ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್‌ ಇಂಡಿಯಾಗೆ ಉಪಯುಕ್ತ ಸಲಹೆ ನೀಡಿದ ಹರ್ಭಜನ್‌ ಸಿಂಗ್‌!

ICC World Cup 2019 : ತನಗೆ ಸ್ಥಾನ ಸಿಗದಿದ್ದರೂ ಚಾಹಲ್, ಕುಲ್ದೀಪ್ ಬಗ್ಗೆ ಬಜ್ಜಿ ಏನಂದ್ರು ಗೊತ್ತಾ..?
World Cup 2019: Harbhajan Singh tells India to stick with Kuldeep-Chahal

ಮ್ಯಾಂಚೆಸ್ಟರ್‌, ಜೂನ್‌ 19: ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡದ ಸ್ಪಿನ್‌ ಜೋಡಿ ಯುಜ್ವೇಂದ್ರ ಚಹಲ್‌ ಮತ್ತು ಕುಲ್ದೀಪ್‌ ಯಾದವ್‌ ಅವರ ಪ್ರದರ್ಶನವನ್ನು ಮೆಚ್ಚಿರುವ ಭಾರತ ತಂಡದ ಅವಕಾಶ ವಂಚಿತ ಆಫ್‌ಸ್ಪಿನ್ನರ್‌ ಹರ್ಭಜನ್‌ ಸಿಂಗ್‌, ವಿಶ್ವಕಪ್‌ನ ಉಳಿದೆಲ್ಲಾ ಪಂದ್ಯಗಳಲ್ಲಿಯೂ ಈ ಸ್ಪಿನ್‌ ಜೋಡಿಯನ್ನು ಭಾರತ ತಂಡದಲ್ಲಿ ಮುಂದುವರಿಸಬೇಕು ಎಂದು ಸಲಹೆ ನೀಡಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಕೈಬೆರಳನ್ನು ಬಳಸಿ ಚೆಂಡನ್ನು ತಿರುಗಿಸುವ ಆಫ್‌ಸ್ಪಿನ್ನರ್‌ಗಳಿಗಿಂತಲೂ ಮಣಿಕಟ್ಟು (ರಿಸ್ಟ್‌) ಬಳಕೆ ಮಾಡಿ ಚೆಂಡನ್ನು ತಿರುಗಿಸುವಂತಹ ಲೆಗ್‌ಸ್ಪಿನ್ನರ್‌ಗಳಿಗೆ ಹೆಚ್ಚು ತಿರುವು ಲಭ್ಯವಾಗುತ್ತದೆ.

ಪ್ರಸಕ್ತ ವಿಶ್ವಕಪ್‌ನಲ್ಲಿ ಎಡಗೈ ರಿಸ್ಟ್‌ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 2 ವಿಕೆಟ್‌ ಪಡೆದು ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಮತ್ತೊಂದೆಡೆ ಚಹಲ್‌, ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 51ಕ್ಕೆ 4 ವಿಕೆಟ್‌ ಪಡೆದು ಮಿಂಚಿದ್ದರು.

ಇನ್ನು ಇಂಗ್ಲೆಂಡ್‌ನ ಪಿಚ್‌ಗಳು ಬೇಸಿಗೆಯ ದಿನಗಳಲ್ಲಿ ವೇಗದ ಬೌಲರ್‌ಗಳಿಗೆ ಹೆಚ್ಚು ನೆರವಾಗುತ್ತದೆ. ಹೀಗಾಗಿ ಕುಲ್ದೀಪ್‌ ಯಾದವ್‌ ಬದಲಾಗಿ ಮೊಹಮ್ಮದ್‌ ಶಮಿ ಅವರನ್ನು ಆಡಿಸುವ ಕುರಿತಾಗಿ ಚರ್ಚೆ ಆರಂಭವಾಗಿತ್ತು. ಆದರೆ, ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ( 417) ವಿಕೆಟ್‌ ಪಡೆದ ಆಫ್‌ಸ್ಪಿನ್ನರ್‌ ಆಗಿರುವ ಹರ್ಭಜನ್‌ ಸಿಂಗ್‌, ಚಹಲ್‌ ಮತ್ತು ಕುಲ್ದೀಪ್‌ ಜೋಡಿಯನ್ನು ತಂಡದಲ್ಲಿ ಮುಂದುವರಿಸುವಂತೆ ಸೂಚಿಸಿದ್ದಾರೆ.

