ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾವುಕ ಧೋನಿಗೆ ಭಾವನಾತ್ಮಕ ಸಂದೇಶ ರವಾನಿಸಿದ ಗಾಯಕಿ ಮಂಗೇಶ್ಕರ್

ICC World Cup 2019 : ದೇಶಕ್ಕೆ ನಿಮ್ಮ ಅವಶ್ಯಕಥೆ ಇದೆ ಎಂದು ಧೋನಿಗೆ ಹೇಳಿದ ಲಂತಾ ಮಂಗೇಶ್ಕರ್..! | MS Dhon
world cup 2019: Lata Mangeshkar sent heartfelt message to MS Dhoni

ನವದೆಹಲಿ, ಜುಲೈ 11: ಎಂಎಸ್ ಧೋನಿ ವೃತ್ತಿ ಜೀವನದ ಕೊನೇ ವಿಶ್ವಕಪ್ ಟೂರ್ನಿಯಾಗಿ ಐಸಿಸಿ ವಿಶ್ವಕಪ್ 2019ನ್ನು ಬಿಂಬಿಸಲಾಗುತ್ತಿದೆ. 38ರ ಹರೆಯದ ಬ್ಯಾಟ್ಸ್ಮ್ ಕಮ್ ವಿಕೆಟ್ ಕೀಪರ್ ಧೋನಿ ವಿಶ್ವಕಪ್ ಬಳಿಕ ನಿವೃತ್ತಿ ನೀಡಲಿದ್ದಾರೆ ಎಂಬ ಗಾಳಿ ಸುದ್ದಿಯೂ ಹಬ್ಬಿತ್ತು. ಸಾಲದ್ದಕ್ಕೆ ಟೀಮ್ ಇಂಡಿಯಾ ವಿಶ್ವಕಪ್ ಸೆಮಿಫೈನಲ್‌ನಲ್ಲೇ ಹೊರ ಬಿದ್ದಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಬುಧವಾರ (ಜುಲೈ 10) ನಡೆದ ನ್ಯೂಜಿಲೆಂಡ್-ಭಾರತ ನಡುವಣ ಸೆಮಿಫೈನಲ್ ಪಂದ್ಯದಲ್ಲಿ ಕಿವೀಸ್ 18 ರನ್ ರೋಚಕ ಗೆಲುವನ್ನಾಚರಿಸಿತು. ತಂಡದ ಗೆಲುವಿಗಾಗಿ ರವೀಂದ್ರ ಜಡೇಜಾ ಮತ್ತು ಧೋನಿ ಸಾಕಷ್ಟು ಹೋರಾಟ ನಡೆಸಿದರಾದರೂ ಅದಕ್ಕೆ ಫಲ ಲಭಿಸಿರಲಿಲ್ಲ. ಪಂದ್ಯ ಸೋಲುತ್ತಲೇ ಧೋನಿ ಭಾವುಕರಾಗಿದ್ದು ಮೈದಾನದಲ್ಲಿ ಕಂಡು ಬಂದಿತ್ತು.

ತಂಡಕ್ಕೆ ಗೆಲುವು ತಂದುಕೊಡಲಾಗಲಿಲ್ಲವಲ್ಲ ಎಂಬ ನಿರಾಸೆ ಅನುಭವಿಸುತ್ತಿರುವ ಧೋನಿಗೆ ಖ್ಯಾತ ಗಾಯಕಿ ಲತಾ ಮಂಗೇಶ್ಕರ್, ಟ್ವಿಟರ್ ಮೂಲಕ ಭಾವನಾತ್ಮಕ ಸಂದೇಶ ಬರೆದಿದ್ದಾರೆ. ಪಂದ್ಯದ ಸೋಲಿನಿಂದ ಧೃತಿಗೆಡಬೇಡಿ. ನಿವೃತ್ತಿ ಬಗ್ಗೆ ಯೋಚಿಸಲೇಬೇಡಿ ಎಂದು ಮಂಗೇಶ್ಕರ್ ವಿನಂತಿಸಿಕೊಂಡಿದ್ದಾರೆ.

