ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಿಳಾ ಟಿ20 ವಿಶ್ವಕಪ್: ಶೆಫಾಲಿ-ಪೂನಂ ಅಬ್ಬರಕ್ಕೆ ತಲೆ ಬಾಗಿದ ಬಾಂಗ್ಲಾ

Womens T20 World Cup: India 18-run win against Bangladesh

ಪರ್ತ್, ಫೆಬ್ರವರಿ 24: ಶೆಫಾಲಿ ವರ್ಮಾ ಅವರ ಬಿರುಸಿನ ಬ್ಯಾಟಿಂಗ್ ಮತ್ತು ಪೂನಂ ಯಾದವ್ ಮಾರಕ ಬೌಲಿಂಗ್ ನೆರವಿನಿಂದ ಪರ್ತ್‌ನಲ್ಲಿ ಸೋಮವಾರ (ಫೆಬ್ರವರಿ 24) ನಡೆದ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ಮಹಿಳೆಯರ ವಿರುದ್ಧ ಭಾರತದ ಮಹಿಳಾ ತಂಡ 18 ರನ್ ಜಯ ಗಳಿಸಿದೆ. ಇದು ಟೂರ್ನಿಯಲ್ಲಿ ಭಾರತಕ್ಕೆ ಲಭಿಸುತ್ತಿರುವ ಸತತ ಎರಡನೇ ಗೆಲುವು.

ತುಂಬಿದ ಕ್ರೀಡಾಂಗಣದಲ್ಲಿ ಇಬ್ಬರು ಮಹಾನ್ ಕ್ರಿಕೆಟಿಗರನ್ನು ಉಲ್ಲೇಖಿಸಿದ ಟ್ರಂಪ್ತುಂಬಿದ ಕ್ರೀಡಾಂಗಣದಲ್ಲಿ ಇಬ್ಬರು ಮಹಾನ್ ಕ್ರಿಕೆಟಿಗರನ್ನು ಉಲ್ಲೇಖಿಸಿದ ಟ್ರಂಪ್

ಪರ್ತ್‌ನ ವಿಎಸಿಎ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ 6ನೇ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತದ ವನಿತಾ ತಂಡದ ಪರ 16 ಹರೆಯದ ಶೆಫಾಲಿ ವರ್ಮಾ 39 (17 ಎಸೆತ), ಜೆಮಿಮಾ ರೋಡ್ರಿಗಸ್ 34, ರೀಚಾ ಘೋಶ್ 14, ದೀಪ್ತೀ ಶರ್ಮಾ 11, ವೇದಾ ಕೃಷ್ಣಮೂರ್ತಿ 20 ರನ್ ಬಾರಿಸಿದರು.

ರಣಜಿ: ಬೆಂಗಾಲ್ ವಿರುದ್ಧದ ಸೆ.ಫೈನಲ್‌ಗೆ ಬಲಿಷ್ಠ ಕರ್ನಾಟಕ ತಂಡ ಪ್ರಕಟರಣಜಿ: ಬೆಂಗಾಲ್ ವಿರುದ್ಧದ ಸೆ.ಫೈನಲ್‌ಗೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

ಭಾರತ 20 ಓವರ್‌ಗೆ 6 ವಿಕೆಟ್‌ ಕಳೆದು 142 ರನ್ ಮಾಡಿತು. ಗುರಿ ಬೆಂಬತ್ತಿದ ಬಾಂಗ್ಲಾದೇಶ ಮಹಿಳಾ ತಂಡ, ಮುರ್ಶಿದಾ ಖತುನ್ 30, ಸಂಜಿದಾ ಇಸ್ಲಾಮ್ 10, ನಿಜರ್ ಸುಲ್ತಾನ 35, ಫಾಹಿಮಾ ಖತುನ್ 17, ರುಮಾನ ಅಹ್ಮದ್ 13 ರನ್‌ನೊಂದಿಗೆ 20 ಓವರ್‌ಗೆ 8 ವಿಕೆಟ್‌ ನಷ್ಟದಲ್ಲಿ 124 ರನ್ ಗಳಿಸಿ ತಲೆ ಬಾಗಿತು.

ಕ್ರಿಕೆಟರ್‌ಗೆ ಬರೋಬ್ಬರಿ 7 ವರ್ಷಗಳ ಸುದೀರ್ಘ ನಿಷೇಧ ವಿಧಿಸಿದ ಐಸಿಸಿಕ್ರಿಕೆಟರ್‌ಗೆ ಬರೋಬ್ಬರಿ 7 ವರ್ಷಗಳ ಸುದೀರ್ಘ ನಿಷೇಧ ವಿಧಿಸಿದ ಐಸಿಸಿ

ಭಾರತದ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾ ನಾಯಕಿ ಸಲ್ಮಾ ಖತುನ್ 2, ಪನ್ನಾ ಘೋಷ್ 2 ವಿಕೆಟ್‌ ಪಡೆದರೆ, ಬಾಂಗ್ಲಾ ಇನ್ನಿಂಗ್ಸ್‌ನಲ್ಲಿ ಭಾರತದ ಶಿಖಾ ಪಾಂಡೆ 14ಕ್ಕೆ 2, ರಾಜೇಶ್ವರಿ ಗಾಯಕ್ವಾಡ್ 1, ಅರುಂಧತಿ ರೆಡ್ಡಿ 2, ಪೂನಂ ಯಾದವ್ 18 ರನ್‌ಗೆ 3 ವಿಕೆಟ್ ಪಡೆದರು. ಶೆಫಾಲಿ ವರ್ಮಾ ಪಂದ್ಯಶ್ರೇಷ್ಠೆಯೆನಿಸಿದರು.

Story first published: Monday, February 24, 2020, 21:46 [IST]
Other articles published on Feb 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X