ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಿಳಾ ಟಿ20 ವಿಶ್ವಕಪ್: ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಗೆದ್ದ ಭಾರತೀಯ ವನಿತೆಯರು

Womens T20 World cup: india won against australia

ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ವನಿತೆಯರು ಭರ್ಜರಿಯಾಗಿ ಗೆದ್ದುಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಉದ್ಘಾಟನಾ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲರ್‌ಗಳು ನೀಡಿದ ಅದ್ಭುತ ಪ್ರದರ್ಶನದಿಂದ ಭರ್ಜರಿ ಜಯದೊಂದಿಗೆ ಶುಭಾರಂಭ ಮಾಡಿದೆ.

ಟೀಮ್ ಇಂಡಿಯಾದ ಸ್ನಿನ್ನರ್ ಪೂನಮ್ ಯಾದವ್ ಅವರ ಸ್ಪಿನ್‌ ದಾಳಿಗೆ ಆಸ್ಟ್ರೇಲಿಯಾ ಆಟಗಾರ್ತಿಯರು ಒಬ್ಬರ ಹಿಂದೊಬ್ಬರಂತೆ ಫೆವಿಲಿಯನ್ ಸೇರಿಕೊಂಡರು. ಭರ್ಜರಿ ನಾಲ್ಕು ವಿಕೆಟ್ ಕಿತ್ತ ಪೂನಮ್ ಟೀಮ್ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಕುಣಿದಾಡಿದ ಪಾಕಿಸ್ತಾನ ಆಟಗಾರ್ತಿಯರ ವೀಡಿಯೋ ಶೇರ್ ಮಾಡಿದ ಐಸಿಸಿಕುಣಿದಾಡಿದ ಪಾಕಿಸ್ತಾನ ಆಟಗಾರ್ತಿಯರ ವೀಡಿಯೋ ಶೇರ್ ಮಾಡಿದ ಐಸಿಸಿ

ಅಂತಿಮವಾಗಿ ಟೀಮ್ ಇಂಡಿಯಾ ಇನ್ನೂ ಒಂದು ಎಸೆತ ಬಾಕಿ ಉಳಿದಿರುವಂತೆಯೇ ಆಸ್ಟ್ರೇಲಿಯಾ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಭಾರತೀಯ ವನಿತೆಯರು ಆತಿಥೇಯ ಆಸ್ಟ್ರೇಲಿಯಾ ವಿರುದ್ಧ 17 ರನ್‌ಗಳ ಗೆಲುವನ್ನು ಆಚರಿಸಿದರು.

ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಸಾಧಾರಣ ಮೊತ್ತದ ಸವಾಲನ್ನು ನೀಡಿತು. 20 ಓವರ್‌ಗಳಿಂದ 132ರನ್‌ ಗಳಿಸಲಷ್ಟೇ ಟೀಮ್ ಇಂಡಿಯಾ ಶಕ್ತವಾಯಿತು. ದೀಪ್ತಿ ಶರ್ಮಾ 49 ರನ್‌ ಗಳಸಿದರೆ ಶೆಫಾಲಿ ವರ್ಮ ಮತ್ತು ಜಮಿಮ ರೋಡ್ರಗಸ್ ಕ್ರಮವಾಗಿ 29 ಮತ್ತು 26 ರನ್‌ಗಳಿಸಿದರು.

ಭಾರತ ನೀಡಿದ ಈ ಗುರಿಯನ್ನು ಆಸ್ಟ್ರೇಲಿಯಾ ವನಿತೆಯರು ಉತ್ತಮವಾಗಿ ಬೆನ್ನತ್ತಲು ಆಟಂಭಿಸಿದರು. ಆರಂಭದಲ್ಲಿ ಸಾಕಷ್ಟು ಆತ್ಮವಿಶ್ವಾದಿಂದ ಆಡಿದ ಆಸ್ಟ್ರೇಲಿಯಾ ತಂಡಕ್ಕೆ ಪೂನಮ್ ಯಾದವ್ ಮತ್ತು ಶಿಖಾ ಪಾಂಡೆ ಭಾರಿ ಹೊಡೆತವನ್ನು ನೀಡಿದರು. ಪೂನಮ್ 4 ವಿಕೆಟ್ ಪಡೆದರೆ ಶಿಖಾ 3 ವಿಕೆಟ್ ಕಿತ್ತರು. ಒಂದು ವಿಕೆಟ್ ರಾಜೇಶ್ವರಿ ಗಾಯಕ್ವಾಡ್ ಪಾಲಾಯಿತು.

Story first published: Friday, February 21, 2020, 17:57 [IST]
Other articles published on Feb 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X