ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶಮಿ ಹ್ಯಾಟ್ರಿಕ್ ವಿಕೆಟ್, ಅಫ್ಘಾನ್ ವಿರುದ್ಧ ಗೆದ್ದು ದಾಖಲೆ ಬರೆದ ಭಾರತ

ICC World Cup 2019 : ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ | Oneindia Kannada
World cup 2019: India vs Afghanistan, Match 28 - Live Score

ಸೌತಾಂಪ್ಟನ್, ಜೂನ್ 22: ರೋಚಕ ಹಂತಕ್ಕೆ ತಲುಪಿದ್ದ ಭಾರತ vs ಅಫ್ಘಾನಿಸ್ತಾನ ನಡುವಣ ವಿಶ್ವಕಪ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗ 11 ರನ್ ಜಯ ಗಳಿಸಿದೆ. ಈ ಗೆಲುವಿನೊಂದಿಗೆ ಭಾರತ ಏಕದಿನ ವಿಶ್ವಕಪ್‌ನಲ್ಲಿ 50 ಗೆಲುವುಗಳ ದಾಖಲೆ ಬರೆದಿದೆ. ಸೌತಾಂಪ್ಟನ್‌ನ ರೋಸ್‌ಬೌಲ್‌ನಲ್ಲಿ ಶನಿವಾರ (ಜೂನ್ 22) ನಡೆದ ಪಂದ್ಯದಲ್ಲಿ ಭಾರತ ಅಪರೂಪದ ಸಾಧನೆ ಮೆರೆಯಿತು.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಭಾರತ ನೀಡಿದ್ದ 225 ರನ್ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ ತಂಡದ ರಹಮತ್ ಶಾ 36, ಮೊಹಮ್ಮದ್ ನಬಿ 52, ಗುಲ್ಬಾದಿನ್ ನೈಬ್ 27, ನಜೀಬುಲ್ಲ ಝದ್ರನ್ 21, ಹಶ್ಮತುಲ್ಲ ಶಾಹಿದಿ 21 ರನ್ ಬಾರಿಸಿ ಪಂದ್ಯವನ್ನು ರೋಚಕ ಘಟ್ಟಕ್ಕೆ ತಂದಿದ್ದರು. ಕೊನೆಯ ಓವರ್‌ಗೆ ಅಫ್ಘಾನ್‌ ಗೆಲುವಿಗೆ 16 ರನ್‌ಗಳ ಅವಶ್ಯಕತೆಯಿತ್ತು. ಆದರೆ ವೇಗಿ ಮೊಹಮ್ಮದ್ ಶಮಿ ಅಂತಿಮ ಓವರ್‌ನಲ್ಲಿ ಹ್ಯಾಟ್ರಕ್ ವಿಕೆಟ್ ಪಡೆದು ಎದುರಾಳಿಯನ್ನು 213/10 ರನ್‌ಗೆ ಕಟ್ಟಿಹಾಕಿದರು.

ಭಾರತ vs ಅಫ್ಘಾನಿಸ್ತಾನ, ಜೂನ್ 22, Live ಸ್ಕೋರ್‌ಕಾರ್ಡ್

1
43671

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತದ ವಿರುದ್ಧ ಅಫ್ಘಾನ್ ಅದ್ಭುತ ಬೌಲಿಂಗ್ ಪ್ರದರ್ಶಿಸಿ ಬೆದರಿಕೆಯೊಡ್ಡಿತು. ಆರಂಭದಲ್ಲೇ ರೋಹಿತ್ ಶರ್ಮಾ 1 ರನ್‌ಗೆ ವಿಕೆಟ್ ನೀಡಿದರು. ಅನಂತರ ಕೆಎಲ್ ರಾಹುಲ್ (30), ವಿಜಯ್ ಶಂಕರ್ (29), ವಿರಾಟ್ ಕೊಹ್ಲಿ (67) ವಿಕೆಟ್ ಉರುಳಿದಾಗ ಭಾರತ ಒತ್ತಡಕ್ಕೆ ಸಲುಕಿತು.

ವಿಶ್ವಕಪ್: ಧೋನಿ ಸ್ಟಂಪ್ ಔಟ್ ಆಗಿದ್ದು ಎಷ್ಟು ವರ್ಷಗಳ ಬಳಿಕ ಗೊತ್ತಾ?!ವಿಶ್ವಕಪ್: ಧೋನಿ ಸ್ಟಂಪ್ ಔಟ್ ಆಗಿದ್ದು ಎಷ್ಟು ವರ್ಷಗಳ ಬಳಿಕ ಗೊತ್ತಾ?!

ಎಂಎಸ್ ಧೋನಿ ಬ್ಯಾಟ್ ಬೀಸಿ ಬಂದಾಗ ತಂಡದ ರನ್ ಹೆಚ್ಚುವ ನಿರೀಕ್ಷೆ ಮೂಡಿತ್ತಾದರೂ ಧೋನಿ ಸ್ಟಂಪ್ಟ್ ಆಗಿ 28 ರನ್‌ಗೆ ನಿರ್ಗಮಿಸಿದರು. ತಂಡವನ್ನು ರನ್ ಕುಸಿತದಿಂದ ಕೊಂಚ ಪಾರು ಮಾಡಿದ್ದು ಕೊಹ್ಲಿ, ರಾಹುಲ್ ಮತ್ತು ಕೇದಾರ್ ಜಾಧವ್ (52 ರನ್) ಮಾತ್ರ. ಭಾರತ 50 ಓವರ್‌ ಮುಕ್ತಾಯಕ್ಕೆ 8 ವಿಕೆಟ್ ನಷ್ಟದಲ್ಲಿ 224 ರನ್ ಮಾಡಿತು.

