ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌: ಆಸ್ಟ್ರೇಲಿಯಾವನ್ನು ಬಗ್ಗುಬಡಿದ ಇಂಗ್ಲೆಂಡ್ ಫೈನಲ್‌ಗೆ

World Cup 2019 Live: Australia vs England, 2nd semi-final

ಬರ್ಮಿಂಗ್‌ಹ್ಯಾಮ್‌, ಜುಲೈ 11: ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು ಇತಿಹಾಸ ರಚಿಸುವ ಆತ್ಮವಿಶ್ವಾಸದಲ್ಲಿರುವ ಇಂಗ್ಲೆಂಡ್‌ ತಂಡ ಸೆಮಿಫೈನಲ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್‌ ಆಸ್ಟ್ರೇಲಿಯಾಗೆ 8 ವಿಕೆಟ್‌ಗಳ ಹೀನಾಯ ಸೋಲುಣಿಸಿ ಎರಡೂ ವರೆ ದಶಕದ ಬಳಿಕ ಇದೇ ಮೊದಲ ಬಾರಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

1
43690

ಇಲ್ಲಿನ ಎಡ್ಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ಗುರುವಾರ ಟಾಸ್‌ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಆರೊನ್‌ ಫಿಂಚ್‌ ಬೃಹತ್‌ ಮೊತ್ತ ದಾಖಲಿಸುವ ಉದ್ದೇಶದೊಂದಿಗೆ ಮೊದಲು ಬ್ಯಾಟಿಂಗ್‌ ಆಯ್ದುಕೊಂಡರು. ಆದರೆ,ಇಂಗ್ಲೆಂಡ್‌ ತಂಡದ ಶಿಸ್ತಿನ ಬೌಲಿಂಗ್‌ ದಾಳಿ ಎದುರು ಹೆಚ್ಚೇನು ಅಬ್ಬರಿಸಲಾಗದೆ 49 ಓವರ್‌ಗಳಲ್ಲಿ 223ಕ್ಕೆ ಆಲ್‌ಔಟ್‌ ಆಯಿತು.

ಬಳಿಕ ಗುರಿ ಬೆನ್ನತ್ತಿದ ಇಂಗ್ಲೆಂಡ್‌ ತಂಡ 32.1 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ ನಷ್ಟಕ್ಕೆ 226 ರನ್‌ಗಳನ್ನು ಚೆಚ್ಚಿ 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಇದರೊಂದಿಗೆ ಭಾನುವಾರ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಮತ್ತು ನ್ಯೂಜಿಲೆಂಡ್‌ ತಂಡಗಳು ಪೈಪೋಟಿ ನಡೆಸಲಿದ್ದು, ಯಾರೇ ಗೆದ್ದರೂ ನೂತನ ಚಾಂಪಿಯನ್ಸ್‌ ಆಗಿ ಹೊರಹೊಮ್ಮಲಿದ್ದಾರೆ.

ಇಂಗ್ಲೆಂಡ್‌ 1992ರ ಬಳಿಕ ಇದೇ ಮೊದಲ ಬಾರಿ ಫೈನಲ್‌ಗೆ ದಾಪುಗಾಲಿಟ್ಟಿದೆ. ಮತ್ತೊಂದೆಡೆ ಕಳೆದ ಬಾರಿ ರನ್ನರ್ಸ್‌ಅಪ್‌ ಸ್ಥಾನ ಪಡೆದಿದ್ದ ನ್ಯೂಜಿಲೆಂಡ್‌ ಸತತ ಎರಡನೇ ಬಾರಿ ಫೈನಲ್‌ ಪ್ರವೇಶಿಸಿ ಪ್ರಶಸ್ತಿ ಗೆಲುವನ್ನು ಎದುರು ನೋಡುತ್ತಿದೆ.

ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಪರ ಆರಂಭಿಕ ಬ್ಯಾಟ್ಸ್‌ಮನ್‌ ಜೇಸನ್‌ ರಾಯ್‌ (65 ಎಸೆತತ, 85 ರನ್‌) ಸ್ಫೋಟಕ ಅರ್ಧಶತಕದ ಮೂಕ ತಂಡದ ಗೆಲುವಿನ ಹಾದಿಯನ್ನು ಸುಗಮವನ್ನಾಗಿಸಿದರು. ಅವರಿಗೆ ಜಾನಿ ಬೈರ್‌ಸ್ಟೋವ್‌ ಉತ್ತಮ ಸಾಥ್‌ ನೀಡಿದರು.

