ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌: ಪಾಕಿಸ್ತಾನಕ್ಕೆ ಮೌಕಾ ಕೊಡದ ಭಾರತಕ್ಕೆ ಸತತ 7ನೇ ಜಯ

World Cup 2019 Live: India vs Pakistan, Match-22

ಮ್ಯಾಂಚೆಸ್ಟರ್‌, ಜೂನ್‌ 16: ಬಹು ನಿರೀಕ್ಷಿತ ಇಂಡೊ-ಪಾಕ್‌ ವಿಶ್ವಕಪ್‌ ಕ್ರಿಕೆಟ್‌ ಕದನದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಟೀಮ್‌ ಇಂಡಿಯಾ ಡಕ್ವರ್ತ್‌ ಲೂಯಿಸ್‌ ನಿಯಮದನ್ವಯ 89 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ವಿಶ್ವಕಪ್‌ ಇತಿಹಾಸದಲ್ಲಿ ಪಾಕಿಸ್ತಾನ ವಿರುದ್ಧದ ತನ್ನ ಅಜೇಯ ಗೆಲುವಿನ ದಾಖಲೆಯನ್ನು 7-0ಗೆ ವಿಸ್ತರಿಸಿದೆ.

ವಿಶ್ವಕಪ್‌: ಭಾರತ vs ಪಾಕಿಸ್ತಾನ, ಮ್ಯಾಚ್-22 ಲೈವ್‌ ಸ್ಕೋರ್‌ ಕಾರ್ಡ್‌

1
43665

ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ 50 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 336 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿತು. ಹಿಟ್‌ ಮ್ಯಾನ್‌ ಖ್ಯಾತಿಯ ರೋಹಿತ್‌ ಶರ್ಮಾ (140 ರನ್‌) ಅಮೋಘ ಶತಕದ ಮೂಲಕ ತಂಡಕ್ಕೆ ಮೃಹತ್‌ ಮೊತ್ತ ತಂದುಕೊಟ್ಟರು.

ಬಳಿಕ ಗುರಿ ಬೆನ್ನತ್ತಿದ ಪಾಕಿಸ್ತಾನ ಒಮದು ಹಂತದಲ್ಲಿ 2 ವಿಕೆಟ್‌ ನಷ್ಟದಲ್ಲಿ 112 ರನ್‌ಗಳನ್ನು ಗಳಿಸಿ ಉತ್ತಮ ಹೋರಾಟ ನಡೆಸುತ್ತಿತ್ತು. ಆದರೆ, ಈ ಹಂತದಲ್ಲಿ ದಾಳಿಗಿಳಿದ ಚೈನಾಮನ್‌ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌, ಕ್ರೀಸ್‌ನಲ್ಲಿ ಭದ್ರವಾಗಿ ನೆಲೆನಿಂತಿದ್ದ ಬಾಬರ್‌ ಅಝಾಮ್‌ (48) ಮತ್ತು ಫಖರ್‌ ಝಮಾನ್‌ (62) ಅವರನ್ನು ಪೆವಿಲಿಯಗೆ ಅಟ್ಟಿ ಪಾಕ್‌ ಪಡೆಯ ಆತ್ಮವಿಶ್ವಾಸವನ್ನು ಅಡಗಿಸಿದರು.

ಪಾಕ್‌ ವಿರುದ್ಧ 1 ರನ್‌ಗಳಿಸಿದರೂ ಹೊಸ ದಾಖಲೆ ಬರೆದ ಧೋನಿ!ಪಾಕ್‌ ವಿರುದ್ಧ 1 ರನ್‌ಗಳಿಸಿದರೂ ಹೊಸ ದಾಖಲೆ ಬರೆದ ಧೋನಿ!

ಬಳಿಕ ದಾಳಿಗಿಳಿದ ಹಾದರ್ದಿಕ್‌ ಪಾಂಡ್ಯ 27ನೇ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಮೊಹಮ್ಮದ್‌ ಹಫೀಝ್‌ (9) ಮತ್ತು ಶೊಯೇಬ್‌ ಮಲಿಕ್‌ (0) ವಿಕೆಟ್ರ್ ಪಡೆದು ಪಾಕ್‌ ಪಡೆಯ ಇಬ್ಬರು ಅನುಭವಿ ಬ್ಯಾಟ್ಸ್‌ಮನ್‌ಗಳನ್ನು ಬಲಿ ಪಡೆದರು.

