ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ಟ್ರೋಫಿ ಗೆದ್ದಿತು, ಕಿವೀಸ್ ಹೃದಯ ಗೆದ್ದಿತು: ಟ್ವೀಟ್ ಪ್ರತಿಕ್ರಿಯೆಗಳು

World cup 2019, Final: New Zealand vs England, Twitter reactions

ಲಂಡನ್, ಜುಲೈ 15: ವಿಶ್ವಕಪ್ ಇತಿಹಾಸದಲ್ಲೇ ಅತೀ ರೋಚಕ, ಬಲು ಜಿದ್ದಾಜಿದ್ದಿ ಅನ್ನಿಸಿದ ಪಂದ್ಯವನ್ನು ಜಯಿಸಿರುವ ಇಂಗ್ಲೆಂಡ್ ಚೊಚ್ಚಲ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. ಆದರೆ ಹೊಸ ನಿಯಮದ ಮೂಲಕ ಆತಿಥೇಯ ಇಂಗ್ಲೆಂಡ್‌ಗೆ ವಿಶ್ವಕಪ್ ಚಾಂಪಿಯನ್ ಪಟ್ಟ ನೀಡಿರುವ ಬಗ್ಗೆ ಕ್ರಿಕೆಟ್ ವಲಯದಲ್ಲಿ ಟೀಕೆಗಳೂ ವ್ಯಕ್ತವಾಗಿವೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಕ್ರಿಕೆಟ್ ಕಾಶಿ ಎಂದು ಕರೆಯಾಗುವ ಲಂಡನ್‌ನ ಲಾರ್ಡ್ಸ್ ನಲ್ಲಿ ಭಾನುವಾರ (ಜುಲೈ 14) ನಡೆದ ಐಸಿಸಿ ವಿಶ್ವಕಪ್ 2019ರ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಎರಡೂ ತಂಡಗಳೂ ಸಮಬಲ ಸಾಧಿಸಿದ್ದವು. ವಿಜೇತ ತಂಡ ನಿರ್ಧರಿಸಲು ನಡೆಸಲಾದ ಸೂಪರ್ ಓವರ್‌ ಫಲಿತಾಂಶವೂ ಸಮಗೊಂಡಿತ್ತು. ಆದರೆ ಸೂಪರ್ ಓವರ್‌ನಲ್ಲಿನ ಬೌಂಡರಿ ಸಂಖ್ಯೆಯ ಆಧಾರದಲ್ಲಿ ಆಂಗ್ಲರಿಗೆ ಚಾಂಪಿಯನ್ ಪಟ್ಟ ನೀಡಲಾಯ್ತು.

ಸೂಪರ್‌ ಓವರ್‌ನಲ್ಲಿ ವಿಶ್ವಕಪ್‌ ಗೆದ್ದು ಇತಿಹಾಸ ಬರೆದ ಇಂಗ್ಲೆಂಡ್‌ಸೂಪರ್‌ ಓವರ್‌ನಲ್ಲಿ ವಿಶ್ವಕಪ್‌ ಗೆದ್ದು ಇತಿಹಾಸ ಬರೆದ ಇಂಗ್ಲೆಂಡ್‌

ಬಹಳ ರೋಚಕ ಅನ್ನಿಸಿದ್ದ ಪಂದ್ಯದಲ್ಲಿ ಇಯಾನ್ ಮಾರ್ಗನ್ ಬಳಗ ಮತ್ತು ಕೇನ್ ವಿಲಿಯಮ್ಸ್ ಪಡೆ 241 ರನ್, ಸೂಪರ್ ಓವರ್‌ನಲ್ಲಿ 15 ರನ್ ಬಾರಿಸಿ ಫಲಿತಾಂಶ ಸರಿದೂಗಿಸಿಕೊಂಡಿದ್ದರು. ಸೂಪರ್ ಓವರ್‌ನಲ್ಲಿ ಎರಡು ಬೌಂಡರಿಗಳನ್ನು ಬಾರಿಸಿದ್ದ ಇಂಗ್ಲೆಂಡ್ ಅನ್ನು ವಿಜಯಿ ಎಂದು ಘೋಷಿಸಲಾಯ್ತು. ಇದಕ್ಕೆ ಟ್ವಿಟರ್ ಜಗತ್ತಿನಲ್ಲಿ ವಿಭಿನ್ನ ಪ್ರತಿಕ್ರಿಯೆಗಳು ಬಂದಿವೆ.

4 ಮಾರ್ಕಿನ ಆನ್ಸರ್

ಟೀಚರ್: ಇಂಗ್ಲೆಂಡ್ ಫಸ್ಟ್
ನ್ಯೂಜಿಲೆಂಡ್: ಆದ್ರೆ ನಾನೂ ಸೇಮ್ ಮಾರ್ಕ್ ತೆಗೆದಿದ್ದೀನಲ್ಲ?
ಟೀಚರ್: ಯಾಕೆಂದರೆ ನೋಡು ನೀನು ಬರೀ 2 ಮಾರ್ಕಿನ ಪ್ರಶ್ನೆಗೆ ಉತ್ತರ ಬರೆದಿದ್ದೀ. ಅವನು 4 ಮಾರ್ಕಿನ ಪ್ರಶ್ನೆಗೆ ಉತ್ತರಿಸಿದ್ದಾನೆ. ಹಾಗಾಗಿ ಅವ್ನೇ ಫಸ್ಟು.

