ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್‌ ಕ್ರಿಕೆಟ್‌: ಐರ್ಲೆಂಡ್‌ ಎದುರು ಇಂಗ್ಲೆಂಡ್‌ 85ಕ್ಕೆ ಆಲ್‌ಔಟ್‌!

ವಿಶ್ವ ಚಾಂಪಿಯನ್ ಇಂಗ್ಲೆಂಡ್ ಗೆ ಆಘಾತ ನೀಡಿದ ಐರ್ಲೆಂಡ್ ತಂಡ..?
World Champions England collapse at lords, Tim Murtagh picks Five

ಲಂಡನ್‌, ಜುಲೈ 24: ವಿಶ್ವಕಪ್‌ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದು ಯಶಸ್ಸಿನ ಅಮಲಿನಲ್ಲಿದ್ದ ಇಂಗ್ಲೆಂಡ್‌ ತಂಡಕ್ಕೆ, ಇಲ್ಲಿ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಬುಧವಾರ ಆರಂಭಗೊಂಡ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಕ್ರಿಕೆಟ್‌ ಕೂಸು ಐರ್ಲೆಂಡ್‌ ಭಾರಿ ಆಘತವನ್ನೇ ನೀಡಿದೆ.

ಲಾರ್ಡ್ಸ್‌ನಲ್ಲಿ ಬುಧವಾರ ಆರಂಭಗೊಂಡ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದು ದೊಡ್ಡ ಮೊತ್ತ ಕಲೆಹಾಕುವ ಲೆಕ್ಕಾಚಾರದಲ್ಲಿ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್‌ ತಂಡ 23.4 ಓವರ್‌ಗಳಲ್ಲಿ 85 ರನ್‌ಗಳಿಗೆ ಆಲ್‌ಔಟ್‌ ಆಗಿದೆ.

ಪಾಕ್‌ ತಂಡಕ್ಕೆ ನೂತನ ನಾಯಕನನ್ನು ಹೆಸರಿಸಿದ ಶೊಯೇಬ್‌ ಅಖ್ತರ್‌!ಪಾಕ್‌ ತಂಡಕ್ಕೆ ನೂತನ ನಾಯಕನನ್ನು ಹೆಸರಿಸಿದ ಶೊಯೇಬ್‌ ಅಖ್ತರ್‌!

ಐರ್ಲೆಂಡ್‌ ತಂಡದ ಅತ್ಯಂತ ಅನುಭವಿ ವೇಗದ ಬೌಲರ್‌ ಟಿಮ್‌ ಮುರ್ಟಾಗ್‌ (13ಕ್ಕೆ 5) ಅವರ ಭರ್ಜರಿ ದಾಳಿಗೆ ನಲುಗಿದ ಇಂಗ್ಲೆಂಡ್‌ ತಂಡ ಕೇವಲ ಕೇವಲ 23 ಎಸೆತಗಳ ಅಂತರದಲ್ಲಿ ತನ್ನ ಅಗ್ರಕ್ರಮಾಂಕದ ಐವರು ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡದ್ದು, ತಂಡದ ಕುಸಿತಕ್ಕೆ ಪ್ರಮುಖ ಕಾರಣವಾಯಿತು.

ಮಧ್ಯಮ ಕ್ರಮಾಂಕದಲ್ಲಿ ಅನುಭವಿ ಬ್ಯಾಟ್ಸ್‌ಮನ್‌ಗಳಾದ ಜಾನಿ ಬೈರ್‌ಸ್ಟೋವ್‌, ಮೊಯೀನ್‌ ಅಲಿ ಹಾಗೂ ಕ್ರಿಸ್‌ ವೋಕ್ಸ್‌ ಮೂವರೂ ಶೂನ್ಯ ಸಂಪಾದನೆಯೊಂದಿಗೆ ಪೆವಿಲಿಯನ್‌ ಸೇರಿದರೆ, ಜೋ ಡೆನ್ಲೀ (23), ಸ್ಯಾಮ್‌ ಕರ್ರನ್‌ (18) ಮತ್ತು ಓಲಿ ಸ್ಟೋನ್‌ (19) ಮಾತ್ರವೇ ಎರಡಂಕಿಯ ರನ್‌ಗಳಿಸಿದ ಬ್ಯಾಟ್ಸ್‌ಮನ್‌ಗಳೆನಿಸಿದರು.

