ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ಭಾರತದ ಸಂಭಾವ್ಯ 11 ತಂಡ

World Cup 2019: India probable XI against South Africa

ಸೌತ್‌ಹ್ಯಾಂಪ್ಟನ್‌, ಜೂನ್‌ 04: ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ನ 12ನೇ ಆವೃತ್ತಿಯ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿರುವ ಟೀಮ್‌ ಇಂಡಿಯಾ ಕೊನೆಗೂ ಕಣಕ್ಕಿಳಿಯುತ್ತಿದ್ದು, ಇಲ್ಲಿನ ರೋಸ್‌ ಬೌಲ್‌ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಬುಧವಾರ ತನ್ನ ಅಭಿಯಾನ ಆರಂಭಿಸಲಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು

ಅಂದಹಾಗೆ ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಇದು ಮೊದಲ ಪಂದ್ಯವಾದರೆ, ದಕ್ಷಿಣ ಆಫ್ರಿಕಾ ತಂಡ ಸತತ ಎರಡು ಸೋಲನುಭವಿಸುವ ಮೂಲಕ ಒತ್ತಡಕ್ಕೆ ಸಿಲುಕಿದೆ. ಮೊದಲ ಪಂದ್ಯದರ್ಳಳೀ ಆತಿಥೇಯ ಇಂಗ್ಲೆಂಡ್‌ ವಿರುದ್ದ ಸೋತ ಹರಿಣ ಪಡೆ, ಬಳಿಕ ಬಾಂಗ್ಲಾದೇಶ ವಿರುದ್ಧ ಅಚ್ಚರಿಯ ಸೋಲುಂಡು ಕಂಗಾಲಾಗಿದೆ. ಇದೀಗ ಬಲಿಷ್ಠ ಭಾರತಕ್ಕೆ ಆಘಾತ ನೀಡಿ ಕಳೆದು ಹೋಗಿರುವ ಆತ್ಮವಿಶ್ವಾಸವನ್ನು ಕಂಡುಕೊಳ್ಳುವುದು ಫಾಫ್‌ ಡು'ಪ್ಲೆಸಿಸ್‌ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡದ ಗುರಿಯಾಗಿದೆ.

ಪಾಕಿಸ್ತಾನ ತಂಡ ಈ ಬಾರಿ ವಿಶ್ವಕಪ್‌ ಟ್ರೋಫಿ ಗೆದ್ದೇ ಗೆಲ್ಲುತ್ತಂತೆ!ಪಾಕಿಸ್ತಾನ ತಂಡ ಈ ಬಾರಿ ವಿಶ್ವಕಪ್‌ ಟ್ರೋಫಿ ಗೆದ್ದೇ ಗೆಲ್ಲುತ್ತಂತೆ!

ಮತ್ತೊಂದೆಡೆ ಭಾರತ ತಂಡ ವಿಶ್ವಕಪ್‌ ಅಭ್ಯಾಸ ಪಂದ್ಯದಲ್ಲಿ ಮೊದಲಿಗೆ ನ್ಯೂಜಿಲೆಂಡ್‌ ವಿರುದ್ಧ ಸೋಲುಂಡರೂ ಬಳಿಕ ಬಾಂಗ್ಲಾದೇಶ ವಿರುದ್ಧ ಗೆದ್ದು ಲಯಕ್ಕೆ ಮರಳಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ. ಹೀಗಾಗಿ ಭಾರತ ತಂಡದ ಸಂಭಾವ್ಯ ಇಲೆವೆನ್‌ ಹೇಗಿರಬಹುದು ಎಂಬುದನ್ನು ಮೈಖೇಲ್‌ ವಿವರಿಸಿದೆ.

1. ರೋಹಿತ್‌ ಶರ್ಮಾ

1. ರೋಹಿತ್‌ ಶರ್ಮಾ

ಟೀಮ್‌ ಇಂಡಿಯಾದ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಆರಂಭಿಕರಾಗಿ ಆಡುವುದು ನಿಶ್ಚಿತ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಪ್ರಶಸ್ತಿ ಗೆದ್ದುಕೊಟ್ಟು ಯಶಸ್ಸಿನ ಅಲೆಯಲ್ಲಿರುವ ಉಪನಾಯಕ ರೋಹಿತ್‌, ವಿಶ್ವಕಪ್‌ ಅಖಾಡದಲ್ಲೂ ಅಂಥದ್ದೇ ಪ್ರದರ್ಶನ ನೀಡುವುದನ್ನು ಎದುರು ನೋಡುತ್ತಿದ್ದಾರೆ. ಹಿಟ್‌ಮ್ಯಾನ್‌ ಖ್ಯಾತಿಯ ರೋಹಿತ್‌, ಆರಂಭಿಕರಾಗಿ ಮಿಂಚಿದರೆ ತಂಡಕ್ಕೆ 300+ ರನ್‌ ದಾಖಲಿಸುವುದು ಸುಲಭವಾಗುತ್ತದೆ

