ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ Vs ಪಾಕಿಸ್ತಾನ: ವಿಶ್ವಕಪ್‌ನ ಮರೆಯಲಾಗದ ಐದು ಕ್ಷಣಗಳು

world cup 2019 five memorable moments of India Vs Pakistan matches

ಲಂಡನ್, ಜೂನ್ 14: ವಿಶ್ವಕಪ್ ಟೂರ್ನಿ ಮಳೆಯ ಅಬ್ಬರದ ನಡುವೆಯೂ ಕುತೂಹಲ ಉಳಿಸಿಕೊಂಡಿದೆ. ನಡೆದ ಪಂದ್ಯಗಳು ಬ್ಯಾಟ್ಸ್‌ಮನ್‌ಗಳ ಆರ್ಭಟ, ಬೌಲರ್‌ಗಳ ಕೈಚಳಕ- ಎರಡರಿಂದಲೂ ಕ್ರಿಕೆಟ್ ಪ್ರಿಯರನ್ನು ರಂಜಿಸಿವೆ. ಆದರೆ, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಕ್ಕಿಂತಲೂ ಹೆಚ್ಚು ಗಮನ ಸೆಳೆದಿರುವುದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ.

ಜೂನ್ 16ರಂದು ನಡೆಯುವ ಈ ಪಂದ್ಯದತ್ತಲೇ ಎಲ್ಲರ ಗಮನ ನೆಟ್ಟಿದೆ. ಮಳೆರಾಯ ತನ್ನ ಆಟವಾಡದೆ ಇದ್ದರೆ ಆ ದಿನ ಓಲ್ಡ್ ಟ್ರಾಫರ್ಡ್ ನಲ್ಲಿ ನಡೆಯುವ ಭಾರತ-ಪಾಕಿಸ್ತಾನ ನಡುವಣ ಪಂದ್ಯ ರೋಚಕ ಕ್ಷಣಗಳನ್ನು ನೀಡುವುದರಲ್ಲಿ ಅನುಮಾನವಿಲ್ಲ.

ವಿಶ್ವಕಪ್ ಕ್ರಿಕೆಟ್: ಭಾರತಕ್ಕೆ ಸಹಾಯ ಮಾಡ್ತಿದ್ದಾರೆ: ಪಾಕ್ ನಾಯಕನ ಅಳಲುವಿಶ್ವಕಪ್ ಕ್ರಿಕೆಟ್: ಭಾರತಕ್ಕೆ ಸಹಾಯ ಮಾಡ್ತಿದ್ದಾರೆ: ಪಾಕ್ ನಾಯಕನ ಅಳಲು

ರಜೆ ದಿನವಾದ ಭಾನುವಾರ ಈ ಪಂದ್ಯ ನಡೆಯುವುದರಿಂದ ಪಂದ್ಯ ವೀಕ್ಷಣೆಗೆ ಕ್ರೀಡಾಪ್ರೇಮಿಗಳು ಕಾತರರಾಗಿದ್ದಾರೆ. 1992ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳು ಆತಿಥ್ಯ ವಹಿಸಿಕೊಂಡು ನಡೆಸಿದ್ದ ವಿಶ್ವಕಪ್ ಟೂರ್ನಿಯಿಂದ 2007ರ ವಿಶ್ವಕಪ್ ಹೊರತುಪಡಿಸಿ ಉಭಯ ತಂಡಗಳು ಆರು ಬಾರಿ ಮುಖಾಮುಖಿಯಾಗಿವೆ. ಈ ಆರೂ ಪಂದ್ಯಗಳಲ್ಲಿ ಭಾರತ ಜಯಭೇರಿ ಬಾರಿಸಿದೆ.

ಸಿಡ್ನಿಯಲ್ಲಿ (1992), ಬೆಂಗಳೂರು (1996), ಬರ್ಮಿಂಗ್‌ಹ್ಯಾಮ್ (1999), ಸೆಂಚೂರಿಯನ್ (2003), ಮೊಹಾಲಿ (2011) ಮತ್ತು ಅಡಿಲೇಡ್ (2015) ಮೈದಾನದಲ್ಲಿ ಭಾರತ ತನ್ನ ಎದುರಾಳಿ ಪಾಕಿಸ್ತಾನವನ್ನು ಬಗ್ಗುಬಡಿದಿದೆ. ಈ ವಿಜಯಗಳ ಪೈಕಿ ಮೂರು ಗೆಲುವು ಮೊಹಮ್ಮದ್ ಅಜರುದ್ದೀನ್ ನಾಯಕತ್ವದಲ್ಲಿ ಬಂದಿದ್ದರೆ, ಎರಡು ಬಾರಿ ಮಹೇಂದ್ರ ಸಿಂಗ್ ಧೋನಿ ಮತ್ತು ಒಂದು ಗೆಲುವು ಸೌರವ್ ಗಂಗೂಲಿ ಅವರ ನಾಯಕತ್ವದಲ್ಲಿ ಒಲಿದಿದೆ.

