ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌: ವೆಸ್ಟ್‌ ಇಂಡೀಸ್‌ vs ದ. ಆಫ್ರಿಕಾ ಪಂದ್ಯ ಮಳೆಗೆ ಆಹುತಿ

World Cup 2019 Live: South Africa vs West Indies, Match-15

ಸೌತಂಪ್ಟನ್‌, ಜೂನ್‌ 10: ಸೋಲು, ಗೆಲುವಿನ ರುಚಿ ನೋಡಿರುವ ವೆಸ್ಟ್‌ ಇಂಡೀಸ್‌ ತಂಡ ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ಸತತ ಸೋಲಿನಿಂದ ಕಂಗಾಲಾಗಿದ್ದ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಗೆಲುವಿನ ಲಯ ಕಂಡುಕೊಳ್ಳುವ ಲೆಕ್ಕಾಚಾರದಲ್ಲಿತ್ತು. ಆದರೆ, ವರುಣನ ಅವಕೃಪೆಯಿಂದಾಗಿ ಪಂದ್ಯ ರದ್ದಾದ ಕಾರಣ ವೆಸ್ಟ್‌ ಇಂಡೀಸ್‌ ತಂಡಕ್ಕೆ ಅಂಕ ಹಂಚಿಕೊಳ್ಳುವುದಕ್ಕಷ್ಟೇ ತೃಪ್ತಿ ಪಡಬೇಕಾಯಿತು.

ವಿಶ್ವಕಪ್‌: ವೆಸ್ಟ್‌ ಇಂಡೀಸ್‌ vs ದಕ್ಷಿಣ ಆಫ್ರಿಕಾ ಪಂದ್ಯದ ಲೈವ್ ಸ್ಕೋರ್‌ ಕಾರ್ಡ್‌

1
43658

ಇಲ್ಲಿನ ರೋಸ್‌ ಬೌಲ್‌ ಕ್ರೀಡಾಂಗಣದಲ್ಲಿ ಸೋಮವಾರ ಕಣಕ್ಕಿಳಿದ ವೆಸ್ಟ್‌ ಇಂಡೀಸ್‌ ತಂಡಕ್ಕೆ ಸ್ಟಾರ್‌ ಆಲ್‌ರೌಂಡರ್‌ ಆಂಡ್ರೆ ರಸೆಲ್‌ ಅವರ ಸೇವೆ ಇಲ್ಲದಂತಾಗಿತ್ತು. ಗಾಯದ ಸಮಸ್ಯೆ ಕಾರಣ ರಸಲ್‌ ಹರಿಣ ಪಡೆ ಎದುರು ಅಖಾಡಕ್ಕಿಳಿಯಲು ವಿಫಲರಾಗಿದ್ದಾರೆ.

ಶಹಝಾದ್‌ ಹೇಳುತ್ತಿರುವುದು ಸುಳ್ಳು: ಆಫ್ಘನ್‌ ಕ್ರಿಕೆಟ್‌ ಮಂಡಳಿಶಹಝಾದ್‌ ಹೇಳುತ್ತಿರುವುದು ಸುಳ್ಳು: ಆಫ್ಘನ್‌ ಕ್ರಿಕೆಟ್‌ ಮಂಡಳಿ

ಆದರೂ, ಟಾಸ್‌ ಗೆದ್ದು ಪೀಲ್ಡಿಂಗ್‌ ಆಯ್ಕೆ ಮಾಡಿಕೊಂಡು ಮಳೆಯಿಂದಾಗಿ ಪಂದ್ಯ ಸ್ಥಗಿತಗೊಳ್ಳುವುದಕ್ಕೂ ಮುನ್ನ ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟ್ಸ್‌ಮನ್‌ ಹಶೀಮ್‌ ಆಮ್ಲಾ (5) ಮತ್ತು ಏಡನ್‌ ಮಾರ್ಕ್ರಮ್‌ (5) ಅವರನ್ನು ಪೆವಿಲಿಯನ್‌ಗೆ ಅಟ್ಟುವಲ್ಲಿ ವಿಂಡೀಸ್‌ ಯಶಸ್ವಿಯಾಗಿತ್ತು. ಶೆಲ್ಡನ್‌ ಕಾಟ್ರೆಲ್‌ 2 ವಿಕೆಟ್‌ ಉರುಳಿಸಿ ಹರಿಣ ಪಡೆಗೆ ಆರಂಭಿಕ ಆಘಾತ ನೀಡಿದರು.

ವೆಸ್ಟ್‌ ಇಂಡೀಸ್‌ (ಪ್ಲೇಯಿಂಗ್‌ 11): ಕ್ರಿಸ್‌ ಗೇಲ್‌, ಡರ್ರೆನ್‌ ಬ್ರಾವೋ, ಶೇಯ್‌ ಹೋಪ್‌ (ವಿಕೆಟ್‌ಕೀಪರ್‌), ನಿಕೋಲಸ್‌ ಪೂರನ್‌, ಶಿಮ್ರಾನ್‌ ಹೆಟ್ಮಾಯೆರ್‌, ಜೇಸನ್‌ ಹೋಲ್ಡರ್‌ (ನಾಯಕ), ಕಾರ್ಲೋಸ್‌ ಬ್ರಾತ್‌ವೇಟ್‌, ಆಷ್ಲೇ ನರ್ಸ್‌, ಶೆಲ್ಡನ್‌ ಕಾಟ್ರೆಲ್‌, ಒಶೇನ್‌ ಥಾಮಸ್‌, ಕೆಮಾರ್‌ ರೋಚ್‌.

ದಕ್ಷಿಣ ಆಫ್ರಿಕಾ (ಪ್ಲೇಯಿಂಗ್‌ 11): ಹಶೀಮ್‌ ಆಮ್ಲಾ, ಕ್ವಿಂಟನ್‌ ಡಿ'ಕಾಕ್‌, ಫಾಫ್‌ ಡು'ಪ್ಲೆಸಿಸ್‌ (ನಾಯಕ), ಏಡನ್‌ ಮಾರ್ಕ್ರಮ್‌, ರಾಸಿ ವ್ಯಾನ್‌ ಡೆರ್‌ ಡುಸೆನ್‌, ಡೇವಿಡ್‌ ಮಿಲ್ಲರ್‌, ಆಂಡಿಲ್‌ ಫೆಹ್ಲುಕ್ವಾಯೊ, ಕ್ರಿಸ್‌ ಮಾರಿಸ್‌, ಕಗಿಸೊ ರಬಾಡ, ಇಮ್ರಾನ್‌ ತಾಹಿರ್‌, ಬ್ಯೂರಾನ್‌ ಹೆಂಡ್ರಿಕ್ಸ್‌.

{headtohead_cricket_8_6}

Story first published: Monday, June 10, 2019, 22:35 [IST]
Other articles published on Jun 10, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X