ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಿಳಾ ಟಿ20: ಆಸ್ಟ್ರೇಲಿಯಾ ತಂಡವನ್ನು 48 ರನ್‌ನಿಂದ ಕೆಡವಿದ ಭಾರತ

Womens World T20: Mandhana, spinners set up Indias top finish

ಗಯಾನಾ, ನವೆಂಬರ್ 18: ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಶನಿವಾರ (ನವೆಂಬರ್ 17) ನಡೆದ ಐಸಿಸಿ ಮಹಿಳಾ ವಿಶ್ವ ಟಿ20 ಟೂರ್ನಿಯ 17ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ 48 ರನ್ ಜಯ ಸಾಧಿಸಿದೆ. ಸ್ಮೃತಿ ಮಂಧಾನ ಮತ್ತು ಹರ್ಮನ್‌ಪ್ರೀತ್‌ ಕೌರ್ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಭಾರತದ ಮಹಿಳೆಯರು ಆಸೀಸ್ ಮಹಿಳೆಯರನ್ನು ಸುಲಭವಾಗಿ ಹಿಮ್ಮೆಟ್ಟಿಸಿದರು.

ಯುವ ಬ್ಯಾಟ್ಸ್ಮನ್ ರಿಷಬ್ ಪಂತ್‌ 'ಚಾಂಪಿಯನ್' ಎಂದ ವಿರಾಟ್ ಕೊಹ್ಲಿ!ಯುವ ಬ್ಯಾಟ್ಸ್ಮನ್ ರಿಷಬ್ ಪಂತ್‌ 'ಚಾಂಪಿಯನ್' ಎಂದ ವಿರಾಟ್ ಕೊಹ್ಲಿ!

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಭಾರತ, ತಾನಿಯಾ ಭಾಟಿಯಾ (2 ರನ್) ಅವರ ವಿಕೆಟನ್ನು ಬೇಗನೆ ಕಳೆದುಕೊಂಡಿತು. ಆದರೆ ಮತ್ತೊಬ್ಬ ಆರಂಭಿಕ ಆಟಗಾರ್ತಿ ಮಂಧಾನ ಕ್ರೀಸ್‌ಗೆ ಅಂಟಿ ನಿಂತರು. 55 ಎಸೆತಗಳಲ್ಲಿ ಸ್ಮೃತಿ 9 ಬೌಂಡರಿ, 3 ಸಿಕ್ಸರ್ ಸೇರಿ ಭರ್ಜರಿ 83 ರನ್ ಚಚ್ಚಿದರು.

ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ 27 ಎಸೆತಗಳಿಗೆ 43 ರನ್ ಪೇರಿಸಿದ್ದು ತಂಡದ ಗೆಲುವಿನಲ್ಲಿ ನಿರ್ಣಾಯಕವೆನಿಸಿತು. ಆದರೆ ಉಳಿದ ಆಟಗಾರ್ತಿಯರು ಸಾಲಾಗಿ ವಿಕೆಟ್ ಒಪ್ಪಿಸಿದ್ದರಿಂದ ಭಾರತ 20 ಓವರ್ ಗೆ 8 ವಿಕೆಟ್ ಕಳೆದು 167 ರನ್ ಪೇರಿಸಿತು. ಆಸೀಸ್ ಪರ ಎಲ್ಲೈಸ್ ಪೆರ್ರಿ 3, ಡೆಲಿಸ್ಸಾ ಕಿಮ್ಮಿನ್ಸ್ ಮತ್ತು ಆಶ್ಲೇ ಗಾರ್ಡ್ನರ್ ತಲಾ 2 ವಿಕೆಟ್ ಉರುಳಿಸಿ ಭಾರತದ ಆಟಗಾರ್ತಿಯರ ರನ್ ಕದಿಯುವಿಕೆಗೆ ಬ್ರೇಕ್ ಹಾಕಿದರು.

ಗುರಿ ಬೆನ್ನತ್ತಿದ ಆಸ್ಟ್ರೇಲಿಯ ಪರ ಎಲ್ಲೈಸ್ ಪೆರ್ರಿ ಆಲ್ ರೌಂಡರ್ ಆಟ ಪ್ರದರ್ಶಿಸಿದರು. ಎಲ್ಲೈಸ್ 28 ಎಸೆತಗಳಿಗೆ 39 ರನ್ ಸೇರಿಸಿದರು. ಆದರೆ ಉಳಿದ ಆಟಗಾರ್ತಿಯರ ಬ್ಯಾಟಿಂಗ್ ಬೆಂಬಲ ಆಸೀಸ್ ಗೆ ದೊರೆಯಲಿಲ್ಲ. ಆಸ್ಟ್ರೇಲಿಯಾ ವನಿತೆಯರು 19.4 ಓವರ್ ನಲ್ಲಿ ಎಲ್ಲಾ ವಿಕೆಟ್ ಕಳೆದು 119 ರನ್ ಪೇರಿಸಿ ಶರಣಾದರು.

