ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಿಳಾ ಟಿ20 ವಿಶ್ವಕಪ್ ಫೈನಲ್: ಗೆದ್ದೇ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಕನ್ನಡತಿ ವೇದಾ

Womens T20 World Cup: Veda Krishnamurthy Exudes Confidence
ಗೆಲ್ಲುವ ಆತ್ಮವಿಶ್ವಾಸ ವ್ಯಕ್ತಪಡಿಸಿದ ಕನ್ನಡತಿ ವೇದಾ ಕೃಷ್ಣಮೂರ್ತಿ | Oneindia Kannada

ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಲು ಇನ್ನು ಕೇವಲ ಒಂದೇ ಮೆಟ್ಟಿಲು ಬಾಕಿಯಿದೆ. ಭಾನುವಾರ ನಡೆಯಲಿರುವ ಫೈನಲ್ ಕದನದಲ್ಲಿ ಟೀಮ್ ಇಂಡಿಯಾ ವನಿತೆಯರು ಆಸ್ಟ್ರೇಲಿಯಾ ವಿರುದ್ಧ ಸೆಣೆಸಾಟವನ್ನು ನಡೆಸಲಿದ್ದಾರೆ. ಈ ಕದನದಲ್ಲಿ ಟೀಮ್ ಇಂಡಿಯಾ ಗೆದ್ದೇ ಗೆಲ್ಲುವ ವಿಶ್ವಾಸವನ್ನು ಟೀಮ್ ಇಂಡಿಯಾದ ಪ್ರಮುಖ ಆಟಗಾರ್ತಿ ಕನ್ನಡತಿ ವೇದಾ ಕೃಷ್ಣಮೂರ್ತಿ ವ್ಯಕ್ತಪಡಿಸಿದ್ದಾರೆ.

ಐಸಿಸಿ ವಿಶ್ವಕಪ್‌ನ ಅಧಿಕೃತ ವೆಬ್‌ಸೈಟ್‌ಗೆ ಪ್ರತಿಕ್ರಿಯೆ ನೀಡಿದ ವೇದಾ ಕೃಷ್ಣಮೂರ್ತಿ 'ಫೈನಲ್‌ ಹಂತಕ್ಕೆ ತಲುಪುವುದು ನಮ್ಮ ತಂಡದ ಮೊದಲ ಕಾರ್ಯಯೋಜನೆಯಾಗಿತ್ತು. ಈ ಗುರಿಯನ್ನು ಈಗ ತಲುಪುವಲ್ಲಿ ಯಶಸ್ವಿಯಾಗಿದ್ದೇವೆ. ಇನ್ನು ನಮ್ಮ ಮುಂದಿರುವುದು ಫೈನಲ್‌ನಲ್ಲಿ ಉತ್ತಮ ಆಟವನ್ನು ಪ್ರದರ್ಶಿಸಿ ಗೆಲುವು ಸಾಧಿಸುವುದು ಎಂಬ ಮಾತನ್ನು ವೇದಾ ಕೃಷ್ಣಮೂರ್ತಿ ಹೇಳಿದ್ದಾರೆ.

ಮಹಿಳಾ ವಿಶ್ವಕಪ್ ಫೈನಲ್: ಭಾರತವನ್ನು ಎದುರಿಸಲು ಇಷ್ಟವಿಲ್ಲ ಎಂದ ಆಸ್ಟ್ರೇಲಿಯಾ ಬೌಲರ್ಮಹಿಳಾ ವಿಶ್ವಕಪ್ ಫೈನಲ್: ಭಾರತವನ್ನು ಎದುರಿಸಲು ಇಷ್ಟವಿಲ್ಲ ಎಂದ ಆಸ್ಟ್ರೇಲಿಯಾ ಬೌಲರ್

