ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ಜಡೇಜಾ ಬ್ಯಾಟಿಂಗ್‌ಗೆ ಪ್ರತಿಕ್ರಿಯಿಸಿದ ಮಂಜ್ರೇಕರ್-ವೈರಲ್ ವಿಡಿಯೋ

ICC World Cup 2019 : ಮಾಡಿದ ತಪ್ಪಿಗೆ ಜಡೇಜಾಗೆ ಕ್ಷಮೆ ಕೇಳಿದ ಸಂಜಯ್ ಮಂಜ್ರೇಕರ್..! Ravindra Jadeja
World cup 2019: Manjrekar reaction after Jadejas performance in semi Final

ಮ್ಯಾಂಚೆಸ್ಟರ್, ಜುಲೈ 11: ಟೀಮ್ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ಅವರನ್ನು 'ಬಿಟ್ಸ್ ಆ್ಯಂಡ್ ಪೀಸಸ್ ಪ್ಲೇಯರ್' ಎಂದು ವ್ಯಂಗ್ಯವಾಡಿದ್ದ ಮಾಜಿ ಕ್ರಿಕೆಟಿಗ, ಈಗಿನ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್, ವಿಶ್ವಕಪ್ 2019ರ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಜಡೇಜಾ ಪ್ರದರ್ಶನಕ್ಕೆ ತಲೆದೂಗಿದ್ದಾರೆ. ತನ್ನ ಹೇಳಿಕೆಗೆ ಕ್ಷಮೆಯೂ ಕೇಳಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಮಂಗಳವಾರ (ಜುಲೈ 9) ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ನಲ್ಲಿ ನಡೆದಿದ್ದ ಮೊದಲ ಸೆಮಿಫೈನಲ್ ಪಂದ್ಯ ಬುಧವಾರದ (ಜುಲೈ 10) ವರೆಗೂ ಮುಂದುವರೆದಿತ್ತು. ನ್ಯೂಜಿಲೆಂಡ್ ನೀಡಿದ್ದ 239 ರನ್ ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಹೀನಾಯವಾಗಿ ಸೋಲುವ ಮುನ್ಯೂಚನೆ ನೀಡಿತ್ತು. ಆದರೆ ಜಡೇಜಾ-ಧೋನಿ ಹೋರಾಟ ತಂಡಕ್ಕೆ ಹುರುಪು ತುಂಬಿತ್ತು.

ಮೈಕಲ್ ವಾನ್‌ರನ್ನು ಟ್ವಿಟರ್‌ನಿಂದ ಬ್ಲಾಕ್ ಮಾಡಿದ ಸಂಜಯ್ ಮಂಜ್ರೇಕರ್!ಮೈಕಲ್ ವಾನ್‌ರನ್ನು ಟ್ವಿಟರ್‌ನಿಂದ ಬ್ಲಾಕ್ ಮಾಡಿದ ಸಂಜಯ್ ಮಂಜ್ರೇಕರ್!

ಸೆಮಿಫೈನಲ್‌ನಲ್ಲಿ ಸೋತು ಭಾರತ ಫೈನಲ್‌ ಅವಕಾಶ ಕಳೆದುಕೊಂಡಿದ್ದು ನಿಜ. ಆದರೆ ತಂಡದ ಗೆಲುವಿಗಾಗಿ ಹೋರಾಡಿದ ಜಡೇಜಾ ಅವರನ್ನು ಮಂಜ್ರೇಕರ್ ಶ್ಲಾಘಿಸಿದ್ದಾರೆ.

ರೋಚಕ ಹಂತಕ್ಕೆ ಕೊಂಡೊಯ್ದಿದ್ದರು

ರೋಚಕ ಹಂತಕ್ಕೆ ಕೊಂಡೊಯ್ದಿದ್ದರು

ಟಾಪ್ ಆರ್ಡರ್ ಬ್ಯಾಟ್ಸ್ಮನ್‌ಗಳಾದ ರೋಹಿತ್ ಶರ್ಮಾ 1, ಕೆಎಲ್ ರಾಹುಲ್ 1, ವಿರಾಟ್ ಕೊಹ್ಲಿ 1, ದಿನೇಶ್ ಕಾರ್ತಿಕ್ 6 ರನ್‌ಗೆ ವಿಕೆಟ್ ಒಪ್ಪಿಸಿದಾಗಲೇ ಪಂದ್ಯದ ಫಲಿತಾಂಶ ನಿರ್ಧಾರವಾದಂತಿತ್ತು. ಆದರೆ 7 ಮತ್ತು 8ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಎಂಎಸ್ ಧೋನಿ ಮತ್ತು ರವೀಂದ್ರ ಜಡೇಜಾ ಪಂದ್ಯವನ್ನು ರೋಚಕ ಹಂತಕ್ಕೆ ಕೊಂಡೊಯ್ದಿದ್ದರು. ಟೀಮ್ ಇಂಡಿಯಾಕ್ಕೆ ಗೆಲುವಿನಾಸೆ ಮೂಡಿಸಿದ್ದರು.

