ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡ ಬಳಿಕ ವಾರ್ನರ್ ಮಾಡಿದ್ದೇನು ಗೊತ್ತೇ?

world cup 2019 david warner gives his man of the match award to a young fan

ಲಂಡನ್, ಜೂನ್ 13: ಪಾಕಿಸ್ತಾನದ ವಿರುದ್ಧ ಬುದವಾರ ನಡೆದ ಪಂದ್ಯದಲ್ಲಿ ಅಬ್ಬರದ ಶತಕ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ತಮ್ಮ ವಿಶಿಷ್ಟ ನಡೆಯಿಂದ ಗಮನ ಸೆಳೆದಿದ್ದಾರೆ.

ಟಾಂಟಾನ್‌ನಲ್ಲಿ ನಡೆದ ಪಂದ್ಯದಲ್ಲಿ 111 ಎಸೆತಗಳಲ್ಲಿ 107 ರನ್ ಗಳಿಸಿದ ಡೇವಿಡ್ ವಾರ್ನರ್, ಆಸ್ಟ್ರೇಲಿಯಾದ ಗೆಲುವಿಗೆ ಕಾರಣರಾಗಿದ್ದರು. ಹೀಗಾಗಿ ಪಂದ್ಯಶ್ರೇಷ್ಠ ಗೌರವ ಅವರಿಗೆ ಅನಾಯಾಸವಾಗಿ ಒಲಿದಿತ್ತು. ಪಂದ್ಯ ಶ್ರೇಷ್ಠ ಪ್ರಶಸ್ತಿಯ ಟ್ರೋಫಿ ಪಡೆದುಕೊಂಡ ಬಳಿಕ ಅವರು ಅಭಿಮಾನಿಗಳ ಸಾಲಿನತ್ತ ತೆರಳಿದ್ದರು. ಅಲ್ಲಿ ಅಭಿಮಾನಿಗಳು ನೀಡುತ್ತಿದ್ದ ವಸ್ತುಗಳ ಮೇಲೆ ಹಸ್ತಾಕ್ಷರ ಹಾಕುತ್ತಿದ್ದರು.

ಭಾರತ vs ನ್ಯೂಜಿಲ್ಯಾಂಡ್: ವಿಶ್ವದಾಖಲೆಗೆ ಕೊಹ್ಲಿಗೆ ಕೇವಲ 57 ರನ್‌ ಬೇಕು!ಭಾರತ vs ನ್ಯೂಜಿಲ್ಯಾಂಡ್: ವಿಶ್ವದಾಖಲೆಗೆ ಕೊಹ್ಲಿಗೆ ಕೇವಲ 57 ರನ್‌ ಬೇಕು!

ಆಸ್ಟ್ರೇಲಿಯಾದ ಹಳದಿ ಜೆರ್ಸಿ ತೊಟ್ಟಿದ್ದ ತಮ್ಮ ಪುಟಾಣಿ ಅಭಿಮಾನಿಯೊಬ್ಬನನ್ನು ಕಂಡ ವಾರ್ನರ್, ತಮ್ಮ ಕೈಯಲ್ಲಿದ್ದ ಪಂದ್ಯಶ್ರೇಷ್ಠ ಟ್ರೋಫಿಯ ಪೆಟ್ಟಿಗೆ ಮೇಲೆ ತಮ್ಮ ಸಹಿ ಹಾಕಿ ಪುಟಾಣಿ ಪೋರನ ಕೈಗಿತ್ತರು. ವಾರ್ನರ್ ಅವರ ಈ ನಡೆ ಕಂಡು ನೆರೆದಿದ್ದ ಅಭಿಮಾನಿಗಳು ಪುಳಕಿತರಾದರು.

ವಾರ್ನರ್ ಅಭಿಮಾನಿ ಪೋರನ ಸಂಭ್ರಮ ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
https://twitter.com/cricketworldcup/status/1138872831788376064

'ವಾರ್ನರ್ ನನಗೆ ಟ್ರೋಫಿ ಕೊಟ್ಟಿದ್ದು ತುಂಬಾ ಖುಷಿಯಾಗುತ್ತಿದೆ. ನಾವು ಸಂತಸದಿಂದ ಬಾವುಟ ಹಾರಿಸುತ್ತಿದ್ದೆವಷ್ಟೇ. ಅವರು ನಮ್ಮ ಬಳಿ ಬಂದು ಅದನ್ನು ಕೊಟ್ಟರು. ನನಗೆ ಅವರೆಂದರೆ ನಿಜವಾಗಿಯೂ ಬಹಳ ಇಷ್ಟ' ಎಂದು ಪುಟಾಣಿ ಹೇಳಿಕೊಂಡಿದ್ದಾನೆ.

ಇಂಡೊ-ಪಾಕ್‌ ಪಂದ್ಯದಲ್ಲಿ ಗೆಲ್ಲೊದ್ಯಾರಂತ ಭವಿಷ್ಯ ನುಡಿದ ಕಪಿಲ್‌ ದೇವ್‌!ಇಂಡೊ-ಪಾಕ್‌ ಪಂದ್ಯದಲ್ಲಿ ಗೆಲ್ಲೊದ್ಯಾರಂತ ಭವಿಷ್ಯ ನುಡಿದ ಕಪಿಲ್‌ ದೇವ್‌!

ಪಂದ್ಯದ ಸಂದರ್ಭದಲ್ಲಿ ಬಿಡುವಿನ ವೇಳೆ ಅಥವಾ ಪಂದ್ಯ ಮುಗಿದ ಬಳಿಕ ಆಟಗಾರರು ಗ್ಯಾಲರಿಯಲ್ಲಿ ಕುಳಿತು ಕೈಚಾಚುವ ಅಭಿಮಾನಿಗಳಿಗೆ ಹಸ್ತಾಕ್ಷರ ಹಾಕುವುದು ಸಾಮಾನ್ಯ. ಆದರೆ, ವಾರ್ನರ್ ತಮಗೆ ದೊರೆತ ಪಂದ್ಯಶ್ರೇಷ್ಠ ಟ್ರೋಫಿಯನ್ನೇ ಅಭಿಮಾನಿಯ ಕೈಗೆ ಕೊಟ್ಟಿದ್ದು ವಿಶೇಷ.

Story first published: Thursday, June 13, 2019, 12:25 [IST]
Other articles published on Jun 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X