ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌: ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾ ಪಡೆಯನ್ನು ಬಗ್ಗುಬಡಿದ ಭಾರತ

india vs bangla 2019 wc warmup game

ಲಂಡನ್‌, ಮೇ 28: ಎಂ.ಎಸ್‌ ಧೋನಿ (113) ಮತ್ತು ಕೆ.ಎಲ್‌ ರಾಹುಲ್‌ (108) ಅವರ ಸ್ಫೋಟಕ ಶತಕಗಳ ಬಲದಿಂದ ಅಬ್ಬರಿಸಿದ ಟೀಮ್‌ ಇಂಡಿಯಾ, ಇಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂನರ್ನಿಯ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 95 ರನ್‌ಗಳಿಂದ ಬಗ್ಗುಬಡಿದು ಭರ್ಜರಿ ತಾಲೀಮು ಕೈಗೊಂಡಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಪ್ರಿಡಿಕ್ಷನ್‌

2019ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಲೇಟೆಸ್ಟ್‌ ಸುದ್ದಿಗಳು

ಇಲ್ಲಿನ ಸೋಫಿಯಾ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಮಂಗಳವಾರ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿದರೂ ಬಳಿಕ ಚೇತರಿಸಿ ತನ್ನ ಪಾಲಿನ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 359 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು.

ವಿಶ್ವಕಪ್‌: ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ವೆಸ್ಟ್‌ ಇಂಡೀಸ್‌ಗೆ ಜಯವಿಶ್ವಕಪ್‌: ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ವೆಸ್ಟ್‌ ಇಂಡೀಸ್‌ಗೆ ಜಯ

ಬಳಿಕ ಗುರಿ ಬೆನ್ನತ್ತಿದ ಬಾಂಗ್ಲಾದೇಶ ತಂಡವನ್ನು 49.3 ಓವರ್‌ಗಳಲ್ಲಿ 264 ರನ್‌ಗಳಿಗೆ ಆಲ್‌ಔಟ್‌ ಮಾಡಿದ ಟೀಮ್‌ ಇಂಡಿಯಾ ಗೆಲುವಿನ ನಗೆ ಬೀರಿತು. ಬಾಂಗ್ಲಾ ಪರ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಮಿಷ್ಫಿಕರ್‌ ರಹೀಮ್‌ 90 ರನ್‌ಗಳನ್ನು ಗಳಿಸಿ ಉತ್ತಮ ಹೋರಾಟ ನಡೆಸಿದರು. ಭಾರತದ ಪರ ವೇಗಿ ಜಸ್‌ಪ್ರೀತ್‌ ಬುಮ್ರಾ 25ಕ್ಕೆ 2 ವಿಕೆಟ್‌ ಪಡೆದರೆ, ಸ್ಪಿನ್ನರ್‌ಗಳಾದ ಕುಲ್ದೀಪ್‌ ಯಾದವ್‌ (47ಕ್ಕೆ 3), ಯುಜ್ವೇಂದ್ರ ಚಹಲ್‌ (55ಕ್ಕೆ 3) ಮತ್ತು 40ಕ್ಕೆ 1 ವಿಕೆಟ್‌ ಪಡೆದು ಯಶಸ್ವಿ ಬೌಲರ್‌ಗಳೆನಿಸಿದರು.

ವಿಶ್ವಕಪ್‌ ಉದ್ಘಾಟನಾ ಪಂದ್ಯದಿಂದ ದಕ್ಷಿಣ ಆಫ್ರಿಕಾದ ಈ ವೇಗಿ ಔಟ್‌!ವಿಶ್ವಕಪ್‌ ಉದ್ಘಾಟನಾ ಪಂದ್ಯದಿಂದ ದಕ್ಷಿಣ ಆಫ್ರಿಕಾದ ಈ ವೇಗಿ ಔಟ್‌!

ಇದಕ್ಕೂ ಮೊದಲು ಭಾರತ ತಂಡದ ಇನಿಂಗ್ಸ್‌ಗೆ ಆರಂಭದಲ್ಲೇ ಮಳೆರಾಯನ ಅವಕೃಪೆ ಎದುರಾಯಿತು. ಪರಿಣಾಮ ಆಟ ಕೆಲ ಕಾಲ ಸ್ಥಗಿತ ಗೊಂಡಿತ್ತು. ಬಳಿಕ ಇನಿಂಗ್ಸ್‌ ಆರಂಭಿಸಿದ ಭಾರತ ತಂಡಕ್ಕೆ ಮುಸ್ತಾಫಿಜುರ್‌ ರೆಹ್ಮಾನ್‌ ಮೊದಲ ಆಘಾತ ನಿಡಿದರು. ಶಿಖರ್‌ ಧವನ್, ಕೇವಲ 1 ರನ್‌ ಸಂಪಾದಿಸಿ ಮುಸ್ತಾಫಿಜುರ್‌ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಭಾರತ ತಂಡ 2.5 ಓವರ್‌ಗಳಲ್ಲಿ 5 ರನ್‌ಗೆ ಮೊದಲ ವಿಕೆಟ್‌ ಕಳೆದುಕೊಂಡಿತು.

