ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಥೈಲ್ಯಾಂಡ್‌ ವಿರುದ್ಧ ದಕ್ಷಿಣ ಆಫ್ರಿಕಾ ವನಿತಾ ತಂಡಕ್ಕೆ ದಾಖಲೆಯ ಜಯ

Womens T20 World Cup: South Africa hit record total to crush Thailand

ಕ್ಯಾನ್‌ಬೆರಾ, ಫೆಬ್ರವರಿ 28: ಶುಕ್ರವಾರ (ಫೆಬ್ರವರಿ 28) ನಡೆದ ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ಥೈಲ್ಯಾಂಡ್ ವಿರುದ್ಧ ದಕ್ಷಿಣ ಆಫ್ರಿಕಾ ವನಿತೆಯರು ದಾಖಲೆಯ ಗೆಲುವು ಸಾಧಿಸಿದ್ದಾರೆ. ಆರಂಭಿಕ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ಕಲೆ ಹಾಕಿದ 195 ರನ್ ಮೊತ್ತ ದಾಖಲೆಯಾಗಿ ಗುರುತಿಸಿಕೊಂಡಿದೆ. ಈ ಜಯದೊಂದಿಗೆ ಆಫ್ರಿಕಾ ವನಿತೆಯರು ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.

ಪೂಜಾರ, ಗವಾಸ್ಕರ್ ದಾಖಲೆ ಸರಿಗಟ್ಟಲಿದ್ದಾರೆ ಮಯಾಂಕ್ ಅಗರ್ವಾಲ್ಪೂಜಾರ, ಗವಾಸ್ಕರ್ ದಾಖಲೆ ಸರಿಗಟ್ಟಲಿದ್ದಾರೆ ಮಯಾಂಕ್ ಅಗರ್ವಾಲ್

ದಕ್ಷಿಣ ಆಫ್ರಿಕಾ ತಂಡದಿಂದ ಲಿಜೆಲ್ ಲೀ ಅವರ ಸ್ಫೋಟಕ ಶತಕ, ಸಿಮ್ ಲೂಸ್ ಅರ್ಧ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ದೊಡ್ಡ ಮೊತ್ತ ಕಲೆ ಹಾಕಲು ಸಾಧ್ಯವಾಯ್ತು. ಈ ಪಂದ್ಯದಲ್ಲಿ ಆಫ್ರಿಕಾ ಮಹಿಳೆಯರು ದಾಖಲಿಸಿರುವ 113 ರನ್ ಜಯವೂ ಬೃಹತ್ ರನ್ ಗೆಲುವಾಗಿ ಗಮನ ಸೆಳೆದಿದೆ.

ಅಂತಾರಾಷ್ಟ್ರೀಯ ಟಿ20 ದಾಖಲೆ ನಿರ್ಮಿಸಿದ 16ರ ಹುಡುಗಿ ಶೆಫಾಲಿ ವರ್ಮಾ!ಅಂತಾರಾಷ್ಟ್ರೀಯ ಟಿ20 ದಾಖಲೆ ನಿರ್ಮಿಸಿದ 16ರ ಹುಡುಗಿ ಶೆಫಾಲಿ ವರ್ಮಾ!

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ವನಿತೆಯರ ಪರ, ಆರಂಭಿಕ ಬ್ಯಾಟ್ಸ್‌ಮನ್ ಲಿಜೆಲ್ ಲೀ 101 (60 ಎಸೆತ), ಡೇನ್ ವ್ಯಾನ್ ನೀಕೆರ್ಕ್ 2, ಸನ್ ಲೂಸ್ 61 (41 ಎಸೆತ), ಕ್ಲೋಯ್ ಟ್ರಯಾನ್ 24, ಮಿಗ್ನಾನ್ ಡು ಪ್ರೀಜ್ 3 ರನ್ ಕೊಡುಗೆಯಿತ್ತರು. ಆಫ್ರಿಕಾ, 20 ಓವರ್‌ನಲ್ಲಿ 3 ವಿಕೆಟ್ ಕಳೆದು 195 ರನ್ ಗಳಿಸಿತು.

