ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂದಿನ ಎರಡು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿದರೆ ಅಚ್ಚರಿಯಿಲ್ಲ: ದೀಪ್ ದಾಸ್‌ಗುಪ್ತ

Wont be surprised if Virat gets a hundred in the next couple of games: Deep Dasgupta

ಮಾಜಿ ಕ್ರಿಕೆಟಿಗ ದೀಪ್‌ದಾಸ್ ಗುಪ್ತ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶತಕದ ಬಲಗಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ವಿರಾಟ್ ಕೊಹ್ಲಿಯ ಫಾರ್ಮ್ ಗಮನಿಸಿ ಮುಂದಿನೆರಡು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಶತಕವನ್ನು ಬಾರಿಸಿದರೆ ಅಚ್ಚರಿಯಿಲ್ಲ ಎಂದು ಮಾಜಿ ವಿಕೆಟ್ ಕೀಪರ್ ದೀಪ್‌ ದಾಸ್‌ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 2019ರ ನವೆಂಬರ್ ತಿಂಗಳಿನಲ್ಲಿ ಬಾಂಗ್ಲಾದೇಶದ ವಿರುದ್ಧದ ಭಾರತದ ಚೊಚ್ಚಲ ಅಹರ್ನಿಶಿ ಪಂದ್ಯದಲ್ಲಿ ಶತಕ ಗಳಿಸಿದ್ದರು. ಆದರೆ ಅದಾದ ಬಳಿಕ ಮತ್ತೊಂದು ಶತಕ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ಸಿಡಿದಿಲ್ಲ. ಕೆಲ ಬಾರಿ ಶತಕದ ಸಮೀಪಕ್ಕೆ ಕೊಹ್ಲಿ ಬಂದಿದ್ದರಾದರೂ ಶತಕವನ್ನಾಗಿ ಪರಿವರ್ತಿಸಲು ಸಾಧ್ಯವಾಗಿಲ್ಲ.

ಭಾರತ ವಿರುದ್ಧದ ದ್ವಿತೀಯ ಏಕದಿನಕ್ಕೆ ಮಾರ್ಗನ್, ಬಿಲ್ಲಿಂಗ್ಸ್‌ ಅನುಮಾನಭಾರತ ವಿರುದ್ಧದ ದ್ವಿತೀಯ ಏಕದಿನಕ್ಕೆ ಮಾರ್ಗನ್, ಬಿಲ್ಲಿಂಗ್ಸ್‌ ಅನುಮಾನ

ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ಕೊಹ್ಲಿ ಕೊನೆಯ ಶತಕವನ್ನು ಬಾರಿಸಿದ್ದು 2019ರ ಆಗಸ್ಟ್‌ನಲ್ಲಿ. ಏಕದಿನ ವಿಶ್ವಕಪ್‌ನ ನಂತರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿ ಶತಕವನ್ನು ಬಾರಿಸಿದ್ದರು. ಆ ಬಳಿಕ ಏಕದಿನ ಕ್ರಿಕೆಟ್ನಲ್ಲಿ ಮೂರಂಕಿ ಮೊತ್ತವನ್ನು ನಾಯಕ ವಿರಾಟ್ ಕೊಹ್ಲಿಯಿಂದ ಬಾರಿಸಲು ಸಾಧ್ಯವಾಗಿಲ್ಲ.

"ಈ ಮಾದರಿಯಲ್ಲಿ ಈಗಾಗಲೇ 43 ಶತಕವನ್ನು ಗಳಿಸಿದ ಆಟಗಾರನೋರ್ವ ಮತ್ತಷ್ಟು ಶತಕಗಳನ್ನು ಗಳಿಸಲು ಹೆಚ್ಆಗಿ ತಲೆಕೆಡಿಸಿಕೊಳ್ಳುತ್ತಾನೆ ಎನಿಸುತ್ತಿಲ್ಲ. ಕಳೆದ ಪಂದ್ಯದಲ್ಲಿಯೇ ಆತ ಶತಕವನ್ನು ಗಳಿಸುತ್ತಾನೆ ಅಂದಿಕೊಂಡಿದ್ದೆ" ಎಂದು ದೀಪ್ ದಾಸ್‌ಗುಪ್ತ ಹೇಳಿಕೆಯನ್ನು ನೀಡಿದ್ದಾರೆ.

"ಆತ ಬ್ಯಾಟಿಂಗ್ ಮಾಡುತ್ತಿದ್ದ ರೀತಿ, ಆತ ಸಂಪೂರ್ಣವಾಗಿ ಬೌಲರ್‌ಗಳ ಮೇಲೆ ಸವಾರಿ ಮಾಡುತ್ತಿದ್ದರು. ದರದೃಷ್ಟವಶಾತ್ ಆತ ಫಿಲ್ಡರ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಅದು ಆತನ ಫೇವರೀಟ್ ಶಾಟ್. ಅದೆಲ್ಲವೂ ಸಮಯದ ವಿಚಾರ. ಮುಂದಿನ ಎರಡು ಪಂದ್ಯಗಳಲ್ಲಿ ಆತ ಶತಕವನ್ನು ಬಾರಿಸಲಿದ್ದಾರೆ" ಎಂದು ದೀಪ್ ದಾಸ್‌ಗುಪ್ತ ಅಭಿಪ್ರಾಯ ಪಟ್ಟಿದ್ದಾರೆ.

Story first published: Wednesday, March 24, 2021, 23:07 [IST]
Other articles published on Mar 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X