ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪರಿಷ್ಕೃತ ಡಿಎಲ್‌ಎಸ್ ಪ್ರಕಾರ ಕಿವೀಸ್ ಎದುರು ಭಾರತಕ್ಕೆ ಗುರಿಯೆಷ್ಟು?!

World cup 2019: India vs New Zealand, 1st Semi-Final (1 v 4)-Preview

ಮ್ಯಾಂಚೆಸ್ಟರ್, ಜುಲೈ 10: ಭಾರತ vs ನ್ಯೂಜಿಲೆಂಡ್ ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತ್ತು. ಮಂಗಳವಾರ (ಜುಲೈ 9) ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಆರಂಭಗೊಂಡ ಇತ್ತಂಡಗಳ ಪಂದ್ಯ 46.1 ಓವರ್‌ನಲ್ಲಿ ನಿಂತಿದೆ. ಇದೇ ಪಂದ್ಯ ಮೀಸಲು ದಿನವಾದ ಬುಧವಾರ (ಜುಲೈ 10) ಮುಂದುವರೆಯಲಿದೆ.

ಮಂಗಳವಾರ ಮೋಡದ ವಾತಾವರಣದ ನಡುವೆಯೂ ಪಂದ್ಯ 46 ಓವರ್‌ಗಳವರೆಗೆ ಮುಂದುವರೆದಿತ್ತು. ಕಿವೀಸ್ ಇನ್ನಿಂಗ್ಸ್‌ನಲ್ಲಿ ಓವರ್ ಕಡಿತಗೊಳಿಸಲು ಮಳೆ ಅವಕಾಶ ನೀಡಲಿಲ್ಲ. ಹೀಗಾಗಿ ಮೊದಲ ಸೆಮಿಫೈನಲ್ ಪಂದ್ಯ 50 ಓವರ್‌ಗಳ ಪಂದ್ಯವಾಗುವುದನ್ನು ನಿರೀಕ್ಷಿಸಲಾಗಿದೆ. ಆದರೆ ಮೀಸಲು ದಿನವಾದ ಬುಧವಾರವೂ ಮಳೆ ತೊಂದರೆ ನೀಡುವ ಸಾಧ್ಯತೆ ಇಲ್ಲದಿಲ್ಲ.

ಭಾರತ vs ನ್ಯೂಜಿಲೆಂಡ್, ಸೆ.ಫೈನಲ್, ದಿನ 2, ಬುಧವಾರ (ಜುಲೈ 10), Live ಸ್ಕೋರ್‌ಕಾರ್ಡ್

1
43689

ಬುಧವಾರ ನ್ಯೂಜಿಲೆಂಡ್ 50 ಓವರ್‌ಗಳ ಇನ್ನಿಂಗ್ಸ್ ಪೂರ್ಣಗೊಳಿಸಲಿದೆ ಅನ್ನೋಣ. ಆದರೆ ಭಾರತದ ಇನ್ನಿಂಗ್ಸ್‌ನಲ್ಲಿ ಮಳೆ ಅಡ್ಡಿಪಡಿಸಲಾರಂಭಿಸಿದರೆ ಫಲಿತಾಂಶದ ನಿಟ್ಟಿನಲ್ಲಿ ಓವರ್‌ ಕಡಿತಗೊಳಿಸುವ ಸಾಧ್ಯತೆಯಿದೆ. ಓವರ್ ಕಡಿತಗೊಂಡದರೆ ಪರಿಷ್ಕೃತ ಡಕ್ವರ್ಥ್ ಲೂಯೀಸ್ ನಿಯಮದ(ಡಿಎಲ್‌ಎಸ್) ಪ್ರಕಾರ ಭಾರತಕ್ಕೆ ಟಾರ್ಗೆಟ್ ಹೇಗಿರಲಿದೆ?

ಭಾರತ vs ಕಿವೀಸ್, ಸೆ.ಫೈನಲ್: ಮೀಸಲು ದಿನವೂ ಮಳೆಯಾಟ ಜೋರು?!ಭಾರತ vs ಕಿವೀಸ್, ಸೆ.ಫೈನಲ್: ಮೀಸಲು ದಿನವೂ ಮಳೆಯಾಟ ಜೋರು?!