2. ಶಿಖರ್‌ ಧವನ್‌

2. ಶಿಖರ್‌ ಧವನ್‌

ರೋಹಿತ್‌ನ ಜೊತೆಗಾರ ಶಿಖರ್‌ ಧವನ್‌ ಅವರ ಬ್ಯಾಟಿಂಗ್‌ ಶೈಲಿಗೆ ಇಂಗ್ಲೆಂಡ್‌ನ ಪಿಚ್‌ಗಳು ಹೇಳಿಮಾಡಿಸಿದಂತಿದೆ. ಇದಕ್ಕೆ ಉದಾಹರಣೆ ಎಂಬಂತೆ 2017ರ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಗಬ್ಬರ್‌ ಖ್ಯಾತಿಯ ಎಡಗೈ ಬ್ಯಾಟ್ಸ್‌ಮನ್‌ ರನ್‌ ಹೊಳೆಯನ್ನೇ ಹರಿಸಿದ್ದರು. ಅಷ್ಟೇ ಅಲ್ಲದೆ ಇಂಗ್ಲೆಂಡ್‌ನಲ್ಲಿ ಧವನ್‌ ಅವರ ಬ್ಯಾಟಿಂಗ್‌ ದಾಖಲೆಯೂ ಉತ್ತಮವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಅವರ ಬ್ಯಾಟಿಂಗ್‌ ಅಷ್ಟು ಉತ್ತಮವಾಗಿ ಇಲ್ಲದೇ ಇದ್ದರೂ, ವಿಶ್ವಲಕಪ್‌ನಲ್ಲಿ ಫಾರ್ಮ್‌ ಕಂಡುಕೊಳ್ಳುವುದನ್ನು ಎದುರು ನೋಡುತ್ತಿದ್ದಾರೆ.

3. ಕ್ಯಾಪ್ಟನ್‌ ವಿರಾಟ್‌

3. ಕ್ಯಾಪ್ಟನ್‌ ವಿರಾಟ್‌

ಐಪಿಎಲ್‌ ವೈಫಲ್ಯವನ್ನು ಮರೆತು ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಎಂದಿನ ಲಯ ಕಾಪಾಡಿಕೊಳ್ಳುವುದರ ಕಡೆಗೆ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಎದುರು ನೋಡುತ್ತಿದ್ದು, ತಮ್ಮ ನೆಚ್ಚಿನ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಆರಂಭಿಕರು ವಿಫಲರಾದರೆ ತಂಡವನ್ನು ಮೇಲೆತ್ತುವ ಜವಾಬ್ದಾರಿಯನ್ನು ಕ್ಯಾಪ್ಟನ್‌ ಕೊಹ್ಲಿ ನಿಭಾಯಿಸಲಿದ್ದಾರೆ. ಈ ಬಾರಿಯ ವಿಶ್ವಕಪ್‌ನಲ್ಲಿ ಕೊಹ್ಲಿ ರನ್‌ ಹೊಳೆ ಹರಿಸುತ್ತಾರೆ ಎಂಬುದು ಕ್ರಿಕೆಟ್‌ ಪಂಡಿತರ ಲೆಕ್ಕಾಚಾರವಾಗಿದೆ. ಆದರೆ, ಅಭ್ಯಾಸ ಪಂದ್ಯಗಳಲ್ಲಿ ಕೊಹ್ಲಿ ಪ್ರದರ್ಶನ ನಿರೀಕ್ಷಿತ ಮಟ್ಟದದ್ದಾಗಿರಲಿಲ್ಲ.

