ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌: 'ದಿ ಯೂನಿವರ್ಸ್‌ ಬಾಸ್‌' ಮುಡಿಗೆ ಅಪರೂಪದ ವಿಶ್ವದಾಖಲೆ

World Cup 2019: Chris Gayle records most number of sixes in World Cup history

ಲಂಡನ್‌, ಮೇ 31: 'ದಿ ಯೂನಿವರ್ಸ್‌ ಬಾಸ್‌' ಖ್ಯಾತಿಯ ವೆಸ್ಟ್‌ ಇಂಡೀಸ್‌ನ ದೈತ್ಯ ಬ್ಯಾಟ್ಸ್‌ಮನ್‌ 39 ವರ್ಷದ ಕ್ರಿಸ್‌ ಗೇಲ್‌ ತಮ್ಮ ವೃತ್ತಿ ಜೀವನದ ಬಹುತೇಕ ಕೊನೆಯ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯನ್ನಾಡುತ್ತಿದ್ದು, ಆಡಿದ ಮೊದಲ ಪಂದ್ಯದಲ್ಲೇ ಅಪರೂಪದ ವಿಶ್ವ ದಾಖಲೆ ಬರೆದಿದ್ದಾರೆ.

ವಿಶ್ವಕಪ್: ವಿಂಡೀಸ್‌ ಅಬ್ಬರಕ್ಕೆ ಬೆಚ್ಚಿದ ಪಾಕ್‌ಗೆ ಹೀನಾಯ ಸೋಲುವಿಶ್ವಕಪ್: ವಿಂಡೀಸ್‌ ಅಬ್ಬರಕ್ಕೆ ಬೆಚ್ಚಿದ ಪಾಕ್‌ಗೆ ಹೀನಾಯ ಸೋಲು

ಶುಕ್ರವಾರ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ತಂಡ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿ, 12ನೇ ಆವೃತ್ತಿಯ ವಿಶ್ವಕಪ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಪಾಕಿಸ್ತಾನ ತಂಡ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿ 105ಕ್ಕೆ ಆಲ್‌ಔಟ್‌ ಆದರೆ, ವಿಂಡೀಸ್‌ ಕೇವಲ 3 ವಿಕೆಟ್‌ ನಷ್ಟದಲ್ಲಿ 13.4 ಓವರ್ಗಳಲ್ಲಿ 108 ರನ್‌ಗಳನ್ನು ಚಚ್ಚಿ ವಿಜಯೋತ್ಸವ ಆಚರಿಸಿತು. ಇದು ವಿಶ್ವಕಪ್‌ನಲ್ಲಿ ಪಾಕಿಸ್ತಾನ ದಾಖಲಿಸಿದ ಎರಡನೇ ಅತ್ಯಂತ ಕಡಿಮೆ ಮೊತ್ತ.

ಏಕದಿನ ವಿಶ್ವಕಪ್‌ನಲ್ಲಿ ಎರಡು ತಂಡಗಳನ್ನು ಪ್ರತಿನಿಧಿಸಿದ ಆಟಗಾರರಿವರು!ಏಕದಿನ ವಿಶ್ವಕಪ್‌ನಲ್ಲಿ ಎರಡು ತಂಡಗಳನ್ನು ಪ್ರತಿನಿಧಿಸಿದ ಆಟಗಾರರಿವರು!

ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ ಪರ ಭರ್ಜರಿ ಬ್ಯಾಟಿಂಗ್‌ ನಡೆಸಿದ ಅನುಭವಿ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ 34 ಎಸೆತಗಳಲ್ಲಿ 50 ರನ್‌ಗಳನ್ನು ಸಿಡಿಸಿ ಅಬ್ಬರಿಸಿದ್ದರು. ಇದರಲ್ಲಿ 6 ಫೋರ್‌ ಮತ್ತು 3 ಸಿಕ್ಸರ್‌ಗಳು ಸೇರಿದ್ದವು. ಈ ಪಂದ್ಯದಕ್ಕೂ ಮುನ್ನ ವಿಶ್ವಕಪ್‌ನಲ್ಲಿ ಆಡಿದ 26 ಪಂದ್ಯಗಳಿಂದ 37 ಸಿಕ್ಸರ್‌ಗಳನ್ನು ಸಿಡಿಸಿದ್ದ ಗೇಲ್‌, ಇದೀಗ ಒಟ್ಟು 40 ಸಿಕ್ಸರ್‌ಗಳೊಂದಿಗೆ ವಿಶ್ವಕಪ್‌ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ ಎಂಬ ವಿಶ್ವ ದಾಖಲೆ ಬರೆದರು.

ಅಂದಹಾಗೆ ವಿಶ್ವಕಪ್‌ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿರುವ ಬ್ಯಾಟ್ಸ್‌ಮನ್‌ಗಳ ದಾಖಲೆ ಇಲ್ಲಿದೆ.

