ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌: ಲಂಕಾ vs ಬಾಂಗ್ಲಾ ಪಂದ್ಯ ಟಾಸ್‌ ಕೂಡ ಕಾಣದೆ ರದ್ದು!

World Cup 2019 Live: Bangladesh vs Sri Lanka, Match-16

ಬ್ರಿಸ್ಟೋಲ್‌, ಜೂನ್‌ 11: ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ಮೂರನೇ ಪಂದ್ಯ ಮಳೆಗೆ ಆಹುತಿಯಾಗಿದ್ದು, ಮಂಗಳವಾರ ನಡೆಯಬೇಕಿದ್ದ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಣ ಪಂದ್ಯ ಟಾಸ್‌ ಕೂಡ ಕಾಣದೆ ರದ್ದಾಗಿದೆ.

ವಿಶ್ವಕಪ್‌: ಬಾಂಗ್ಲಾದೇಶ vs ಶ್ರೀಲಂಕಾ ಪಂದ್ಯದ ಲೈವ್‌ ಸ್ಕೋರ್‌ ಕಾರ್ಡ್‌

ಮೊದಲಿಗೆ ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಣ ಪಂದ್ಯದ ರದ್ದಾದರೆ, ಬಳಿಕ ವೆಸ್ಟ್‌ ಇಂಡೀಸ್‌ ಮತ್ತು ದಕ್ಷಿಣ ಆಫ್ರಿಕಾ ನಡುವಣ ಹಣಾಹಣಿಯು ಇದೇ ಗತಿ ಕಂಡಿತ್ತು. ಇದೀಗ ಶ್ರೀಲಂಕಾ ತಂಡಕ್ಕೆ ಎರಡನೇ ಬಾಕಿ ಅಂಕ ಹಂಚಿಕೊಳ್ಳುವಂತಾಗಿದ್ದು, ಇಲ್ಲಿನ ಕೌಂಟಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಬಾಂಗ್ಲಾ ವಿರುದ್ಧ ಹೋರಾಡದೇ ಒಂದಂಕ ಜೇಬಿಗಿಳಿಸಿದೆ.

 ವಿಶ್ವಕಪ್‌: ಇಂಡೊ-ಪಾಕ್‌ ಕದನಕ್ಕೂ ಮುನ್ನ ಭಾರತವನ್ನು ಕೆಣಕಿದ ಪಾಕಿಸ್ತಾನ! ವಿಶ್ವಕಪ್‌: ಇಂಡೊ-ಪಾಕ್‌ ಕದನಕ್ಕೂ ಮುನ್ನ ಭಾರತವನ್ನು ಕೆಣಕಿದ ಪಾಕಿಸ್ತಾನ!

ಎರಡೂ ತಂಡಗಳು ಈಗಾಗಲೇ ತಲಾ ಮೂರು ಲೀಗ್‌ ಪಂದ್ಯಗಳನ್ನಾಡಿವೆ. ಲಂಕಾ ಪಡೆ ತಲಾ ಒಂದು ಸೋಲು ಮತ್ತು ಗೆಲುವಿನ ರುಚಿ ನೋಡಿದ್ದು, ಪಾಕಿಸ್ತಾನ ವಿರುದ್ಧದ ಅಂಕ ಹಂಚಿಕೊಂಡಿದೆ. ಶ್ರೀಲಂಕಾ ತಂಡ ಜೂನ್‌ 15ರಂದು ಆಸ್ಟ್ರೇಲಿಯಾ ವಿರುದ್ಧ ತನ್ನ ಮುಂದಿನ ಪಂದ್ಯವನ್ನಾಡಲಿದ್ದು, ಬಾಂಗ್ಲಾದೇಶ ತಂಡ ಜೂನ್‌ 17ರಂದು ವೆಸ್ಟ್‌ ಇಂಡೀಸ್‌ ಸವಾಲು ಎದುರಿಸಲಿದೆ.

ವಿಶ್ವಕಪ್‌: ಶ್ರೀಲಂಕಾಕ್ಕೆ ಹಿಂದಿರುಗಲಿರುವ ವೇಗಿ ಲಸಿತ್‌ ಮಾಲಿಂಗ!ವಿಶ್ವಕಪ್‌: ಶ್ರೀಲಂಕಾಕ್ಕೆ ಹಿಂದಿರುಗಲಿರುವ ವೇಗಿ ಲಸಿತ್‌ ಮಾಲಿಂಗ!

ಮತ್ತೊಂದೆಡೆ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಆಘಾತ ನೀಡಿದ್ದ ಬಾಂಗ್ಲಾ ಪಡೆ ಮತ್ತೆರಡು ಪಂದ್ಯಗಳನ್ನು ಸೋತಿದ್ದು, ಜಯದ ಲಯಕ್ಕೆ ಮರಳುವ ತವಕದಲ್ಲಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ತಂಡಗಳ ವಿವರ

ಬಾಂಗ್ಲಾದೇಶ: ಮಶ್ರಫೆ ಮೊರ್ತಾಝ (ನಾಯಕ), ಅಬು ಝಾಯೆದ್‌, ಲಿಟನ್‌ ದಾಸ್‌, ಮಹ್ಮೂದುಲ್ಲ,ಮೆಹ್ದಿ ಹಸನ್‌ ಮಿರಾಜ್‌, ಮೊಹಮ್ಮದ್‌ ಮಿಥುನ್‌, ಮೊಹಮ್ಮದ್‌ ಸೈಫೂದ್ದೀನ್‌, ಮೊದಾದೆಕ್‌ ಹೊಸೇನ್‌, ಮುಷ್ಫಿಕರ್‌ ರಹೀಮ್‌, ಮುಸ್ತಾಫಿಝುರ್‌ ರೆಹ್ಮಾನ್‌, ರುಬೆಲ್‌ ಹೊಸೇನ್‌, ಸಬ್ಬೀರ್‌ ರೆಹಮಾನ್‌, ಶಾಕಿಬ್‌ ಅಲ್‌ ಹಸನ್, ಸೌಮ್ಯ ಸರ್ಕಾರ್‌, ತಮಿಮ್‌ ಇಕ್ಬಾಲ್‌.

ಶ್ರೀಲಂಕಾ: ದಿಮುತ್‌ ಕರುಣಾರತ್ನೆ (ನಾಯಕ), ಧನಂಜಯ ಡಿ'ಸಿಲ್ವಾ, ನುವಾನ್‌ ಪ್ರದೀಪ್‌, ಅವಿಷ್ಕ ಫರ್ನಾಂಡೊ, ಸುರಂಗ ಲಕ್ಮಲ್‌, ಲಸಿತ್‌ ಮಾಲಿಂಗ, ಏಂಜಲೊ ಮ್ಯಾಥ್ಯೂಸ್‌, ಕುಶಲ್‌ ಮೆಂಡಿಸ್‌, ಜೀವನ್‌ ಮೆಂಡಿಸ್‌, ಕುಶಲ್‌ ಪೆರೆರಾ, ತಿಸಾರ ಪೆರೆರಾ, ಮಿಲಿಂಡಾ ಸಿರಿವರ್ಧನ, ಲಾಹಿರು ತಿರಿಮನ್ನೆ, ಇಸುರು ಉದನಾ, ಝೆಫ್ರಿ ವಾಂಡರ್ಸೆ.

Story first published: Tuesday, June 11, 2019, 19:26 [IST]
Other articles published on Jun 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X