ವಿಶ್ವಕಪ್‌ ಇತಿಹಾಸದಲ್ಲಿನ ಹ್ಯಾಟ್ರಿಕ್‌-ವಿಕೆಟ್‌ಗಳ ದಾಖಲೆಗಳಿವು!ವಿಶ್ವಕಪ್‌ ಇತಿಹಾಸದಲ್ಲಿನ ಹ್ಯಾಟ್ರಿಕ್‌-ವಿಕೆಟ್‌ಗಳ ದಾಖಲೆಗಳಿವು!

ಬಳಿಕ 42 ಎಸೆತಗಳಲ್ಲಿ 19 ರನ್‌ಗಳನ್ನು ಗಳಿಸಿ ತಾಳ್ಮೆಯಿಂದ ಇನಿಂಗ್ಸ್‌ ಕಟ್ಟುತ್ತಿದ್ದ ರೋಹಿತ್‌ ಶರ್ಮಾ, ವೇಗಿ ರುಬೆಲ್‌ ಹುಸೇನ್‌ ಬೌಲಿಂಗ್‌ನಲ್ಲಿ ಇನ್‌ಸೈಡ್‌ ಎಡ್ಜ್‌ ಮೂಲಕ ಬೌಲ್ಡ್‌ ಔಟ್‌ ಆದರು. ಬಾಂಗ್ಲಾ ವಿರುದ್ಧದ ಬಹುತೇಕ ಪಂದ್ಯಗಳಲ್ಲಿ ರುಬೆಲ್‌ ಹುಸೇನ್‌ ಎದುರು ರೋಹಿತ್‌ ಹೆಚ್ಚು ಬಾರಿ ಔಟ್‌ ಆಗಿದ್ದಾರೆ ಎಂಬುದು ವಿಶೇಷ.

ನಂತರ ಬಂದ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ 46 ಎಸೆತಗಳಲ್ಲಿ 47 ರನ್‌ಗಳನ್ನು ಗಳಿಸಿ ಔಟಾದರೆ, 3 ಡೈಮೆನ್ಷನ್‌ ಖ್ಯಾತಿಯ ಆಟಗಾರ ವಿಜಯ್‌ ಶಂಕರ್‌ ಕೇವಲ 2 ರನ್‌ ಸಂಪಾದನೆಯಲ್ಲಿ ಪೆವಿಲಿಯನ್‌ ಸೇರಿದರು. ಭಾರತ 102ಕ್ಕೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ವಿಶ್ವಕಪ್‌ ಇತಿಹಾಸದಲ್ಲಿನ ಹ್ಯಾಟ್ರಿಕ್‌-ವಿಕೆಟ್‌ಗಳ ದಾಖಲೆಗಳಿವು!ವಿಶ್ವಕಪ್‌ ಇತಿಹಾಸದಲ್ಲಿನ ಹ್ಯಾಟ್ರಿಕ್‌-ವಿಕೆಟ್‌ಗಳ ದಾಖಲೆಗಳಿವು!

ರಾಹುಲ್‌, ಧೋನಿ ಮಿಂಚಿನ ಶತಕ

ನೂರರ ಗಡಿ ದಾಟುವ ಹೊತ್ತಿಗೆ ಅಗ್ರ ಕ್ರಮಾಖದ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಭಾರತ ತಂಡಕ್ಕೆ ಆಸರೆಯಾಗಿ ನಿಂತ ಕೆ.ಎಲ್‌ ರಾಹುಲ್‌ ಮತ್ತು ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಎಂ.ಎಸ್‌ ಧೋನಿ 5ನೇ ವಿಕೆಟ್‌ಗೆ 164 ರನ್‌ಗಳ ಅಮೋಘ ಜತೆಯಾಟವಾಡಿ ಆಸರೆಯಾದರು.

ಬಾಂಗ್ಲಾ ಬೌಲರ್‌ಗಳನ್ನು ಬೆಂಡೆತ್ತಿದ ರಾಹುಲ್‌, 99 ಎಸೆತಗಳಲ್ಲಿ 12 ಫೋರ್‌ ಮತ್ತು 4 ಸಿಕ್ಸರ್‌ಗಳನ್ನು ಒಳಗೊಂಡ 108 ರನ್‌ಗಳನ್ನು ಸಿಡಿಸಿ ಔಟಾದರೆ, ಟಿ20 ಮೂಡ್‌ನಲ್ಲಿದ್ದ ಧೋನಿ ಕೇವಲ 73 ಎಸೆತಗಳಲ್ಲಿ ಶತಕ ಬಾರಿಸಿದರು. ಇದರಲ್ಲಿ 8 ಫೋರ್‌ ಮತ್ತು 6 ಭರ್ಜರಿಯ ಸಿಕ್ಸರ್‌ಗಳು ಸೇರಿದ್ದವು. ಸಿಕ್ಸರ್‌ ಸಿಡಿಸುವ ಮೂಲಕವೇ ಧೋನಿ ಶತಕದ ಗಡಿ ದಾಟಿದ್ದು ವಿಶೇಷ.