ರಣಜಿ ಟ್ರೋಫಿ: ಇನ್ನಿಂಗ್ಸ್‌ನಲ್ಲಿ 15 ಓವರ್ ಮಾತ್ರ ಎಸೆಯಲು ಶಮಿಗೆ ಅವಕಾಶ!ರಣಜಿ ಟ್ರೋಫಿ: ಇನ್ನಿಂಗ್ಸ್‌ನಲ್ಲಿ 15 ಓವರ್ ಮಾತ್ರ ಎಸೆಯಲು ಶಮಿಗೆ ಅವಕಾಶ!

ಆಸೀಸ್ ಇನ್ನಿಂಗ್ಸ್ ವೇಳೆ ಭಾರತದ ಆಟಗಾರ್ತಿಯರ ಮಾರಕ ಬೌಲಿಂಗ್ ದಾಳಿಯೂ ಗಮನ ಸೆಳೆಯಿತು. ಭಾರತದ ಅಂಜು ಪಾಟಿಲ್ 3, ದೀಪ್ತಿ ಶರ್ಮಾ, ರಾಧಾ ಯಾದವ್, ಪೂನಂ ಯಾದವ್ ತಲಾ 2 ವಿಕೆಟ್ ಕೆಡವಿ ಎದುರಾಳಿಗೆ ಸೋಲುಣಿಸಿದರು. ಸ್ಮೃತಿ ಮಂಧಾನ ಪಂದ್ಯಶ್ರೇಷ್ಠ ಆಟಗಾರ್ತಿ ಎನಿಸಿದರು.

ಗ್ರೂಪ್ 'ಬಿ'ಯಲ್ಲಿರುವ ಎರಡೂ ತಂಡಗಳು ಆಡಿರುವ ಮೂರೂ ಪಂದ್ಯಗಳಲ್ಲೂ ಜಯ ಸಾಧಿಸಿ 6-6 ಅಂಕಗಳನ್ನು ಹಂಚಿಕೊಂಡಿದ್ದವು. ಈ ಪಂದ್ಯದ ಬಳಿಕ ಭಾರತ 2 (+6) ಹೆಚ್ಚುವರಿ ಅಂಕಗಳೊಂದಿಗೆ ಬಿ ಗ್ರೂಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಭಾರತ ಈಗಾಗಲೇ ಸೆಮಿಫೈನಲ್ ಗೆ ಪ್ರವೇಶಿರುವುದರಿಂದ ಇಂದಿನ ಪಂದ್ಯ ಒಂದರ್ಥದಲ್ಲಿ ಔಪಚಾರಿಕವಾಗಿತ್ತು. ಅತ್ತ ಎ ಗ್ರೂಪ್ ನಲ್ಲಿ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಂಡಗಳು ಅಂಕಪಟ್ಟಿಯ ಮೊದಲೆರಡು ಸ್ಥಾನಗಳಲ್ಲಿವೆ.

ಭಾರತ ತಂಡ: ಸ್ಮೃತಿ ಮಂಧಾನ, ತಾನಿಯಾ ಭಾಟಿಯಾ (W), ಜೆಮಿಮಾ ರಾಡ್ರಿಗಸ್, ಹರ್ಮನ್ಪ್ರೀತ್ ಕೌರ್ (ಸಿ), ವೇದಾ ಕೃಷ್ಣಮೂರ್ತಿ, ದಯಾಲನ್ ಹೇಮಲತಾ, ದೀಪ್ತಿ ಶರ್ಮಾ, ಅನುಜಾ ಪಾಟೀಲ್, ರಾಧಾ ಯಾದವ್, ಅರುಂಧತಿ ರೆಡ್ಡಿ, ಪೂನಮ್ ಯಾದವ್.

ಆಸ್ಟ್ರೇಲಿಯಾ ತಂಡ: ಬೆಥ್ ಮೂನಿ, ಅಲಿಸಾ ಹೀಲಿ (W), ಮೆಗ್ ಲ್ಯಾನ್ನಿಂಗ್ (ಸಿ), ಅಶ್ಲೀಗ್ ಗಾರ್ಡ್ನರ್, ಎಲೈಸ್ ವಿಲ್ಲನಿ, ರಾಚೆಲ್ ಹೇಯ್ನ್ಸ್, ಎಲ್ಲೈ ಪೆರ್ರಿ, ಸೋಫಿ ಮೋಲಿನೆಕ್ಸ್, ಡೆಲಿಸ್ಸಾ ಕಿಮ್ಮಿನ್ಸ್, ಟೇಲಾ ವಲೆಮಿಂಕ್, ಮೇಗನ್ ಸ್ಕಟ್.

Story first published: Sunday, November 18, 2018, 0:13 [IST]
Other articles published on Nov 18, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X