ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ಪಾಕ್‌ ಆಲ್ ರೌಂಡರ್ ಶೋಯೆಬ್ ಮಲಿಕ್‌ಗೆ ಗೆಲುವಿನ ವಿದಾಯ

World Cup 2019: Pakistan’s Shoaib Malik announces retirement from ODI cricket

ಲಂಡನ್, ಜುಲೈ 6: ಲಂಡನ್‌ ಲಾರ್ಡ್ಸ್ ನಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನ ತಂಡ 94 ರನ್ ಜಯ ಗಳಿಸಿದ ಬೆನ್ನಲ್ಲೇ ಪಾಕ್‌ ಆಲ್ ರೌಂಡರ್ ಶೋಯೆಬ್ ಮಲ್ಲಿಕ್ ಅವರು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಶುಕ್ರವಾರದ (ಜುಲೈ 5) ಪಂದ್ಯದಲ್ಲಿ ಮಲಿಕ್ ಆಡಿರಲಿಲ್ಲ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಬಾಂಗ್ಲಾ ವಿರುದ್ಧ ಪಾಕ್ ಜಯ ಗಳಿಸಿದ ಬಳಿಕ ಮೈದಾನದಲ್ಲಿ ಸಂಭ್ರಮಾಚರಿಸಿದ ಪಾಕ್ ಕ್ರಿಕೆಟಿಗರು ಆ ಬಳಿಕ ಸಾಲಾಗಿ ನಿಂತು ಮಲಿಕ್‌ಗೆ ವಿದಾಯ ಸೂಚಿಸಿದರು. ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳೂ ಎದ್ದುನಿಂತು ನೆಚ್ಚಿನ ಆಟಗಾರನ ಸಾಧನೆಗೆ ಅಭಿನಂದನೆ ಸಲ್ಲಿಸಿದರು.

ವಿಶ್ವಕಪ್: ಧೋನಿ ಬಗ್ಗೆ ನೇರ ಅಭಿಪ್ರಾಯ ತಿಳಿಸಿದ ಲಂಕಾ ವೇಗಿ ಮಾಲಿಂಗವಿಶ್ವಕಪ್: ಧೋನಿ ಬಗ್ಗೆ ನೇರ ಅಭಿಪ್ರಾಯ ತಿಳಿಸಿದ ಲಂಕಾ ವೇಗಿ ಮಾಲಿಂಗ

37ರ ಹರೆಯದ ಶೋಯೆಬ್ ಮಲಿಕ್, ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಸುಮಾರು 20 ವರ್ಷಗಳ ವೃತ್ತಿಜೀವನ ಕಂಡಿದ್ದಾರೆ. 258 ಏಕದಿನ ಇನ್ನಿಂಗ್ಸ್‌ಗಳಲ್ಲಿ 34.56ರ ಸರಾಸರಿಯಂತೆ 7534 ರನ್ ಗಳಿಸಿದ್ದಾರೆ. 217 ಏಕದಿನ ಇನ್ನಿಂಗ್ಸ್‌ಗಳಲ್ಲಿ 158 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಂದ್ಹಾಗೆ, ಮಲಿಕ್ ಅವರು ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಝಾ ಅವರ ಪತಿ.

ನಿವೃತ್ತಿ ಘೋಷಿಸಿ ಮಾತನಾಡಿದ ಮಲಿಕ್, 'ವಿಶ್ವಕಪ್‌ ಬಳಿಕ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ನೀಡುತ್ತೇನೆ ಎಂದು ನಾನು ಈ ಮೊದಲೇ ಹೇಳಿದ್ದೆ. ಅದನ್ನು ನಾನಿವತ್ತು ಘೋಷಿಸುತ್ತಿದ್ದೇನೆ. ನನಗೆ ಬೆಂಬಲಿಸಿದ ಎಲ್ಲಾ ಅಭಿಮಾನಿಗಳಿಗೂ ಧನ್ಯವಾದಗಳು. ನಿಮ್ಮೆಲ್ಲರನ್ನೂ ನಾನು ಯಾವತ್ತಿಗೂ ಪ್ರೀತಿಸುತ್ತೇನೆ' ಎಂದರು.

ಸೆಮಿಫೈನಲ್ಸ್‌ಗೂ ಮುನ್ನ ಸ್ಟಾರ್‌ ಬ್ಯಾಟ್ಸ್‌ಮನ್‌ ಕರೆತಂದ ಆಸ್ಟ್ರೇಲಿಯಾ!ಸೆಮಿಫೈನಲ್ಸ್‌ಗೂ ಮುನ್ನ ಸ್ಟಾರ್‌ ಬ್ಯಾಟ್ಸ್‌ಮನ್‌ ಕರೆತಂದ ಆಸ್ಟ್ರೇಲಿಯಾ!

ಶುಕ್ರವಾರ ಬಾಂಗ್ಲಾ ಎದುರು ಪಾಕಿಸ್ತಾನ ವಿಶ್ವಕಪ್ ಲೀಗ್ ಹಂತದ ಕಡೇ ಪಂದ್ಯವನ್ನಾಡಿತ್ತು. ಈ ಪಂದ್ಯದಲ್ಲಿ ಪಾಕ್ 311+ ರನ್‌ಗಳಿಂದ ಗೆದ್ದಿದ್ದರೆ ನ್ಯೂಜಿಲೆಂಡ್ ಹಿಂದಿಕ್ಕಿ ಸೆಮಿಫೈನಲ್ ಪ್ರವೇಶಿಸಲು ಅವಕಾಶವಿತ್ತು. ಆದರೆ ದೊಡ್ಡ ರನ್‌ನಿಂದ ಗೆಲ್ಲಲು ಸಾಧ್ಯವಾಗದ್ದರಿಂದ ನ್ಯೂಜಿಲೆಂಡ್ ಸೆಮಿಫೈನಲ್ ಖಾತ್ರಿಪಡಿಸಿಕೊಂಡಿದೆ.

Story first published: Saturday, July 6, 2019, 16:37 [IST]
Other articles published on Jul 6, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X