ಚೊಚ್ಚಲ ವಿಶ್ವಕಪ್‌ ಪಂದ್ಯವನ್ನಾಡುತ್ತಿರುವ ವಿಜಯ್‌ ಶಂಕರ್‌, ಭುವನೇಶ್ವರ್‌ ಕುಮಾರ್‌ ಗಾಯಗೊಂಡು ಹೊರನಡೆದ ಬಳಿಕ ಬೌಲಿಂಗ್‌ ದಾಳಿಯ ಜವಾಬ್ದಾರಿ ಹೊರಲು ಮುಂದಾಗಿ ಎಸೆದ ಮೊದಲ ಎಸೆತದಲ್ಲೇ (7) ಇಮಾಮ್‌ ಉಲ್‌ ಹಕ್‌ ಅವರನ್ನು ಎಲ್‌ಬಿಡಬ್ಲ್ಯ ಬಲೆಗೆ ಬೀಳಿಸಿ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಅಷ್ಟೇ ಅಲ್ಲದೆ ಕ್ರೀಸ್‌ನಲ್ಲಿ ಬೇರುಬಿಟ್ಟಿದ್ದ ಪಾಕ್‌ ನಾಯಕ ಅರ್ಫರಾಝ್‌ ಅಹ್ಮದ್‌ (12) ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿದರು.

ವಿಶ್ವಕಪ್‌: ಪಾಕ್‌ ವಿರುದ್ಧ ಔಟಾಗದೇ ಇದ್ದರೂ ವಿರಾಟ್‌ ಹೊರನಡೆದದ್ದೇಕೆ?ವಿಶ್ವಕಪ್‌: ಪಾಕ್‌ ವಿರುದ್ಧ ಔಟಾಗದೇ ಇದ್ದರೂ ವಿರಾಟ್‌ ಹೊರನಡೆದದ್ದೇಕೆ?

ಅಂತಿಮವಾಗಿ ಪಾಕ್‌ ತಂಡ 40 ಓವರ್‌ಗಳಲ್ಲಿ 6 ವಿಕೆಟ್‌ಗೆ 212 ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತವಾಯಿತು. ಡಿಎಲ್‌ ನಿಯಮದನ್ವಯ ಪಾಕಿಸ್ತಾನ ತಂಡಕ್ಕೆ 40 ಓವರ್‌ಗಳಲ್ಲಿ 302 ರನ್‌ಗಳನ್ನು ಗಳಿಸಬೇಕಿತ್ತು.

ಪಂದ್ಯ ರದ್ದಾದರೂ ಭಾರಕ್ಕೆ ಗೆಲುವು

ಇನ್ನು ಈ ಹಂತದಲ್ಲಿ ಪಂದ್ಯ ಮಳೆಯಿಂದಾಗಿ ರದ್ದಾದರೆ ಜಯ ಭಾರತದ ಪಾಲಾಗಲಿದೆ. ಡಕ್ವರ್ತ್‌ ಲೂಯಿಸ್‌ ನಿಯಮದನ್ವಯ ಪಾಕಿಸ್ತಾನ ತಂಡ ಭಾರತಕ್ಕಿಂತಲೂ 86 ರನ್‌ಗಳ ಹಿನ್ನಡೆಯಲ್ಲಿದೆ. ಆಟ ಸಾಧ್ಯವಾಗದೇ ಇದ್ದರೆ ಭಾರತಕ್ಕೆ ಡಕ್ವರ್ತ್‌ ಲೂಯಿಸ್‌ ನಿಯಮದನ್ವಯ ಭರ್ಜರಿ ಗೆಲುವು ಸಾಧ್ಯವಾಗಲಿದ್ದು, ಈ ಮೂಲಕ ವಿಶ್ವಕಪ್‌ ಇತಿಹಾಸದಲ್ಲಿ ಪಾಕಿಸ್ತಾನ ವಿರುದ್ಧದ ಅಜೇಯ ಓಡವನ್ನು ಮುಂದುವರಿಸಲಿದ್ದು ಗೆಲುವಿನ ಅಂತರವನ್ನು 7-0ಗೆ ವಿಸ್ತರಿಸಲಿದೆ.

ವಿಶ್ವಕಪ್‌: ಸಚಿನ್‌ ವಿಶ್ವ ದಾಖಲೆಯನ್ನು ಮುರಿದ ವಿರಾಟ್‌ ಕೊಹ್ಲಿ!ವಿಶ್ವಕಪ್‌: ಸಚಿನ್‌ ವಿಶ್ವ ದಾಖಲೆಯನ್ನು ಮುರಿದ ವಿರಾಟ್‌ ಕೊಹ್ಲಿ!

