ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕ್‌ ಕ್ರಿಕೆಟ್‌ ತಂಡದ ಬಗ್ಗೆ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಿದು!

Working on developing worlds best cricket team, says Pakistan PM

ವಾಷಿಂಗ್ಟನ್‌, ಜುಲೈ 22: ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ನ 12ನೇ ಆವೃತ್ತಿಯ ಟೂರ್ನಿಯಲ್ಲಿ ಸೆಮಿಫೈನಲ್‌ ಹೊಸ್ತಿಲಲ್ಲಿ ಪಾಕಿಸ್ತಾನ ತಂಡ ಹೊರ ಬಿದ್ದ ಬಳಿಕ, ಮಾತನಾಡಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ "ವಿಶ್ವ ಶ್ರೇಷ್ಠ ಕ್ರಿಕೆಟ್‌ ತಂಡ" ರಚಿಸುವ ಕಡೆಗೆ ಯೋಜನೆ ಹಾಕಿರುವುದಾಗಿ ಹೇಳಿದ್ದಾರೆ.

ಟೆನಿಸ್‌ ಬಾಲ್‌ ಕ್ರಿಕೆಟರ್‌ಗೆ ಇಂದು ಟೀಮ್‌ ಇಂಡಿಯಾ ಟಿಕೆಟ್‌!ಟೆನಿಸ್‌ ಬಾಲ್‌ ಕ್ರಿಕೆಟರ್‌ಗೆ ಇಂದು ಟೀಮ್‌ ಇಂಡಿಯಾ ಟಿಕೆಟ್‌!

ಅಮೆರಿಕದಲ್ಲಿ ನೆಲೆಸಿರುವ ಪಾಕಿಸ್ತಾನದ ಪ್ರಜೆಗಳನ್ನು ಉದ್ದೇಶಿಸಿ ಇಲ್ಲಿನ ಕ್ಯಾಪಿಟಲ್‌ ಒನ್‌ ಅರೆನಾದಲ್ಲಿ ಭಾನುವಾರ ಮಾತನಾಡಿದ ಪಾಕ್‌ ಪ್ರಧಾನಿ ಹಾಗೂ 1992ರ ವಿಶ್ವಕಪ್‌ ಗೆಲುವಿನ ನಾಯಕ ಇಮ್ರಾನ್‌ ಖಾನ್‌, ಪಾಕ್‌ ಕ್ರಿಕೆಟ್‌ ತಂಡ ಅಭಿವೃದ್ದಿ ಕುರಿತಾಗಿ ತಮ್ಮ ಯೋಜನೆ ಬಗ್ಗೆ ವಿವರಿಸಿದ್ದಾರೆ.

ಕ್ರಿಕೆಟ್‌: ವಿಂಡೀಸ್‌ ಪ್ರವಾಸಕ್ಕೆ ಆಯ್ಕೆಯಾಗದ ನತದೃಷ್ಟರಲ್ಲಿ ಕನ್ನಡಿಗರಿಬ್ಬರು!ಕ್ರಿಕೆಟ್‌: ವಿಂಡೀಸ್‌ ಪ್ರವಾಸಕ್ಕೆ ಆಯ್ಕೆಯಾಗದ ನತದೃಷ್ಟರಲ್ಲಿ ಕನ್ನಡಿಗರಿಬ್ಬರು!