ಇನ್‌ಸ್ಟಾಗ್ರಾಮ್‌ನಿಂದ ಕಿಂಗ್‌ ಕೊಹ್ಲಿಗೆ ಕೋಟಿ ಕೋಟಿ ವರಮಾನ!ಇನ್‌ಸ್ಟಾಗ್ರಾಮ್‌ನಿಂದ ಕಿಂಗ್‌ ಕೊಹ್ಲಿಗೆ ಕೋಟಿ ಕೋಟಿ ವರಮಾನ!

ಐಲೆಂಡ್‌ ಪರ ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ 805 ವಿಕೆಟ್‌ಗಳನ್ನು ಪಡೆದ ಅನುಭವ ಹೊಂದಿರುವ ಬಲಗೈ ವೇಗಿ ಟಿಮ್‌ ಮುರ್ಟಾಗ್‌ ಐದು ವಿಕೆಟ್‌ ಉರುಳಿಸಿದರೆ, ಅವರಿಗೆ ಉತ್ತಮ ಸಾಥ್‌ ನೀಡಿದ 23 ವರ್ಷದ ಯುವ ವೇಗದ ಬೌಲರ್‌ ಮಾರ್ಕ್‌ ಅಡೈರ್‌ (32ಕ್ಕೆ 3) ಮತ್ತು ಬೋಡಿ ರಾಂಕಿನ್‌ (5ಕ್ಕೆ 2) ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳನ್ನು ಬೇಟೆಯಾಡಿದರು. ಮಾರ್ಕ್‌ ಅಡೈರ್‌ಗೆ ಇದು ಚೊಚ್ಚಲ ಟೆಸ್ಟ್ ಪಂದ್ಯ ಎಂಬುದು ವಿಶೇಷ.

 ಸಂಕ್ಷಿಪ್ತ ಸ್ಕೋರ್‌

ಸಂಕ್ಷಿಪ್ತ ಸ್ಕೋರ್‌

ಇಂಗ್ಲೆಂಡ್‌ ಮೊದಲ ಇನಿಂಗ್ಸ್‌: 23.4 ಓವರ್‌ಗಳಲ್ಲಿ 85/10 ( ಜೋ ಡೆನ್ಲೀ 23, ಸ್ಯಾಮ್‌ ಕರ್ರನ್‌ 18, ಓಲಿ ಸ್ಟೋನ್‌ (19; ಟಿಮ್‌ ಮುರ್ಟಾಗ್‌ 13ಕ್ಕೆ 5, ಮಾರ್ಕ್‌ ಅಡೈರ್‌ 32ಕ್ಕೆ 3, ಬೋಡಿ ರಾಂಕಿನ್‌ 5ಕ್ಕೆ 2).

ಮೊದಲ ಇನಿಂಗ್ಸ್‌ನಲ್ಲಿ ಕುಸಿದರೂ ಇಂಗ್ಲೆಂಡ್‌ ಗೆದ್ದಿತ್ತು!

ಮೊದಲ ಇನಿಂಗ್ಸ್‌ನಲ್ಲಿ ಕುಸಿದರೂ ಇಂಗ್ಲೆಂಡ್‌ ಗೆದ್ದಿತ್ತು!

ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಈ ಹಿಂದೆ ಇಂಗ್ಲೆಂಡ್‌ ತಂಡ ಮೊದಲ ಇನಿಂಗ್ಸ್‌ನಲ್ಲಿ ನೂರರ ಗಡಿಯೊಳಗೆ ಆಲ್‌ಔಟ್‌ ಆದರೂ ಪಂದ್ಯವನ್ನು ಗೆದ್ದ ನಾಲ್ಕು ಉದಾಹರಣೆಗಳಿವೆ. ಆದರೇ ಈ ಎಲ್ಲಾ ಪಂದ್ಯಗಳನ್ನು ಗೆದ್ದಿರುವುದು ಶತಮಾನದ ಹಿಂದೆ ಎಂಬುದು ವಿಶೇಷ.
ಈ ಕೆಳಗಿನ ಎಲ್ಲಾ ಪಂದ್ಯಗಳಲ್ಲಿ ಇಂಗ್ಲೆಂಡ್‌ ಮೊದಲ ಇನಿಂಗ್ಸ್‌ನಲ್ಲಿ ಅಲ್ಪ ಮೊತ್ತಕ್ಕೆ ಆಲ್‌ಔಟ್‌ ಆದರೂ ಜಯ ದಾಖಲಿಸಿದೆ.
ಮೊದಲ ಇನಿಂಗ್ಸ್‌ 45/10, 1887ರಲ್ಲಿ ಆಸ್ಟ್ರೇಲಿಯಾ ವಿರುದ್ಧ, ಸಿಡ್ನಿ.
ಮೊದಲ ಇನಿಂಗ್ಸ್‌ 63/10, 1882ರಲ್ಲಿ ಆಸ್ಟ್ರೇಲಿಯಾ ವಿರುದ್ಧ, ದಿ ಓವಲ್‌.
ಮೊದಲ ಇನಿಂಗ್ಸ್‌ 75/10, 1894ರಲ್ಲಿ ಆಸ್ಟ್ರೇಲಿಯಾ ವಿರುದ್ಧ, ಮೆಲ್ಬೋರ್ನ್‌.
ಮೊದಲ ಇನಿಂಗ್ಸ್‌ 76/10, 1907ರಲ್ಲಿ ಆಸ್ಟ್ರೇಲಿಯಾ ವಿರುದ್ಧ, ಲೀಡ್ಸ್‌.

