ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಸಿಸಿಐನಿಂದ ಕೇಸರಿ ಬಣ್ಣದ ಟೀಮ್‌ ಇಂಡಿಯಾ ಜರ್ಸಿ ಅನಾವರಣ!

ICC World Cup 2019 : ಬಿಸಿಸಿಐ ಪ್ರಕಟಿಸಿದೆ ಟೀಂ ಇಂಡಿಯಾ ಹೊಸ ಜೆರ್ಸಿ..? | Team India New Jersey
World Cup 2019: BCCI officially unveils Indias away jersey

ಬೆಂಗಳೂರು, ಜೂನ್‌ 28: ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ನಡೆಯುತ್ತಿರುವ 12ನೇ ಆವೃತ್ತಿಯ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಇದೇ ಭಾನುವಾರ ನಡೆಯಲಿರುವ ಆತಿಥೇಯ ಇಂಗ್ಲೆಂಡ್‌ ವಿರುದ್ಧದ ಪಂದ್ಯದಕ್ಕೆ ಟೀಮ್‌ ಇಂಡಿಯಾದ ಬಹು ನಿರೀಕ್ಷಿತ 'ಅವೇ ಜರ್ಸಿ'ಯನ್ನು ಬಿಸಿಸಿಐ ಶುಕ್ರವಾರ ಅಧಿಕೃತವಾಗಿ ಬಿಡುಗಡೆ ಮಾಡಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಶುಕ್ರವಾರ ತನ್ನ ಅಧಿಕೃತ ಟ್ವಿಟರ್‌ ಖಾತೆ ಮೂಲಕ ಟೀಮ್‌ ಇಂಡಿಯಾದ ನೂತನ ಜರ್ಸಿ ಅನಾವರಣ ಪಡಿಸಿದೆ. ಈಗಾಗಲೇ ಜರ್ಸಿಯ ಕೇಸರಿ ಬಣ್ಣದ ವಿಚಾರವಾಗಿ ವಿವಾದ ಭುಗಿಲೆದ್ದಿದೆಯಾದರೂ, ಅಭಿಮಾನಿಗಳಂತೂ ನೂತನ ಜರ್ಸಿ ವೀಕ್ಷಿಸುವುದನ್ನು ಕಾತುರದಿಂದ ಎದುರು ನೋಡುತ್ತಿದ್ದಾರೆ.

ಟೀಮ್‌ ಇಂಡಿಯಾ ಬ್ಯಾಟಿಂಗ್‌ ವೈಫಲ್ಯಕ್ಕೆ ಪರಿಹಾರ ಸೂಚಿಸಿದ ಶ್ರಿಕಾಂತ್‌!ಟೀಮ್‌ ಇಂಡಿಯಾ ಬ್ಯಾಟಿಂಗ್‌ ವೈಫಲ್ಯಕ್ಕೆ ಪರಿಹಾರ ಸೂಚಿಸಿದ ಶ್ರಿಕಾಂತ್‌!

"ಟೀಮ್‌ ಇಂಡಿಯಾದ ಅವೇ ಜರ್ಸಿಯನ್ನು ಅನಾವರಣ ಪಡಿಸುತ್ತಿದ್ದೇವೆ. ಇದರಬಗ್ಗೆ ನಿಮ್ಮ ಅಭಿಪ್ರಾಯವೇನು?'' ಎಂದು ಬಿಸಿಸಿಐ ತನ್ನ ಟ್ವಿಟರ್‌ ಖಾತೆ ಮೂಲಕ ಟ್ವೀಟ್‌ ಮಾಡಿದೆ. ಕಳೆದ ಒಂದೆರಡು ವಾರಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ಭಾರತ ತಂಡದ ನೂತನ ಜರ್ಸಿ ಕುರಿತಾಗಿ ಚರ್ಚೆ ಜೋರಾಗಿಯೇ ನಡೆಯುತ್ತಿತ್ತು.

ವಿಶ್ವಕಪ್‌: 4ನೇ ಕ್ರಮಾಂಕದಲ್ಲಿ ವಿಜಯ್‌ ಶಂಕರ್‌ ಆಡುವುದು ಎಷ್ಟು ಸರಿ?ವಿಶ್ವಕಪ್‌: 4ನೇ ಕ್ರಮಾಂಕದಲ್ಲಿ ವಿಜಯ್‌ ಶಂಕರ್‌ ಆಡುವುದು ಎಷ್ಟು ಸರಿ?