4. ಕೆ.ಎಲ್‌ ರಾಹುಲ್‌

4. ಕೆ.ಎಲ್‌ ರಾಹುಲ್‌

ಈ ಬಾರಿಯ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡದ ಪರ ಕರ್ನಾಟದಿಂದ ಆಡುತ್ತಿರುವ ಏಕೈಕ ಆಟಗಾರ ಕೆ.ಎಲ್‌ ರಾಹುಲ್‌. ಮೊದಲಿಗೆ ಹೆಚ್ಚುವರಿ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಟೀಮ್‌ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದ ರಾಹುಲ್‌, ಇದೀಗ ತಂಡಕ್ಕೆ ಬಹು ಸಮಯದಿಂದ ಕಾಡುತ್ತಿರುವ 4ನೇ ಕ್ರಮಾಂಕದ ಬ್ಯಾಟಿಂಗ್‌ಗೆ ಪರಿಹಾರವಾಗಿ ಕಂಗೊಳಿಸುತ್ತಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ರಾಹುಲ್‌ ಶತಕ ಸಿಡಿಸಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡುವುದನ್ನು ಖಾತ್ರಿ ಪಡಿಸಿಕೊಂಡಿದ್ದಾರೆ.

5. ಎಂ.ಎಸ್‌ ಧೋನಿ

5. ಎಂ.ಎಸ್‌ ಧೋನಿ

ತಂಡದ ಮಧ್ಯಮ ಕ್ರಮಾಖದ ಬ್ಯಾಟಿಂಗ್‌ ಬೆನ್ನೆಲುಬು ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಎಂ.ಎಸ್‌ ಧೋನಿ. ತಮ್ಮ ವೃತ್ತಿ ಬದುಕಿನ ಕೊನೆಯ ವಿಶ್ವಕಪ್‌
ಟೂರ್ನಿಯನ್ನಾಡುತ್ತಿರುವ ಎಂ.ಎಸ್‌ ಧೋನಿ, 5ನೇ ಕ್ರಮಾಂಕದಲ್ಲಿ ತಂಡಕ್ಕೆ ಆಧಾರ ಸ್ಥಂಭವಾಗಿದ್ದಾರೆ. ಉತ್ತಮ ಆರಂಭ ಸಿಕ್ಕರೆ ಅಂತಿಮ ಓವರ್‌ಗಳಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆಸುವ ಹಾಗೂ ಆರಂಭಿಕ ಕುಸಿತ ಕಂಡರೆ ಇನಿಂಗ್ಸ್‌ ಕಟ್ಟಿ ಚೇತರಿಕೆ ನೀಡುವ ಸಮರ್ಥ ಆಟಗಾರ ಧೋನಿ. ಇನ್ನು ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ 400+ ರನ್‌ಗಳನ್ನು ಸಿಡಿಸಿ ಉತ್ತಮ ಲಯದಲ್ಲಿರುವ ಧೋನಿ, ಬಾಂಗ್ಲಾ ವಿರುದ್ಧದ ಅಭ್ಯಾಸ ಪಂದ್ಯದಲ್ಲೂ ಶತಕ ಬಾರಿಸಿದ್ದರು.

6. ಕೇದಾರ್‌ ಜಾಧವ್‌/ ವಿಜಯ್‌ ಶಂಕರ್‌

6. ಕೇದಾರ್‌ ಜಾಧವ್‌/ ವಿಜಯ್‌ ಶಂಕರ್‌

ಐಪಿಎಲ್‌ ವೇಳೆ ಭುಜದ ಗಾಯದ ಸಮಸ್ಯೆ ಎದುರಿಸಿದ ಸ್ಟಾರ್‌ ಆಲ್‌ರೌಂಡರ್‌ ಕೇದಾರ್‌ ಜಾಧವ್‌, ಅಂದಿನಿಂದ ಯಾವುದೇ ಸ್ಪರ್ಧಾತ್ಮಕ ಪಂದ್ಯದಲ್ಲಿ ಆಡಿಲ್ಲ. ಆದರೂ, ಇತ್ತೀಚೆಗೆ ನೆಟ್ಸ್‌ನಲ್ಲಿ ಬ್ಯಾಟಿಂಗ್‌ ಅಭ್ಯಾಸ ಮಾಡುವ ಮೂಲಕ ಜಾಧವ್‌ ತಮ್ಮ ಫಿಟ್ನೆಸ್‌ ಸಾಬೀತು ಪಡಿಸಿದ್ದಾರೆ. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಜಾಧವ್‌ ಆಡುವುದು ಬಹುತೇಕ ಖಚಿತವಾಗಿದೆ. ಆದರೂ, ಬ್ಯಾಟಿಂಗ್‌ ಜೊತೆಗೆ ವೇಗದ ಬೌಲಿಂಗ್‌ ಅಗತ್ಯವಿದ್ದರೆ 3ಡಿ ಸ್ಪೆಷಲಿಸ್ಟ್‌ ಆಟಗಾರ ಎಂದೇ ಸ್ಥಾನ ಪಡೆದಿರುವ ವಿಜಯ್‌ ಶಂಕರ್‌ಗೆ ತಂಡ ಮಣೆ ಹಾಕಲಿದೆ.