ಇದಕ್ಕೂ ಮುನ್ನ ಆರಂಭಿಕ ಆಘತ ಅನುಭವಿಸಿದ್ದ ಆಸ್ಟ್ರೇಲಿಯಾ ತಂಡ ಮಾಜಿ ನಾಯಕ ಸ್ಟೀವ್‌ ಸ್ಮಿತ್‌ (85) ಮತ್ತು ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಅಲೆಕ್ಸ್‌ ಕೇರಿ (46) ಹಾಗೂ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಮದ ಸಿಕ್ಕ ಉಪಯುಕ್ತ ರನ್‌ಗಳ ಕೊಡುಗೆಯಿಂದ 200ರ ಗಡಿದಾಟಿತಾದರೂ 49 ಓವರ್‌ಗಳಲ್ಲಿ 223ಕ್ಕೆ ಆಲ್‌ಔಟ್‌ ಆಯಿತು.

ಇಂಗ್ಲೆಂಡ್‌ ಪರ ಮಾರಕ ಬೌಲಿಂಗ್‌ ದಾಳಿ ಸಂಘಟಿಸಿದ ಕ್ರಿಸ್‌ ವೋಕ್ಸ್‌ (20ಕ್ಕೆ 3) ಮತ್ತು ಜೋಫ್ರಾ ಆರ್ಚರ್‌ (32ಕ್ಕೆ 2) ಆಸೀಸ್‌ ಬ್ಯಾಟ್ಸ್‌ಮನ್‌ಗಳ ಎದೆಯಲ್ಲಿ ನಡುಕ ಹುಟ್ಟಿಸಿದರೆ, ಲೆಗ್‌ಸ್ಪಿನ್ನರ್‌ ಆದಿಲ್‌ ರಶೀದ್‌ (54ಕ್ಕೆ 3) ಮಧ್ಯ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ದುಃಸ್ವಪ್ನವಾದರು.

ಸಂಕ್ಷಿಪ್ತ ಸ್ಕೋರ್‌

ಆಸ್ಟ್ರೇಲಿಯಾ: 49 ಓವರ್‌ಗಳಲ್ಲಿ 223/10 (ಸ್ಟೀವ್‌ ಸ್ಮಿತ್‌ 85, ಅಲೆಕ್ಸ್‌ ಕೇರಿ 46, ಗ್ಲೆನ್‌ ಮ್ಯಾಕ್ಸ್‌ವೆಲ್‌ 22, ಮಿಚೆಲ್‌ ಸ್ಟಾರ್ಕ್‌ 29; ಕ್ರಿಸ್‌ ವೋಕ್ಸ್‌ 20ಕ್ಕೆ 3, ಆದಿಲ್‌ ರಶೀದ್‌ 54ಕ್ಕೆ 3, ಜೋಫ್ರಾ ಆರ್ಚರ್‌ 32ಕ್ಕೆ 2).

ಇಂಗ್ಲೆಂಡ್‌: 32.1 ಓವರ್‌ಗಳಲ್ಲಿ 226/2 (ಜಾನಿ ಬೈರ್‌ಸ್ಟೋವ್‌ 36, ಜೇಸನ್‌ ರಾಯ್‌ 85, ಜೋ ರೂಟ್‌ ಅಜೇಯ 49, ಐಯಾನ್‌ ಮಾರ್ಗನ್‌ ಅಜೇಯ 45; ಪ್ಯಾಟ್‌ ಕಮಿನ್ಸ್‌ 34ಕ್ಕೆ 1, ಮಿಚೆಲ್‌ ಸ್ಟಾರ್ಕ್‌ 70ಕ್ಕೆ 1).

ಸೆಮಿಫೈನಲ್‌ ಗೆದ್ದ ಬಳಿಕ ಕಿವೀಸ್‌ ನಾಯಕ ವಿಲಿಯಮ್ಸನ್‌ ಹೇಳಿದ್ದಿದುಸೆಮಿಫೈನಲ್‌ ಗೆದ್ದ ಬಳಿಕ ಕಿವೀಸ್‌ ನಾಯಕ ವಿಲಿಯಮ್ಸನ್‌ ಹೇಳಿದ್ದಿದು

ತಂಡಗಳ ವಿವರ

ಆಸ್ಟ್ರೇಲಿಯಾ (ಪ್ಲೇಯಿಂಗ್‌ 11): ಡೇವಿಡ್‌ ವಾರ್ನರ್‌, ಆರೊನ್‌ ಫಿಂಚ್‌ (ನಾಯಕ), ಸ್ಟೀವ್‌ ಸ್ಮಿತ್‌, ಪೀಟರ್‌ ಹ್ಯಾಂಡ್ಸ್‌ಕಂಬ್‌, ಮಾರ್ಕಸ್‌ ಸ್ಟೋಯ್ನಿಸ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಅಲೆಕ್ಸ್‌ ಕೇರಿ (ವಿಕೆಟ್‌ಕೀಪರ್‌), ಪ್ಯಾಟ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್‌, ಜೇಸನ್‌ ಬೆಹ್ರೆನ್‌ಡಾರ್ಫ್‌, ನೇಥನ್‌ ಲಯಾನ್‌.