ವಿಶ್ವಕಪ್‌: ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರನಿಗೆ ಪೆಟ್ಟು!ವಿಶ್ವಕಪ್‌: ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರನಿಗೆ ಪೆಟ್ಟು!

ಭಾರತ ತಂಡ: ರೋಹಿತ್‌ ಶರ್ಮಾ, ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ, ಕೆ.ಎಲ್‌ ರಾಹುಲ್‌, ವಿಜಯ್‌ ಶಂಕರ್‌, ಹಾರ್ದಿಕ್‌ ಪಾಂಡ್ಯ, ಎಂ.ಎಸ್‌ ಧೋನಿ, ದಿನೇಶ್‌ ಕಾರ್ತಿಕ್‌, ರವೀಂದ್ರ ಜಡೇಜಾ, ಭುವನೇಶ್ವರ್‌ ಕುಮಾರ್‌, ಕುಲ್ದೀಪ್‌ ಯಾದವ್‌, ಮೊಹಮ್ಮದ್‌ ಶಮಿ, ಜಸ್‌ಪ್ರೀತ್‌ ಬುಮ್ರಾ, ಯುಜ್ವೇಂದ್ರ ಚಹಲ್‌.

ವಿಶ್ವಕಪ್‌ನಲ್ಲಿ ಪಾಕ್‌ ತಂಡದ ಭವಿಷ್ಯ ನುಡಿದ ವಕಾರ್‌ ಯೂನಿಸ್‌!ವಿಶ್ವಕಪ್‌ನಲ್ಲಿ ಪಾಕ್‌ ತಂಡದ ಭವಿಷ್ಯ ನುಡಿದ ವಕಾರ್‌ ಯೂನಿಸ್‌!

ಬಾಂಗ್ಲಾದೇಶ ತಂಡ: ತಮೀಮ್‌ ಇಕ್ಬಾಲ್‌, ಸೌಮ್ಯ ಸರ್ಕಾರ್‌, ಲಿಟನ್‌ ದಾಸ್‌, ಶಾಕಿಬ್‌ ಅಲ್‌ ಹಸನ್‌, ಮೊಹಮ್ಮದ್‌ ಮಿಥುನ್‌, ಮುಷ್ಫಿಕರ್‌ ರಹೀಮ್‌, ಮಹ್ಮೂದುಲ್ಲಾ, ಮೊಸಾದೆಕ್‌ ಹೊಸೇನ್‌, ಸಬ್ಬೀರ್‌ ರೆಹ್ಮಾನ್‌, ಮೊಹಮ್ಮದ್‌ ಸೈಫುದ್ದೀನ್‌,, ಮೆಹ್ದಿ ಹಸನ್‌ ಮಿಜಾಝ್‌, ಮಶ್ರಫೆ ಮೊರ್ತಾಝ, ಮುಸ್ತಾಫಿಝುರ್‌ ರೆಹ್ಮಾನ್‌, ರುಬೆಲ್‌ ಹೊಸೇನ್‌, ಅಬು ಜಾಯೇದ್‌.

ಸಂಕ್ಷಿಪ್ತ ಸ್ಕೋರ್‌ (ಸ್ಕೋರ್‌ / ವೇಳಾ ಪಟ್ಟಿ)

ಭಾರತ: 50 ಓವರ್‌ಗಳಲ್ಲಿ 359/7 (ರಾಹುಲ್‌ 108, ಧೋನಿ 113; ರುಬೆಲ್‌ ಹುಸೇನ್‌ 62ಕ್ಕೆ 2, ಶಾಕಿಬ್‌ ಅಲ್‌ ಹಸನ್‌ 58ಕ್ಕೆ 2).

ಬಾಂಗ್ಲಾದೇಶ: 49.3 ಓವರ್‌ಗಳಲ್ಲಿ 264/10 (ಮುಷ್ಫಿಕರ್‌ ರಹೀಮ್‌ 90, ಲಿಟನ್‌ ದಾಸ್‌ 73; ಯುಜ್ವೇಂದ್ರ 55ಕ್ಕೆ 3, ಕುಲ್ದೀಪ್‌ 47ಕ್ಕೆ 3, ಬುಮ್ರಾ 25ಕ್ಕೆ 2).

Story first published: Wednesday, May 29, 2019, 0:12 [IST]
Other articles published on May 29, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X