ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ನಲ್ಲಿ ಆಸೀಸ್‌ ವೇಗಿ ಕಮಿನ್ಸ್‌ ಯಶಸ್ಸು ಗಳಿಸುತ್ತಿರುವುದು ಇದರಿಂದ!

World Cup 2019: Important to bowl dot balls, says Pat Cummins

ಟೌನ್ಟನ್‌, ಜೂನ್‌ 13: ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಯಶಸ್ಸು ಗಳಿಸಬೇಕಾದರೆ ಹೆಚ್ಚು ಹೆಚ್ಚು ಡಾಟ್‌ ಬಾಲ್‌ಗಳನ್ನು ಎಸೆಯಬೇಕು ಎಂದು ಆಸ್ಟ್ರೇಲಿಯಾದ ವೇಗದ ಬೌಲರ್‌ ಪ್ಯಾಟ್‌ ಕಮಿನ್ಸ್‌, ಪ್ರಸಕ್ತ ಸಾಲಿನ ವಿಶ್ವಕಪ್‌ ಟೂರ್ನಿಯಲ್ಲಿ ತಮ್ಮ ಯಶಸ್ಸಿನ ಹಿಂದಿರುವ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

26 ವರ್ಷದ ಕಮಿನ್ಸ್‌ ಹಾಲಿ ವಿಶ್ವ ಚಾಂಪಿಯನ್ಸ್‌ ಆಸ್ಟ್ರೇಲಿಯಾ ತಂಡದ ಪರ ಕಠಿಣ ಪರಿಶ್ರಮ ವಹಿಸುತ್ತಿರುವ ವೇಗದ ಬೌಲರ್‌ ಆಗಿದ್ದು, ಕಳೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 33ಕ್ಕೆ 3 ವಿಕೆಟ್‌ ಪಡೆದು ಗುರಿ ಬೆನ್ನತ್ತಿ ಹೊರಟಿದ್ದ ಎದುರಾಳಿ ತಂಡದ ಬ್ಯಾಟಿಂಗ್‌ ಬೆನ್ನೆಲುಬನ್ನು ಮುರಿದಿದ್ದರು.

ಧವನ್‌ ಗಾಯಗೊಂಡ ಬಗ್ಗೆ ರಾಸ್‌ ಟೇಲರ್‌ ಹೇಳಿದ್ದೇನು ಗೊತ್ತಾ?ಧವನ್‌ ಗಾಯಗೊಂಡ ಬಗ್ಗೆ ರಾಸ್‌ ಟೇಲರ್‌ ಹೇಳಿದ್ದೇನು ಗೊತ್ತಾ?

ಅಂದಹಾಗೆ ಹೆಚ್ಚು ಹೆಚ್ಚು ಡಾಟ್‌ ಬಾಲ್‌ಗಳನ್ನು ಎಸೆಯುವುದು ಈ ಬಾರಿಯ ವಿಶ್ವಕಪ್‌ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡದ ಪ್ರಮುಖ ರಣತಂತ್ರವಿದ್ದಂತಿದೆ. ಏಕೆಂದರೆ ಟೂರ್ನಿಯಲ್ಲಿ ಈವರೆಗೆ ಅತಿ ಹೆಚ್ಚು ಡಾಟ್‌ ಬಾಲ್‌ಗಳನ್ನು ಎಸೆದವರ ಪೈಕಿ ಪ್ಯಾಟ್‌ ಕಮಿನ್ಸ್‌ ಅಗ್ರಸ್ಥಾನದಲ್ಲಿದ್ದರೆ, ನಂತರದ ಎರಡು ಸ್ಥಾನಗಳಲ್ಲಿ ಆಸ್ಟ್ರೇಲಿಯಾದ ವೇಗಿಗಳಾದ ಮಿಚೆಲ್‌ ಸ್ಟಾರ್ಕ್‌ ಮತ್ತು ನೇಥನ್‌ ಕೌಲ್ಟರ್‌ ನೈಲ್‌ ಇರುವುದು ವಿಶೇಷ.

"ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ನನ್ನ ಬೌಲಿಂಗ್‌ನಲ್ಲಿ ತಂದುಕೊಂಡಿರುವ ಮಹತ್ವದ ಅಭಿವೃದ್ಧಿ ಅದು. ಉತ್ತಮ ಲೆನ್ತ್‌ ಕಾಯ್ದುಕೊಳ್ಳುವ ಸಾಮರ್ಥ್ಯದೊಂದಿಗೆ ಎದುರಾಳಿ ಬ್ಯಾಟ್ಸ್‌ಮನ್‌ಗಳು ಹೆಚ್ಚು ರನ್‌ಗಳಿಸದಂತೆ ಒತ್ತಡ ಹೇರಬಹುದು,'' ಎಂದು ಕಮಿನ್ಸ್‌ ತಮ್ಮ ತಂತ್ರಗಾರಿಕೆಯನ್ನು ವಿವರಿಸಿದ್ದಾರೆ.

ಪಾಕ್‌ ವಿರುದ್ಧ ಆಸೀಸ್‌ ತಿಣುಕಾಡಿ ಗೆದ್ದ ಬಳಿಕ ಆರೊನ್‌ ಫಿಂಚ್‌ ಹೇಳಿದ್ದಿದು!ಪಾಕ್‌ ವಿರುದ್ಧ ಆಸೀಸ್‌ ತಿಣುಕಾಡಿ ಗೆದ್ದ ಬಳಿಕ ಆರೊನ್‌ ಫಿಂಚ್‌ ಹೇಳಿದ್ದಿದು!

"ಒಂದಂಕ್ಕಿಯ ರನ್‌ಗಳನ್ನು ಹೆಚ್ಚು ಬಿಟ್ಟುಕೊಟ್ಟಷ್ಟು ಎದುರಾಳಿ ತಂಡಕ್ಕೆ 300 ರನ್‌ಗಳ ಗುರಿ ಬೆನ್ನತ್ತುವುದು ಸುಲಭವಾಗಿ ಬಿಡುತ್ತದೆ. ಹೀಗಾಗಿ ಒಂದಂಕಿಯ ರನ್‌ಗಳನ್ನು ನಿಯಂತ್ರಿಸುವುದು ಭಾರಿ ಪರಿಣಾಮ ಬೀರುತ್ತದೆ. ಓಚರ್‌ ಒಂದರಲ್ಲಿ ಒಂದು ಬೌಂಡರಿ ಮತ್ತು ಸಿಂಗಲ್ಸ್‌ಗಳನ್ನು ಬಿಟ್ಟುಕೊಟ್ಟರೆ ಸರಾಸರಿ 10-11 ರನ್‌ಗಳು ದಾಖಲಾಗುತ್ತದೆ. ಅದೇ ಒಂದು ರನ್‌ಗಳನ್ನು ಬಿಟ್ಟುಕೊಡದೆ ಬೌಂಡರಿ ಬಿಟ್ಟುಕೊಟ್ಟರು 5-6 ರನ್‌ಗಳಿಗೆ ಸೀಮಿತಗೊಳ್ಳುತ್ತದೆ,'' ಎಂದು ಕಮಿನ್ಸ್‌ ಹೇಳಿದ್ದಾರೆ.

ಇಂಡೊ-ಪಾಕ್‌ ಪಂದ್ಯದಲ್ಲಿ ಗೆಲ್ಲೊದ್ಯಾರಂತ ಭವಿಷ್ಯ ನುಡಿದ ಕಪಿಲ್‌ ದೇವ್‌!ಇಂಡೊ-ಪಾಕ್‌ ಪಂದ್ಯದಲ್ಲಿ ಗೆಲ್ಲೊದ್ಯಾರಂತ ಭವಿಷ್ಯ ನುಡಿದ ಕಪಿಲ್‌ ದೇವ್‌!

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲಿಗೆ 49 ಓವರ್‌ಗಳಲ್ಲಿ 307 ರನ್‌ಗಳನ್ನು ದಾಖಲಿಸಿ, ಬಳಿಕ ಎದುರಾಳಿಯನ್ನು 266 ರನ್‌ಗಳಿಗೆ ನಿಯಂತ್ರಿಸಿ 41 ರನ್‌ಗಳ ಜಯ ದಾಖಲಿಸಿತು. ಕಮಿನ್ಸ್‌ ಮತ್ತು ಸ್ಟಾರ್ಕ್‌ ಜೋಡಿ ಪ್ರಸಕ್ತ ವಿಶ್ವಕಪ್‌ನಲ್ಲಿ ಈವರೆಗೆ ಒಟ್ಟು 18 ವಿಕೆಟ್‌ಗಳನ್ನು ಉರುಳಿಸಿದೆ.

Story first published: Thursday, June 13, 2019, 17:26 [IST]
Other articles published on Jun 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X