ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌: ಬಾಂಗ್ಲಾ ಹುಲಿಗಳನ್ನು ಕಟ್ಟಿಹಾಕಿದ ಕಾಂಗರೂ ಪಡೆ

World Cup 2019 Live: Australia vs Bangladesh, Match-26

ನಾಟಿಂಗ್‌ಹ್ಯಾಮ್‌, ಜೂನ್ 20: ಬ್ಯಾಟ್ಸ್‌ಮನ್‌ಗಳಿಗೆ ಸ್ವರ್ಗವಾಗಿದ್ದ ಪಿಚ್‌ನಲ್ಲಿ ಬೃಹತ್‌ ಮೊತ್ತ ದಾಖಲಿಸಿ ಬಚಾವಾದ ಆಸ್ಟ್ರೇಲಿಯಾ ತಂಡ, ಅಪಾಯಕಾರಿ ಬಾಂಗ್ಲಾದೇಶ ವಿರುದ್ದ48 ರನ್‌ಗಳ ಜಯ ದಾಖಲಿಸಿತು.

ಸತತ ಏಳು ಟಾಸ್‌ ಸೋಲಿನ ಸರಮಾಲೆಯಿಂದ ಕೊನೆಗೂ ಹೊರಬಂದ ಆಸ್ಟ್ರೇಲಿಯಾ ತಂಡದ ನಾಯಕ ಆರೊನ್‌ ಫಿಂಚ್‌, ಇಲ್ಲಿನ ಟ್ರೆಂಟ್‌ ಬ್ರಿಡ್ಜ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡರು.

ಆಸ್ಟ್ರೇಲಿಯಾ ಬಾಂಗ್ಲಾದೇಶ ಪಂದ್ಯದ ಲೈವ್‌ ಸ್ಕೋರ್‌ ಕಾರ್ಡ್‌

1
43669

ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಅವರೊಟ್ಟಿಗೆ ಇನಿಂಗ್ಸ್‌ ಆರಂಭಿಸಿದ ಕ್ಯಾಪ್ಟನ್‌ ಫಿಂಚ್‌, ಮೊದಲ ವಿಕೆಟ್‌ಗೆ 121 ರನ್‌ಗಳ ಜೊತೆಯಾಟದ ಮೂಲಕ ಕಾಂಗರೂ ಪಡೆಯ ಬೃಹತ್‌ ಮೊತ್ತಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಅರ್ಧಶತಕದ ಬಳಿಕ ಫಿಂಚ್‌ (53) ಔಟಾದರೆ, ಬಾಂಗ್ಲಾ ಬೌಲರ್‌ಗಳನ್ನು ಬಡಿದಟ್ಟಿದ ವಾರ್ನರ್‌ 147 ಎಸೆತಗಳಲ್ಲಿ 14 ಫೋರ್‌ ಮತ್ತು 5 ಸಿಕ್ಸರ್‌ಗಳನ್ನು ಒಳಗೊಂಡ 166 ರನ್‌ಗಳನ್ನು ಚೆಚ್ಚಿದರು.

ಇದರೊಂದಿಗೆ ಆಸೀಸ್‌ 50 ಓವರ್‌ಗಳಲ್ಲಿ 381/5 ರನ್‌ಗಳ ಶಿಖರ ನಿರ್ಮಿಸಿತು. ಮಧ್ಯಮ ಕ್ರಮಾಂದಲ್ಲಿ ಉಸ್ಮಾನ್‌ ಖವಾಜ (89) ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌ (10 ಎಸೆತಗಳಲ್ಲಿ 32 ರನ್‌) ಸ್ಫೋಟಕ ಬ್ಯಾಟಿಂಗ್‌ ನಡೆಸಿದರು.

