ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ-ಪಾಕಿಸ್ತಾನ ಕದನ ಟಿಕೆಟ್ ದಾಖಲೆ ಮಾರಾಟ

By Mahesh

ದುಬೈ, ಫೆ.5: ವಿಶ್ವಕಪ್ 2015 ಟೂರ್ನಿ ಆರಂಭಕ್ಕೆ 9 ದಿನಗಳು ಬಾಕಿ ಇರುವಾಗಲೇ ಆಯೋಜಕರಿಗೆ ಟಿಕೆಟ್ ಮಾರಾಟದ ಬಿಸಿ ತಟ್ಟಿದೆ. ಆಸ್ಟೇಲಿಯಾ ಹಾಗೂ ನ್ಯೂಜಿಲೆಂಡ್ ಎರಡೂ ಕಡೆ ಒಟ್ಟು ಮಾಡಿದರೆ ಇಲ್ಲಿ ತನಕ ಸುಮಾರು 7,50,000 ಟಿಕೆಟ್ ಗಳ ಮಾರಾಟವಾಗಿದೆ ಎಂಬ ಮಾಹಿತಿ ಗುರುವಾರ ಸಿಕ್ಕಿದೆ.

ನಿರೀಕ್ಷೆಯಂತೆ ಭಾರತ-ಪಾಕಿಸ್ತಾನ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಪಂದ್ಯಗಳ ಟಿಕೆಟ್ ಗೆ ಬೇಡಿಕೆ ಹೆಚ್ಚಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಗುರುವಾರ ಟಿಕೆಟ್ ಮಾರಾಟದ ಬಗ್ಗೆ ಮಾಹಿತಿ ಹೊರ ಹಾಕಿದೆ. ದಾಖಲೆ ಪ್ರಮಾಣದಲ್ಲಿ ಟಿಕೆಟ್ ಮಾರಾಟವಾಗುತ್ತಿದ್ದು, ಸದ್ಯದಲ್ಲೇ 1 ಮಿಲಿಯನ್ ದಾಟಲಿದೆ ಎಂದು ಹೇಳಿದೆ. [ವೈರಿಗಳ ಕಾದಾಟ, ಎಲ್ಲಾ ದಾಖಲೆಗಳ ಧೂಳಿಪಟ]

World Cup 2015: Ticket sales set to reach a record 1 million

ಟಿಕೆಟ್ ಗೆ ಎಲ್ಲೆಡೆಯಿಂದ ಬೇಡಿಕೆ ಹೆಚ್ಚಾಗುತ್ತಿದೆ. ಟೂರ್ನಿ ಆರಂಭವಾಗುತ್ತಿದ್ದಂತೆ ಟಿಕೆಟ್ ಸಿಗುವುದು ಕಷ್ಟ. ಈಗಲೇ ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿಕೊಳ್ಳಿ ಎಂದು ಅಭಿಮಾನಿಗಳಿಗೆ ಐಸಿಸಿ ಕಿವಿಮಾತು ಹೇಳಿದೆ.

ಟಿಕೆಟ್ ಬುಕ್ಕಿಂಗ್ ಹೇಗೆ?: ಗುರುವಾರದ ತನಕ ಸುಮಾರು 7,50,000 ಟಿಕೆಟ್ ಗಳು ಮಾರಾಟವಾಗಿವೆ. ಭಾರತ ಹಾಗೂ ಪಾಕಿಸ್ತಾನ ಪಂದ್ಯಕ್ಕೆ ಆನ್ ಲೈನ್ ಹಾಗೂ ಮೊಬೈಲ್ ಅಪ್ಲಿಕೇಷನ್ ಮೂಲಕ ಹೆಚ್ಚಿನ ಬೇಡಿಕೆ ಹುಟ್ಟುಕೊಂಡಿದೆ. [ವಿಶ್ವಕಪ್ ಅಪ್ಲಿಕೇಷನ್ ಇಳಿಸಿಕೊಳ್ಳೋದು ಹೇಗೆ?]

ಫೆ.15ರ ಭಾರತ ಹಾಗೂ ಪಾಕಿಸ್ತಾನದ ಪಂದ್ಯದ ಟಿಕೆಟ್ ಗಳು ಕೇವಲ 20 ನಿಮಿಷಗಳಲ್ಲೇ ಮಾರಾಟವಾಗಿ ಹೊಸ ದಾಖಲೆ ಬರೆದಿದೆ. ಈ ಪಂದ್ಯದ ವೀಕ್ಷಣೆ ಸಂಖ್ಯೆ ಕೂಡಾ ಹೊಸ ಇತಿಹಾಸ ನಿರ್ಮಿಸುವ ನಿರೀಕ್ಷೆ ಹುಟ್ಟಿದೆ.

ಅಭಿಮಾನಿಗಳಿಗೆ ಟಿಕೆಟ್ ಸುಲಭವಾಗಿ ಸಿಗಲು ಬೇಕಾದ ವ್ಯವಸ್ಥೆ ಕಲ್ಪಿಸಲಾಗಿದೆ. ಆನ್ ಲೈನ್ ಹಾಗೂ ಇತ್ತೀಚಿಗೆ ಬಿಡುಗಡೆ ಮಾಡಿದ ಆಂಡ್ರಾಯ್ಡ್ ಅಪ್ಲಿಕೇಷನ್ ಮೂಲಕದ ಅಭಿಮಾನಿಗಳು ಟಿಕೆಟ್ ಪಡೆದುಕೊಳ್ಳಬಹುದು ಎಂದು ಐಸಿಸಿ ಮುಖ್ಯ ಕಾರ್ಯಕಾರಿ ಸದಸ್ಯ ಡೇವಿಡ್ ರಿಚರ್ಡ್ಸನ್ ಹೇಳಿದ್ದಾರೆ.

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X