7. ಹಾರ್ದಿಕ್‌ ಪಾಂಡ್ಯ

7. ಹಾರ್ದಿಕ್‌ ಪಾಂಡ್ಯ

ಈ ಬಾರಿಯ ವಿಶ್ವಕಪ್‌ನಲ್ಲಿ ಆಲ್‌ರೌಂಡರ್‌ಗಳದ್ದೇ ಆಟ ಎಂದು ಈಗಾಗಗಲೇ ಕ್ರಿಕೆಟ್‌ನ ದಿಗ್ಗಜರುಗಳು ಭವಿಷ್ಯ ನುಡಿದಾಗಿದೆ. ಅಂತೆಯೇ ಸದ್ಯದ ವಿಶ್ವ ಶ್ರೇಷ್ಠ
ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿರುವ ಹಾರ್ದಿಕ್‌ ಪಾಂಡ್ಯ, ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ತಂಡದ ಟ್ರಂಪ್‌ ಪ್ಲೇಯರ್‌. ಸ್ಫೋಟಕ ಬ್ಯಾಟಿಂಗ್‌ ಜೊತೆಗೆ ಯಾವುದೇ ಸಂದರ್ಭದಲ್ಲಿ ತಂಡಕ್ಕೆ ವಿಕೆಟ್‌ ತಂದುಕೊಡಬಲ್ಲ ಸಮರ್ಥ ಬೌಲರ್‌ ಹಾರ್ದಿಕ್‌. ಐಪಿಎಲ್‌ನಲ್ಲಿ ತಮ್ಮ ಆಲ್‌ರೌಂಡ್‌ ಆಡದ ಮೂಲಕ ಮುಂಬೈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

 8. ಕುಲ್ದೀಪ್‌ ಯಾದವ್‌

8. ಕುಲ್ದೀಪ್‌ ಯಾದವ್‌

ವಿಭಿನ್ನ ಬೌಲಿಂಗ್‌ ಶೈಲಿಯ ಚೈನಾಮನ್‌ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ಟೀಮ್‌ ಇಂಡಿಯಾದ ಪ್ರಮುಖ ಸ್ತ್ರಗಳಲ್ಲಿ ಒಂದು. ಅಂದಹಾಗೆ ವಿಶ್ವಕಪ್‌ನಲ್ಲಿ ಈವರೆಗೆ ನಡೆದಿರುವ ಪಂದ್ಯಗಳಲ್ಲಿ ಸ್ಪಿನ್ನರ್‌ಗಳ ಪ್ರದರ್ಶನ ಅತ್ಯುತ್ತಮವಾಗಿದೆ. ಹೀಗಾಗಿ ಕುಲ್ದೀಪ್‌ ಟೀಮ್‌ ಇಂಡಿಯಾದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

9. ಯುಜ್ವೇಂದ್ರ ಚಹಲ್‌

9. ಯುಜ್ವೇಂದ್ರ ಚಹಲ್‌

ವಿಶ್ವಕಪ್‌ನ ಉಳಿದೆಲ್ಲಾ ತಂಡಗಳಿಗೆ ಹೋಲಿಸಿದರೆ ಭಾರತ ತಂಡದ ಸ್ಪಿನ್‌ ವಿಭಾಗ ಅತ್ಯಂತ ಬಲಿಷ್ಠವಾಗಿದೆ. ಕುಲ್ದೀಪ್‌ ಜೊತೆಗೆ ಲೆಗ್‌ ಸ್ಪಿನ್ನರ್‌ ಯುಜ್ವೇಂದ್ರ ಚಹಲ್‌
ಎದುರಾಳಿ ಯಾವುದೇ ತಂಡವಾಗಿರಲಿ ತಮ್ಮ ಸ್ಪಿನ್‌ ಮೋಡಿಯೊಂದಿಗೆ ಕಟ್ಟಿಹಾಕುವ ಸಾಮರ್ಥ್ಯ ಹೊಂದಿದ್ದಾರೆ. ಅಭ್ಯಾಸ ಪಂದ್ಯಗಳಲ್ಲೂ ಕುಲ್ದೀಪ್‌ ಉತ್ತಮ ಬೌಲಿಂಗ್‌ ಸಂಘಟಿಸಿದ್ದಾರೆ.