ಟೀಮ್ ಇಂಡಿಯಾ ಫಿಸಿಯೋ ಫರ್ಹಾರ್ಟ್, ಫಿಟ್ನೆಸ್ ಕೋಚ್ ಶಂಕರ್ ರಾಜೀನಾಮೆಟೀಮ್ ಇಂಡಿಯಾ ಫಿಸಿಯೋ ಫರ್ಹಾರ್ಟ್, ಫಿಟ್ನೆಸ್ ಕೋಚ್ ಶಂಕರ್ ರಾಜೀನಾಮೆ

ಭಾರತ-ನ್ಯೂಜಿಲೆಂಡ್ ಸೆಮಿಫೈನಲ್ ಪಂದ್ಯದ ಬಳಿಕ ಧೋನಿಗೆ ಟ್ವೀಟ್ ಮಾಡಿರುವ ಲತಾ, 'ಧೋನಿಯವರಿಗೆ ನಮಸ್ಕಾರ, ನೀವು ನಿವೃತ್ತಿ ನೀಡಲಿದ್ದೀರಿ ಎಂಬ ವಿಚಾರವನ್ನು ನಾನೀ ದಿನಗಳಲ್ಲಿ ಕೇಳುತ್ತಿದ್ದೇನೆ. ದಯವಿಟ್ಟು ನಿವೃತ್ತಿ ಬಗ್ಗೆ ಯೋಚಿಸಬೇಡಿ. ದೇಶಕ್ಕೆ ನಿಮ್ಮ ಅಗತ್ಯವಿದೆ. ನಾನೂ ವಿನಂತಿಸುತ್ತಿದ್ದೇನೆ; ನಿವೃತ್ತಿ ವಿಚಾರವನ್ನು ಮನಸ್ಸಿಗೆ ತಂದುಕೊಳ್ಳಬೇಡಿ' ಎಂದು ಬರೆದುಕೊಂಡಿದ್ದಾರೆ.

ಬೌನ್ಸರ್‌ ಪೆಟ್ಟಿನಿಂದ ರಕ್ತ ಹರಿದರೂ ಆಸೀಸ್‌ ಪರ ಹೋರಾಡಿದ ಕೇರಿ!ಬೌನ್ಸರ್‌ ಪೆಟ್ಟಿನಿಂದ ರಕ್ತ ಹರಿದರೂ ಆಸೀಸ್‌ ಪರ ಹೋರಾಡಿದ ಕೇರಿ!

ಭಾರತದ ಇನ್ನಿಂಗ್ಸ್‌ನ 48.3ನೇ ಓವರ್‌ನಲ್ಲಿ ಧೋನಿ, ಮಾರ್ಟಿನ್ ಗಪ್ಟಿಲ್ ಥ್ರೋಗೆ ರನ್ ಔಟ್ ಆಗುವ ಮೊದಲು ಭಾರತ ಗೆಲುವಿನ ನಿರೀಕ್ಷೆಯನ್ನಿಟ್ಟುಕೊಂಡಿತ್ತು. ಆದರೆ ಗಪ್ಟಿಲ್ ಬುಲೆಟ್ ಥ್ರೋ ಭಾರತದ ಫೈನಲ್ ಆಸೆಗೆ ತಣ್ಣೀರೆರಚಿತ್ತು. ಮಾರ್ಟಿನ್ ಎಸೆದ ಚೆಂಡು ಸೀದ ವಿಕೆಟ್‌ಗೆ ಬಡಿದಿತ್ತು. ಧೋನಿ ಔಟ್ ಆಗಿದ್ದರು. ಆ ವೇಳೆ ಧೋನಿ 50 ರನ್ ಗಳಿಸಿದ್ದರು.

Story first published: Thursday, July 11, 2019, 17:42 [IST]
Other articles published on Jul 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X