ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌: ಪೂರನ್‌ ಶತಕ ವ್ಯರ್ಥ, ಶ್ರೀಲಂಕಾಕ್ಕೆ ರೋಚಕ ಗೆಲುವು

World Cup 2019 Live: West Indies vs Sri Lanka, Match-39

ಚೆಸ್ಟರ್‌ ಲೇ ಸ್ಟ್ರೀಟ್‌, ಜುಲೈ 01: ಸ್ಥಿರ ಪ್ರದರ್ಶನ ಕಾಯ್ದುಕೊಳ್ಳುವಲ್ಲಿ ವಿಫಲಗೊಂಡ ಶ್ರೀಲಂಕಾ ತಂಡ ಪ್ರಸಕ್ತ ವಿಶ್ವಕಪ್‌ನಲ್ಲಿ ತನ್ನ ಉಳಿದ ಪಂದ್ಯಗಳಲ್ಲಿ ಪ್ರತಿಷ್ಠೆಗಷ್ಟೇ ಹೋರಾಟ ನಡೆಸುವಂತಾಗಿದೆ. ಆದರೂ, ಉತ್ಸಾಹ ಕಳೆದುಕೊಳ್ಳದ ಲಂಕಾ ಪಡೆ ಸೋಮವಾರ ನಡೆದ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ 23 ರನ್‌ ಜಯ ದಾಖಲಿಸಿದೆ.

ವಿಶ್ವಕಪ್‌: ವೆಸ್ಟ್‌ ಇಂಡೀಸ್‌-ಶ್ರೀಲಂಕಾ ಪಂದ್ಯದ ಲೈವ್‌ ಸ್ಕೋರ್‌ ಕಾರ್ಡ್‌

ಇಲ್ಲಿನ ರಿವರ್‌ಸೈಡ್‌ ಕ್ರೀಡಾಂಗಣದಲ್ಲಿ ಸೋಮವಾರ ಮೊದಲು ಬ್ಯಾಟ್‌ ಮಾಡುವಂತಾದ ಲಂಕಾ ಪಡೆ ಅವಿಷ್ಕ ಫರ್ನಾಂಡೊ (104) ಅವರು ದಾಖಲಿಸಿದ ಆಕರ್ಷಕ ಶತಕದ ಬಲದಿಂದ 50 ಓವರ್‌ಗಳಲ್ಲಿ 338/6 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿತು.

ಬಳಿಕ ಗುರಿ ಬೆನ್ನತ್ತಿದ ವೆಸ್ಟ್‌ ಇಂಡೀಸ್‌ ಆರಂಭಿಕ ಆಘಾತ ಅನುಭವಿಸಿದರೂ ಬಳಿಕ ನಿಕೋಲಸ್‌ ಪೂರನ್‌ ಅವರ (118 ರನ್‌) ಮನಮೋಹಕ ಶತಕದ ನೆರವಿನಿಂದ ಚೇತರಿಸಿತಾದರೂ ಅಂತಿಮವಾಗಿ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 315 ರನ್‌ಗಳನ್ನು ದಾಖಲಿಸಿ ಸೋಲಿಗೆ ಶರಣಾಯಿತು. ಲಂಕಾ ಪರ ಮತ್ತೊಮ್ಮೆ ವೇಗಿ ಲಸಿತ್‌ ಮಾಲಿಂಗ 55ಕ್ಕೆ 3 ವಿಕೆಟ್‌ ಪಡೆದು ಯಶಸ್ವಿ ಬೌಲರ್‌ ಎನಿಸಿದರು.

ಸಂಕ್ಷಿಪ್ತ ಸ್ಕೋರ್‌

ಶ್ರೀಲಂಕಾ: 50 ಓವರ್‌ಗಳಲ್ಲಿ 338/6 (ದಿಮುತ್‌ ಕರುಣಾರತ್ನೆ 32, ಕುಶಲ್‌ ಪೆರೆರಾ 64, ಅವಿಷ್ಕ ಫನರ್ನಾಂಡೊ 104, ಲಾಹಿರು ತಿರಿಮನ್ನೆ 45*; ಜೇಸನ್‌ ಹೋಲ್ಡರ್‌ 59ಕ್ಕೆ 2).

ವೆಸ್ಟ್‌ ಇಂಡೀಸ್‌: 50 ಓವರ್‌ಗಳಲ್ಲಿ 315/9 (ಕ್ರಿಸ್‌ ಗೇಲ್‌ 35, ನಿಕೋಲಸ್‌ ಪೂರನ್‌ 118, ಫಾಬಿಯಾನ್‌ ಆಲೆನ್‌ 51; ಲಸಿತ್‌ ಮಾಲಿಂಗ 55ಕ್ಕೆ 3).

ತಂಡಗಳ ವಿವರ

ವೆಸ್ಟ್‌ ಇಂಡೀಸ್‌ (ಪ್ಲೇಯಿಂಗ್‌ 11): ಕ್ರಿಸ್‌ ಗೇಲ್‌, ಸುನಿಲ್‌ ಅಂಬ್ರಿಸ್‌, ಶೇಯ್‌ ಹೋಪ್‌, ನಿಕೋಲಸ್‌ ಪೂರನ್‌, ಶಿಮ್ರಾನ್‌ ಹೆಟ್ಮಾಯೆರ್‌, ಜೇಸನ್‌ ಹೋಲ್ಡರ್‌(ನಾಯಕ), ಕಾಲೋಸ್‌ ಬ್ರಾತ್‌ವೇಟ್‌, ಫಾಬಿಯಾನ್‌ ಆಲೆನ್‌, ಶನಾನ್‌ ಗೇಬ್ರಿಯಲ್‌, ಶೆಲ್ಡನ್‌ ಕಾಟ್ರೆಲ್‌, ಒಶೇನ್‌ ಥಾಮಸ್‌.

ಶ್ರೀಲಂಕಾ (ಪ್ಲೇಯಿಂಗ್‌ 11): ದಿಮುತ್‌ ಕರುಣಾರತ್ನೆ (ನಾಯಕ), ಕುಶಲ್‌ ಪೆರೆರಾ, ಅವಿಷ್ಕ ಫರ್ನಾಂಡೊ, ಕುಶಲ್‌ ಮೆಂಡಿಸ್‌, ಏಂಜಲೊ ಮ್ಯಾಥ್ಯೂಸ್‌, ಲಾಹಿರು ತಿರಿಮನ್ನೆ, ಧನಂಜಯ ಡಿ'ಸಿಲ್ವಾ, ಇಸುರು ಉದನ, ಜೆಫ್ರಿ ವಾಂಡರ್ಸೆ, ಕಸುನ್‌ ರಜಿತ, ಲಸಿತ್‌ ಮಾಲಿಂಗ.

{headtohead_cricket_8_7}

Story first published: Monday, July 1, 2019, 23:47 [IST]
Other articles published on Jul 1, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X