ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌: ಕೊನೆಗೂ ಗೆದ್ದ ದಕ್ಷಿಣ ಆಫ್ರಿಕಾ, ಲಂಕಾಕ್ಕೆ 9 ವಿಕೆಟ್‌ ಸೋಲು

World Cup 2019 Live: South Africa vs Sri Lanka, Match-35

ಚೆಸ್ಟರ್‌ ಲೆ ಸ್ಟ್ರೀಟ್‌, ಜೂನ್‌ 28: ಸೆಮಿಫೈನಲ್ಸ್‌ ತಲುಪುವ ಲೆಕ್ಕಾಚಾರದಲ್ಲಿರುವ ಶ್ರೀಲಂಕಾ ತಂಡ ಶುಕ್ರವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು 9 ವಿಕೆಟ್‌ಗಳ ಹೀನಾಯ ಸೋಲುಂಡು ಟೂನರ್ನಿಯಲ್ಲಿ ತನ್ನ ಮುಂದಿನ ಹಾದಿಯನ್ನು ಮತ್ತಷ್ಟು ಕಠಿಣ ಮಾಡಿಕೊಂಡಿದೆ.

ವಿಶ್ವಕಪ್‌: ದಕ್ಷಿಣ ಆಫ್ರಿಕಾ vs ಶ್ರೀಲಂಕಾ ಪಂದ್ಯದ ಲೈವ್‌ ಸ್ಕೋರ್‌ ಕಾರ್ಡ್‌

1
43678

ಇಲ್ಲಿನ ರಿವರ್‌ಸೈಡ್‌ ಕ್ರೀಡಾಂಗಣದಲ್ಲಿ ಶುಕ್ರವಾರ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಶ್ರೀಲಂಕಾ 49.3 ಓವರ್‌ಗಳಲ್ಲಿ 203 ರನ್‌ಗಳಿಗೆ ಆಲ್‌ಔಟ್‌ ಆಯಿತು. ಪ್ರಮುಖ ಬ್ಯಾಟ್ಸ್‌ಮನ್‌ಗಳು ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲರಾದ ಪರಿಣಾಮ 200ರ ಗಟಿಯಲ್ಲಿ ಲಂಕಾ ಸರ್ವಪತನ ಕಂಡಿತು.

ಬಳಿಕ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ ಕೊನೆಗೂ ತನ್ನ ಸಾಮರ್ಥ್ಯಕ್ಕೆ ತಕ್ಕ ಆಟವಾಡಿ 37.2 ಓವರ್‌ಗಳಲ್ಲಿ ಕೇವಲ 1 ವಿಕೆಟ್‌ ಕಳೆದುಕೊಂಡು 206 ರನ್‌ ಗಳಿಸಿ ಭರ್ಜರಿ ಗೆಲುವು ದಾಖಲಿಸಿತು. ಆದರೆ, ರೈಲು ಹೊರಟ ಮೇಲೆ ಟಿಕೆಟ್‌ ಕೊಂಡ ಸ್ಥಿತಿ ದಕ್ಷಿಣ ಆಫ್ರಿಕಾ ತಂಡದ್ದಾಗಿದ್ದು, ಈಗಾಗಲೇ 8 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಸೋತು ಸ್ಪರ್ಧೆಯಿಂದ ಹೊರಬಿದ್ದು ಆಗಿದೆ. ಆದರೂ ಟೂರ್ನಿಯಲ್ಲಿ ಎರಡನೇ ಜಯ ದಾಖಲಿಸಿದ ನಿಟ್ಟುಸಿರು ಬಿಟ್ಟಿದೆ.

ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಪರ ಭರ್ಜರಿ ಬೌಲಿಂಗ್‌ ದಾಳಿ ಸಂಘಟಿಸಿದ ಯುವ ಪ್ರತಿಭೆ ಟ್ವೇನ್‌ ಪ್ರೆಟೊರಿಯಸ್‌ 25ಕ್ಕೆ 3 ವಿಕೆಟ್‌ ಪಡೆಯುವ ಮೂಲಕ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಇನ್ನು ಬ್ಯಾಟಿಂಗ್‌ ವಿಭಾಗದಲ್ಲಿ ಅನುಭವಿಗಳಾದ ಹಶೀಮ್‌ ಆಮ್ಲಾ (105 ಎಸೆತಗಳಲ್ಲಿ 80 ರನ್‌) ಮತ್ತು ನಾಯಕ ಫಾಫ್‌ ಡು'ಪ್ಲೆಸಿಸ್ (103 ಎಸೆತಗಳಲ್ಲಿ 96 ರನ್‌) ಅಜೇಯ ಅರ್ಧಶತಕಗಳನ್ನು ದಾಖಲಿಸುವ ಮೂಲಕ ತಂಡವನ್ನು ಸುಲಭವಾಗಿ ಜಯದ ದಡ ಮುಟ್ಟಿಸಿದರು. ಈ ಜೋಡಿ 2ನೇ ವಿಕೆಟ್‌ಗೆ 195 ಎಸೆತಗಳಲ್ಲಿ ಮುರಿಯದ 175 ರನ್‌ಗಳ ಜೊತೆಯಾಟವಾಡಿ ಕಂಗೊಳಿಸಿತು.

