ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಿಳಾ ಟಿ20: ಕೇವಲ 1 ರನ್ನಿಗೆ ಇಂಗ್ಲೆಂಡ್‌ ಎದುರು ತಲೆ ಬಾಗಿದ ಭಾರತ

Women’s T20I: India lose by 1 run to England

ಗುವಾಹಟಿ, ಮಾರ್ಚ್ 9: ಗುವಾಹಟಿಯ ಬರ್ಸಪರ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ (ಮಾರ್ಚ್ 9) ನಡೆದ ಭಾರತದ ಮಹಿಳೆಯರು ಮತ್ತು ಇಂಗ್ಲೆಂಡ್ ಮಹಿಳೆಯರ ನಡುವಿನ ಮೂರನೇ ಮತ್ತು ಕೊನೆಯ ಟಿ20 ಪಂದ್ಯದಲ್ಲಿ ಆತಿಥೇಯ ಭಾರತ ಕೇವಲ ಒಂದು ರನ್ನಿನಿಂದ ತಲೆ ಬಾಗಿದೆ. ಅಲ್ಲದೆ ಮೂರು ಪಂದ್ಯಗಳ ಈ ಟಿ20 ಸರಣಿಯಲ್ಲಿ 3-0ಯಿಂದ ವೈಟ್ ವಾಷ್ ಮುಖಭಂಗ ಅನುಭವಿಸಿದೆ.

ಆರ್ಮಿ ಕ್ಯಾಪ್ ಧರಿಸಿದ ಟೀಮ್ ಇಂಡಿಯಾ ವಿರುದ್ಧ ಕ್ರಮಕ್ಕೆ ಪಾಕ್ ಒತ್ತಾಯ!ಆರ್ಮಿ ಕ್ಯಾಪ್ ಧರಿಸಿದ ಟೀಮ್ ಇಂಡಿಯಾ ವಿರುದ್ಧ ಕ್ರಮಕ್ಕೆ ಪಾಕ್ ಒತ್ತಾಯ!

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಆಂಗ್ಲ ವನಿತೆಯರು, ಆರಂಭಿಕ ಆಟಗಾರ್ತಿ ಡೇನಿಯಲ್ ವ್ಯಾಟ್ 24, ಟಮ್ಮಿ ಬ್ಯೂಮಾಂಟ್ 29, ಆಮಿ ಎಲೆನ್ ಜೋನ್ಸ್ 26 ರನ್ ಬೆಂಬಲದೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 119 ರನ್ ಬಾರಿಸಿದರು. ಭಾರತದ ಅಂಜು ಪಾಟಿಲ್ ಮತ್ತು ಹರ್ಲೀನ್ ಡಿಯೋಲ್ ತಲಾ 2 ವಿಕೆಟ್ ಪಡೆದು ಎದುರಾಳಿಯನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

120 ರನ್ ಗುರಿ ಬೆನ್ನತ್ತಿದ ಭಾರತದ ವನಿತೆಯರು ನಾಯಕ ಸ್ಮೃತಿ ಮಂಧಾನ ಅರ್ಧಶತಕ (58), ಮಿಥಾಲಿ ರಾಜ್ ಅಜೇಯ 30 ರನ್ ಹೊರತಾಗಿಯೂ 20 ಓವರ್‌ಗೆ 6 ವಿಕೆಟ್ ಕಳೆದು 118 ರನ್ ಪೇರಿಸಲಷ್ಟೇ ಶಕ್ತವಾದರು. ಇಂಗ್ಲೆಂಡ್ ನ ಕೇಟ್ ಕ್ರಾಸ್‌ಗೆ ಪಂದ್ಯಶ್ರೇಷ್ಠೆ, ಡೇನಿಯಲ್ ವ್ಯಾಟ್‌ಗೆ ಸರಣಿ ಶ್ರೇಷ್ಠೆ ಪ್ರಶಸ್ತಿ ಲಭಿಸಿತು.

Story first published: Saturday, March 9, 2019, 18:55 [IST]
Other articles published on Mar 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X