"ವಿಶ್ವ ಶ್ರೇಷ್ಠ ಕ್ರಿಕೆಟ್‌ ತಂಡ ರಚಿಸುವುದರ ಕಡೆಗೆ ಕೆಲಸ ಆರಂಭಿಸಿದ್ದೇನೆ. ಇದಕ್ಕಾಗಿ ಅತ್ಯುತ್ತಮ ಆಟಗಾರರನ್ನು ತಂಡಕ್ಕೆ ಕರೆತರಲಿದ್ದೇನೆ. ನನ್ನ ಈ ಮಾತುಗಳನ್ನು ನರೆನಪಿನಲ್ಲಿ ಇರಿಸಿಕೊಳ್ಳಿ," ಎಂದು ಖಾನ್‌ ಹೇಳಿದ್ದಾರೆ. 1992ರ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ವಿರುದ್ಧ ಪಾಕಿಸ್ತಾನ ತಂಡ ಸೋತರೂ ಟೂರ್ನಿಯಲ್ಲಿ ಫೈನಲ್‌ ತಲುಪುವ ಮೂಲಕ ಇಂಗ್ಲೆಂಡ್‌ ತಂಡವನ್ನು ಮಣಿಸಿ ತನ್ನ ಏಕಮಾತ್ರ ಟ್ರೋಫಿ ಎತ್ತಿ ಹಿಡಿದಿತ್ತು.

ವಿಂಡೀಸ್‌ ಪ್ರವಾಸಕ್ಕೆ ಟೀಮ್‌ ಇಂಡಿಯಾ ಪ್ರಕಟ, 3 ಕನ್ನಡಿಗರಿಗೆ ಸ್ಥಾನವಿಂಡೀಸ್‌ ಪ್ರವಾಸಕ್ಕೆ ಟೀಮ್‌ ಇಂಡಿಯಾ ಪ್ರಕಟ, 3 ಕನ್ನಡಿಗರಿಗೆ ಸ್ಥಾನ

ಇದಕ್ಕೂ ಮುನ್ನ ಪಾಕಿಸ್ತಾನ ತಂಡ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ವಿರುದ್ಧ ಸೋತ ಬಳಿಕ ಮಾತನಾಡಿದ್ದ ಇಮ್ರಾನ್‌ ಖಾನ್‌, ಪಾಕಿಸ್ತಾನ ತಂಡಕ್ಕೆ ಸೋಲುವ ಭಯ ತೊರೆದು ಆಡುವಂತೆ ಕಿವಿಮಾತು ಹೇಳಿದ್ದರು. "ಸೋಲುತ್ತೇವೆ ಎಂಬ ಭಯ ಆವರಿಸಿದರೆ ರಕ್ಷಣಾತ್ಮಕ ತಂತ್ರಗಳ ಮೊರೆಹೋಗುವಂತೆ ಮಾಡುತ್ತದೆ," ಎಂದಿದ್ದರು.

ವಿಶ್ವಕಪ್‌ ಫೈನಲ್‌ನಲ್ಲಿ ಎಸೆಗಿದ ತಪ್ಪನ್ನು ಒಪ್ಪಿಕೊಂಡ ಅಂಪೈರ್ಸ್‌!ವಿಶ್ವಕಪ್‌ ಫೈನಲ್‌ನಲ್ಲಿ ಎಸೆಗಿದ ತಪ್ಪನ್ನು ಒಪ್ಪಿಕೊಂಡ ಅಂಪೈರ್ಸ್‌!

ವಿಶ್ವಕಪ್‌ ಟೂರ್ನಿಯಲ್ಲಿ ಇಂಗ್ಲೆಂಡ್‌ ತಂಡ ಪ್ರಶಸ್ತಿ ಗೆದ್ದರೆ, ಪಾಕಿಸ್ತಾನ ತಂಡ ಲೀಗ್‌ ಹಂತದಲ್ಲೇ ಹೊರಬಿದ್ದು ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಇದೇ ವೇಳೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ ಮುಖ್ಯಸ್ಥ ನಜಾಮ್‌ ಸೇತಿ, ತಂಡದ ನೀರಸ ಪ್ರದರ್ಶನಕ್ಕೆ ಸದ್ಯದ ಟೀಮ್‌ ಮ್ಯಾನೇಜ್ಮೆಂಟ್‌ ಕಾರಣ ಎಂದು ದೂರಿದ್ದರು.

Story first published: Monday, July 22, 2019, 18:28 [IST]
Other articles published on Jul 22, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X