ಪರಿಷ್ಕೃತ ಡಕ್ವರ್ಥ್ ಲೂಯೀಸ್ ನಿಯಮದ(ಡಿಎಲ್‌ಎಸ್) ಪ್ರಕಾರ ಭಾರತಕ್ಕೆ ನೀಡಲಾಗುವ ಗುರಿ ಹೀಗಿರಲಿದೆ
1. ಭಾರತಕ್ಕೆ 46 ಓವರ್‌ಗಳ ಅವಕಾಶ ಲಭಿಸಿದರೆ, ಗುರಿ 237 ಆಗಲಿದೆ.
2. ಭಾರತಕ್ಕೆ 40 ಓವರ್‌ಗಳ ಅವಕಾಶ ಲಭಿಸಿದರೆ, ಗುರಿ 223 ಆಗಿರುತ್ತದೆ
3. ಭಾರತಕ್ಕೆ 35 ಓವರ್‌ಗಳ ಅವಕಾಶ ಲಭಿಸಿದರೆ, ಗುರಿ 209 ಆಗಿರುತ್ತದೆ
4. ಭಾರತಕ್ಕೆ 30 ಓವರ್‌ಗಳ ಅವಕಾಶ ಲಭಿಸಿದರೆ, ಗುರಿ 192 ಆಗುತ್ತದೆ
5. ಭಾರತಕ್ಕೆ 25 ಓವರ್‌ಗಳ ಅವಕಾಶ ಲಭಿಸಿದರೆ, ಗುರಿ 172 ಆಗಿರುತ್ತದೆ
6. ಭಾರತಕ್ಕೆ 20 ಓವರ್‌ಗಳ ಅವಕಾಶ ಲಭಿಸಿದರೆ, ಗುರಿ 148 ಆಗುತ್ತದೆ. ಹಾಗೂ ಹೀಗೂ ಹೀಗೆ ಯಾವ ರೀತಿಯೂ ಪಂದ್ಯ ಮುಂದುವರೆಯದಿದ್ದರೆ, ಪಂದ್ಯ ರದ್ದಾಗಿ ವಿಶ್ವಕಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ಸೆಮಿಫೈನಲ್ ಪ್ರವೇಶದ ಅನುಕೂಲ ಪಡೆದುಕೊಳ್ಳಲಿದೆ.

ಸೆಮಿಫೈನಲ್‌ಗೂ ಮುನ್ನ ಆಸೀಸ್‌ಗೆ ಎಚ್ಚರಿಕೆ ರವಾನಿಸಿದ ಜೋ ರೂಟ್‌ಸೆಮಿಫೈನಲ್‌ಗೂ ಮುನ್ನ ಆಸೀಸ್‌ಗೆ ಎಚ್ಚರಿಕೆ ರವಾನಿಸಿದ ಜೋ ರೂಟ್‌

ಭಾರತ ತಂಡ: ಲೋಕೇಶ್ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ಸಿ), ರಿಷಭ್ ಪಂತ್, ಎಂ.ಎಸ್.ಧೋನಿ (ವಿಕೆ), ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಯುಜುವೇಂದ್ರ ಚಾಹಲ್, ಜಸ್‌ಪ್ರೀತ್‌ ಬೂಮ್ರಾ.

ನ್ಯೂಜಿಲೆಂಡ್ ತಂಡ: ಮಾರ್ಟಿನ್ ಗಪ್ಟಿಲ್, ಹೆನ್ರಿ ನಿಕೋಲ್ಸ್, ಕೇನ್ ವಿಲಿಯಮ್ಸನ್ (ಸಿ), ರಾಸ್ ಟೇಲರ್, ಟಾಮ್ ಲಾಥಮ್ (ವಿಕೆ), ಜೇಮ್ಸ್ ನೀಶಮ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಮಿಚೆಲ್ ಸ್ಯಾಂಟ್ನರ್, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಟ್ರೆಂಟ್ ಬೌಲ್ಟ್.

Story first published: Wednesday, July 10, 2019, 16:11 [IST]
Other articles published on Jul 10, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X