ಎಬಿ ಡಿ'ವಿಲಿಯರ್ಸ್‌ (37)

ಎಬಿ ಡಿ'ವಿಲಿಯರ್ಸ್‌ (37)

ಹಸನ್‌ ಅಲಿ ಬೌಲಿಂಗ್‌ನಲ್ಲಿ ಲಾಂಗ್‌ ಆನ್‌ ಕಡೆಗೆ ಸಿಕ್ಸರ್‌ ಬಾರಿಸುವ ಮೂಲಕ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ ಎಬಿ ಡಿ'ವಿಲಿಯರ್ಸ್‌ ಅವರ ಹೆಸರಲ್ಲಿದ್ದ ವಿಶ್ವ ದಾಖಲೆಯನ್ನು 'ಸಿಕ್ಸ್‌ ಮಷೀನ್‌' ಖ್ಯಾತಿಯ ಕ್ರಿಸ್‌ ಗೇಲ್‌ ಅಳಿಸಿ ಹಾಕಿದರು. 2016ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಡಿ'ವಿಲಿಯರ್ಸ್‌ 23 ಪಂದ್ಯಗಳಲ್ಲಿ 37 ಸಿಕ್ಸರ್‌ಗಳನ್ನು ಸಿಡಿಸಿ ಈ ದಾಖಲೆ ಹೊಂದಿದ್ದರು.

ರಿಕಿ ಪಾಂಟಿಂಗ್‌ (31)

ರಿಕಿ ಪಾಂಟಿಂಗ್‌ (31)

ಕಾಂಗರೂ ನಾಡಿಗೆ ತಮ್ಮ ನಾಯಕತ್ವದಲ್ಲಿ ಎರಡು ವಿಶ್ವಕಪ್‌ಗಳನ್ನು ಗೆದ್ದುಕೊಟ್ಟ ಆಟಗಾರ ರಿಕಿ ಪಾಂಟಿಂಗ್‌ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದವರ ಪೈಕಿ ಮೂರನೇ ಸ್ಥಾನದಲ್ಲಿದ್ದಾರೆ. ಪಾಂಟಿಂಗ್‌ ಆಡಿದ 46 ಪಂದ್ಯಗಳಲ್ಲಿ ಒಟ್ಟು 31 ಸಿಕ್ಸರ್‌ಗಳನ್ನು ಸಿಡಿಸಿರುವ ದಾಖಲೆ ಹೊಂದಿದ್ದಾರೆ.

ಬ್ರೆಂಡನ್‌ ಮೆಕಲಮ್‌ (29)

ಬ್ರೆಂಡನ್‌ ಮೆಕಲಮ್‌ (29)

2015ರ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ ತಂಡವನ್ನು ಫೈನಲ್ ವರೆಗೆ ಕೊಂಡೊಯ್ದ ಕಿವೀಸ್‌ ಪಡೆಯ ಮಾಜಿ ನಾಯಕ ಹಾಗೂ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಬ್ರೆಂಡನ್‌ ಮೆಕಲಮ್‌ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಮೆಕಲಮ್‌ 34 ಪಂದ್ಯಗಳಲ್ಲಿ 29 ಸಿಕ್ಸರ್‌ಗಳನ್ನು ಚಚ್ಚಿದ್ದಾರೆ.

ಹರ್ಷಲ್‌ ಗಿಬ್ಸ್‌ (28)

ಹರ್ಷಲ್‌ ಗಿಬ್ಸ್‌ (28)

ದಕ್ಷಿಣ ಆಫ್ರಿಕಾದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಹರ್ಷಲ್‌ ಗಿಬ್ಸ್‌, ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಐದನೇ ಸ್ಥಾನ ಅಲಂಕರಿಸಿದ್ದಾರೆ. ಗಿಬ್ಸ್‌ 25 ಪಂದ್ಯಗಳಲ್ಲಿ 28 ಸಿಕ್ಸರ್‌ಗಳನ್ನು ಸಿಡಿಸಿರುವುದು ವಿಶೇಷ.

ಸಚಿನ್‌ ತೆಂಡೂಲ್ಕರ್‌ ಮತ್ತು ಸನತ್‌ ಜಯಸೂರ್ಯ

ಸಚಿನ್‌ ತೆಂಡೂಲ್ಕರ್‌ ಮತ್ತು ಸನತ್‌ ಜಯಸೂರ್ಯ

ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್‌, ಅತಿ ಹೆಚ್ಚು ಅರ್ಧಶತಕ ಹಾಗೂ ಅತಿ ಹೆಚ್ಚು ಶತಕಗಳ ದಾಖಲೆ ಸೇರಿದಂತೆ ಹಲವು ದಾಖಲೆಗಳ ಒಡೆಯ ಭಾರತದ ಮಾಜಿ ಆಟಗಾರ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಈ ಪಟ್ಟಿಯಲ್ಲಿ ಜಂಟಿ ಆರನೇ ಸ್ಥಾನ ಪಡೆದಿದ್ದಾರೆ. ಸಚಿನ್‌ ಮತ್ತು ಶ್ರೀಲಕಾದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಸನತ್‌ ಜಯಸೂರ್ಯ ಕ್ರಮವಾಗಿ 45 ಮತ್ತು 38 ಪಂದ್ಯಗಳಿಂದ ಒಟ್ಟು 27 ಸಿಕ್ಸರ್‌ಗಳನ್ನು ಚಚ್ಚಿದ್ದಾರೆ.

Story first published: Friday, May 31, 2019, 20:23 [IST]
Other articles published on May 31, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X