 10 ದಿನಗಳಲ್ಲಿ ಹಳ್ಳ ಹಿಡಿದ ಇಂಗ್ಲೆಂಡ್‌

10 ದಿನಗಳಲ್ಲಿ ಹಳ್ಳ ಹಿಡಿದ ಇಂಗ್ಲೆಂಡ್‌

ಹತ್ತು ದಿನಗಳ ಹಿಂದಷ್ಟೇ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಟೈ ಫಲಿತಾಂಶ ಕಂಡು ಬೌಂಡರಿಗಳ ಸಂಖ್ಯೆ ಆಧಾರದ ಮೇರೆ ನೂತನ ವಿಶ್ವ ಚಾಂಪಿಯನ್ಸ್‌ ಪಟ್ಟಕ್ಕೇರಿ ಇತಿಹಾಸ ಬರೆದಿದ್ದ ಇಂಗ್ಲೆಂಡ್‌ ತಂಡ, ಇದೀಗ ವಿಶ್ವಕಪ್‌ ಗೆದ್ದ ಕ್ರೀಡಾಂಗಣದಲ್ಲೇ ಕ್ರಿಕೆಟ್‌ ಕೂಸು ಐರ್ಲೆಂಡ್‌ ಎದುರು 85 ರನ್‌ಗಳಿಗೆ ಆಲ್‌ಔಟ್‌ ಆಗಿ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಜೇಸನ್‌ ರಾಯ್‌ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ

ಜೇಸನ್‌ ರಾಯ್‌ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ

ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ಪರ ಆಡಂಭಿಕ ಬ್ಯಾಟ್ಸ್‌ಮನ್‌ ಆಗಿ ಆಡಿದ 8 ಪಂದ್ಯಗಳಿಂದ 443 ರನ್‌ಗಳನ್ನು ಚೆಚ್ಚಿ ಇಂಗ್ಲೆಂಡ್‌ ಯಶಸ್ಸಿನ ಹಿಂದೆ ಮಹತ್ವದ ಪಾತ್ರ ವಹಸಿದ್ದ ಜೇಸನ್‌ ರಾಯ್‌ಗೆ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಅವಕಾಶವನ್ನು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ ಕರುಣಿಸಿತ್ತು ಅಂತೆಯೇ ಐರ್ಲೆಂಡ್‌ ಎದುರು ಚೊಚ್ಚಲ ಟೆಸ್ಟ್‌ ಪಂದ್ಯವನ್ನಾಡಲು ಮುಂದಾಗಿ ಆರಂಭಿಕರಾಗಿ ಕಣಕ್ಕಿಳಿದ 29 ವರ್ಷದ ಬಲಗೈ ಬ್ಯಾಟ್ಸ್‌ಮನ್‌ ರಾಯ್‌, ಕೇವಲ 5 ರನ್‌ಗಳಿಸಿ ಔಟಾದರು. ಇದೇ ವೇಳೆ ಬಲಗೈ ವೇಗಿ ಓಲಿ ಸ್ಟೋನ್‌ ಕೂಡ ಇಂಗ್ಲೆಂಡ್‌ ಪರ ಟೆಸ್ಟ್‌ ತಂಡಕ್ಕೆ ಪದಾರ್ಪಣೆ ಮಾಡಿದರು.

Story first published: Wednesday, July 24, 2019, 18:41 [IST]
Other articles published on Jul 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X