ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅದ್ಭುತ ಫೀಲ್ಡಿಂಗ್ ಮೂಲಕ ಕ್ರಿಕೆಟ್ ಲೋಕವನ್ನು ನಿಬ್ಬೆರಗಾಗಿಸಿದ ಮಹಿಳಾ ಕ್ರಿಕೆಟರ್

womens t20 challenge: stunning save near boundary rope by Thailand’s Nattakan Chantam
Photo Credit:

ವಿಮೆನ್ಸ್ ಟಿ20 ಚಾಲೆಂಜ್‌ನ ಫೈನಲ್ ಪಂದ್ಯದಲ್ಲಿ ಸ್ಮೃತಿ ಮಂದನಾ ನೇತೃತ್ವದ ಟ್ರಯಲ್‌ಬ್ಲೇಸರ್ಸ್ ತಂಡ ಗೆದ್ದು ಚಾಂಪಿಯನ್ ಎನಿಸಿಕೊಂಡಿದೆ. ಈ ಮೂಲಕ ಮೊದಲ ಬಾರಿಗೆ ಮಂದನಾ ನೇತೃತ್ವ ಟ್ರಯಲ್‌ಬ್ಲೇಸರ್ಸ್ ಚಾಂಪಿಯನ್ ಪಟ್ಟಕ್ಕೇರಿದೆ. ಲೋಸ್ಕೋರಿಂಗ್ ಪಂದ್ಯವಾಗಿದ್ದರೂ ಅಭಿಮಾನಿಗಳಿಗೆ ಸಾಕಷ್ಟು ರೋಚಕತೆಯ ಅನುಭವವನ್ನು ನೀಡುವಲ್ಲಿ ಪಂದ್ಯ ಯಶಸ್ವಿಯಾಗಿತ್ತು.

ಈ ಫೈನಲ್ ಪಂದ್ಯದಲ್ಲಿ ಅದ್ಭುತ ಫೀಲ್ಡಿಂಗ್ ಮೂಲಕ ಕ್ರಿಕೆಟ್ ಜಗತ್ತನ್ನು ನಿಬ್ಬೆರಗಾಗಿಸಿದ್ದು ನಟಕಾನ್ ಚಾಂತಮ್. ಬೌಂಡರಿ ಲೈನ್‌ನ ಅಂಚಿನಲ್ಲಿ ಮಿಂಚಿನಂತೆ ಎರಗಿ ಬೌಂಡರಿಯನ್ನು ಉಳಿಸಿದ್ದರು ಚಾಂತಮ್. ಈ ಅದ್ಭುತ ಪ್ರದರ್ಶನಕ್ಕೆ ಪ್ರದರ್ಶನಕ್ಕೆ ಪ್ರಶಂಸೆಯ ಸುರಿಮಳೆಯೇ ಹರಿದುಬಂದಿದೆ. ಚಾಂತಮ್ ಥಾಯ್ಲಂಡ್ ಮೂಲದ ಕ್ರಿಕೆಟರ್ ಆಗಿದ್ದಾರೆ.

ಸೂಪರ್‌ನೋವಾಸ್ ಸೋಲಿಸಿ ಟ್ರೋಫಿ ಗೆದ್ದ ಟ್ರಯಲ್‌ಬ್ಲೇಸರ್ಸ್ಸೂಪರ್‌ನೋವಾಸ್ ಸೋಲಿಸಿ ಟ್ರೋಫಿ ಗೆದ್ದ ಟ್ರಯಲ್‌ಬ್ಲೇಸರ್ಸ್

ಟಾಸ್ ಸೋತು ಮಂದಾನ ನೇತೃತ್ವದ ಟ್ರಯಲ್‌ಬ್ಲೇಸರ್ಸ್ ಬ್ಯಾಟಿಂಗ್‌ಗೆ ಇಳಿದಿತ್ತು. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಅದ್ಭುತ ಬೌಲಿಂಗ್ ಪ್ರದರ್ಶನದ ಹಿನ್ನೆಲೆಯಲ್ಲಿ ಟ್ರಯಲ್‌ಬ್ಲೇಸರ್ಸ್ ನಿಗದಿತ 20 ಓವರ್‌ಗಳಲ್ಲಿ 118 ರನ್ ಗಳಿಸಕು ಮಾತ್ರವೇ ಶಕ್ತವಾಗಿತ್ತು. ಇನ್ನು ಬೆನ್ನಟ್ಟಿದ ಸೂಪರ್‌ನೋವಾಸ್ ಚಾಮರಿ ಅತ್ತಪಟ್ಟು ಹಾಗೂ ಜಮಿಮಾ ರೋಡ್ರಿಗಸ್ ಬ್ಯಾಟಿಂಗ್‌ಗೆ ಇಳಿದಿದ್ದರು.

ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ಜೂಲನ್ ಗೋಸ್ವಾಮಿ 3 ರನ್‌ಗಳನ್ನು ನೀಡಿ ನಿಯಂತ್ರಣ ಸಾಧಿಸಿದ ಬಳಿಕ ಎರಡನೇ ಓವರ್‌ ಅನ್ನು ನಾಯಕಿ ಮಂದಾನ ಸೋಫಿ ಎಕ್ಲೆಸ್ಟನ್‌ಗೆ ನೀಡಿದರು. ಇದರ ಮೊದಲ ಎಸೆತದಲ್ಲಿಯೇ ಜಮಿಮಾ ರೋಡ್ರಿಗಸ್ ಬೌಂಡರಿಯತ್ತ ಗುರಿ ಮಾಡಿ ಹೊಡೆದರು. ಬೌಂಡರಿ ಗೆರೆಯತ್ತ ಇನ್ನೇನು ತಲುಪುವಷ್ಟರಲ್ಲಿ ಚಾಂತಮ್ ಬೆನ್ನಟ್ಟಿ ಓಡಿ ಬಂದು ಹಾರಿ ಬೌಂಡರಿಯನ್ನು ತಡೆದಿದ್ದರು. ಈ ವಿಡಿಯೋ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದ್ದು ಪ್ರಶಂಸೆ ಹರಿದು ಬರುತ್ತಿದೆ.

ನಟಕಾನ್ ಚಾಂತಮ್ ಅವರ ಈ ಪ್ರಯತ್ನವನ್ನು ಈ ಬಾರಿಯ ಐಪಿಎಲ್‌ನಲ್ಲಿ ಸಿಕ್ಸರ್ ತಡೆದು ಸುದ್ದಿಯಾಗಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್‌ ತಂಡದ ನಿಕೋಲಸ್ ಪೋರನ್‌ಗೆ ಹೋಲಿಸಲಾಗುತ್ತಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಲೀಗ್ ಹಂತದ ಪಂದ್ಯದಲ್ಲಿ ಸಿಕ್ಸರ್‌ಗೆ ಬೀಳುತ್ತಿದ್ದ ಚೆಂಡನ್ನು ತಡೆದು ತಂಡಕ್ಕೆ ರನ್ ಉಳಿಸಿದ್ದರು ಪೂರನ್.

Story first published: Tuesday, November 10, 2020, 15:10 [IST]
Other articles published on Nov 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X