ಇದಕ್ಕೂ ಮುನ್ನ ಟೀಮ್‌ ಇಂಡಿಯಾ ಪರ ಬ್ಯಾಟಿಂಗ್‌ ಆರಂಭಿಸಿದ ರೋಹಿತ್‌ ಶರ್ಮಾ ಮತ್ತು ಕೆ.ಎಲ್‌ ರಾಹುಲ್‌ ಮೊದಲ ವಿಕೆಟ್‌ಗೆ 136 ರನ್‌ಗಳ ಜೊತೆಯಾಟ ನಡೆಸಿದರು. ಮಳೆ ಆರಂಭವಾಗಿ ಪಂದ್ಯ ಮೊದಲ ಬಾರಿ ಸ್ಥಗಿತಗೊಳ್ಳುವುದಕ್ಕೂ ಮುನ್ನ ಭಾರತ ತಂಡ 46.4 ಓವರ್‌ಗಳಲ್ಲಿ 4 ವಿಕೆಟ್‌ಗೆ 305 ರನ್‌ಗಳನ್ನು ದಾಖಲಿಸಿತ್ತು.ಕೆ.ಎಲ್‌ ರಾಹುಲ್‌ (57) ಮತ್ತು ವಿರಾಟ್‌ ಕೊಹ್ಲಿ (77) ಅರ್ಧಶತಕಗಳ ಕಾಣಿಕೆ ನೀಡಿದರು.

ಸಂಕ್ಷಿಪ್ತ ಸ್ಕೋರ್‌

ಭಾರತ: 50 ಓವರ್‌ಗಳಲ್ಲಿ 336/5 (ರೋಹಿತ್‌ ಶರ್ಮಾ 140, ಕೆ.ಎಲ್‌ ರಾಹುಲ್‌ 57, ವಿರಾಟ್‌ ಕೊಹ್ಲಿ 77; ಮೊಹಮ್ಮದ್‌ ಆಮಿರ್‌ 47ಕ್ಕೆ 3).

ಪಾಕಿಸ್ತಾನ: 40 ಓವರ್‌ಗಳಲ್ಲಿ 212/6 (ಫಖರ್‌ ಝಮಾನ್‌ 62, ಬಾಬರ್‌ ಅಝಾಮ್‌ 48, ಇಮಾದ್‌ ವಾಸಿಂ 46; ವಿಜಯ್‌ ಶಂಕರ್‌ 22ಕ್ಕೆ 2, ಕುಲ್ದೀಪ್‌ ಯಾದವ್‌ 32ಕ್ಕೆ 2, ಹಾದರ್ದಿಕ್‌ ಪಾಂಡ್ಯ 44ಕ್ಕೆ 2).

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಭಾರತ (ಪ್ಲೇಯಿಂಗ್‌ 11): ರೋಹಿತ್‌ ಶರ್ಮಾ, ಕೆ.ಎಲ್‌ ರಾಹುಲ್‌, ವಿರಾಟ್‌ ಕೊಹ್ಲಿ (ನಾಯಕ), ವಿಜಯ್‌ ಶಂಕರ್‌, ಎಂ.ಎಸ್‌ ಧೋನಿ (ವಿಕೆಟ್‌ಕೀಪರ್‌), ಕೇದಾರ್‌ ಜಾಧವ್‌, ಹಾರ್ದಿಕ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಕುಲ್ದೀಪ್‌ ಯಾದವ್‌, ಯುಜ್ವೇಂದ್ರ ಚಹಲ್‌, ಜಸ್‌ಪ್ರೀತ್‌ ಬುಮ್ರಾ.

ಪಾಕಿಸ್ತಾನ (ಪ್ಲೇಯಿಂಗ್‌ 11): ಫಖರ್‌ ಝಮಾನ್‌, ಇಮಾಮ್‌ ಉಲ್‌ ಹಕ್‌, ಬಾಬರ್‌ ಅಝಾಮ್‌, ಮೊಹಮ್ಮದ್‌ ಹಫೀಝ್‌, ಸರ್ಫರಾಝ್‌ ಅಹ್ಮದ್‌(ನಾಯು/ವಿಕೆಟ್‌ಕೀಪರ್‌), ಶೊಯೇಬ್‌ ಮಲಿಕ್‌, ಇಮಾದ್‌ ವಾಸಿಮ್‌, ಶದಾಬ್‌ ಖಾನ್‌, ವಹಾಬ್‌ ರಿಯಾಝ್‌, ಹಸನ್‌ ಅಲಿ, ಮೊಹಮ್ಮದ್‌ ಆಮಿರ್‌.

{headtohead_cricket_3_5}

Story first published: Monday, June 17, 2019, 0:13 [IST]
Other articles published on Jun 17, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X