ಇದಕ್ಕೂ ಮುನ್ನ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಆಘಾತ ಅನುಭವಿಸಿತು. ಲಂಕಾ ಪಡೆಯ ನಾಯಕ ದಿಮುತ್‌ ಕರುಣಾರತ್ನೆ ಅವರನ್ನು ಎಸೆದ ಮೊದಲ ಎಸೆತದಲ್ಲೇ ಔಟ್‌ ಮಾಡುವಲ್ಲಿ ವೇಗಿ ಕಗಿಸೊ ರಬಾಡ ಯಶಸ್ವಿಯಾದರು. ಅದ್ಭುತ ಔಟ್‌ಸ್ವಿಂಗರ್‌ ಎಸೆತವು ದಿಮುತ್‌ ಅವರ ಬ್ಯಾಟ್‌ನ ಅಂಚಿಗೆ ತಾಗಿ ಸ್ಲಿಪ್‌ನಲ್ಲಿದ್ದ ಹರಿಣ ಪಡೆಯ ನಾಯಕ ಫಾಫ್‌ ಡು'ಪ್ಲೆಸಿಸ್‌ ಅವರ ಕೈ ಸೇರಿತ್ತು.

ಸಂಕ್ಷಿಪ್ತ ಸ್ಕೋರ್‌

ಶ್ರೀಲಂಕಾ: 49.3 ಓವರ್‌ಗಳಲ್ಲಿ 203/10 (ಕುಶಲ್‌ ಪೆರೆರಾ 30, ಅವಿಷ್ಕ ಫನರ್ನಾಂಡೊ 30, ಕುಶಲ್‌ ಮೆಂಡಿಸ್‌ 23, ಧನಂಜಯ ಡಿ'ಸಿಲ್ವಾ 24, ತಿಸಾರ ಪೆರೆರಾ 21; ಡ್ವೇನ್‌ ಪ್ರೆಟೊರಿಯಸ್‌ 25ಕ್ಕೆ 3, ಕ್ರಿಸ್‌ ಮಾರಿಸ್‌ 46ಕ್ಕೆ 3, ಕಗಿಸೊ ರಬಾಡ 36ಕ್ಕೆ 2).

ದಕ್ಷಿಣ ಆಫ್ರಿಕಾ: 37.2 ಓವರ್‌ಗಳಲ್ಲಿ 206/1 (ಹಶೀಮ್‌ ಆಮ್ಲಾ 80*, ಫಾಫ್‌ ಡು'ಪ್ಲೆಸಿಸ್‌ 96*; ಲಸಿತ್‌ ಮಾಲಿಂಗ 47ಕ್ಕೆ 1).

ತಂಡಗಳ ವಿವರ

ಶ್ರೀಲಂಕಾ (ಪ್ಲೇಯಿಂಗ್‌ 11): ದಿಮುತ್‌ ಕರುಣಾರತ್ನೆ (ನಾಯಕ), ಕುಶಲ್‌ ಪೆರೆರಾ (ವಿಕೆಟ್‌ಕೀಪರ್‌), ಅವಿಷ್ಕಾ ಫರ್ನಾಂಡೊ, ಕುಶಲ್‌ ಮೆಂಡಿಸ್‌, ಏಂಜಲೊ ಮ್ಯಾಥ್ಯೂಸ್‌, ಧನಂಜಯ ಡಿ'ಸಿಲ್ವಾ, ತಿಸಾರ ಪೆರೆರಾ, ಜೀವನ್‌ ಮೆಂಡಿಸ್‌, ಇಸುರು ಉದನ, ಲಸಿತ್‌ ಮಾಲಿಂಗ, ಸುರಂಗ ಲಕ್ಮಲ್‌.

ದಕ್ಷಿಣ ಆಫ್ರಿಕಾ (ಪ್ಲೇಯಿಂಗ್‌ 11): ಹಶೀಮ್‌ ಆಮ್ಲಾ, ಕ್ವಿಂಟನ್‌ ಡಿ'ಕಾಕ್‌ (ವಿಕೆಟ್‌ಕೀಪರ್‌), ಫಾಫ್‌ ಡು'ಪ್ಲೆಸಿಸ್‌ (ನಾಯಕ), ಏಡನ್‌ ಮಾರ್ಕ್ರಮ್‌, ರಾಸಿ ವ್ಯಾನ್‌ ಡೆರ್‌ ಡುಸೆನ್‌, ಜೀನ್‌ ಪಾಲ್‌ ಡುಮಿನಿ, ಆಂಡಿಲ್‌ ಫೆಹ್ಲುಕ್ವಾಯೊ, ಟ್ವೇನ್‌ ಪ್ರೆಟೊರಿಯಸ್‌, ಕ್ರಿಸ್‌ ಮಾರಿಸ್‌, ಕಗಿಸೊ ರಬಾಡ, ಇಮ್ರಾನ್‌ ತಾಹಿರ್‌.

{headtohead_cricket_7_6}

Story first published: Friday, June 28, 2019, 22:38 [IST]
Other articles published on Jun 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X