ್ಲಿ ಮೂರು ತಂಡಗಳು ಪಾಲ್ಗೊಳ್ಳುತ್ತಿದ್ದು ವೆಲಾಸಿಟಿ ತಂಡದ ನಾಯಕಿಯಾಗಿ ಮಿಥಾಲಿ ರಾಜ್ ಮುನ್ನಡೆಸುತ್ತಿದ್ದಾರೆ. ಟ್ರೈಲ್ ಬ್ಲೇಸರ್ಸ್ ಹಾಗೂ ಸೂಪರ್‌ನೋವಾಸ್ ತಂಡಗಳನ್ನು ಕ್ರಮವಾಗಿ ಸ್ಮೃತಿ ಮಂಧಾನ ಹಾಗೂ ಹರ್ಮನ್ ಪ್ರೀತ್‌ಕೌರ್ ಮುನ್ನಡೆಸಲಿದ್ದಾರೆ.

Story first published: Thursday, October 29, 2020, 9:43 [IST]
Other articles published on Oct 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X