ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2019: ಇಮಾದ್ ಸಾಹಸ, ಅಫ್ಘಾನ್ ವಿರುದ್ಧ ಪಾಕ್‌ಗೆ ರೋಚಕ ಜಯ

World Cup 2019: Pakistan vs Afghanistan, Match 36 - Live Score

ಲೀಡ್ಸ್, ಜೂನ್ 29: ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ಶನಿವಾರ (ಜೂನ್ 29) ನಡೆದ ವಿಶ್ವಕಪ್ 36ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನ 3 ವಿಕೆಟ್ ರೋಚಕ ಗೆಲುವನ್ನಾಚರಿಸಿದೆ. ಈ ಗೆಲುವಿನೊಂದಿಗೆ ಪಾಕ್ ಐಸಿಸಿ ವಿಶ್ವಕಪ್ 2019ರ ಸೆಮಿಫೈನಲ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಆದರೆ ಅಫ್ಘಾನ್ ಸತತ 8ನೇ ಸೋಲು ಅನುಭವಿಸಿದಂತಾಗಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಅಫ್ಘಾನ್, ಪಾಕಿಸ್ತಾನಕ್ಕೆ ದೊಡ್ಡ ರನ್ ಗುರಿ ನೀಡಲುವಲ್ಲಿ ಎಡವಿತು. ರಹಮತ್ ಶಾ 35, ನಾಯಕ ಗುಲ್ಬಾದಿನ್ ನೈಬ್ 15, ಇಕ್ರಮ್ ಅಲಿ ಖಿಲ್ 24, ಅಸ್ಘರ್ ಅಫ್ಘಾನ್ 42, ಮೊಹಮ್ಮದ್ ನಬಿ 16, ನಜೀಬುಲ್ಲ ಝದ್ರನ್ 42, ಸಮಿಯುಲ್ಲಾ ಶಿನ್ವಾರಿ 19, ಮುಜೀಬ್ ಉರ್ ರಹ್ಮಾನ್ 7, ರಶೀದ್ ಖಾನ್ 8 ರನ್ ಕೊಡುಗೆಯಷ್ಟೇ ತಂಡಕ್ಕೆ ಲಭಿಸಿತು.

ಪಾಕಿಸ್ತಾನ vs ಅಫ್ಘಾನಿಸ್ತಾನ, ಜೂನ್ 29, ಸ್ಕೋರ್‌ಕಾರ್ಡ್

1
43679

ಅಫ್ಘಾನ್ ತಂಡ 50 ಓವರ್ ಮುಕ್ತಾಯಕ್ಕೆ 9 ವಿಕೆಟ್ ನಷ್ಟದಲ್ಲಿ 227 ರನ್ ಬಾರಿಸಿತು. ಅಫ್ಘಾನ್ ಇನ್ನಿಂಗ್ಸ್ ವೇಳೆ ಪಾಕ್ ಬೌಲರ್‌ಗಳಾದ ಇಮಾದ್ ವಾಸಿಮ್ 2, ಶಾಹೀನ್ ಅಫ್ರದಿ 4, ವಹಾಬ್ ರಿಯಾಝ್ 2, ಶದಾಬ್ ಖಾನ್ 1 ವಿಕೆಟ್ ಪಡೆದರು.

ಧೋನಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿ: ಆಸೀಸ್ ಮಾಜಿ ಕ್ರಿಕೆಟಿಗಧೋನಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿ: ಆಸೀಸ್ ಮಾಜಿ ಕ್ರಿಕೆಟಿಗ

ಗುರಿ ಬೆಂಬತ್ತಿ ಪಾಕಿಸ್ತಾನಕ್ಕೆ ಅಫ್ಘಾನ್ ಆರಂಭದಿಂದಲೂ ಬೌಲಿಂಗ್ ಬೆದರಿಕೆ ಒಡ್ಡುತ್ತಾ ಬಂತು. ಇಮಾಮ್-ಉಲ್-ಹಕ್ 36, ಫಖರ್ ಜಮಾನ್ 0, ಬಾಬರ್ ಅಝಾಮ್ 45, ಮೊಹಮ್ಮದ್ ಹಫೀಜ್ 19, ಹ್ಯಾರಿಸ್ ಸೊಹೈಲ್ 27, ಸರ್ಫರಾಜ್ ಅಹ್ಮದ್ 18, ಇಮಾದ್ ವಾಸಿಮ್ ಅಜೇಯ 49, ಶದಾಬ್ ಖಾನ್ 11, ವಹಾಬ್ ರಿಯಾಜ್ ಅಜೇಯ 15 ರನ್ ಸೇರಿಸಿದರು.