10. ಮೊಹಮ್ಮದ್‌ ಶಮಿ/ಭುವನೇಶ್ವರ್‌ ಕುಮಾರ್‌

10. ಮೊಹಮ್ಮದ್‌ ಶಮಿ/ಭುವನೇಶ್ವರ್‌ ಕುಮಾರ್‌

ತಂಡದ ವೇಗದ ಬೌಲಿಂಗ್‌ ವಿಭಾಗದಲ್ಲಿ ಸ್ಪರ್ಧೆ ಹೆಚ್ಚಿದ್ದು, ಅದ್ಭುತ ಲಯದಲ್ಲಿರುವ ಭುವನೇಶ್ವರ್‌ ಕುಮಾರ್‌ ಮತ್ತು ಮೊಹಮ್ಮದ್‌ ಶಮಿ ನಡುವೆ ಆಡುವ 11ರಲ್ಲಿ ಕಾಣಿಸಿಕೊಳ್ಳಲು ಸ್ಪರ್ದೆ ಹೆಚ್ಚಿದೆ. ಡೆತ್‌ ಓವರ್‌ಗಳಲ್ಲಿ ಚಾಕಚಕ್ಯತೆ ಪ್ರದರ್ಶಿಸಿ ಆರಂಭಿಕ ಓವರ್‌ಗಳಲ್ಲೂ ವಿಕೆಟ್‌ ತಂದುಕೊಡಬಲ್ಲ ಸಾಮರ್ಥ್ಯ ಹೊಂದಿರುವ ಭುವನೇಶ್ವರ್‌ ಕುಮಾರ್‌ ಅವರು ಶಮಿ ಅವರನ್ನು ಹಿಂದಿಕ್ಕಿ ತಂಡದಲ್ಲಿ ಸ್ಥಾನ ಗಿಟ್ಟಿಸಿದರೆ ಅಚ್ಚರಿಯೇನಿಲ್ಲ.

11. ಜಸ್‌ಪ್ರೀತ್‌ ಬುಮ್ರಾ

11. ಜಸ್‌ಪ್ರೀತ್‌ ಬುಮ್ರಾ

ಏಕದಿನ ಕ್ರಿಕೆಟ್‌ನ ವಿಶ್ವದ ನಂ.1 ಬೌಲರ್‌ ಆಗಿರುವ ಜಸ್‌ಪ್ರೀತ್‌ ಬುಮ್ರಾ ಅವರನ್ನು ಎದುರಿಸುವುದು ವಿಶ್ವದ ಯಾವುದೇ ಬ್ಯಾಟ್ಸ್‌ಮನ್‌ಗೆ ಸಿಂಹಸ್ವಪ್ನವಾಗಿದೆ. ಶಾರ್ಟ್‌ ರನ್‌ಅಪ್‌ ಮತ್ತು ವಿಭಿನ್ನ ಬೌಲಿಂಗ್‌ ಶೈಲಿಯೊಂದಿಗೆ ನಿಖರವಾಗಿ ಯಾರ್ಕರ್‌ಗಳನ್ನು ಎಸೆಯುವುದರಲ್ಲಿ ನಿಸ್ಸೀಮರಾಗಿರುವ ಬುಮ್ರಾ, ಅಪ್ಪಟ ವಿಕೆಟ್‌ ಟೇಕರ್‌. ಬುಮ್ರಾ ಬೌಲಿಂಗ್‌ ಮೇಲೆ ಇಡೀ ಕ್ರಿಕೆಟ್‌ ಜಗತ್ತೇ ಕಣ್ಣಿಟ್ಟಿದೆ.

Story first published: Tuesday, June 4, 2019, 17:10 [IST]
Other articles published on Jun 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X