ವಿಶ್ವಕಪ್: ವೆಂಗ್‌ಸರ್ಕಾರ್ ಪ್ರಕಾರ ಭಾರತದ ಪಾಲಿಗೆ ಅಪಾಯಕಾರಿ ತಂಡವಿದು!ವಿಶ್ವಕಪ್: ವೆಂಗ್‌ಸರ್ಕಾರ್ ಪ್ರಕಾರ ಭಾರತದ ಪಾಲಿಗೆ ಅಪಾಯಕಾರಿ ತಂಡವಿದು!

ಟೀಮ್ ಇಂಡಿಯಾ ಇನ್ನಿಂಗ್ಸ್ ವೇಳೆ ಅಫ್ಘಾನ್ ಬೌಲರ್‌ಗಳಾದ, ನಾಯಕ ಗುಲ್ಬಾದಿನ್ ನೈಬ್ 2, ಮೊಹಮ್ಮದ್ ನಬಿ 2, ಮುಜೀಬ್ ಉರ್ ರಹ್ಮಾನ್, ಅಫ್ತಾಬ್ ಆಲಂ, ರಶೀದ್ ಖಾನ್ ಮತ್ತು ರಹ್ಮತ್ ಶಾ ತಲಾ 1 ವಿಕೆಟ್ ಪಡೆದು ಗಮನ ಸೆಳೆದರು.

ಪ್ರೊ ಕಬಡ್ಡಿ ಸೀಸನ್‌ 7: ಉದ್ಘಾಟನಾ ಪಂದ್ಯದಲ್ಲಿ ಯು ಮುಂಬಾ ಕಣಕ್ಕೆಪ್ರೊ ಕಬಡ್ಡಿ ಸೀಸನ್‌ 7: ಉದ್ಘಾಟನಾ ಪಂದ್ಯದಲ್ಲಿ ಯು ಮುಂಬಾ ಕಣಕ್ಕೆ

ಅಫ್ಘಾನ್ ಇನ್ನಿಂಗ್ಸ್‌ ವೇಳೆ ಭಾರತದ ವೇಗಿಗಳು ಪಾರಮ್ಯ ಮೆರೆದಿದ್ದು ಕಂಡುಬಂತು. ಮೊಹಮ್ಮದ್ ಶಮಿ 40 ರನ್‌ಗೆ 4, ಜಸ್‌ಪ್ರೀತ್ ಬೂಮ್ರಾ 39 ರನ್‌ಗೆ 2, ಯುಜುವೇಂದ್ರ ಚಾಹಲ್ 36 ರನ್‌ಗೆ 2, ಹಾರ್ದಿಕ್ ಪಾಂಡ್ಯ 52 ರನ್‌ಗೆ 2 ವಿಕೆಟ್ ಪಡೆದು ಗಮನ ಸೆಳೆದರು. ಜಸ್‌ಪ್ರೀತ್ ಬೂಮ್ರಾ ಪಂದ್ಯಶ್ರೇಷ್ಠರೆನಿಸಿದರು.

ಪಾಕ್‌ ತಂಡದ ಹೀನಾಯ ಪ್ರದರ್ಶನಕ್ಕೆ ಕಾರಣಕೊಟ್ಟ ಹಫೀಝ್‌!ಪಾಕ್‌ ತಂಡದ ಹೀನಾಯ ಪ್ರದರ್ಶನಕ್ಕೆ ಕಾರಣಕೊಟ್ಟ ಹಫೀಝ್‌!

ಭಾರತ ತಂಡ: ಲೋಕೇಶ್ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ಸಿ), ವಿಜಯ್ ಶಂಕರ್, ಎಂ.ಎಸ್ ಧೋನಿ (ವಿಕೆ), ಹಾರ್ದಿಕ್ ಪಾಂಡ್ಯ, ಕೇದಾರ್ ಜಾಧವ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ.

ವಿಶ್ವಕಪ್ 2019: ಹೊಸ ಮೈಲಿಗಲ್ಲು ಸ್ಥಾಪಿಸಿದ ಲಂಕಾ ವೇಗಿ ಲಸಿತ್ ಮಾಲಿಂಗವಿಶ್ವಕಪ್ 2019: ಹೊಸ ಮೈಲಿಗಲ್ಲು ಸ್ಥಾಪಿಸಿದ ಲಂಕಾ ವೇಗಿ ಲಸಿತ್ ಮಾಲಿಂಗ

ಅಫ್ಘಾನಿಸ್ತಾನ ತಂಡ: ಹಜರತುಲ್ಲಾ ಝಝಾಯ್, ಗುಲ್ಬಾದೀನ್ ನೈಬ್ (ಸಿ), ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ, ಅಸ್ಘರ್ ಅಫ್ಘಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್ (ವಿಕೆ), ನಜೀಬುಲ್ಲಾ ಝದ್ರನ್, ರಶೀದ್ ಖಾನ್, ಅಫ್ತಾಬ್ ಆಲಂ, ಮುಜೀಬ್ ಉರ್ ರಹಮಾನ್.

Story first published: Saturday, June 22, 2019, 23:28 [IST]
Other articles published on Jun 22, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X