ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ಕ್ರಿಕೆಟ್‌ ವಿಶ್ವಕಪ್‌ ಸೆಮಿಫೈನಲ್ಸ್‌ ಪಂದ್ಯ ಎಲ್ಲಿ? ಯಾವಾಗ?

ICC World Cup 2019 : ಎಲ್ಲರಿಗೂ ಹೆಚ್ಚಾಗಿದೆ ಭಯ..? | Oneindia Kannada
World Cup 2019 semi-finals fixtures decided

ಲೀಡ್ಸ್‌, ಜುಲೈ, 07: ಕಳೆದ ಒಂದೂವರೆ ತಿಂಗಳೂ ಕಾಲ ನಡೆದ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ 45 ಲೀಗ್‌ ಪಂದ್ಯಗಳು ಇದೇ ಶನಿವಾರ ಮುಕ್ತಾಯಗೊಂಡಿದ್ದು, ಇದೀಗ ಟೂರ್ನಿಯು ನಾಕ್‌ಔಟ್ಸ್‌ ಹಂತಕ್ಕೆ ಕಾಲಿಟ್ಟಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಅಂದಹಾಗೆ ಟೂರ್ನಿಯಲ್ಲಿ ಆಸ್ಟ್ರೇಲಿಯಾ, ಭಾರತ, ಇಂಗ್ಲೆಂಡ್‌ ಮತ್ತು ನ್ಯೂಜಿಲೆಂಡ್‌ ತಂಡಗಳು ಸೆಮಿಫೈನಲ್ಸ್‌ ಅರ್ಹತೆ ಗಳಿಸಿದ್ದರೂ ಕೂಡ ಅಂತಿಮ ನಾಲ್ಕರ ಘಟ್ಟದಲ್ಲಿ ಯಾವ ತಂಡ ಎಲ್ಲಿ ಯಾರೆದು ಸ್ಪರ್ಧಿಸುತ್ತದೆ ಎಂಬುದು ಮಾತ್ರ ಸ್ಪಷ್ಟವಾಗಿರಲಿಲ್ಲ. ಇದಕ್ಕಾಗಿ ಲೀಗ್ ಹಂತದ ಕೊನೆಯ ಎರಡು ಪಂದ್ಯಗಳ ಫಲಿತಾಂಶಕ್ಕಾಗಿ ಕಾದು ಕುಳಿತುಕೊಳ್ಳುವಂತಾಗಿತ್ತು.

ರವೀಂದ್ರ ಜಡೇಜಾ ಬಗ್ಗೆ ಮೊಹಮ್ಮದ್‌ ಅಝರುದ್ದೀನ್‌ ಹೇಳಿದ್ದೇನು ಗೊತ್ತಾ?ರವೀಂದ್ರ ಜಡೇಜಾ ಬಗ್ಗೆ ಮೊಹಮ್ಮದ್‌ ಅಝರುದ್ದೀನ್‌ ಹೇಳಿದ್ದೇನು ಗೊತ್ತಾ?

ಅಂತೆಯೇ ಶನಿವಾರ ನಡೆದ 44ನೇ ಲೀಗ್‌ ಪಂದ್ಯದಲ್ಲಿ ಟೀಮ್‌ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿ 1996ರ ವಿಶ್ವ ಚಾಂಪಿಯನ್ಸ್‌ ಶ್ರೀಲಂಕಾ ವಿರುದ್ಧ 7 ವಿಕೆಟ್‌ ಜಯದೊಂದಿಗೆ ಅಂಕಪಟ್ಟಿಯ ಅಗ್ರಸ್ಥಾನಕ್ಕೇರಿತು. ಬಳಿಕ ನಡೆದ 45ನೇ ಹಾಗೂ ಕೊನೆಯ ಲೀಗ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 10 ರನ್‌ಗಳಿಂದ ಸೋತು ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಾರಿತು.

