ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ಟಾಪ್ 10 ಅತ್ಯಧಿಕ ರನ್ ಪಟ್ಟಿಯಲ್ಲಿ ಒಬ್ಬನೇ ಭಾರತೀಯನಿಗೆ ಸ್ಥಾನ

World Cup 2019: Most Individual Scorers in present table

ಲಂಡನ್, ಜೂನ್ 21: ಐಸಿಸಿ ವಿಶ್ವಕಪ್ 2019ರಲ್ಲಿ ಭಾರತ ಅಜೇಯ ತಂಡವಾಗಿ ಉಳಿದಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರು ಗೆಲುವು ಮತ್ತೊಂದು ಪಂದ್ಯವನ್ನು ರದ್ದಾಗಿಸಿಕೊಂಡಿರುವ ವಿರಾಟ್ ಕೊಹ್ಲಿ ಬಳಗ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಆದರೆ ವೈಯಕ್ತಿಕ ಒಟ್ಟು ರನ್ ಪಟ್ಟಿ ಗಮನಿಸಿದರೆ ಅಲ್ಲಿ ಒಬ್ಬನೇ ಭಾರತೀಯನಿಗೆ ಸ್ಥಾನ ಲಭಿಸಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಪಾಯಿಂಟ್ ಟೇಬಲ್‌ನಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್, ಭಾರತ, ಬಾಂಗ್ಲಾದೇಶ ತಂಡಗಳು ಕ್ರಮವಾಗಿ ಮೊದಲ ಐದು ಸ್ಥಾನಗಳಲ್ಲಿವೆ. ಇನ್ನು ಅಧಿಕ ಒಟ್ಟು ರನ್ ಸಾಧಕರಲ್ಲಿ ರೋಹಿತ್ ಶರ್ಮಾ ಒಬ್ಬರೇ ಟಾಪ್ ಐದರಲ್ಲಿ ಸ್ಥಾನ ಪಡೆದಿದ್ದಾರೆ. 5ನೇ ಸ್ಥಾನದಲ್ಲಿ ಶರ್ಮಾ ಇದ್ದಾರೆ. ಡೇವಿಡ್ ವಾರ್ನರ್ ಈ ಪಟ್ಟಿಯಲ್ಲಿ ಮೊದಲ ಸ್ಥಾನಿಗ.

ಟೀಮ್ ಇಂಡಿಯಾದ ಒಳ್ಳೆಯ, ಕೆಟ್ಟ ಫೀಲ್ಡರ್‌ಗಳ ಹೆಸರಿಸಿದ ಫೀಲ್ಡಿಂಗ್ ಕೋಚ್!ಟೀಮ್ ಇಂಡಿಯಾದ ಒಳ್ಳೆಯ, ಕೆಟ್ಟ ಫೀಲ್ಡರ್‌ಗಳ ಹೆಸರಿಸಿದ ಫೀಲ್ಡಿಂಗ್ ಕೋಚ್!

ಒಂದು ವರ್ಷದ ನಿಷೇಧ ಶಿಕ್ಷೆ ಮುಗಿಸಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿರುವ ಆಸೀಸ್ ಆರಂಭಿಕ ಬ್ಯಾಟ್ಸ್ಮನ್ ವಾರ್ನರ್ ಒಟ್ಟು 6 ಇನ್ನಿಂಗ್ಸ್ 447 ರನ್‌ಗಳೊಂದಿಗೆ ಮೊದಲ ಸ್ಥಾನ ಪಡೆದುಕೊಂಡಿದದ್ದಾರೆ. ಇದರಲ್ಲಿ ಒಟ್ಟು 40 ಬೌಂಡರಿ, 6 ಸಿಕ್ಸರ್‌ಗಳು ಸೇರಿವೆ.

ಇನ್ನುಳಿದ ಸ್ಥಾನಗಳಲ್ಲಿ ಬಾಂಗ್ಲಾ ಬ್ಯಾಟ್ಸ್ಮನ್ ಶಕೀಬ್ ಅಲ್ ಹಸನ್ (5 ಇನ್ನಿಂಗ್ಸ್‌ಗಳಲ್ಲಿ 425 ರನ್), ಆಸ್ಟ್ರೇಲಿಯಾ ನಾಯಕ ಆ್ಯರನ್ ಫಿಂಚ್ (6 ಇನ್ನಿಂಗ್ಸ್‌, 396 ರನ್), ಇಂಗ್ಲೆಂಡ್‌ನ ಜೋ ರೂಟ್ (5 ಇನ್ನಿಂಗ್ಸ್, 367 ರನ್), ರೋಹಿತ್ ಶರ್ಮಾ (3 ಇನ್ನಿಂಗ್ಸ್‌, 319 ರನ್) ಇದ್ದಾರೆ.

ವಿಶ್ವಕಪ್: ತೆಂಡೂಲ್ಕರ್, ಲಾರಾ ವಿಶ್ವದಾಖಲೆ ಮುರಿಯಲಿದ್ದಾರೆ ವಿರಾಟ್ ಕೊಹ್ಲಿ!ವಿಶ್ವಕಪ್: ತೆಂಡೂಲ್ಕರ್, ಲಾರಾ ವಿಶ್ವದಾಖಲೆ ಮುರಿಯಲಿದ್ದಾರೆ ವಿರಾಟ್ ಕೊಹ್ಲಿ!

ಪಾಕಿಸ್ತಾನ ವಿರುದ್ಧದ ಕುತೂಹಲಕಾರಿ ಪಂದ್ಯದಲ್ಲಿ 113 ಎಸೆತಗಳಿಗೆ 140 ರನ್ ಬಾರಿಸಿದ್ದ ಶರ್ಮಾ ತಂಡದ ಗೆಲುವಿಗೆ ಕಾರಣರಾಗಿದ್ದರು. ಜೂನ್ 22ರಂದು ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಹಿತ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೆ ಒಟ್ಟು ರನ್ ಸಾಧನೆ ಪಟ್ಟಿಯಲ್ಲಿ ಮೇಲಕ್ಕೇರಲಿದ್ದಾರೆ. ವೈಯಕ್ತಿಕ ಅತ್ಯಧಿಕ ರನ್‌ ಪಟ್ಟಿಯಲ್ಲೂ ವಾರ್ನರ್ (166 ರನ್) ಮೊದಲ ಸ್ಥಾನದಲ್ಲಿದ್ದರೆ, ಶರ್ಮಾ (140 ರನ್) 5ನೇ ಸ್ಥಾನದಲ್ಲಿದ್ದಾರೆ.

Story first published: Friday, June 21, 2019, 13:44 [IST]
Other articles published on Jun 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X