ಶಮಿಯ 'ಅಣಕು' ಸೆಲ್ಯೂಟ್ ಗೆ ಕಾಟ್ರೆಲ್ ವಿಶಿಷ್ಟ ರೀತಿಯಲ್ಲಿ ಪ್ರತ್ಯುತ್ತರಶಮಿಯ 'ಅಣಕು' ಸೆಲ್ಯೂಟ್ ಗೆ ಕಾಟ್ರೆಲ್ ವಿಶಿಷ್ಟ ರೀತಿಯಲ್ಲಿ ಪ್ರತ್ಯುತ್ತರ

ಅಂತಿಮ ಓವರ್‌ನಲ್ಲಿ 6 ರನ್‌ಗಳ ಅವಶ್ಯಕತೆ ಪಾಕ್‌ಗಿತ್ತು. ಆದರೆ ಇಮಾದ್-ವಹಾಬ್ ಜೋಡಿ ಪಂದ್ಯ ಗೆಲ್ಲಿಸಿಕೊಟ್ಟಿತು. 49.4 ಓವರ್‌ಗೆ ಪಾಕಿಸ್ತಾನ 7 ವಿಕೆಟ್‌ ನಷ್ಟದಲ್ಲಿ 230 ರನ್ ಬಾರಿಸಿತು. ಅಫ್ಘಾನಿಸ್ತಾನ್‌ನ ಮುಜೀಬ್ ಉರ್ ರಹ್ಮಾನ್ 2, ಮೊಹಮ್ಮದ್ ನಬಿ 2, ರಶೀದ್ ಖಾನ್ 1 ವಿಕೆಟ್ ಪಡೆದರು. ಈ ಜಯದೊಂದಿಗೆ ಪಾಕಿಸ್ತಾನ ವಿಶ್ವಕಪ್ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದಿದೆ.

ಭಾರತದ ವಿರುದ್ಧ ಗೆಲ್ಲಲೇಬೇಕಿರುವ ಸಂದಿಗ್ಧದಲ್ಲಿ ಇಂಗ್ಲೆಂಡ್ಭಾರತದ ವಿರುದ್ಧ ಗೆಲ್ಲಲೇಬೇಕಿರುವ ಸಂದಿಗ್ಧದಲ್ಲಿ ಇಂಗ್ಲೆಂಡ್

ಐಸಿಸಿ ವಿಶ್ವಕಪ್ 2019 ಅಫ್ಘಾನಿಸ್ತಾನ ಪಾಲಿಗಂತೂ ನಿರಾಶೆ ತಂದಿದೆ. ಯಾಕೆಂದರೆ ಗುಲ್ಬಾದಿನ್ ನೈಬ್ ಬಳಗ ಈವರೆಗೆ ಆಡಿರುವ 8ರಲ್ಲಿ ಒಂದು ಪಂದ್ಯದಲ್ಲೂ ಗೆದ್ದಿಲ್ಲ. ಅಫ್ಘಾನಿಸ್ತಾನಕ್ಕೆ ವೆಸ್ಟ್ ಇಂಡೀಸ್ ವಿರುದ್ಧವೂ ಮುಂದೆ ಪಂದ್ಯವಿದ್ದು, ಈ ಪಂದ್ಯ ಅಫ್ಘಾನ್‌ಗೆ ಕೇವಲ ಔಪಚಾರಿಕವಾಗಿದೆ.

ಬಿಸಿಸಿಐನಿಂದ ಕೇಸರಿ ಬಣ್ಣದ ಟೀಮ್‌ ಇಂಡಿಯಾ ಜರ್ಸಿ ಅನಾವರಣ!ಬಿಸಿಸಿಐನಿಂದ ಕೇಸರಿ ಬಣ್ಣದ ಟೀಮ್‌ ಇಂಡಿಯಾ ಜರ್ಸಿ ಅನಾವರಣ!

ಪಾಕಿಸ್ತಾನ ತಂಡ: ಇಮಾಮ್-ಉಲ್-ಹಕ್, ಫಖರ್ ಜಮಾನ್, ಬಾಬರ್ ಅಝಾಮ್, ಮೊಹಮ್ಮದ್ ಹಫೀಜ್, ಹ್ಯಾರಿಸ್ ಸೊಹೈಲ್, ಸರ್ಫರಾಜ್ ಅಹ್ಮದ್ (ಸಿ & ವಿಕೆ), ಇಮದ್ ವಾಸಿಮ್, ಶಾದಾಬ್ ಖಾನ್, ವಹಾಬ್ ರಿಯಾಜ್, ಮೊಹಮ್ಮದ್ ಅಮೀರ್, ಶಾಹೀನ್ ಅಫ್ರಿದಿ.

ಅಫ್ಘಾನಿಸ್ತಾನ ತಂಡ: ಗುಲ್ಬಾದೀನ್ ನೈಬ್ (ಸಿ), ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ, ಅಸ್ಗರ್ ಅಫ್ಘಾನ್, ಮೊಹಮ್ಮದ್ ನಬಿ, ಸಮಿಯುಲ್ಲಾ ಶಿನ್ವಾರಿ, ನಜೀಬುಲ್ಲಾ ಝದ್ರನ್, ಇಕ್ರಮ್ ಅಲಿ ಖಿಲ್ (ವಿಕೆ), ರಶೀದ್ ಖಾನ್, ಹಮೀದ್ ಹಸನ್, ಮುಜೀಬ್ ಉರ್ ರಹಮಾನ್.

Story first published: Saturday, June 29, 2019, 22:53 [IST]
Other articles published on Jun 29, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X