ಪಾಕಿಸ್ತಾನ vs ಭಾರತ: ಹೈ ವೋಲ್ಟೇಜ್ ಪಂದ್ಯದ ಬಗ್ಗೆ ಮಾತನಾಡಿದ ಕೊಹ್ಲಿಪಾಕಿಸ್ತಾನ vs ಭಾರತ: ಹೈ ವೋಲ್ಟೇಜ್ ಪಂದ್ಯದ ಬಗ್ಗೆ ಮಾತನಾಡಿದ ಕೊಹ್ಲಿ

ಐಸಿಸಿ ವಿಶ್ವಕಪ್‌ನ ಈ ಆರು ಮುಖಾಮುಖಿಗಳಲ್ಲಿ ಐದು ಸ್ಮರಣೀಯ ಕ್ಷಣಗಳು ಇತಿಹಾಸದಲ್ಲಿ ದಾಖಲಾಗಿವೆ. ಅವುಗಳತ್ತ ಒಂದು ನೋಟ...

ಮಿಯಾಂದಾದ್ Vs ಕಿರಣ್ ಮೋರೆ

ಮಿಯಾಂದಾದ್ Vs ಕಿರಣ್ ಮೋರೆ

1992 ವಿಶ್ವಕಪ್‌ನಲ್ಲಿ ಭಾರತದ 217 ರನ್‌ ಗುರಿ ಬೆನ್ನತ್ತಿದ್ದ ಪಾಕಿಸ್ತಾನ ಸಂಕಷ್ಟದಲ್ಲಿ ಸಿಲುಕಿತ್ತು. ಆಗ ಜಾವೇದ್ ಮಿಯಾಂದಾದ್ ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಕಂಬದಂತೆ ನಿಂತಿದ್ದರು. ಭಾರತದ ವಿಕೆಟ್ ಕೀಪರ್ ಕಿರಣ್ ಮೋರೆ ಪದೇ ಪದೇ ಅಪೀಲ್ ಮಾಡುತ್ತಿದ್ದರು. ಇದರಿಂದ ಕಿರಿಕಿರಿಯುಂಟಾಗಿ ಮಿಯಾಂದಾದ್ ಅಂಪೈರ್‌ಗೆ ದೂರು ನೀಡಿದರು. ಒಂದು ಓವರ್ ಮುಕ್ತಾಯಗೊಂಡ ಬಳಿಕ ಮಿಯಾಂದಾದ್ ಎರಡೂ ಕೈಗಳಲ್ಲಿ ಬ್ಯಾಟ್ ಹಿಡಿದುಕೊಂಡು ವಿಚಿತ್ರವಾಗಿ ಜಂಪ್ ಮಾಡುವ ಮೂಲಕ ಮೋರೆ ಅವರನ್ನು ಅಣಕಿಸಿದ್ದರು. ಈ ಘಟನೆ ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನದ ವೈರತ್ವದ ಸಂಕೇತವಾಗಿ ಉಳಿದುಕೊಂಡಿದೆ. ಈ ಪಂದ್ಯದಲ್ಲಿ ಭಾರತ 43 ರನ್‌ಗಳಿಂದ ಜಯಗಳಿಸಿತು.