ನಂ.1 ಲೆಗ್‌ ಸ್ಪಿನ್ನರ್‌ ರಶೀದ್‌ ಖಾನ್‌ ಹೆಗಲೇರಿದ ಅಪಕೀರ್ತಿ!ನಂ.1 ಲೆಗ್‌ ಸ್ಪಿನ್ನರ್‌ ರಶೀದ್‌ ಖಾನ್‌ ಹೆಗಲೇರಿದ ಅಪಕೀರ್ತಿ!

"ಇದೊಂದು ಅದ್ಭುತ ಸಂಯೋಜನೆ. ಕಳೆದ ಎರಡು ಮೂರು ವರ್ಷಗಳಲ್ಲಿ ಭಾರತ ತಂಡ ಗಳಿಸಿರುವ ಯಶಸ್ಸಿನಲ್ಲಿ ಈ ಇಬ್ಬರು ಬೌಲರ್‌ಗಳ ಪಾತ್ರ ಪ್ರಮುಖವಾದುದ್ದಾಗಿದೆ. ಅವರಿಬ್ಬರೂ ಒಟ್ಟಿಗೆ ಆಡುವುದನ್ನು ನೋಡಲು ಇಷ್ಟಪಡುತ್ತೇನೆ. ಏಕೆಂದರೆ ಟೂರ್ನಿಯಲ್ಲಿ ಬೇರಾವ ತಂಡದಲ್ಲೂ ಇಬ್ಬರು ಸ್ಪಿನ್ನರ್‌ಗಳಲ್ಲಿಲ್ಲ. ಮತ್ತು ಯಾವ ತಂಡಗಳಿಗೂ ಇನಿಂಗ್ಸ್‌ ಮಧ್ಯದ ಓವರ್‌ಗಳಲ್ಲಿ ಸ್ಪಿನ್ನರ್‌ಗಳ ವಿರುದ್ಧ ಆಡುವ ಅಭ್ಯಾಸವಿಲ್ಲ,'' ಎಂದು ಹರ್ಭಜನ್‌ ಹೇಳಿದ್ದಾರೆ.

"ಇಬ್ಬರು ಸ್ಪಿನ್ನರ್‌ಗಳೊಂದಿಗೆ ಆಡುವುದು ಭಾರತ ತಂಡಕ್ಕೆ ಯಶಸ್ಸು ತಂದುಕೊಟ್ಟಿದೆ. ರಿಸ್ಟ್‌ ಸ್ಪಿನ್ನರ್‌ಗಳಾದ್ದರಿಂದ ಇಂಗ್ಲೆಂಡ್‌ ಪಿಚ್‌ಗಳಲ್ಲೂ ಯಶಸ್ಸು ಲಭ್ಯವಾಗುತ್ತಿದೆ. ಭಾರತ ತಂಡ ಟೂರ್ನಿಯ ಉಳಿದ ಎಲ್ಲ ಪಂದ್ಯಗಳಿಗೆ ತನ್ನ ಶ್ರೇಷ್ಠ 11 ಆಟಗಾರರನ್ನು ಕಣಕ್ಕಿಳಿಸಿದರೆ ಅದರಲ್ಲಿ ಈ ಇಬ್ಬರು ಸ್ಪಿನ್ನರ್‌ಗಳು ಇರಲೇಬೇಕು,'' ಎಂದಿದ್ದಾರೆ. ಚಹಲ್‌ ಮತ್ತು ಕುಲ್ದೀಪ್‌ ಜಂಟಿಯಾಗಿ ಕಳೆದ ಮೂರು ವರ್ಷಗಳಲ್ಲಿ 168 ಒಡಿಐ ವಿಕೆಟ್‌ಗಳನ್ನು ಪಡೆದಿದ್ದಾರೆ.

Story first published: Wednesday, June 19, 2019, 22:47 [IST]
Other articles published on Jun 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X