ಭಾರತ ಮತ್ತು ಇಂಗ್ಲೆಂಡ್‌ ತಂಡಗಳು ಜೂನ್‌ 30ರಂದು ಬರ್ಮಿಂಗ್‌ಹ್ಯಾಮ್‌ನ ಎಡ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ಪೈಪೋಟಿ ನಡೆಸಲಿವೆ. ಭಾರತ ಈ ಪಂದ್ಯದಲ್ಲಿ ಗೆದ್ದರೆ ಸೆಮಿಫೈನಲ್ಸ್‌ ಅರ್ಹತೆ ಲಭ್ಯವಾಗಲಿದ್ದು, ಪ್ರಶಸ್ತಿ ಫೇವರಿಟ್‌ಗಳಲ್ಲಿ ಒಂದಾಗಿರುವ ಇಂಗ್ಲೆಂಡ್‌ ತಂಡವನ್ನು ಸ್ಪರ್ಧೆಯಿಂದ ಹೊರದಬ್ಬುವ ಸುವರ್ಣ ಅವಕಾಶವನ್ನೂ ಹೊಂದಿದೆ. ಇಂಗ್ಲೆಂಡ್‌ ತನ್ನ ಪಾಲಿನ ಉಳಿದೆರಡು ಪಂದ್ಯಗಳನ್ನು ಗೆದ್ರಷ್ಟೇ ಮುಂದಿನ ಹಂತಕ್ಕೇರುವ ಒತ್ತಡದ ಸ್ಥಿತಿಯಲ್ಲಿದೆ.

ವಿಶ್ವಕಪ್‌ನಲ್ಲಿ ಬ್ಯಾಟಿಂಗ್‌ ವೈಫಲ್ಯ ಕುರಿತಾಗಿ ಬಾಯ್ಬಿಟ್ಟ ಕೆ.ಎಲ್‌ ರಾಹುಲ್‌!ವಿಶ್ವಕಪ್‌ನಲ್ಲಿ ಬ್ಯಾಟಿಂಗ್‌ ವೈಫಲ್ಯ ಕುರಿತಾಗಿ ಬಾಯ್ಬಿಟ್ಟ ಕೆ.ಎಲ್‌ ರಾಹುಲ್‌!

ಟೆಲಿವಿಷನ್‌ನಲ್ಲಿ ಪ್ರಸಾರಗೊಳ್ಳುವ ಪಂದ್ಯಗಳಲ್ಲಿ ಎರಡೂ ತಂಡಗಳು ಒಂದೇ ಬಣ್ಣದ ಜರ್ಸಿ ತೊಡುವಂತಿಲ್ಲ ಎಂದು ಐಸಿಸಿ ನೂತನ ನಿಯಮ ಜಾರಿಗೆ ತಂದಿದೆ. ಈ ನಿಟ್ಟಿನಲ್ಲಿ ಭಾರತ ಫುಟ್ಬಾಲ್‌ ತಂಡದ ಜರ್ಸಿಯಿಂದ ಸ್ಫೂರ್ತಿ ಪಡೆದು ನೂತನ ಕೇಸರಿ ಬಣ್ಣದ ಜರ್ಸಿಯನ್ನು ಬಿಸಿಸಿಐ ಹೊರತಂದಿದೆ. ಇಂಗ್ಲೆಂಡ್‌ ತಂಡ ಆತಿಥ್ಯ ವಹಿಸಿರುವ ಹಿನ್ನೆಲಯಲ್ಲಿ ತನ್ನ ನೈಜ ಬಣ್ಣದ ಜರ್ಸಿಯಲ್ಲೇ ಆಡಬಹುದಾಗಿದೆ.

Away Jersey 2019

ಅಂದಹಾಗೆ ವಿವಾದವಾದರೂ ಏನು?
ಟೀಮ್‌ ಇಂಡಿಯಾದ ನೂತನ ಜರ್ಸಿಗೆ ಕೇಸರಿ ಬಣ್ಣವನ್ನು ಮೊದಲ ಆದ್ಯತೆಯನ್ನಾಗಿ ನೀಡಿ ಮಾಡಲಾಗಿರುವುದಕ್ಕೆ ಕೆಲ ರಾಜಕರಣಿಗಳು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಅಷ್ಟೇ ಅಲ್ಲದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಾರ್ಟಿ ತಮ್ಮ ಟ್ರೇಡ್‌ಮಾರ್ಕ್‌ ಆಗಿರುವ ಕೇಸರಿ ಬಣ್ಣವನ್ನು ಬಳಸುವಂತೆ ಒತ್ತಾಯ ಮಾಡಿದ್ದಾರೆಂದು ಆರೋಪಿಸಿದ್ದಾರೆ.

{headtohead_cricket_3_2}

Story first published: Friday, June 28, 2019, 22:14 [IST]
Other articles published on Jun 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X