ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌: ಸಚಿನ್‌ ವಿಶ್ವ ದಾಖಲೆಯನ್ನು ಮುರಿದ ವಿರಾಟ್‌ ಕೊಹ್ಲಿ!

ICC World Cup 2019 : ಏಕದಿನ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ಕಿಂಗ್..? | Oneindia Kannada
World Cup 2019: Kohli becomes the fastest batsmen to reach 11k runs

ಮ್ಯಾಂಚೆಸ್ಟರ್‌, ಜೂನ್‌ 16: ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್‌ ನಡೆಸಿದ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ, 65 ಎಸೆತಗಳಲ್ಲಿ 7 ಫೋರ್‌ಗಳನ್ನು ಒಳಗೊಂಡ 77 ರನ್‌ಗಳನ್ನು ಚಚ್ಚಿದ್ದರು.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 11 ಸಾವಿರ ರನ್‌ಗಳನ್ನು ಪೂರೈಸಿದ ವಿಶ್ವ ದಾಖಲೆ ಕಿಂಗ್‌ ಕೊಹ್ಲಿ ಮುಡಿಗೇರಿದೆ. ಪಂದ್ಯಕ್ಕೂ ಮುನ್ನ ಕೊಹ್ಲಿಗೆ 11 ಸಾವಿರ ರನ್‌ ಗಡಿ ಮುಟ್ಟಲು 57 ರನ್‌ಗಳ ಅಗತ್ಯವಿತ್ತು. ಇದೀಗ 230 ಒಡಿಐ ಪಂದ್ಯಗಳಲ್ಲಿ ಕೊಹ್ಲಿ 11 ಸಾವಿರ ರನ್‌ಗಳ ಗಡಿ ದಾಟಿದ್ದಾರೆ.

ವಿಶ್ವಕಪ್‌ನಲ್ಲಿ 'ಹಿಟ್‌ಮ್ಯಾನ್‌' ರೋಹಿತ್‌ ಶರ್ಮಾ ಶತಕಗಳ ದಾಖಲೆ!ವಿಶ್ವಕಪ್‌ನಲ್ಲಿ 'ಹಿಟ್‌ಮ್ಯಾನ್‌' ರೋಹಿತ್‌ ಶರ್ಮಾ ಶತಕಗಳ ದಾಖಲೆ!

ಇದೀಗ ಒಡಿಐ ಕ್ರಿಕೆಟ್‌ನಲ್ಲಿ 11 ಸಾವಿರಕ್ಕೂ ಅಧಿಕ ರನ್‌ಗಳನ್ನು ಗಳಿಸಿದವರ ಪೈಕಿ ಕೊಹ್ಲಿ 9ನೇ ಸ್ಥಾನ ಪಡೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಸಚಿನ್‌, ಕುಮಾರ ಸಂಗಕ್ಕಾರ, ರಿಕಿ ಪಾಂಟಿಂಗ್‌, ಸನತ್‌ ಜಯಸೂರ್ಯ, ಮಹೇಲಾ ಜಯವರ್ಧನೆ, ಇಂಜಮಾಮ್‌ ಉಲ್‌ ಹಕ್‌, ಜಾಕ್‌ ಕಾಲಿಸ್‌ ಮತ್ತು ಸೌರವ್‌ ಗಂಗೂಲಿ ಈ ಸಾಧನೆ ಮಾಡಿದ್ದಾರೆ.

 ವಿಶ್ವಕಪ್‌: ಪಾಕ್‌ ವಿರುದ್ಧದ ಪಂದ್ಯದಲ್ಲಿ ಧೋನಿ ದಾಖಲೆ ಮುರಿದ ಹಿಟ್‌ಮ್ಯಾನ್‌! ವಿಶ್ವಕಪ್‌: ಪಾಕ್‌ ವಿರುದ್ಧದ ಪಂದ್ಯದಲ್ಲಿ ಧೋನಿ ದಾಖಲೆ ಮುರಿದ ಹಿಟ್‌ಮ್ಯಾನ್‌!

ಅಂದಹಾಗೆ ಭಾರತ ಕ್ರಿಕೆಟ್‌ನ ದಂತಕತೆ ಸಚಿನ್‌ ತೆಂಡೂಲ್ಕರ್‌ ಅವರ ಹೆಸರಲ್ಲಿದ್ದ ಈ ದಾಖಲೆ ಇದೀಗ ಕೊಹ್ಲಿ ಮುಡಿಗೇರಿದೆ. ಸವಿನ್‌ ತೆಂಡೂಲ್ಕರ್‌ 2002ರಲ್ಲಿ ತಮ್ಮ 284ನೇ ಒಡಿಐನಲ್ಲಿ ಇಂಗ್ಲೆಂಡ್‌ ವಿರುದ್ಧ 11 ಸಾವಿರ ರನ್‌ಗಳ ಗಡಿ ದಾಟಿದ್ದರು.

ಇಂಡೊ-ಪಾಕ್‌ ಕ್ರಿಕೆಟ್‌ ಕದನ: ವಿರಾಟ್‌ ಕೊಹ್ಲಿ ನಿದ್ರೆ ಕಸಿದ ಆ ಪಂದ್ಯ!ಇಂಡೊ-ಪಾಕ್‌ ಕ್ರಿಕೆಟ್‌ ಕದನ: ವಿರಾಟ್‌ ಕೊಹ್ಲಿ ನಿದ್ರೆ ಕಸಿದ ಆ ಪಂದ್ಯ!