ಮುಷ್ಫಿಕರ್‌ ಹೋರಾಟದ ಶತಕ

ಬಳಿಕ ಗುರಿ ಬೆನ್ನತ್ತಿದ ಬಾಂಗ್ಲಾದೇಶ ತಂಡ ಕೆಚ್ಚೆದೆಯ ಹೋರಾಟ ಪ್ರದರ್ಶಿಸಿತು. 381 ರನ್‌ಗಳ ಅಸಾಧ್ಯದ ಗುರಿ ಬೆನ್ನತ್ತಿದರೂ ಗೆಲ್ಲುವ ಆಸೆಯನ್ನು ಎಲ್ಲಿಯೂ ಬಿಟ್ಟುಕೊಡದ ಬಾಂಗ್ಲಾ, ಒಡಿಐ ಕ್ರಿಕೆಟ್‌ನಲ್ಲಿ ತನ್ನ ಸಾರ್ವಕಾಲಿಕ ಗರಿಷ್ಠ ಮೊತ್ತವಾಗಿ 50 ಓವರ್‌ಗಳಲ್ಲಿ 333/8 ರನ್‌ಗಳನ್ನು ಗಳಿಸಿತು. ಆದರೂ, 42 ರನ್‌ಗಳ ಅಂತರದಲ್ಲಿ ನಿರಾಸೆ ಅನುಭವಿಸುವಂತಾಯಿತು.

ಬಾಂಗ್ಲಾ ಪರ ಅಮೋಘ ಬ್ಯಾಟಿಂಗ್‌ ನಡೆಸಿದ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಮುಷ್ಫಿಕರ್‌ ರಹೀಮ್‌ 97 ಎಸೆತಗಳಲ್ಲಿ 102 ರನ್‌ಗಳ ಶತಕ ಸಿಡಿಸಿದರು. ಆದರೆ, ತಂಡಕ್ಕೆ ಜಯ ತಂದುಕೊಡಲು ಇದು ಸಾಲದೇ ಹೋಯಿತು. ಇನ್ನು ಆರಂಭಿಕ ಬ್ಯಾಟ್ಸ್‌ಮನ್‌ ತಮೀಮ್‌ ಇಕ್ಬಾಲ್‌ (62) ಮತ್ತು ಮಹ್ಮೂದುಲ್ಲಾ (69) ಅರ್ಧಶತಕಗಳ ಕಾಣಿಕೆ ನೀಡಿದರು.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಪಂದ್ಯದಲ್ಲಿ ಆಸ್ಟ್ರೇಲಿಯಾ ತನ್ನ ತಂಡದಲ್ಲಿ ಮೂರು ಬದಲಾವಣೆ ತಂದಿತ್ತು. ಗಾಯದಿಂದ ಚೇತರಿಸಿರುವ ಮಾರ್ಕಸ್‌ ಸ್ಟೋಯ್ನಿಸ್‌ ಆಡುವ 11ರ ಬಳಗಕ್ಕೆ ಮರಳಿದರೆ, ವೇಗಿ ನೇಥನ್‌ ಕೌಲ್ಟರ್‌ನೈಲ್‌ ಮತ್ತು ಲೆಗ್‌ ಸ್ಪಿನ್ನರ್‌ ಆಡಮ್‌ ಝಾಂಪ ಕೂಡ ಅವಕಾಶ ಪಡೆದಿದ್ದಾರೆ. ಶಾನ್‌ ಮಾರ್ಷ್‌, ಜೇಸನ್‌ ಬೆಹ್ರೆನ್‌ಡಾರ್ಫ್‌ ಮತ್ತು ಕೇನ್‌ ರಿಚರ್ಡ್ಸನ್‌ ಆಡುವ 11ರಿಂದ ಹೊರಗುಳಿದ ಆಟಗಾರರು.

ವಿಶ್ವಕಪ್‌ನಿಂದ ಹೊರಬಿದ್ದ ಶಿಖರ್‌ ಧವನ್‌ ಭಾವನಾತ್ಮಕ ಸಂದೇಶ!ವಿಶ್ವಕಪ್‌ನಿಂದ ಹೊರಬಿದ್ದ ಶಿಖರ್‌ ಧವನ್‌ ಭಾವನಾತ್ಮಕ ಸಂದೇಶ!

ಮತ್ತೊಂದೆಡೆ ಬಾಂಗ್ಲಾದೇಶ ಕೂಡ ಅನಿವಾರ್ಯವಾಗಿ ಎರಡು ಬದಲಾವಣೆ ತಂದಿತ್ತು. ಮೊಹಮ್ಮದ್‌ ಸೈಫುದ್ದೀನ್‌ ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಿದ್ದು, ಮೊಸಾದೆಕ್‌ ಹೊಸೇನ್‌ ಕೂಡ ಭುಜದ ನೋವಿನಿಂದಾಗಿ ಹೊರಬಿದ್ದಿದ್ದಾರೆ. ಅವರ ಸ್ಥಾನದಲ್ಲಿ ಸಬ್ಬೀರ್‌ ರೆಹ್ಮಾನ್‌ ಮತ್ತು ರುಬೆಲ್‌ ಹೊಸೇನ್‌ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಸಂಕ್ಷಿಪ್ತ ಸ್ಕೋರ್‌