ಈ ಸಂದರ್ಭದಲ್ಲಿ ಭಾರತ ತಂಡದ ಒಟ್ಟಾರೆ ಸಾಮರ್ಥ್ಯದ ಬಗ್ಗೆಯೂ ವೇದಾ ಕೃಷ್ಣಮೂರ್ತಿ ವಿಶ್ವಾಸದ ಮಾತುಗಳನ್ನಾಡಿದ್ದಾರೆ. 'ಬ್ಯಾಟಿಂಗ್ ನಿಂದ ಹಿಡಿದು ಬೌಲಿಂಗ್‌ವರೆಗೆ ಎಲ್ಲವೂ ತಂಡಕ್ಕೆ ಪೂರಕವಾಗಿಯೇ ಇದೆ. ಹೀಗಾಗಿ ಭಾರತ ತಂಡದ ಬಗ್ಗೆ ಒಂದು ಜೋಕ್ ಹರಿದಾಡುತ್ತಿದೆ. ಈ ಟೂರ್ನಿಯನ್ನು ಭಾರತಕ್ಕಾಗಿಯೇ ಆಯೋಜಿಸಲಾಗಿದೆ ಎಂದು' ಎಂಬ ಮಾತನ್ನು ವೇದಾ ಕೃಷ್ಣಮೂರ್ತಿ ಹೇಳಿದ್ದಾರೆ.

ಇನ್ನು ಸೆಮಿಫೈನಲ್‌ನಲ್ಲಿ ಮಳೆಯ ಕಾರಣದಿಂದಾಗಿ ಫೈನಲ್ ಪ್ರವೇಶ ಗಿಟ್ಟಿಸಿಕೊಂಡ ವಿಚಾರವಾಗಿ ವೇದಾ 'ಲೀಗ್ ಹಂತದಲ್ಲಿ ಅಜೇಯವಾಗಿದ್ದು ಸೆಮಿ ಫೈನಲ್ ಹಂತಕ್ಕೇರಿದ ಹಿನ್ನೆಲೆಯಲ್ಲೇ ನಾವು ಫೈನಲ್‌ಗೆ ಪ್ರವೇಶವನ್ನು ಪಡೆದಿದ್ದೇವೆ. ಹವಾಮಾನದ ವೈಪರಿತ್ಯ ಯಾರ ಕೈಯ್ಯಲ್ಲೂ ಇಲ್ಲ' ಎಂದಿದ್ದಾರೆ.

ಮಹಿಳಾ ಟಿ20 ವಿಶ್ವಕಪ್: ಫೈನಲ್‌ಗೆ ಫ್ರೀ ಪಾಸ್‌ಗಿಂತ ಸೋಲು ಉತ್ತಮ ಎಂದ ದ. ಆಫ್ರಿಕಾ ನಾಯಕಿಮಹಿಳಾ ಟಿ20 ವಿಶ್ವಕಪ್: ಫೈನಲ್‌ಗೆ ಫ್ರೀ ಪಾಸ್‌ಗಿಂತ ಸೋಲು ಉತ್ತಮ ಎಂದ ದ. ಆಫ್ರಿಕಾ ನಾಯಕಿ

ಆಸ್ಟ್ರೇಲಿಯಾ ತಂಡವನ್ನು ಭಾರತದ ವನಿತೆಯರು ಗ್ರೂಪ್‌ ಹಂತದ ಮೊದಲ ಪಂದ್ಯದಲ್ಲಿ ಎದುರಿಸಿದ್ದರು. ಈ ಪಂದ್ಯದಲ್ಲಿ 17 ರನ್‌ಗಳಿಂದ ಭಾರತದ ವನಿತೆಯರು ಗೆದ್ದುಕೊಂಡಿದ್ದರು. ಇದು ಟೀಮ್ ಇಂಡಿಯಾ ಮಹಿಳೆಯರ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸಿದೆ. ಇದು ಫೈನಲ್‌ನಲ್ಲಿ ತಂಡಕ್ಕೆ ಲಾಭವಾಗುವ ನಿರೀಕ್ಷೆಯೂ ಇದೆ.

Story first published: Saturday, March 7, 2020, 10:32 [IST]
Other articles published on Mar 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X