ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ ಫೈನಲ್‌ಗೆ ಆನ್‌ಫೀಲ್ಡ್‌ ಅಂಪೈರ್‌ಗಳನ್ನು ಪ್ರಕಟಿಸಿದ ಐಸಿಸಿ

Officials for the World Cup final announced

ಲಂಡನ್‌, ಜುಲೈ 12: ಪ್ರಸಕ್ತ ವಿಶ್ವಕಪ್‌ನಲ್ಲಿ ಅಂಪೈರ್‌ಗಳ ಪ್ರಮಾದ ಕೂಡ ಸಾಕಷ್ಟು ಚರ್ಚೆಗೆ ಕಾರಣವಾಗಿ. ಸೆಮಿಫೈನಲ್ಸ್‌ ಪಂದ್ಯಗಳಲ್ಲೂ ಕೂಡ ಆನ್‌ಫೀಲ್ಡ್‌ ಅಂಪೈರ್‌ಗಳ ಎಡವಟ್ಟು ಕ್ರಿಕೆಟ್‌ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಹೀಗಾಗಿ ಭಾನುವಾರ ನಡೆಯಲಿರುವ ಇಂಗ್ಲೆಂಡ್‌ ಮತ್ತು ನ್ಯೂಜಿಲೆಂಡ್‌ ನಡುವಣ ವಿಶ್ವಕಪ್‌ ಫೈನಲ್‌ ಪಂದ್ಯಕ್ಕೆ ಅಂಪೈರ್‌ಗಳಾಗಿ ಕಾರ್ಯ ನಿರ್ವಹಿಸುವವರು ಯಾರು ಎಂಬ ಕುತೂಹಲ ಹೆಚ್ಚಾಗಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಶುಕ್ರವಾರ ಪಂದ್ಯದಲ್ಲಿ ಕಾರ್ಯನಿರ್ವಹಿಸುವ ತನ್ನ ಅಧಿಕಾರಿಗಳ ಹೆಸರನ್ನು ಬಿಡುಗಡೆ ಮಾಡಿದೆ.

ನ್ಯೂಜಿಲೆಂಡ್‌ ವಿರುದ್ಧದ ಫೈನಲ್‌ ಕುರಿತಾಗಿ ಮಾತನಾಡಿದ ಇಂಗ್ಲೆಂಡ್‌ ನಾಯಕ!ನ್ಯೂಜಿಲೆಂಡ್‌ ವಿರುದ್ಧದ ಫೈನಲ್‌ ಕುರಿತಾಗಿ ಮಾತನಾಡಿದ ಇಂಗ್ಲೆಂಡ್‌ ನಾಯಕ!

ಶ್ರೀಲಂಕಾದ ಕುಮಾರ ಧರ್ಮಸೇನಾ ಮತ್ತು ದಕ್ಷಿಣ ಆಫ್ರಿಕಾ ಮರಾಯಿಸ್‌ ಎರಾಸ್ಮಸ್‌ ಫೈನಲ್‌ ಪಂದ್ಯದಲ್ಲಿ ಆನ್‌ಫೀಲ್ಡ್‌ ಅಂಪೈರ್‌ಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಐಸಿಸಿ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಇನ್ನು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ನಡುವಣ ಸೆಮಿಫೈನಲ್‌ ಪಂದ್ಯದಲ್ಲೂ ಇದೇ ಅಂಪೈರ್‌ಗಳು ಕಾರ್ಯ ನಿರ್ವಹಿಸಿದ್ದರು.

ವಿಶ್ವಕಪ್‌ ಕೂಡ ಐಪಿಎಲ್‌ ರೀತಿ ಆಗಬೇಕು ಎಂದ ವಿರಾಟ್‌ ಕೊಹ್ಲಿ!ವಿಶ್ವಕಪ್‌ ಕೂಡ ಐಪಿಎಲ್‌ ರೀತಿ ಆಗಬೇಕು ಎಂದ ವಿರಾಟ್‌ ಕೊಹ್ಲಿ!

ಪಂದ್ಯದಲ್ಲಿ ಇಂಗ್ಲೆಂಡ್‌ ತಂಡದ ಗೆಲುವಿನ ರೂವಾರಿ ಆರಂಭಿಕ ಬ್ಯಾಟ್ಸ್‌ಮನ್‌ ಜೇಸನ್‌ ರಾಯ್‌ 65 ಎಸೆತಗಳಲ್ಲಿ 85 ರನ್‌ಗಳನ್ನು ಚಚ್ಚಿದ್ದ ಸಂದರ್ಭದಲ್ಲಿ ನಾಟ್‌ಔಟ್‌ ಆಗಿದ್ದರೂ ಕೂಡ ಸ್ಟ್ರೈಕ್‌ ಅಂಪೈರ್‌ ಕುಮಾರ ಧರ್ಮ ಸೇನಾ ಕಾಟ್‌ ಬಿಹೈಂಡ್‌ ತೀರ್ಪು ನೀಡಿದ್ದರು. ಜೇಸನ್‌ ರಾಯ್‌ ಕೂಡಲೇ ಈ ತೀರ್ಪಿನ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತ ಪಡಿಸಿ ಅಂಪೈರ್‌ಗಳ ಬಳಿ ಚರ್ಚೆ ನಡೆದಿದರು. ಇಂಗ್ಲೆಂಡ್‌ ತಂಡ ತನ್ನ ಡಿಆರ್‌ಎಸ್‌ ಹಕ್ಕನ್ನು ಈಗಾಗಲೇ ಬಳಕೆ ಮಾಡಿ ವಿಫಲಗೊಂಡಿದ್ದರಿಂದ ಈ ತೀರ್ಪನ್ನು ಮರುಪರಿಶೀಲನೆಗೆ ಒಳಪಡಿಸಲು ಸಾಧ್ಯವಾಗಲಿಲ್ಲ.