ವಿರಾಟ್ ಇಲ್ಲ, ಧೋನಿ ಇಲ್ಲ: ಪಾಕ್ ಆಟಗಾರನ ಆಲ್‌ಟೈಮ್‌ ಟಿ20‍ XI ನಲ್ಲಿ ಇಬ್ಬರೇ ಭಾರತೀಯರು!ವಿರಾಟ್ ಇಲ್ಲ, ಧೋನಿ ಇಲ್ಲ: ಪಾಕ್ ಆಟಗಾರನ ಆಲ್‌ಟೈಮ್‌ ಟಿ20‍ XI ನಲ್ಲಿ ಇಬ್ಬರೇ ಭಾರತೀಯರು!

ಗುರಿ ಬೆಂಬತ್ತಿದ ಥೈಲ್ಯಾಂಡ್‌ ತಂಡ, ಆರಂಭದಲ್ಲೇ ವಿಕೆಟ್‌ಗಳನ್ನು ಕಳೆದುಕೊಳ್ಳತೊಡಗಿತು. ಈ ತಂಡದ ಪರ 5ಕ್ಕೂ ಮಿಕ್ಕಿ ರನ್ ಗಳಿಸಿದವರೆಂದರೆ ನಟ್ಟಕನ್ ಚಾಂಟಮ್ (6 ರನ್), ನಟ್ಟಾಯ ಬೂಚತಮ್ (8), ಒನಿಚಾ ಕಾಮ್ಚೊಮ್ಫು (26), ವಂಗ್‌ಪಕ ಲಯೆಂಪ್ರಸರ್ಟ್ (6), ರತ್ನಪೂರ್ಣ್ ಪಡುಂಗ್ಲೆರ್ಡ್ (7) ಮಾತ್ರ. ಥೈಲ್ಯಾಂಡ್ 19.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 82 ರನ್ ಗಳಿಸಿತು.

ಸೆಕ್ಯೂರಿಟಿ ಗಾರ್ಡ್‌ ಜೊತೆಗೆ ಡ್ಯಾನ್ಸ್ ಮಾಡಿ ಮನಗೆದ್ದ ಟೀಮ್ ಇಂಡಿಯಾ ಆಟಗಾರ್ತಿಸೆಕ್ಯೂರಿಟಿ ಗಾರ್ಡ್‌ ಜೊತೆಗೆ ಡ್ಯಾನ್ಸ್ ಮಾಡಿ ಮನಗೆದ್ದ ಟೀಮ್ ಇಂಡಿಯಾ ಆಟಗಾರ್ತಿ

ಥೈಲ್ಯಾಂಡ್ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ನನ್ಕುಲುಲೆಕೊ ಮ್ಲಾಬಾ 1, ಶಬ್ನಿಮ್ ಇಸ್ಮಾಯಿಲ್ 3 (8 ರನ್), ಡೇನ್ ವ್ಯಾನ್ ನೀಕೆರ್ಕ್ 1, ಸನ್ ಲೂಸ್ 3 (15 ರನ್), ನಾಡಿನ್ ಡಿ ಕ್ಲಾರ್ಕ್ 1 ವಿಕೆಟ್ ಪಡೆದರು. ಸ್ಫೋಟಕ ಶತಕಕ್ಕಾಗಿ ದಕ್ಷಿಣ ಆಫ್ರಿಕಾದ ಲಿಜೆಲ್ ಲೀ ಪಂದ್ಯಶ್ರೇಷ್ಠೆ ಪ್ರಶಸ್ತಿ ಪಡೆದುಕೊಂಡರು.

Story first published: Friday, February 28, 2020, 15:22 [IST]
Other articles published on Feb 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X