ಇಂಗ್ಲೆಂಡ್‌ (ಪ್ಲೇಯಿಂಗ್‌ 11): ಜೇಸನ್‌ ರಾಯ್‌, ಜಾನಿ ಬೈರ್‌ಸ್ಟೋವ್‌, ಜೋ ರೂಟ್‌, ಐಯಾನ್‌ ಮಾರ್ಗನ್‌ (ನಾಯಕ), ಬೆನ್‌ ಸ್ಟೋಕ್ಸ್‌, ಜೋಸ್‌ ಬಟ್ಲರ್‌ (ವಿಕೆಟ್‌ಕೀಪರ್‌), ಕ್ರಿಸ್‌ ವೋಕ್ಸ್‌, ಲಿಯಾಮ್‌ ಪ್ಲಂಕೆಟ್‌, ಜೋಫ್ರಾ ಆರ್ಚರ್‌, ಆದಿಲ್‌ ರಶೀದ್‌, ಮಾರ್ಕ್‌ ವುಡ್‌.

ಸ್ಟ್ಯಾಟ್ಸ್‌ ಫ್ಯಾಕ್ಟ್‌..

#2001

ಆಸ್ಟ್ರೇಲಿಯಾ ತಂಡ ಎಡ್ಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ 2001ರಿಂದ ಈವರೆಗೆ ಒಂದು ಪಂದ್ಯವನ್ನೂ ಗೆದ್ದಿಲ್ಲ.

#01

ಒಡಿಐ ಕ್ರಿಕೆಟ್‌ ವಿಶ್ವಕಪ್‌ ಟೂನರ್ನಿಯಲ್ಲಿ ಆಸ್ಟ್ರೇಲಿಯಾ ತಂಡ ಸೆಮಿಫೈನಲ್‌ ಹಂತದಲ್ಲಿ ಸೋತಿರುವುದು ಇದೇ ಮೊದಲು.

#02

ಪ್ರಸಕ್ತ ವಿಶ್ವಕಪ್‌ ಟೂನರ್ನಿಯಲ್ಲಿ ಟೀಮ್‌ ಇಂಡಿಯಾ ವಿರುದ್ಧ ಗೆದ್ದ ಎರಡು ತಂಡಗಳು ಫೈನಲ್‌ ತಲುಪಿವೆ. ಲೀಗ್‌ ಹಂತದಲ್ಲಿ ಇಂಗ್ಲೆಂಡ್‌ ಭಾರತ ವಿರುದ್ಧ ಗೆದ್ದರೆ, ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರಾಟ್‌ ಪಡೆಗೆ ಆಘಾತ ನೀಡಿತ್ತು.

#03

ಇಂಗ್ಲೆಂಡ್‌ ತಂಡ ಈವರೆಗೆ ಒಟ್ಟು ಮೂರು ಬಾರಿ ಫೈನಲ್‌ ತಲುಪಿದೆ. ಇದಕ್ಕೂ ಮುನ್ನ 1987 ಮತ್ತು 1992ರಲ್ಲಿ ಈ ಸಾಧನೆ ಮಾಡಿತ್ತು.

#2019

1975-2007ರ ವರೆಗೆ ವಿಶ್ವಕಪ್‌ಗೆ ಆತಿಥ್ಯ ವಹಿಸಿದ ಯಾವ ತಂಡಗಳು ಕೂಡ ವಿಶ್ವಕಪ್‌ ಗೆದ್ದಿರಲಿಲ್ಲ. ಆದರೆ, 2011ರಲ್ಲಿ ಆತಿಥೇಯ ಭಾರತ ಪ್ರಶಸ್ತಿ ಗೆದ್ದರೆ, ಆಸ್ಟ್ರೇಲಿಯಾದಲ್ಲಿ ನಡೆದ 2015ರ ವಿಶ್ವಕಪ್‌ನಲ್ಲಿ ಕಾಂಗರೂ ಪಡೆ ಟ್ರೋಫಿ ಎತ್ತಿ ಹಿಡಿದಿತ್ತು. ಇದೀಗ ಇಂಗ್ಲೆಂಡ್‌ ನೆಲದಲ್ಲಿ 2019ರ ವಿಶ್ವಕಪ್‌ ಫೈನಲ್‌ಗೆ ಆತಿಥೇಯ ಇಂಗ್ಲೆಂಡ್‌ ಕಾಲಿಟ್ಟಿದ್ದು, ಪ್ರಶಸ್ತಿ ಗೆಲ್ಲುವುದೇ ಎಂಬುದನ್ನು ಕಾದು ನೋಡಬೇಕಿದೆ.

{headtohead_cricket_1_2}

Story first published: Thursday, July 11, 2019, 22:05 [IST]
Other articles published on Jul 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X