ಪಂದ್ಯದ ಬಳಿಕ ಅಂಪೈರ್‌ ತೀರ್ಪಿಗೆ ಅಸಮಾಧಾನ ವ್ಯಕ್ತ ಪಡಿಸಿದ ಕಾರಣಕ್ಕೆ ಜೇಸನ್‌ ರಾಯ್‌ ತಮ್ಮ ಪಂದ್ಯ ಸಂಭಾವನೆಯ ಶೇ.30 ರಷ್ಟು ಮೊತ್ತವನ್ನು ದಂಡವಾಗಿ ತೆತ್ತರಲ್ಲದೆ, ಎರಡು ಡೀಮೆರಿಟ್‌ ಅಂಕಗಳಿಗೂ ಗುರಿಯಾಗಿದ್ದಾರೆ.

ವಿಶ್ವಕಪ್‌ನಲ್ಲಿ ತಮ್ಮ ಯಶಸ್ಸಿನ ಗುಟ್ಟೇನೆಂಬುದನ್ನು ಬಿಚ್ಚಿಟ್ಟ ಆರ್ಚರ್‌ವಿಶ್ವಕಪ್‌ನಲ್ಲಿ ತಮ್ಮ ಯಶಸ್ಸಿನ ಗುಟ್ಟೇನೆಂಬುದನ್ನು ಬಿಚ್ಚಿಟ್ಟ ಆರ್ಚರ್‌

ಇನ್ನು ಭಾರತ ಮತ್ತು ನ್ಯೂಜಿಲೆಂಡ್‌ ನಡುವಣ ಸೆಮಿಫೈನಲ್‌ ಪಂದ್ಯದಲ್ಲೂ ಅಂಪೈರ್‌ಗಳ ಪ್ರಮಾದ ಅಭಿಮಾನಿಗಳ ಆಕ್ರೋಷಕ್ಕೆ ಕಾರಣವಾಗಿತ್ತು. ಧೋನಿ ಔಟ್‌ ಆದ ಸಂದರ್ಭದಲ್ಲಿ ನ್ಯೂಜಿಲೆಂಡ್‌ ತಂಡ ಕನಿಷ್ಠ 4 ಫೀಲ್ಡರ್‌ಗಳನ್ನು 30 ಯಾರ್ಡ್‌ ಒಳಗೆ ತಂದಿರಲಿಲ್ಲ. ಇದನ್ನು ಅಂಪೈರ್‌ಗಳು ಗಮನಿಸದ ಕಾರಣ ಭಾರತಕ್ಕೆ ನೋಬಾಲ್‌ ಸಿಗಲಿಲ್ಲ. ಬದಲಾಗಿ ಧೋನಿ ರನ್‌ಔಟ್‌ ಕೂಡ ಆಗಿದ್ದರು. ನೋಬಾಲ್‌ನಲ್ಲೂ ರನ್‌ಔಟ್‌ ಆಗಬಹುದು. ಆದರೆ, ಆ ಎಸೆತವನ್ನು ಅಂಪೈರ್‌ ಮೊದಲೇ ನೋಬಾಲ್‌ ಎಂದಿದ್ದರೆ ಧೋನಿ 2 ರನ್‌ ಗಳಿಸುವ ಗೋಜಿಗೆ ಬೀಳದೆ ಸ್ಟ್ರೈಕ್‌ ತಮ್ಮಲ್ಲೇ ಉಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದರು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಧೋನಿ ಕ್ರೀಸ್‌ನಲ್ಲಿ ಇರುವ ವರೆಗೂ ಭಾರತ ತಂಡದ ಗೆಲುವಿನ ಆಸೆ ಜೀವಂತವಾಗಿತ್ತು. ಧೋನಿ ನಿರ್ಗಮನದೊಂದಿಗೆ ಭಾರತ 49 ಓವರ್‌ಗಳಲ್ಲಿ ಆಲ್‌ಔಟ್‌ ಆಗಿ 18 ರನ್‌ಗಳಿಂದ ಸೋಲುಂಡು ಸ್ಪರ್ಧೆಯಿಂದ ಹೊರಬಿದ್ದಿತು.

ವಿಶ್ವಕಪ್‌ ವೈಫಲ್ಯದ ಬೆನ್ನಲ್ಲೇ ಆಫ್ಘನ್‌ ತಂಡದ ನಾಯಕನ ಬದಲಾವಣೆವಿಶ್ವಕಪ್‌ ವೈಫಲ್ಯದ ಬೆನ್ನಲ್ಲೇ ಆಫ್ಘನ್‌ ತಂಡದ ನಾಯಕನ ಬದಲಾವಣೆ

ಇನ್ನು ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾದ ರಾಡ್‌ ಟಕರ್‌ ಮೂರನೇ ಹಾಗೂ ಪಾಕಿಸ್ತಾನದ ಅಲೀಮ್‌ ದಾರ್‌ ನಾಲ್ಕನೇ ಅಂಪೈರ್‌ ಆಗಿ ಕಾರ್ಯ ನಿರ್ವಹಿಸಿದರೆ, ಶ್ರೀಲಂಕಾದ ರಂಜನ್‌ ಮದುಗಲೆ ಮ್ಯಾಚ್‌ ರೆಫ್ರಿ ಜವಾಬ್ದಾರಿ ನಿಭಾಯಿಸಲಿದ್ದಾರೆ.

Story first published: Friday, July 12, 2019, 21:58 [IST]
Other articles published on Jul 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X