ವೆಂಕಟೇಶ್ ಪ್ರಸಾದ್ ಮುಯ್ಯಿ

ವೆಂಕಟೇಶ್ ಪ್ರಸಾದ್ ಮುಯ್ಯಿ

1996ರ ವಿಶ್ವಕಪ್ ಪಂದ್ಯದ ಈ ಘಟನೆ ಇಂದಿಗೂ ಹಸಿರಾಗಿದೆ. ಈಗಿನ ಪೀಳಿಗೆಯ ಕ್ರಿಕೆಟ್ ಪ್ರೇಮಿಗಳೂ ಈ ವಿಡಿಯೋವನ್ನು ಮತ್ತೆ ಮತ್ತೆ ನೋಡಿ ಸಂಭ್ರಮಿಸುತ್ತಿರುತ್ತಾರೆ. ಭಾರತ ನೀಡಿದ್ದ 287 ರನ್‌ಗಳ ಗುರಿಯನ್ನು ಪಾಕಿಸ್ತಾನ ಸುಲಭವಾಗಿ ಮುಟ್ಟಿ ಬಿಡುತ್ತದೆ ಎನ್ನುವಂತೆ ಆರಂಭಿಕರಾದ ಸಯೀದ್ ಅನ್ವರ್ ಮತ್ತು ಅಮೀರ್ ಸೊಹೈಲ್ ರನ್ ಹೊಳೆ ಹರಿಸಿದ್ದರು. ಕರ್ನಾಟಕದ ಮಧ್ಯಮ ವೇಗಿ ವೆಂಕಟೇಶ್ ಪ್ರಸಾದ್ ಎಸೆದ ಚೆಂಡನ್ನು ಅಮೀರ್ ಸೊಹೈಲ್ ಎಕ್ಸ್‌ಟ್ರಾ ಕವರ್ ಭಾಗದಲ್ಲಿ ಬೌಂಡರಿಗೆ ಬಾರಿಸಿದರು. ಬಳಿಕ ಬೌಂಡರಿ ಜಾಗವನ್ನು ಬ್ಯಾಟ್‌ನಿಂದ ಪ್ರಸಾದ್‌ಗೆ ತೋರಿಸಿ, ಅಲ್ಲಿಗೆ ಕಳಿಸುತ್ತೇನೆ ಎಂದು ಕೆಣಕಿದರು. ಆಗ ಸುಮ್ಮನೆ ಬೌಲಿಂಗ್ ಹಾದಿಗೆ ಮರಳಿದ ವೆಂಕಟೇಶ್ ಪ್ರಸಾದ್, ಮುಂದಿನ ಎಸೆತದಲ್ಲಿಯೇ ಸೊಹೈಲ್ ಸ್ಟಂಪ್ ಎಗರಿಸಿದರು. ಜತೆಗೆ ಸೊಹೈಲ್‌ಗೆ ಪೆವಿಲಿಯನ್ ಹಾದಿ ಅಲ್ಲಿದೆ ಎಂದು ತೋರಿಸಿ ಲೇವಡಿ ಮಾಡಿದರು. ಈ ವಿಕೆಟ್ ಬಳಿಕ ಪಾಕಿಸ್ತಾನದ ಪತನ ಶುರುವಾಯಿತು. ಭಾರತ 39 ರನ್‌ಗಳಿಂದ ಗೆಲುವು ಸಾಧಿಸಿತು.

ಧವನ್‌ ಫಿಟ್ನೆಸ್‌ ಬಗ್ಗೆ ಕೊನೆಗೂ ಮಾತನಾಡಿದ ಕ್ಯಾಪ್ಟನ್‌ ಕೊಹ್ಲಿ!

ಶಾಹಿದ್ ಅಫ್ರಿದಿ Vs ಮೊಹಮದ್ ಕೈಫ್

ಶಾಹಿದ್ ಅಫ್ರಿದಿ Vs ಮೊಹಮದ್ ಕೈಫ್

2003ರ ವಿಶ್ವಕಪ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 273 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. ಸಚಿನ್ ತೆಂಡೂಲ್ಕರ್ ಮತ್ತು ವಿರೇಂದ್ರ ಸೆಹ್ವಾಗ್ ಮೊದಲ ಓವರ್‌ನಲ್ಲಿಯೇ ಪಾಕ್‌ನ ವೇಗಿಗಳನ್ನು ಚಚ್ಚಲು ಆರಂಭಿಸಿದ್ದರು. ಆದರೆ, ಸೆಹ್ವಾಗ್ ಮತ್ತು ಸೌರವ್ ಗಂಗೂಲಿ ಒಬ್ಬರ ಹಿಂದೆ ಒಬ್ಬರು ಔಟಾದ ಬಳಿಕ ಭಾರತ ಸಂಕಷ್ಟಕ್ಕೆ ಸಿಲುಕಿತ್ತು. ಆಗ ಬ್ಯಾಟಿಂಗ್‌ನಲ್ಲಿ ಮುಂಬಡ್ತಿ ಪಡೆದು ಬಂದ ಕೈಫ್, ಸಚಿನ್ ಜತೆಗೂಡಿ 102 ರನ್‌ಗಳ ಅಮೂಲ್ಯ ಕೊಡುಗೆ ನೀಡಿದರು. ಈ ವೇಳೆ ಕೈಫ್ ವಿರುದ್ಧ ಪಾಕಿಸ್ತಾನದ ಶಾಹಿದ್ ಅಫ್ರಿದಿ ವೈಯಕ್ತಿಕ ನಿಂದನೆಗಿಳಿದರು. ಅದರ ನಡುವೆಯೂ ಪಾಕಿಸ್ತಾನದ ಬೌಲಿಂಗ್‌ ಸವಾಲನ್ನು ಸಮರ್ಥವಾಗಿ ಎದುರಿಸಿದ ಕೈಫ್ 35 ರನ್ ಗಳಿಸಿದರು.