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಟೀಮ್‌ ಇಂಡಿಯಾ, ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್‌ ಶರ್ಮಾ (140) ಅವರ ಶತಕ ಮತ್ತು ಕೆ.ಎಲ್‌ ರಾಹುಲ್‌ (57) ಮತ್ತು ವಿರಾಟ್‌ ಕೊಹ್ಲಿ (77) ಅವರ ಅರ್ಧಶತಕಗಳ ಬಲದಿಂದ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 336 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿದೆ.

ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದ 11 ಸಾವಿರ ರನ್‌

ವಿರಾಟ್‌ ಕೊಹ್ಲಿ (222 ಇನಿಂಗ್ಸ್‌)

ವಿರಾಟ್‌ ಕೊಹ್ಲಿ (222 ಇನಿಂಗ್ಸ್‌)

11ಕೆ ರನ್‌ಗಳ ಗಡಿ ದಾಟಿದ ಪಂದ್ಯ: 2019ರ ಜೂನ್‌ 16, ವಿಶ್ವಕಪ್‌ ಲೀಗ್‌ ಹಂತ
ಸ್ಥಳ: ಮ್ಯಾಂಚೆಸ್ಟರ್‌, ಇಂಗ್ಲೆಂಡ್‌
ಎದುರಾಳಿ: ಪಾಕಿಸ್ತಾನ
11 ಸಾವಿರ ರನ್‌ಗಾಗಿ ಆಡಿದ ಪಂದ್ಯ: 230

ಸಚಿನ್‌ ತೆಂಡೂಲ್ಕರ್‌ (276 ಇನಿಂಗ್ಸ್‌)

ಸಚಿನ್‌ ತೆಂಡೂಲ್ಕರ್‌ (276 ಇನಿಂಗ್ಸ್‌)

11ಕೆ ರನ್‌ಗಳ ಗಡಿ ದಾಟಿದ ಪಂದ್ಯ: 2002ರ ಜನವರಿ 28, ಒಡಿಐ ಸರಣಿ
ಸ್ಥಳ: ಕಾನ್ಪುರ, ಭಾರತ
ಎದುರಾಳಿ: ಇಂಗ್ಲೆಂಡ್‌
11 ಸಾವಿರ ರನ್‌ಗಾಗಿ ಆಡಿದ ಪಂದ್ಯ: 284

ರಿಕಿ ಪಾಂಟಿಂಗ್‌ (286 ಇನಿಂಗ್ಸ್‌)

ರಿಕಿ ಪಾಂಟಿಂಗ್‌ (286 ಇನಿಂಗ್ಸ್‌)

11ಕೆ ರನ್‌ಗಳ ಗಡಿ ದಾಟಿದ ಪಂದ್ಯ: 2008 ಫೆಬ್ರವರಿ 24, ಒಡಿಐ ಸರಣಿ
ಸ್ಥಳ: ಸಿಡ್ನಿ, ಆಸ್ಟ್ರೇಲಿಯಾ
ಎದುರಾಳಿ: ಭಾರತ
11 ಸಾವಿರ ರನ್‌ಗಾಗಿ ಆಡಿದ ಪಂದ್ಯ: 295

ಸೌರವ್‌ ಗಂಗೂಲಿ (288 ಇನಿಂಗ್ಸ್‌)

ಸೌರವ್‌ ಗಂಗೂಲಿ (288 ಇನಿಂಗ್ಸ್‌)

11ಕೆ ರನ್‌ಗಳ ಗಡಿ ದಾಟಿದ ಪಂದ್ಯ: 2007ರ ಆಗಸ್ಟ್‌ 27, ಒಡಿಐ ಸರಣಿ
ಸ್ಥಳ: ಬರ್ಮಿಂಗ್‌ಹ್ಯಾಮ್‌, ಇಂಗ್ಲೆಂಡ್‌
ಎದುರಾಳಿ: ಇಂಗ್ಲೆಂಡ್‌
11 ಸಾವಿರ ರನ್‌ಗಾಗಿ ಆಡಿದ ಪಂದ್ಯ: 296

ಜಾಕ್‌ ಕಾಲಿಸ್‌ (293 ಇನಿಂಗ್ಸ್‌)

ಜಾಕ್‌ ಕಾಲಿಸ್‌ (293 ಇನಿಂಗ್ಸ್‌)

11ಕೆ ರನ್‌ಗಳ ಗಡಿ ದಾಟಿದ ಪಂದ್ಯ: 2010ರ ನವೆಂಬರ್‌ 08, ಒಡಿಐ ಸರಣಿ
ಸ್ಥಳ: ದುಬೈ
ಎದುರಾಳಿ: ಪಾಕಿಸ್ತಾನ
11 ಸಾವಿರ ರನ್‌ಗಾಗಿ ಆಡಿದ ಪಂದ್ಯ: 307

Story first published: Sunday, June 16, 2019, 20:20 [IST]
Other articles published on Jun 16, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X