ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಡೊ-ಪಾಕ್‌ ವಿಶ್ವಕಪ್‌ ಪಂದ್ಯದ ಚೆಂಡಿನ ಬೆಲೆ ಎಷ್ಟೂ ಅಂತೀರ!

ಇದು ನಿಜವಾದ ಭಾರತ, ಪಾಕಿಸ್ತಾನ ಪಂದ್ಯದ ಕ್ರೇಜ್ ಅಂದ್ರೆ..? | ICC World Cup 2019 | Oneindia Kannada
World Cup 2019: Indo-Pak match ball sold for Rs 1.5 lakh in London

ಲಂಡನ್‌, ಜುಲೈ 11: ಪ್ರಸಕ್ತ ವಿಶ್ವಕಪ್‌ ಟೂರ್ನಿಯ ಅತ್ಯಂತ ಹೈವೋಲ್ಟೇಜ್‌ ಪಂದ್ಯವಾದ ಸಾಂಪ್ರದಾಯಿಕೆ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಕದನಕ್ಕೆ ಬಳಕೆ ಮಾಡಿದ ಚೆಂಡು ಹರಾಜಿನಲ್ಲಿ ಭಾರಿ ಮೊತ್ತಕ್ಕೆ ಮಾರಾಟವಾಗಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಜೂನ್‌ 16ರಂದು ನಡೆದ ಇಂಡೊ-ಪಾಕ್‌ ವಿಶ್ವಕಪ್‌ ಪಂದ್ಯದಲ್ಲಿ ಬಳಕೆ ಬಳಕೆ ಮಾಡಲಾದ ಬಿಳಿಯ ಕೂಕಬುರಾ ಚೆಂಡನ್ನು ಹರಾಜಿನಲ್ಲಿ ಬರೋಬ್ಬರಿ 1.5 ಲಕ್ಷ ರೂ. ಕೊಟ್ಟು (2,150 ಅಮೆರಿಕನ್‌ ಡಾಲರ್‌) ಖರಿದಿ ಮಾಡಲಾಗಿದೆ ಎಂದು ವರದಿಯಾಗಿದೆ. ಪ್ರಸಕ್ತ ವಿಶ್ವಕಪ್‌ನಲ್ಲಿ ಹಲವು ವಸ್ತುಗಳನ್ನು ಹರಾಜಿಗಿಡುತ್ತಿರುವ ಅಧಿಕೃತ ವೆಬ್‌ಸೈಟ್‌ officialmemorabilia.com ಚೆಂಡನ್ನು ಹರಾಜು ಮಾಡಿದೆ.

ಬೌನ್ಸರ್‌ ಪೆಟ್ಟಿನಿಂದ ರಕ್ತ ಹರಿದರೂ ಆಸೀಸ್‌ ಪರ ಹೋರಾಡಿದ ಕೇರಿ!ಬೌನ್ಸರ್‌ ಪೆಟ್ಟಿನಿಂದ ರಕ್ತ ಹರಿದರೂ ಆಸೀಸ್‌ ಪರ ಹೋರಾಡಿದ ಕೇರಿ!

ಪಂದ್ಯದಲ್ಲಿ ಭಾರತ ತಂಡ ರೋಹಿತ್ ಶರ್ಮಾ ಶತಕದ ನೆರವಿನಿಂದ ಪಾಕಿಸ್ತಾನ ತಂಡವನ್ನು ಡಕ್ವರ್ತ್‌ ಲೂಯಿಸ್‌ ನಿಯಮದನ್ವಯ 89 ರನ್‌ಗಳಿಂದ ಬಗ್ಗುಬಡಿದಿತ್ತು. ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಲೀಗ್‌ ಹಂತದಲ್ಲೇ ಹೊರಬಿದ್ದರೆ, ಪ್ರಶಸ್ತಿ ಗೆಲ್ಲುವ ಫೇವರಿಟ್‌ ಟೀಮ್‌ ಇಂಡಿಯಾ ಸೆಮಿಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ಎದುರು 18 ರನ್‌ಗಳ ಅಚ್ಚರಿಯ ಸೋಲನುಭವಿಸಿತು.

ವಿಶ್ವಕಪ್‌ ಸೆಮಿಫೈನಲ್‌: ಮ್ಯಾಂಚೆಸ್ಟರ್‌ನಲ್ಲಿ ಹೊಳೆದ ಜಡೇಜಾ ಖಡ್ಗ!ವಿಶ್ವಕಪ್‌ ಸೆಮಿಫೈನಲ್‌: ಮ್ಯಾಂಚೆಸ್ಟರ್‌ನಲ್ಲಿ ಹೊಳೆದ ಜಡೇಜಾ ಖಡ್ಗ!

ಇದೇ ವೇಳೆ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯಕ್ಕೆ ಬಳಕೆ ಮಾಡಲಾದ ಟಾಸ್‌ ನಾಣ್ಯ ಕೂಡ 1,450 ಡಾಲರ್‌ ಮೊತ್ತಕ್ಕೆ ಹರಾಜಾಗಿದೆ. ಹರಾಜಿನಲ್ಲಿ ಭಾರತ ತಂಡದಕ್ಕೆ ಸಂಬಂಧಿಸಿದ ಒಟ್ಟು 27 ವಷಸ್ತುಗಳನ್ನು ಮಾರಾಟ ಮಾಡಲಾಗಿದೆ. ಇನ್ನು ಸೆಮಿಫೈನಲ್‌ ಪಂದ್ಯದ ಸ್ಕೋರ್‌ಶೀಟ್‌, ಟಾಸ್‌ ನಾಣ್ಯ ಮತ್ತು ಮ್ಯಾಚ್‌ ಬಾಲ್‌ ಮಾರಾಟವಾಗಬೇಕಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಜೊತೆಗಿನ ಪಾಲುದಾರಿಕೆಯಲ್ಲಿ OfficialMemorabilia.com ಅಧಿಕೃತವಾಗಿ ಹರಾಜು ಪ್ರಕ್ರಿಯೆ ನಡೆಸುತ್ತಿದೆ.

Story first published: Thursday, July 11, 2019, 23:01 [IST]
Other articles published on Jul 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X