ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್‌ ಇಂಡಿಯಾಗೆ ಶುಭಸುದ್ದಿ, ದ. ಆಫ್ರಿಕಾದ ಈ ವೇಗಿ ವಿಶ್ವಕಪ್‌ನಿಂದಲೇ ಔಟ್‌!

ICC World Cup 2019 : ವಿಶ್ವಕಪ್ ನಿಂದಲೇ ಹೊರನಡೆದ ಸ್ಟೇನ್..! | Oneindia Kannada
World Cup 2019: South Africas Steyn ruled out with shoulder injury

ಲಂಡನ್‌, ಜೂನ್‌ 04: ಇಂಡಿಯನ್ ಪ್ರೀಮಿಯರ್‌ ಲೀಗ್‌ ವೇಳೆ ಭುಜದ ಗಾಯದ ಸಮಸ್ಯೆ ಎದುರಿಸಿ ಚೇತರಿಸುತ್ತಿದ್ದ ದಕ್ಷಿಣ ಆಫ್ರಿಕಾದ ಅನುಭವಿ ವೇಗದ ಬೌಲರ್‌ ಡೇಲ್‌ ಸ್ಟೇನ್‌, ಇದೀಗ ಎರಡನೇ ಬಾರಿ ಅದೇ ಸಮಸ್ಯೆಗೆ ತುತ್ತಾಗಿದ್ದು ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಒಂದು ಪಂದ್ಯವನ್ನೂ ಆಡಲಾಗದೆ ನಿರ್ಗಮಿಸಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು

35 ವರ್ಷದ ಅನುಭವಿ ವೇಗದ ಬೌಲರ್‌, ಜೂನ್‌ 5ರಂದು ಭಾರತ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಪರ ಈ ಬಾರಿಯ ವಿಶ್ವಕಪ್‌ನಲ್ಲಿ ಮೊದಲ ಪಂದ್ಯವನ್ನು ಆಡುವುದನ್ನು ಎದುರು ನೋಡುತ್ತಿದ್ದರು. ಇದೀಗ ಅವರ ಸ್ಥಾನದಲ್ಲಿ ಎಡಗೈ ವೇಗದ ಬೌಲರ್‌ ಬ್ಯೂರಾನ್‌ ಹೆಂಡ್ರಿಕ್ಸ್‌ ದಕ್ಷಿಣ ಆಫ್ರಿಕಾ ತಂಡ ಸೇರಿಕೊಳ್ಳಲಿದ್ದಾರೆ ಎಂದು ಐಸಿಸಿ ತಿಳಿಸಿದೆ.

ಪಾಕಿಸ್ತಾನ ತಂಡ ಈ ಬಾರಿ ವಿಶ್ವಕಪ್‌ ಟ್ರೋಫಿ ಗೆದ್ದೇ ಗೆಲ್ಲುತ್ತಂತೆ!ಪಾಕಿಸ್ತಾನ ತಂಡ ಈ ಬಾರಿ ವಿಶ್ವಕಪ್‌ ಟ್ರೋಫಿ ಗೆದ್ದೇ ಗೆಲ್ಲುತ್ತಂತೆ!

ಸ್ಟೇನ್‌, ಭುಜದ ನೋವಿನ ಸಮಸ್ಯೆ ಸಲುವಾಗಿ 2016ರಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು. ಆದರೆ, ಅಂದಿನಿಂದ ಇಂದಿನ ವರೆಗೆ ಈ ಗಾಯದ ಸಮಸ್ಯೆಯಿಂದ ಅವರಿಗೆ ಸಂಪೂರ್ಣವಾಗಿ ಹೊರಬರಲು ಸಾಧ್ಯವಾಗಿಲ್ಲ. ಇದೀಗ ಮತ್ತೊಮ್ಮೆ ಸಮಸ್ಯೆ ಮರುಕಳಿಸಿದರಿಂದ ವಿಶ್ವಕಪ್‌ನಿಂದ ಹೊರಗುಳಿಯುವಂತಾಗಿದೆ.

ವಿಶ್ವಕಪ್‌: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ಭಾರತದ ಸಂಭಾವ್ಯ 11 ತಂಡವಿಶ್ವಕಪ್‌: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ಭಾರತದ ಸಂಭಾವ್ಯ 11 ತಂಡ

ಮತ್ತೊಂದೆಡೆ ವಿಶ್ವಕಪ್‌ ಟೂರ್ನಿಯಲ್ಲಿ ಕಳಪೆ ಆರಂಭ ಕಂಡಿರುವ ದಕ್ಷಿಣ ಆಫ್ರಿಕಾ ತಂಡ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಹಾಗೂ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಮುಗ್ಗರಿಸಿ ಸಂಕಷ್ಟಕ್ಕೆ ಸಿಲುಕಿದೆ. ಈ ನಿಟ್ಟಿನಲ್ಲಿ ತನ್ನ ಮೂರನೇ ಪಂದ್ಯದಲ್ಲಿ ಬಲಿಷ್ಠ ಭಾರತ ವಿರುದ್ಧ ಡೇಲ್‌ ಸ್ಟೇನ್‌ ಕಣಕ್ಕಿಳಿದರೆ ತಂದ ವೇಗದ ಬೌಲಿಂಗ್‌ ವಿಭಾಗಕ್ಕೆ ಹೆಚ್ಚಿನ ಬಲ ಬಂದಂತಾಗುತ್ತದೆ ಎಂದು ಹರಿಣ ಪಡೆ ಎದುರು ನೋಡುತ್ತಿತ್ತು. ಆದರೆ, ಇದೀಗ ಸ್ಟೇನ್‌ ನಿರ್ಗಮನದೊಂದಿಗೆ ಪ್ರೊಟೀಯಾಸ್‌ಗೆ ಭಾರಿ ಹಿನ್ನಡೆಯುಂಟಾಗಿದೆ.

ಪಾಕ್‌ ಆಟಗಾರಿಗೆ ವಿರಾಟ್‌ ಕೊಹ್ಲಿ ರೀತಿ ಆಡುವ ಆಸೆಯಂತೆ!ಪಾಕ್‌ ಆಟಗಾರಿಗೆ ವಿರಾಟ್‌ ಕೊಹ್ಲಿ ರೀತಿ ಆಡುವ ಆಸೆಯಂತೆ!

ಇದಕ್ಕೂ ಮುನ್ನ ತಂಡದ ಯುವ ವೇಗದ ಬೌಲರ್‌ ಲುಂಗಿ ಎನ್ಗಿಡಿ ಕೂಡ ಇಂಗ್ಲೆಂಡ್‌ ವಿರುದ್ಧದ ಪಂದ್ಯದ ವೇಳೆ ಸ್ನಾಯು ಸೆಳೆತದ ಸಮಸ್ಯೆಗೆ ತುತ್ತಾಗಿದ್ದಾರೆ. ದಕ್ಷಿಣ ಆಫ್ರಿಕಾ ಮತ್ತು ಭಾರತ ತಂಡ ಬುಧವಾರ ಸೌತ್‌ಹ್ಯಾಂಪ್ಟನ್‌ನ ರೋಸ್‌ಬೌಲ್‌ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಅಂದಹಾಗೆ ಸ್ಟೇನ್‌ ನಿರ್ಗಮನ ಭಾರತದ ಪಾಲಿಗೆ ಶುಭಸುದ್ದಿಯಾಗಿದೆ.

Story first published: Tuesday, June 4, 2019, 18:05 [IST]
Other articles published on Jun 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X