ಮೂರ್ಖತನದ ನಿಯಮ

46 ದಿನಗಳ ಕಾಲ, 48 ಪಂದ್ಯಗಳು ನಡೆದವು. ಆದರೆ ವಿಶ್ವಕಪ್ ವಿಜೇತ ತಂಡವನ್ನು ಬೌಂಡರಿಗಳ ಸಂಖ್ಯೆಯ ಆಧಾರದಲ್ಲಿ ನಿರ್ಧರಿಸಲಾಯ್ತು. ಎಂಥಾ ಮೂರ್ಖತನದ ನಿಯಮವಿದು ಎಂದು ಕ್ರಿಕೆಟ್ ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.

ಸಮಬಲದ ಹೋರಾಟ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ನ್ಯೂಜಿಲೆಂಡ್ 50 ಓವರ್‌ಗೆ 8 ವಿಕೆಟ್ ನಷ್ಟದಲ್ಲಿ 241 ರನ್ ಬಾರಿಸಿತ್ತು. ಗುರಿ ಬೆಂಬತ್ತಿದ ಇಂಗ್ಲೆಂಡ್ ಕೂಡ 50 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 241 ರನ್ ಮಾಡಿತು. ಪಂದ್ಯ ಸೂಪರ್ ಓವರ್‌ಗೆ ತಿರುಗಿತಾದರೂ ಅಲ್ಲಿ ಇಂಗ್ಲೆಂಡ್ 6 ಎಸೆತಗಳಿಗೆ ಕ್ರಮವಾಗಿ 3, 1, 4, 1, 2, 4 ರನ್, ನ್ಯೂಜಿಲೆಂಡ್ ವೈಡ್‌ ಸೇರಿ 2, 6, 2, 2, 1, 1 ರನ್ ಗಳಿಸಿತ್ತು. ಬೌಂಡರಿ ಆಧಾರದಲ್ಲಿ ಇಂಗ್ಲೆಂಡ್ ವಿಜಯಿ ಎಂದು ಘೋಷಿಸಲಾಯ್ತು.

ಕಿವೀಸ್ ಹಾರ್ಟು ಗೆದ್ದಿತು

'ಇಂಗ್ಲೆಂಡ್ ನಿಯಮದಲ್ಲಿ ಗೆದ್ದಿತು, ನ್ಯೂಜಿಲೆಂಡ್ ಹೃದಯದಲ್ಲಿ ಗೆದ್ದಿತು' ಅಂತ ಇಲ್ಲೊಬ್ಬರು ಟ್ವೀಟ್ ಮಾಡಿದ್ದಾರೆ. ನ್ಯೂಜಿಲೆಂಡ್ ನೀಡಿದ್ದ ಗುರಿಯಾಧಾರದಲ್ಲಿ ಇಂಗ್ಲೆಂಡ್ ಗೆಲುವನ್ನು ನಿರೀಕ್ಷಿಸಲಾಗಿತ್ತು. ಆದರೆ ಬೌಲಿಂಗ್ ದಾಳಿ ನಡೆಸಿದ ಕಿವೀಸ್ ಪಂದ್ಯವನ್ನು ಹತೋಟಿಗೆ ತಂದುಕೊಂಡಿತ್ತಲ್ಲದೆ, ಫಲಿತಾಂಶವನ್ನು ಹಿಡಿದಿಟ್ಟುಕೊಂಡಿತು. ಆದರೂ ಹೊಸ ನಿಯಮ ಆತಿಥೇಯ ತಂಡಕ್ಕೆ ಚೊಚ್ಚಲ ಟ್ರೋಫಿ ನೀಡಿದೆ.

ಗಲ್ಲಿ ಕ್ರಿಕೆಟ್ ರೂಲ್ಸ್ ಚೆನ್ನಾಗಿವೆ

ಐಸಿಸಿ ನಿಯಮಗಳಿಗಿಂತ ಗಲ್ಲಿ ಕ್ರಿಕೆಟ್ ನಿಯಮಗಳು ಉತ್ತಮವಾಗಿರ್ತವೆ ಅಂತ ಇಲ್ಲೊಬ್ಬರು ವಿಶ್ವಕಪ್ ಫೈನಲ್ ಪಂದ್ಯದ ಫಲಿತಾಂಶಕ್ಕೆ ಬೇಸರ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಈ ಬಾರಿ ಅತೀ ಕೆಟ್ಟ ಪ್ರದರ್ಶನ ನೀಡಿದವರಲ್ಲಿ ಐಸಿಸಿಗೆ ಮೊದಲ ಸ್ಥಾನವನ್ನು ಇದೇ ಟ್ವೀಟ್‌ ನಲ್ಲಿ ನೀಡಲಾಗಿದೆ.

Story first published: Monday, July 15, 2019, 13:41 [IST]
Other articles published on Jul 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X