ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೆಸ್ಟ್‌ ಇಂಡೀಸ್‌ ತಂಡದ ಆಲ್‌ರೌಂಡರ್‌ ಕಾರ್ಲೊಸ್‌ ಬ್ರಾತ್‌ವೇಟ್‌ಗೆ ದಂಡ!

ICC World Cup 2019 : ಬ್ರಾತ್ ವೇಟ್ ಗೆ ನಿಷೇಧದ ಭೀತಿ..! | Carlos Brathwaite | Oneindia Kannada
World Cup 2019: Brathwaite fined for breaching ICC Code of Conduct against India

ಲಂಡನ್‌, ಜೂನ್‌ 28: ಟೀಮ್‌ ಇಂಡಿಯಾ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಅನುಚಿತವಾಗಿ ವರ್ತಿಸಿದ ವೆಸ್ಟ್‌ ಇಂಡೀಸ್ ತಂಡದ ಆಲ್‌ರೌಂಡರ್‌ ಕಾರ್ಲೋಸ್‌ ಬ್ರಾತ್‌ವೇಟ್ ವಿರುದ್ಧ ಐಸಿಸಿ ಪಂದ್ಯದ ಸಂಭಾವನೆ ಶೇ.15 ರಷ್ಟು ದಂಡ ವಿಧಿಸಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಅಂತಾರಾಷ್ಟ್ರೀಯ ಪಂದ್ಯವೊಂದರಲ್ಲಿ ಅಂಪೈರ್‌ ನಿರ್ಧಾರಕ್ಕೆ ಅಸಮಧಾನ ವ್ಯಕ್ತಪಡಿಸಿ ಅನುಚಿತವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ವಿಂಡೀಸ್‌ನ ಸ್ಟಾರ್‌ ಆಲ್‌ರೌಂಡರ್‌ ಬ್ರಾತ್‌ವೇಟ್‌ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್‌ 2.8 ನಿಯಮದ ಉಲ್ಲಂಘನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದು ಡೀಮೆರಿಟ್‌ ಅಂಕ ಕೂಡ ಬ್ರಾತ್‌ವೇಟ್‌ಗೆ ಪ್ರಾಪ್ತಿಯಾಗಿದೆ.

ಇದರೊಂದಿಗೆ ಬ್ರಾತ್‌ವೇಟ್‌ಗೆ ಎರಡು ಡೀಮೆರಿಟ್‌ ಅಂಕಗಳು ಲಭ್ಯವಾದಂತಾಗಿದೆ. ಇದಕ್ಕೂ ಮುನ್ನ 2016ರ ಸೆಪ್ಟೆಂಬರ್‌ನಲ್ಲೂ ಇಂಥದ್ದೇ ತಪ್ಪಿನಿಂದಾಗಿ ಮೊದಲ ಬಾರಿ ಡೀಮೆರಿಟ್‌ ಅಂಕ ಪಡೆದುಕೊಂಡಿದ್ದರು. ಇನ್ನೊಂದು ಬಾರಿ ಬ್ರಾತ್‌ವೇಟ್‌ ಇಂಥದ್ದೇ ತಪ್ಪೆಸಗಿದರೆ ಕನಿಷ್ಠ ಪಂದ್ಯ ಸಂಭಾವನೆಯ ಶೇ. 50ರಷ್ಟು ದಂಡ ಅಥವಾ ಗರಿಷ್ಠ ಒಂದು ಪಂದ್ಯ ನಿಷೇಧ ಶಿಕ್ಷೆಗೂ ಗುರಿಯಾಗುವ ಸಾಧ್ಯತೆ ಇದೆ.

ವಿಶ್ವಕಪ್‌: 4ನೇ ಕ್ರಮಾಂಕದಲ್ಲಿ ವಿಜಯ್‌ ಶಂಕರ್‌ ಆಡುವುದು ಎಷ್ಟು ಸರಿ?ವಿಶ್ವಕಪ್‌: 4ನೇ ಕ್ರಮಾಂಕದಲ್ಲಿ ವಿಜಯ್‌ ಶಂಕರ್‌ ಆಡುವುದು ಎಷ್ಟು ಸರಿ?

