ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಿಳಾ ಟಿ20: ಇಂಗ್ಲೆಂಡ್ ಸೋಲಿಸಿ ಪ್ರಶಸ್ತಿ ಮುಡಿಗೇರಿಸಿದ ಆಸ್ಟ್ರೇಲಿಯಾ

Womens World T20 2018: Australia thrash England, clinch fourth title

ಆ್ಯಂಟಿಗುವಾ, ನವೆಂಬರ್ 25: ಆ್ಯಂಟಿಗುವಾದ ನಾರ್ತ್‌ಸೌಂಡ್‌ನಲ್ಲಿರುವ ಸರ್‌ ವಿವಿಯನ್‌ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಭಾನುವಾರ (ನವೆಂಬರ್ 25) ನಡೆದ ಐಸಿಸಿ ಮಹಿಳಾ ವಿಶ್ವ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 8 ವಿಕೆಟ್ ಭರ್ಜರಿ ಗೆಲುವನ್ನಾಚರಿಸುವ ಮೂಲಕ ಆಸ್ಟ್ರೇಲಿಯಾ ವನಿತೆಯರು 4ನೇ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.

ಕಟ್ಟ ಕಡೆಗೆ ಕಾಡುವ ಪ್ರಶ್ನೆ, ಮಿಥಾಲಿ ರಾಜ್ ಆಡಿಸಲಿಲ್ಲವೇಕೆ?ಕಟ್ಟ ಕಡೆಗೆ ಕಾಡುವ ಪ್ರಶ್ನೆ, ಮಿಥಾಲಿ ರಾಜ್ ಆಡಿಸಲಿಲ್ಲವೇಕೆ?

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್ ಪರ ಡೇನಿಯಲ್ ವ್ಯಾಟ್ ಉತ್ತಮ ಆಟ ಪ್ರದರ್ಶಿಸಿದರು. ವ್ಯಾಟ್ 43 ರನ್ ಸೇರಿಸಿದರೆ, ಹೀದರ್ ನೈಟ್ 25 ರನ್ ಬೆಂಬಲ ಮಾತ್ರ ದೊರೆತಿದ್ದು ಇಂಗ್ಲೆಂಡ್ ಹಿನ್ನಡೆಗೆ ಕಾರಣವಾಯ್ತು. ಇಂಗ್ಲೆಂಡ್ 19.4 ಓವರ್‌ಗೆ 10 ವಿಕೆಟ್ 105 ರನ್ ಕಲೆ ಹಾಕಿತು.

ಇಂಗ್ಲೆಂಡ್ ಇನ್ನಿಂಗ್ಸ್ ವೇಳೆ ಆಸ್ಟ್ರೇಲಿಯಾ ಆಟಗಾರ್ತಿಯರಿಂದ ಉತ್ತಮ ದಾಳಿಯೂ ಕಂಡುಬಂತು. ಆಶ್ಲೇ ಗಾರ್ಡ್ನರ್ 3, ಎಲ್ಲೈಸ್ ಪೆರ್ರಿ 2, ಜಾರ್ಜಿಯಾ ವೇರ್ಹಾಮ್ 2, ಎಲ್ಲೈಸ್ ಪೆರ್ರಿ 1 ವಿಕೆಟ್ ಉರುಳಿಸಿ ಆಂಗ್ಲರನ್ನು ಕಾಡಿದರು. ಆಶ್ಲೇ ಗಾರ್ಡ್ನರ್ ಆಲ್‌ ರೌಂಡರ್ ಆಟವೂ ಗಮನ ಸೆಳೆಯಿತು.

ನಿಕೋಲಸ್ ಆರ್ಭಟ, 10 ಓವರ್ ಪಂದ್ಯವನ್ನು 99 ರನ್‌ನಿಂದ ಗೆದ್ದ ವಾರಿಯರ್ಸ್!ನಿಕೋಲಸ್ ಆರ್ಭಟ, 10 ಓವರ್ ಪಂದ್ಯವನ್ನು 99 ರನ್‌ನಿಂದ ಗೆದ್ದ ವಾರಿಯರ್ಸ್!

ಗುರಿ ಬೆನ್ನತ್ತಿದ ಆಸೀಸ್‌ ಪರ ಆಶ್ಲೇ ಗಾರ್ಡ್ನರ್ 33 , ಮೆಗ್ ಲ್ಯಾನಿಂಗ್ 28, ಅಲಿಸ್ಸಾ ಹೀಲಿ 22, ಬೆಥ್ ಮೂನಿ 14 ರನ್ ಗಳಿಸಿದ್ದರಿಂದ ಆಸ್ಟ್ರೇಲಿಯಾ ವನಿತೆಯರು ಕೇವಲ 15.1 ಓವರ್‌ನಲ್ಲೇ 2 ವಿಕೆಟ್ ಕಳೆದು 106 ರನ್ ಪೇರಿಸುವ ಮೂಲಕ ಗೆಲುವನ್ನಾಚರಿಸಿದರು.

Story first published: Sunday, November 25, 2018, 16:03 [IST]
Other articles published on Nov 25, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X