ಆಸ್ಟ್ರೇಲಿಯಾ: 50 ಓವರ್‌ಗಳಲ್ಲಿ 381/5 (ಆರೊನ್‌ ಫಿಂಚ್‌ 53, ಡೇವಿಡ್‌ ವಾರ್ನರ್‌ 166, ಉಸ್ಮಾನ್‌ ಖವಾಜ 89, ಗ್ಲೆನ್‌ ಮ್ಯಾಕ್ಸ್‌ವೆಲ್‌ 32; ಸೌಮ್ಯ ಸರ್ಕಾರ್‌ 58ಕ್ಕೆ 3).

ಬಾಂಗ್ಲಾದೇಶ: 50 ಓವರ್‌ಗಳಲ್ಲಿ 333/8 (ತಮೀಮ್‌ ಇಕ್ಬಾಲ್‌ 62, ಶಾಕಿಬ್‌ ಅಲ್‌ ಹಸನ್‌ 41, ಮುಷ್ಫಿಕರ್‌ ರಹೀಮ್‌ ಔಟಾಗದೆ 102, ಮಹ್ಮೂದುಲ್ಲಾ 69; ಮಿಚೆಲ್‌ ಸ್ಟಾರ್ಕ್‌ 55ಕ್ಕೆ 2, ನೇಥನ್‌ ಕೌಲ್ಡರ್‌ ನೈಲ್‌ 58ಕ್ಕೆ 2, ಮಾರ್ಕಸ್‌ ಸ್ಟೋಯ್ನಿಸ್‌ 55ಕ್ಕೆ 2).

ಪ್ರಮುಖ ಸ್ಟ್ಯಾಟ್‌

ಒಡಿಐನಲ್ಲಿ ಬಾಂಗ್ಲಾ ತಂಡದ ಗರಿಷ್ಠ ಮೊತ್ತ

333-8 | Aus, Nottingham (2019)
330-6 | SA, The Oval (2019)
329-6 | Pak, Mirpur (2015)
326-3 | Pak, Mirpur (2014)

ತಂಡಗಳ ವಿವರ

ಆಸ್ಟ್ರೇಲಿಯಾ (ಪ್ಲೇಯಿಂಗ್‌ 11): ಆರೊನ್‌ ಫಿಂಚ್‌ (ಕ್ಯಾಪ್ಟನ್‌), ಡೇವಿಡ್‌ ವಾರ್ನರ್‌, ಉಸ್ಮಾನ್‌ ಖವಾಜ, ಸ್ಟೀವ್‌ ಸ್ಮಿತ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮಾರ್ಕಸ್‌ ಸ್ಟೋಯ್ನಿಸ್‌, ಅಲೆಕ್ಸ್‌ ಕ್ಯಾರಿ (ವಿಕೆಟ್‌ಕೀಪರ್‌), ನೇಥನ್‌ ಕೌಲ್ಟರ್‌ ನೈಲ್‌, ಪ್ಯಾಟ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್‌, ಆಡಮ್‌ ಝಾಂಪ.

ಬಾಂಗ್ಲಾದೇಶ (ಪ್ಲೇಯಿಂಗ್‌ 11): ಮಶ್ರಫೆ ಮೊರ್ತಾಝ (ಕ್ಯಾಪ್ಟನ್‌), ತಮೀಮ್‌ ಇಕ್ಬಾಲ್‌, ಸೌಮ್ಯ ಸರ್ಕಾರ್‌, ಶಾಕಿಬ್‌ ಅಲ್‌ ಹಸನ್‌, ಮುಷ್ಫಿಕರ್‌ ರಹೀಮ್‌, ಲಿಟನ್‌ ದಾಸ್‌, ಮಹ್ಮೂದುಲ್ಲಾ, ಸಬ್ಬೀರ್‌ ರೆಹಮಾನ್‌, ಮೆಹ್ದಿ ಹಸನ್‌ ಮಿಜಾಝ್‌, ರುಬೆಲ್‌ ಹೊಸೇನ್‌, ಮುಸ್ತಾಫಿಝುರ್‌ ರೆಹಮಾನ್‌.

{headtohead_cricket_1_10}

Story first published: Thursday, June 20, 2019, 23:50 [IST]
Other articles published on Jun 20, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X