ಗೆಲುವಿನಂಚಿನಲ್ಲಿ ಸೋಲು

ಗೆಲುವಿನಂಚಿನಲ್ಲಿ ಸೋಲು

ಸೋಲಿನಂಚಿನಲ್ಲಿದ್ದ ತಂಡವನ್ನು ಗೆಲ್ಲಿಸುವ ಹೊಣೆಗಾರಿಕೆ ಹೊತ್ತಂತೆ ಕ್ರೀಸಿಗಂಟಿನಿಂತ ಧೋನಿ, ಜಡೇಜಾ ಕ್ರಮವಾಗಿ 50, 77 ರನ್ ಸೇರಿಸಿದ್ದರು. ಅಂತಿಮ ಓವರ್‌ಗಳಲ್ಲಿ ದೊಡ್ಡ ಹೊಡೆತಗಳ ಅನಿವಾರ್ಯತೆ ಇದ್ದಿದ್ದರಿಂದ ಬೌಂಡರಿಗಾಗಿ ಬ್ಯಾಟ್ ಬೀಸಿದ ಜಡೇಜಾ 47.5ನೇ ಓವರ್‌ನಲ್ಲಿ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್‌ಗೆ ಕ್ಯಾಚಿತ್ತರು. ಅದಾಗಿ 48.3ನೇ ಓವರ್‌ನಲ್ಲಿ ಧೋನಿ ರನ್ ಔಟ್ ಆದರು. ಭಾರತದ ಫಲಿತಾಂಶ ಮತ್ತೆ ಸೋಲಿನತ್ತ ವಾಲಿತು.

ಆಲ್ ರೌಂಡರ್ ಪ್ರದರ್ಶನ

ಆಲ್ ರೌಂಡರ್ ಪ್ರದರ್ಶನ

ಪಂದ್ಯದಲ್ಲಿ ಜಡೇಜಾ ನಿಜಕ್ಕೂ ಅದ್ಭುತ ಆಲ್ ರೌಂಡರ್ ಪ್ರದರ್ಶನ ನೀಡಿದ್ದರು. 34 ರನ್ನಿಗೆ 1 ವಿಕೆಟ್, 2 ಕ್ಯಾಚ್ ಮತ್ತು 1 ಅದ್ಭುತ ರನ್ ಔಟ್ ಮೂಲಕ ಫೀಲ್ಡಿಂಗ್‌ನಲ್ಲೂ ಭಾರತಕ್ಕೆ ನೆರವಾಗಿದ್ದರು. ಪಂದ್ಯದಲ್ಲಿ ಅದ್ಭುತ ಪ್ರದರ್ಶನದ ಮೂಲಕವೇ ಜಡೇಜಾ ಅವರು ಮಂಜ್ರೇಕರ್ ಹೇಳಿಕೆಗೆ ತಿರುಗೇಟು ನೀಡಿದಂತಿತ್ತು. ಪಂದ್ಯದ ಬಳಿಕ ಇದನ್ನೇ ಸ್ಮರಿಸಿಕೊಂಡ ಮಂಜ್ರೇಕರ್, ಜಡೇಜಾ ಅವರನ್ನು ಕೊಂಡಾಡಿದ್ದಾರೆ.

ನನ್ನನ್ನು ಎಲ್ಲರ ಮುಂದೆ ತಿವಿದ

ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದ ಬಳಿಕ ಪ್ರತಿಕ್ರಿಯಿಸಿದ ಮಂಜ್ರೇಕರ್, 'ರವೀಂದ್ರ ಜಡೇಜಾ ತನ್ನ ಅದ್ಭುತ ಪ್ರದರ್ಶನದ ಮೂಲಕ ನನ್ನನ್ನು ಎಲ್ಲರ ಮುಂದೆ ತಿವಿದ. ಹೇಳಿಕೆ ನೀಡಿದ್ದಕ್ಕಾಗಿ ನಾನು ಕ್ಷಮೆ ಯಾಚಿಸುತ್ತೇನೆ' ಎಂದು ಐಸಿಸಿ ವಿಶ್ವಕಪ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಸೆಮಿಫೈನಲ್‌ಗೂ ಹಿಂದಿನ ಪಂದ್ಯದಲ್ಲಿ ರವೀಂದ್ರ ಜಡೇಜಾ ಅವರನ್ನು ತಂಡದಲ್ಲಿ ಸೇರ್ಪಡೆಗೊಳಿಸಿದ್ದು ಮಂಜ್ರೇಕರ್‌ಗೆ ಸರಿ ಅನ್ನಿಸಲಿಲ್ಲ. ಹೀಗಾಗಿ ಸಂಜಯ್ ವ್ಯಂಗ್ಯ ಹೇಳಿಕೆ ನೀಡಿದ್ದರು.

Story first published: Thursday, July 11, 2019, 12:44 [IST]
Other articles published on Jul 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X