ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬೌನ್ಸರ್‌ ಪೆಟ್ಟಿನಿಂದ ರಕ್ತ ಹರಿದರೂ ಆಸೀಸ್‌ ಪರ ಹೋರಾಡಿದ ಕೇರಿ!

ICC World Cup 2019 : ರಕ್ತ ಬಂದರೂ ಲೆಕ್ಕಿಸದೆ ಆಟವಾಡಿ ಅಭಿಮಾನಿಗಳ ಮನಗೆದ್ದ ಕ್ಯಾರಿ..? | alex carey
World Cup 2019: Carey cops a blow on his chin from Archers bouncer

ಬರ್ಮಿಂಗ್‌ಹ್ಯಾಮ್‌, ಜುಲೈ 11: ಪ್ರಸಕ್ತ ವಿಶ್ವಕಪ್‌ ಟೂರ್ನಿಯ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದ್ದು, ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿರುವ ಆಸ್ಟ್ರೇಲಿಯಾ ತಂಡ ಅಗ್ರ ಕ್ರಮಾಂಕದ 3 ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

1
43690

ಈ ಸಂದರ್ಭದಲ್ಲಿ ಕ್ರೀಸ್‌ನಲ್ಲಿದ್ದ ಮಾಜಿ ನಾಯಕ ಸ್ಟೀವನ್‌ ಸ್ಮಿತ್‌ ಜೊತೆಗೆ ಇನಿಂಗ್ಸ್‌ ಕಟ್ಟುವ ಜವಾಬ್ದಾರಿ ಹೊತ್ತು ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಡ್ತಿ ಪಡೆದು ಕಣಕ್ಕಿಳಿದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಆಲೆಕ್ಸ್‌ ಕೇರಿಗೆ ಇಂಗ್ಲೆಂಡ್‌ನ ವೇಗಿ ಜೋಫ್ರಾ ಆರ್ಚರ್‌ ಭಯಂಕರ ಬೌನ್ಸರ್‌ ಮೂಲಕ ಸ್ವಾಗತ ಕೋರಿದ್ದಾರೆ.

ವಿಶ್ವಕಪ್‌ Live: Aus vs Eng, ಇಂಗ್ಲೆಂಡ್‌ ಎದುರು ಮಂಕಾದ ಆಸೀಸ್‌ವಿಶ್ವಕಪ್‌ Live: Aus vs Eng, ಇಂಗ್ಲೆಂಡ್‌ ಎದುರು ಮಂಕಾದ ಆಸೀಸ್‌

ಆರಂಭಿಕರಾದ ಡೇವಿಡ್‌ ವಾರ್ನರ್‌ (9) ಮತ್ತು ಆರೊನ್‌ ಫಿಂಚ್‌ (0) ಬಹುಬೇಗನೆ ಪೆವಿಲಿಯನ್‌ ಸೇರಿದ್ದರು. ಬಳಿಕ ಚೊಚ್ಚಲ ವಿಶ್ವಕಪ್‌ ಪಂದ್ಯವನ್ನಾಡುತ್ತಿರುವ ಪೀಟರ್‌ ಹ್ಯಾಂಡ್ಸ್‌ಕಂಬ್‌ (4) ಕೂಡ ಹೆಚ್ಚು ಸಮಯ ತೆಗೆದುಕೊಳ್ಳದೆ ಪೆವಿಲಿಯನ್‌ ಸೇರಿಬಿಟ್ಟರು. 14ಕ್ಕೆ 3 ವಿಕೆಟ್‌ ಕಳೆದುಕೊಂಡಿದ್ದ ಆಸೀಸ್‌ಗೆ ಆಸರೆಯಾಗಲು ಬಂದ ಎಡಗೈ ಬ್ಯಾಟ್ಸ್‌ಮನ್‌ ಅಲೆಕ್ಸ್‌ ಕೇರಿ ಕೆಲ ಉತ್ತಮ ಹೊಡೆತಗಳನ್ನಾಡಿ ಆತ್ಮವಿಶ್ವಾಸ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದರು.

ವಿಶ್ವಕಪ್‌ ಸೆಮಿಫೈನಲ್‌ ಸೋಲಿಗೆ ಕಾರಣ ಹೇಳಿದ ವಿರಾಟ್‌ ಕೊಹ್ಲಿವಿಶ್ವಕಪ್‌ ಸೆಮಿಫೈನಲ್‌ ಸೋಲಿಗೆ ಕಾರಣ ಹೇಳಿದ ವಿರಾಟ್‌ ಕೊಹ್ಲಿ

ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಕ್ಯಾರಿ, 9 ಇನಿಂಗ್ಸ್‌ಗಳಿಂದ 372* ರನ್‌ಗಳನ್ನು ಗಳಿಸಿದ್ದಾರೆ. ಅಂತೆಯೇ ಇಂಗ್ಲೆಂಡ್‌ ವಿರುದ್ಧವೂ ಆಸೀಸ್‌ಗೆ ಆಸರೆಯಾಗುವ ಪ್ರಯತ್ನದಲ್ಲಿದ್ದ 27 ವರ್ಷದ ಆಟಗಾರನಿಗೆ 8ನೇ ಓವರ್‌ನ ಕೊನೆಯ ಎಸೆತದಲ್ಲಿ ಆಘಾತ ಎದುರಾಗಿತ್ತು. ಇಂಗ್ಲೆಂಡ್‌ ತಂಡದ ಯುವ ವೇಗದ ಬೌಲರ್‌ ಜೋಫ್ರಾ ಆರ್ಚರ್‌ ಅವರ ಮಾರಕ ಬೌನ್ಸರ್‌ ಕ್ಯಾರಿ ಅವರ ಗಲ್ಲಕ್ಕೆ ಅಪ್ಪಳಿಸಿತ್ತು.

ಸೆಮಿಫೈನಲ್‌ ಗೆದ್ದ ಬಳಿಕ ಕಿವೀಸ್‌ ನಾಯಕ ವಿಲಿಯಮ್ಸನ್‌ ಹೇಳಿದ್ದಿದುಸೆಮಿಫೈನಲ್‌ ಗೆದ್ದ ಬಳಿಕ ಕಿವೀಸ್‌ ನಾಯಕ ವಿಲಿಯಮ್ಸನ್‌ ಹೇಳಿದ್ದಿದು

ತಮ್ಮ ವೇಗ ಮತ್ತು ಚೆಂಡನ್ನು ಪುಟಿದೇಳುವಂತೆ ಮಾಡುವ ಸಾಮರ್ಥ್ಯದಿಂದಲೇ ಇಂಗ್ಲೆಂಡ್‌ ತಂಡದಲ್ಲಿ ಸ್ಥಾನ ಗಿಟ್ಟಿಸಿರುವ 24 ವರ್ಷದ ಆರ್ಚರ್‌ ಎಸೆದ ಬೌನ್ಸರ್‌ ಅಲೆಕ್ಸ್‌ ಕೇರಿ ಅವರ ಹೆಲ್ಮೆಟ್‌ ಅನ್ನೇ ಎಗರಿಸಿತ್ತು. ನೋಡ ನೋಡುತ್ತಿದ್ದಂತೆಯೇ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ನ ಗಲ್ಲದಿಂದ ರಕ್ತ ಹರಿಯಲಾರಂಭಿಸಿತು. ಅವರ ನೆರವಿಗೆ ಕೂಡಲೇ ಧಾವಿಸಿದ ಆಸೀಸ್‌ ತಂಡದ ಫಿಸಿಯೋ ಕೂಡಲೇ ಪಟ್ಟಿ ಕಟ್ಟಿದರು.

ಸೆಮಿಫೈನಲ್‌ನಲ್ಲಿ ಭಾರತ ಎಡವಿದೆಲ್ಲಿ ಎಂದು ವಿವರಿಸಿದ ಗಂಗೂಲಿ!ಸೆಮಿಫೈನಲ್‌ನಲ್ಲಿ ಭಾರತ ಎಡವಿದೆಲ್ಲಿ ಎಂದು ವಿವರಿಸಿದ ಗಂಗೂಲಿ!

ಬೌನ್ಸರ್‌ ಪೆಟ್ಟಿನಿಂದ ಗಂಭೀರ ಹೊಡೆತವೇನೂ ಆಗದ ಕಾರಣ ಅಲೆಕ್ಸ್‌ ಪಟ್ಟಿ ಧರಿಸಿಯೇ ಬ್ಯಾಟಿಂಗ್‌ ಮುಂದುವರಿಸಿದರು. ಆದರೆ, 46 ರನ್‌ಗಳಿಸಿದ್ದಾಗ ಲೆಗ್‌ ಸ್ಪಿನ್ನರ್‌ ಆದಿಲ್‌ ರಶೀದ್‌ ಅವರ ಬೌಲಿಂಗ್‌ನಲ್ಲಿ ಮಿಡ್‌ವಿಕೆಟ್‌ ಕಡೆಗೆ ಸಿಕ್ಸರ್‌ ಬಾರಿಸುವ ಪ್ರಯತ್ನದಲ್ಲಿ ಡೀಪ್‌ ಮಿಡ್‌ವಿಕೆಟ್‌ನಲ್ಲಿದ್ದ ಫೀಲ್ಡರ್‌ ಜೇಮ್ಸ್‌ ವಿನ್ಸ್‌ (ಬದಲಿ ಆಟಗಾರ)ಗೆ ಕ್ಯಾಚಿತ್ತು ನಿರಾಸೆ ಅನುಭವಿಸಿದರು. ಆದರೂ ಗಾಯದ ನಡುವೆಯೂ ಆಸಿಸ್‌ ಪರ ಹೋರಾಟ ಹಿಡಿದಿಟ್ಟ ಕ್ಯಾರಿ ಅಭಿಮಾನಿಗಳ ಮನ ಗೆದ್ದರು.

Story first published: Thursday, July 11, 2019, 17:14 [IST]
Other articles published on Jul 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X