ವಿಶ್ವಕಪ್‌ನಲ್ಲಿ ಧೋನಿ ವಿಭಿನ್ನ ಬ್ಯಾಟ್‌ಗಳನ್ನು ಬಳಸುತ್ತಿರುವುದೇಕೆ ಗೊತ್ತಾ?ವಿಶ್ವಕಪ್‌ನಲ್ಲಿ ಧೋನಿ ವಿಭಿನ್ನ ಬ್ಯಾಟ್‌ಗಳನ್ನು ಬಳಸುತ್ತಿರುವುದೇಕೆ ಗೊತ್ತಾ?

ಇದರೊಂದಿಗೆ ಅಂಕಪಟ್ಟಿಯಲ್ಲಿನ ಅಗ್ರಸ್ಥಾನಿ ಟೀಮ್‌ ಇಂಡಿಯಾ ಜುಲೈ 9ರಂದು ನಡೆಯಲಿರುವ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಪೈಪೋಟಿ ನಡೆಸಲಿದೆ.

ಭಾರತ ತಂಡ ಲೀಗ್‌ ಹಂತಲ್ಲಿ ಇಂಗ್ಲೆಂಡ್‌ ವಿರುದ್ಧದ ಏಕಮಾತ್ರ ಸೋಲಿನ ಹೊರತಾಗಿ ಉಳಿದೆಲ್ಲಾ ಪಂದ್ಯಗಳನ್ನು ಗೆದ್ದು ನಾಕ್‌ಔಟ್‌ ಪ್ರವೇಶಿಸಿದೆ. ಅಂದಹಾಗೆ ಗ್ರೂಪ್‌ ಹಂತದಲ್ಲಿ ಭಾರತ ಮತ್ತು ನ್ಯೂಜಿಲೆಂಡ್‌ ನಡುವೆ ಜೂನ್‌ 13ರಂದು ನಡೆಯಬೇಕಿದ್ದ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಹೀಗಾಗಿ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಇತ್ತಂಡಗಳು ಪೈಪೋಟಿ ನಡೆಸಲಿವೆ. ಇನ್ನು ವಿಶ್ವಕಪ್‌ಗೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲಿ ಭಾರತದ ವಿರುದ್ಧ ಕಿವೀಸ್‌ ಪಡೆ 6 ವಿಕೆಟ್‌ಗಳ ಜಯ ದಾಖಲಿಸಿತ್ತು.

ಸೆಮಿಫೈನಲ್ಸ್‌ಗೂ ಮುನ್ನ ಸ್ಟಾರ್‌ ಬ್ಯಾಟ್ಸ್‌ಮನ್‌ ಕರೆತಂದ ಆಸ್ಟ್ರೇಲಿಯಾ!ಸೆಮಿಫೈನಲ್ಸ್‌ಗೂ ಮುನ್ನ ಸ್ಟಾರ್‌ ಬ್ಯಾಟ್ಸ್‌ಮನ್‌ ಕರೆತಂದ ಆಸ್ಟ್ರೇಲಿಯಾ!

ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಅಂಕಪಟ್ಟಿಯ ದ್ವಿತೀಯ ಸ್ಥಾನಿ ಆಸ್ಟ್ರೇಲಿಯಾ ಮತ್ತು ತೃತೀಯ ಸ್ಥಾನಿ ಇಂಗ್ಲೆಂಡ್‌ ತಂಡಗಳು ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ಕುಲೈ 11ರಂದು ಸೆಣಸಲಿವೆ. ಆರೊನ್‌ ಫಿಂಚ್‌ ಸಾರಥ್ಯದ ಆಸ್ಟ್ರೇಲಿಯಾ ತಂಡ ಲೀಗ್‌ ಹಂತದಲ್ಲಿ ಇಂಗ್ಲೆಂಡ್‌ ತಂಡವನ್ನು 64 ರನ್‌ಗಳಿಂದ ಬಗ್ಗುಬಡಿದಿತ್ತು.

Story first published: Sunday, July 7, 2019, 14:40 [IST]
Other articles published on Jul 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X