ಟೀಮ್‌ ಇಂಡಿಯಾದ ಬ್ಯಾಟಿಂಗ್‌ ವೇಳೆ 42ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಬ್ರಾತ್‌ವೇಟ್‌ ಅವರ ಬೌಲಿಂಗ್‌ ವೇಳೆ ಅಂಪೈರ್‌ ನೀಡಿದ ವೈಡ್‌ ನಿರ್ಧಾರಕ್ಕೆ ಆಲ್‌ರೌಂಡರ್‌ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೇ ವೇಳೆ ಬ್ರಾತ್‌ವೇಟ್‌ ತಮ್ಮ ತಪ್ಪನ್ನು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಮ್ಯಾಚ್‌ ರೆಫ್ರಿ ಕ್ರಿಸ್‌ ಬ್ರಾಡ್‌ ಹೆಚ್ಚಿನ ವಿಚಾರಣೆ ನಡೆಸಲು ಮುಂದಾಗಲಿಲ್ಲ.

ಆನ್‌ಫೀಲ್ಡ್‌ ಅಂಪೈರ್‌ಗಳಾದ ರಿಚರ್ಡ್‌ ಕೆಟಲ್‌ಬೋರ್ಗ್‌ ಮತ್ತು ರಿಚರ್ಡ್‌ ಇಲ್ಲಿಂಗ್ವರ್ತ್‌ ಹಾಗೂ ಮೂರನೇ ಅಂಪೈರ್‌ ಮೈಕಲ್‌ ಮತ್ತು ನಾಲ್ಕನೇ ಅಂಪೈರ್‌ ಅಲೀಮ್‌ ದಾರ್‌ ಬ್ರಾತ್‌ವೇಟ್‌ಗೆ ದಂಡ ಸೂಚಿಸಿದರು.

ವಿಶ್ವಕಪ್‌ನಲ್ಲಿ ಬ್ಯಾಟಿಂಗ್‌ ವೈಫಲ್ಯ ಕುರಿತಾಗಿ ಬಾಯ್ಬಿಟ್ಟ ಕೆ.ಎಲ್‌ ರಾಹುಲ್‌!ವಿಶ್ವಕಪ್‌ನಲ್ಲಿ ಬ್ಯಾಟಿಂಗ್‌ ವೈಫಲ್ಯ ಕುರಿತಾಗಿ ಬಾಯ್ಬಿಟ್ಟ ಕೆ.ಎಲ್‌ ರಾಹುಲ್‌!

ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ಆಡಿದ 7 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನಷ್ಟೇ ಗೆದ್ದ ವೆಸ್ಟ್‌ ಇಂಡೀಸ್‌ ತಂಡ, ಭಾರತ ವಿರುದ್ಧದ ಸೋಲಿನೊಂದಿಗೆ ಪ್ರಶಸ್ತಿ ರೇಸ್‌ನಿಂದ ಹೊರಬಿದ್ದಿತು. ಇದೀಗ ತನ್ನ ಪಾಲಿನ ಉಳಿದೆರಡು ಲೀಗ್‌ ಪಂದ್ಯಗಳಲ್ಲಿ ಪ್ರತಿಷ್ಠೆ ಸಲುವಾಗಿ ಹೋರಾಟ ನಡೆಸಲಿದೆ. ಟೂರ್ನಿಯಲ್ಲಿ ಸ್ಪರ್ಧೆಯಿಂದ ಹೊರಬಿದ್ದ ಮೂರನೇ ತಂಡ ವೆಸ್ಟ್‌ ಇಂಡೀಸ್‌. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಮತ್ತು ಅಫಘಾನಿಸ್ತಾನ ತಂಡಗಳು ನಿರ್ಗಮಿಸಿದ್ದವು.

Story first published: Friday, June 28, 2019, 20:46 [IST]
Other articles published on Jun 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X