ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಿಳಾ ಟಿ20 ವಿಶ್ವಕಪ್: ಸ್ಟಫಾನಿ ಟೇಲರ್ ಆಟಕ್ಕೆ ಶರಣಾದ ಥೈಲ್ಯಾಂಡ್

Womens T20 World Cup: West Indies vs Thailand, 2nd Match report

ಪರ್ತ್, ಫೆಬ್ರವರಿ 22: ಪರ್ತ್‌ನಲ್ಲಿ ಶನಿವಾರ (ಫೆಬ್ರವರಿ 22) ನಡೆದ ಮಹಿಳಾ ಟಿ20 ವಿಶ್ವಕಪ್ ದ್ವಿತೀಯ ಪಂದ್ಯದಲ್ಲಿ ದುರ್ಬಲ ತೈಲ್ಯಾಂಡ್‌ ವಿರುದ್ಧ ವೆಸ್ಟ್ ಇಂಡೀಸ್ ವನಿತಾ ತಂಡ 7 ವಿಕೆಟ್ ಸುಲಭ ಜಯ ಗಳಿಸಿದೆ. ವಿಂಡೀಸ್ ನಾಯಕಿ ಸ್ಟಫಾನಿ ಟೇಲರ್ ಅಜೇಯ 26 ರನ್, 3 ವಿಕೆಟ್‌ ಕೂಡ ಪಡೆದು ಆಲ್ ರೌಂಡರ್ ಆಟ ಪ್ರದರ್ಶಿಸಿದರು.

ಆ್ಯಷ್ಟನ್ ಅಗರ್‌ಗೆ ಹ್ಯಾಟ್ರಿಕ್ ವಿಕೆಟ್, ದಕ್ಷಿಣ ಆಫ್ರಿಕಾಕ್ಕೆ ಕೆಟ್ಟ ಹಣೆಪಟ್ಟಿ!ಆ್ಯಷ್ಟನ್ ಅಗರ್‌ಗೆ ಹ್ಯಾಟ್ರಿಕ್ ವಿಕೆಟ್, ದಕ್ಷಿಣ ಆಫ್ರಿಕಾಕ್ಕೆ ಕೆಟ್ಟ ಹಣೆಪಟ್ಟಿ!

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಥೈಲ್ಯಾಂಡ್ ಮಹಿಳಾ ತಂಡ, ನನ್ನಪತ್ ಕೊಂಚರೋಯೆಂಕೈ 33, ನರುಮೋಲ್ ಚೈವಾಯಿ 13, ನಟ್ಟಕನ್ ಚಾಂಟಮ್ ಗಮನಾರ್ಹ 9 ರನ್ ಕೊಡುಗೆಯೊಂದಿಗೆ 20 ಓವರ್‌ಗೆ 9 ವಿಕೆಟ್‌ ಕಳೆದು ಕೇವಲ 78 ರನ್ ಕಲೆ ಹಾಕಲಷ್ಟೇ ಶಕ್ತವಾಯ್ತು.

ಐಪಿಎಲ್ 2020: ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಪೂರ್ಣ ವೇಳಾಪಟ್ಟಿಐಪಿಎಲ್ 2020: ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಪೂರ್ಣ ವೇಳಾಪಟ್ಟಿ

ಗುರಿ ಬೆಂಬತ್ತಿದ ವೆಸ್ಟ್ ಇಂಡೀಸ್ ಮಹಿಳಾ ತಂಡ, ಹೇಲಿ ಮ್ಯಾಥ್ಯೂಸ್ 16, ಸ್ಟಫಾನಿ ಟೇಲರ್ ಅಜೇಯ 26, ಶೆಮೈನ್ ಕ್ಯಾಂಪ್ಬೆಲ್ಲೆ ಅಜೇಯ 25 ರನ್‌ ಸೇರ್ಪಡೆಯೊಂದಿಗೆ 16.4ನೇ ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 80 ರನ್ ಪೇರಿಸಿ ಗೆಲುವನ್ನಾಚರಿಸಿತು.

ಮಹಿಳಾ ಟಿ20 ವಿಶ್ವಕಪ್: ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಗೆದ್ದ ಭಾರತೀಯ ವನಿತೆಯರುಮಹಿಳಾ ಟಿ20 ವಿಶ್ವಕಪ್: ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಗೆದ್ದ ಭಾರತೀಯ ವನಿತೆಯರು

ಥೈಲ್ಯಾಂಡ್ ಇನ್ನಿಂಗ್ಸ್‌ನಲ್ಲಿ ವಿಂಡೀಸ್‌ನ ಸ್ಟಫಾನಿ ಟೇಲರ್ ಕೇವಲ 13 ರನ್‌ಗೆ 3 ವಿಕೆಟ್‌ ಮುರಿದು ಎದುರಾಳಿ ತಂಡದ ಸೋಲಿಗೆ ಕಾರಣರಾದರು. ಸ್ಟಫಾನಿ ಪಂದ್ಯಶ್ರೇಷ್ಠೆ ಪ್ರಶಸ್ತಿಗೂ ಭಾಜನರಾದರು. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಸೆಣಸಾಡಿತ್ತು. ಇದರಲ್ಲಿ ಟೀಮ್ ಇಂಡಿಯಾ ವನಿತೆಯರು 17 ರನ್‌ ಗೆಲುವಿನೊಂದಿಗೆ ಶುಭಾರಂಭ ಕಂಡಿದ್ದರು.

Story first published: Saturday, February 22, 2020, 17:20 [IST]
Other articles published on Feb 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X