ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಿಳಾ ವಿಶ್ವಕಪ್ ಟಿ20: ಶತಕದ ದಾಖಲೆ ಬರೆದ ಭಾರತದ ನಾಯಕಿ ಹರ್ಮನ್ ಪ್ರೀತ್

 women world t20 india vs new zealand harmanpreet kaur hits century

ಗಯಾನಾ, ನವೆಂಬರ್ 9: ಮಹಿಳಾ ವಿಶ್ವಕಪ್ ಟಿ20 ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿಯೇ ಭಾರತ ಗಮನಾರ್ಹ ಸಾಧನೆ ಮಾಡಿದೆ.

ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಭಾರತದ ನಾಯಕಿ ಹರ್ಮನ್ ಪ್ರೀತ್ ಕೌರ್ ಟಿ20ಯಲ್ಲಿ ಭಾರತದ ಪರ ಚೊಚ್ಚಲ ಶತಕ ಬಾರಿಸಿದರು.

ಮಾತ್ರವಲ್ಲ, ಟಿ20ಗೆ ಪಾದಾರ್ಪಣೆ ಮಾಡಿದ ಜೆಮಿಮಹ್ ರೋಡ್ರಿಗಸ್ ಮೊದಲ ಪಂದ್ಯದಲ್ಲಿಯೇ ಅರ್ಧಶತಕ ಬಾರಿಸಿದ ಕೀರ್ತಿಗೆ ಪಾತ್ರರಾದರು. ವಿರಾಟ್ ಕೊಹ್ಲಿ ಸಹ ತಮ್ಮ ಚೊಚ್ಚಲ ಪಂದ್ಯದಲ್ಲಿಯೇ ಅರ್ಧಶತಕ ದಾಖಲಿಸಿದ್ದರು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 194 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಮಹಿಳಾ ಟಿ20 ಇತಿಹಾಸಲ್ಲಿಯೇ ಇದು ಅತ್ಯಂತ ಗರಿಷ್ಠ ಮೊತ್ತವಾಗಿದೆ.

ಟಾಸ್ ಗೆದ್ದ ನಾಯಕಿ ಹರ್ಮನ್ ಪ್ರೀತ್ ಕೌರ್ ಬ್ಯಾಟಿಂಗ್ ಆಯ್ದುಕೊಂಡರು. ಆದರೆ, ಭಾರತಕ್ಕೆ ನಿರೀಕ್ಷತ ಆರಂಭ ಸಿಗಲಿಲ್ಲ.ಆರಂಭಿಕ ಆಟಗಾರ್ತಿಯರಾದ ತಾನಿಯಾ ಭಾಟಿಯಾ ಮತ್ತು ಸ್ಮೃತಿ ಮಂದಾನ ಕ್ರಮವಾಗಿ ಕೇವಲ 9 ಮತ್ತು 2 ರನ್ ಗಳಿಸಿ ಲೀ ತಹುಹುಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು.

ನಾಲ್ಕನೆಯ ಕ್ರಮಾಂಕದಲ್ಲಿ ಬಂದ ದಯಾಳನ್ ಹೇಮಲತಾ ಕೂಡ 15 ರನ್ ಗಳಿಸಿ ಔಟಾದರು. 40 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಭಾರತ ಸಂಕಷ್ಟದಲ್ಲಿತ್ತು. ಆದರೆ, ನಂತರ ಕ್ರೀಸ್‌ಗೆ ಇಳಿದ ನಾಯಕಿ ಹರ್ಮನ್ ಪ್ರೀತ್, ಪಂದ್ಯದ ಗತಿಯನ್ನೇ ಬದಲಿಸಿದರು.

ಆರಂಭದಿಂದಲೇ ಅಬ್ಬರದ ಆಟಕ್ಕೆ ಮುಂದಾದ ಅವರು ಮೈದಾನದೆಲ್ಲಡೆ ಚೆಂಡನ್ನು ಅಟ್ಟಿದರು. ಕೇವಲ 49 ಎಸೆತಗಳಲ್ಲಿ ಶತಕ ಬಾರಿಸಿದರು. ಇದರಲ್ಲಿ ಏಳು ಬೌಂಡರಿಗಳಿದ್ದರೆ, ಎಂಟು ಭರ್ಜರಿ ಸಿಕ್ಸರ್‌ಗಳಿದ್ದವು.

ಅವರಿಗೆ ಉತ್ತಮ ಸಾತ್ ನೀಡಿದ ರೋಡ್ರಿಗಸ್, 45 ಎಸೆತಗಳಲ್ಲಿ 59 ರನ್ ಬಾರಿಸಿದರು. ಇಬ್ಬರೂ ನಾಲ್ಕನೆಯ ವಿಕೆಟ್‌ಗೆ 134 ರನ್‌ಗಳನ್ನು ಸೇರಿಸಿದರು. ತಂಡದ ಮೊತ್ತ 174 ಆಗಿದ್ದಾಗ ರೋಡ್ರಿಗಸ್ ಔಟಾದರು. ಇನ್ನಿಂಗ್ಸ್ ಮುಗಿಯಲು ಒಂದು ಎಸೆತ ಬಾಕಿ ಇರುವಾಗ ಹರ್ಮನ್ ಪ್ರೀತ್, ತಮ್ಮ ಅದ್ಭುತ ಇನ್ನಿಂಗ್ಸ್‌ ಅಂತ್ಯಗೊಳಿಸಿದರು.

Story first published: Monday, November 12, 2018, 19:24 [IST]
Other articles published on Nov 12, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X