ಯೂನಸ್ ಬೆವರಿಳಿಸಿದ ಜಡೇಜಾ

ಯೂನಸ್ ಬೆವರಿಳಿಸಿದ ಜಡೇಜಾ

1996ರಲ್ಲಿ ಬೆಂಗಳೂರಿನಲ್ಲಿ ನಡೆದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ವಿಶ್ವಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರಾದ ವಖಾರ್ ಯೂನಸ್ ಬೌಲಿಂಗ್‌ನಲ್ಲಿ ಅಜಯ್ ಜಡೇಜಾ ಬ್ಯಾಟ್ ಬೀಸಿದ ಪರಿ ಎಲ್ಲರನ್ನೂ ದಿಗ್ಭ್ರಮೆಗೊಳಿಸಿತ್ತು. ಯಾವ ಬ್ಯಾಟ್ಸ್‌ಮನ್‌ ಕೂಡ ವಖಾರ್ ಯೂನಸ್ ಅವರನ್ನು ಈ ರೀತಿ ಚಚ್ಚಿರಲಿಲ್ಲ. ಆರನೇ ಕ್ರಮಾಂಕದಲ್ಲಿ ಬಂದಿದ್ದ ಅಜಯ್ ಜಡೇಜಾ ಕೇವಲ 25 ಎಸೆತಗಳಲ್ಲಿ 45 ರನ್ ಬಾರಿಸಿದ್ದರು. ವಖಾರ್ ಯೂನಸ್ ಮೊದಲ 8 ಓವರ್‌ಗಳಲ್ಲಿ 27 ರನ್ ನೀಡಿದ್ದವರು, ತಮ್ಮ ಕೊನೆಯ ಎರಡು ಓವರ್‌ಗಳಲ್ಲಿ 40 ರನ್ ನೀಡಿದ್ದರು. ಕೊನೆಗೂ ಅವರು ಜಡೇಜಾ ವಿಕೆಟ್ ಪಡೆದು ನಿಟ್ಟುಸಿರುಬಿಟ್ಟಿದ್ದರು.

ವಿರಾಟ್ ಕೊಹ್ಲಿ ಅಬ್ಬರ

ವಿರಾಟ್ ಕೊಹ್ಲಿ ಅಬ್ಬರ

2015ರ ಅಡಿಲೇಡ್ ಪಂದ್ಯದಲ್ಲಿ ಭಾರತದ ವಿರಾಟ್ ಕೊಹ್ಲಿ ಶತಕ ಗಳಿಸಿದ್ದರು. ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಅದುವರೆಗೂ ಯಾವ ಭಾರತೀಯನೂ ಶತಕ ಬಾರಿಸಿರಲಿಲ್ಲ. ಪಾಕಿಸ್ತಾನದ ಪರ 2003ರಲ್ಲಿ ಸಯೀದ್ ಅನ್ವರ್ ಶತಕ ಗಳಿಸಿದ್ದರು. ನವಜೋತ್ ಸಿಂಗ್ ಸಿಧು 1996ರಲ್ಲಿ ಮತ್ತು ಸಚಿನ್ ತೆಂಡೂಲ್ಕರ್ 2003ರಲ್ಲಿ 90ರ ಗಡಿ ದಾಟಿ ಶತಕದ ಸಮೀಪ ಮುಗ್ಗರಿಸಿದ್ದರು. ಮೂರನೇ ಕ್ರಮಾಕದಲ್ಲಿ ಆಡಿದ್ದ ವಿರಾಟ್ ಕೊಹ್ಲಿ 126 ಎಸೆತಗಳಲ್ಲಿ 107 ರನ್ ಗಳಿಸಿ ಭಾರತಕ್ಕೆ 76 ರನ್ ಜಯ ಸಿಗಲು ಕಾರಣರಾಗಿದ್ದರು.

Story first published: Friday, June 14, 2019, 11:37 [IST]
Other articles published on Jun 14, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X