ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ರೋಹಿತ್-ರಾಹುಲ್ ಶತಕ, ಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

World cup 2019: Sri Lanka vs India, Match 44 - Live Score

ಲೀಡ್ಸ್, ಜುಲೈ 6: ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಆಕರ್ಷಕ ಶತಕದ ನೆರವಿನಿಂದ ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ಶನಿವಾರ (ಜುಲೈ 6) ನಡೆದ ವಿಶ್ವಕಪ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ 7 ವಿಕೆಟ್ ಗೆಲುವನ್ನಾಚರಿಸಿದೆ. ಇದು ಟೀಮ್ ಇಂಡಿಯಾ ಐಸಿಸಿ ವಿಶ್ವಕಪ್ 2019ರಲ್ಲಿ ದಾಖಲಿಸಿದ 7ನೇ ಗೆಲುವು.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿದ ಶ್ರೀಲಂಕಾ ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಆಘಾತ ಅನುಭವಿಸಿತು. ನಾಯಕ ದಿಮುತ್ ಕರುಣರತ್ನೆ 10, ಕುಸಾಲ್ ಪೆರೆರಾ 18, ಅವಿಷ್ಕಾ ಫೆರ್ನಾಂಡೋ 20, ಕುಸಾಲ್ ಮೆಂಡಿಸ್ 3, ತಿಸೆರ ಪೆರೆರಾ 2, ಧನಂಜಯ ಡೆ ಸಿಲ್ವಾ ಅಜೇಯ 29 ರನ್‌ ಸೇರಿಸಿದರು.

ಶ್ರೀಲಂಕಾ vs ಭಾರತ, ಜುಲೈ 6, ಸ್ಕೋರ್‌ಕಾರ್ಡ್

1
43687

ಆದರೆ ಏಂಜಲೋ ಮ್ಯಾಥ್ಯೂಸ್ ಶತಕ ಮತ್ತು ಲಹಿರು ತಿರಿಮನ್ನೆ ಅರ್ಧಶತಕದಾಟ ತಂಡವನ್ನು ರನ್ ಕುಸಿತದಿಂದ ಪಾರು ಮಾಡಿತು. ಮ್ಯಾಥ್ಯೂಸ್ 113, ತಿರಿಮನ್ನೆ 53 ರನ್ ಕೊಡುಗೆ ನೀಡಿದರು. ಲಂಕಾ 50 ಓವರ್‌ ಮುಕ್ತಾಯಕ್ಕೆ 7 ವಿಕೆಟ್ ನಷ್ಟದಲ್ಲಿ 264 ರನ್ ಗಳಿಸಿತು. ಶ್ರೀಲಂಕಾ ಇನ್ನಿಂಗ್ಸ್‌ನಲ್ಲಿ ವೇಗಿ ಜಸ್‌ಪ್ರೀತ್ ಬೂಮ್ರಾ 3 ವಿಕೆಟ್‌ ಪಡೆದು ಮಿಂಚಿದರು.

ವಿಶ್ವಕಪ್: ಪಾಕ್‌ ಆಲ್ ರೌಂಡರ್ ಶೋಯೆಬ್ ಮಲಿಕ್‌ಗೆ ಗೆಲುವಿನ ವಿದಾಯವಿಶ್ವಕಪ್: ಪಾಕ್‌ ಆಲ್ ರೌಂಡರ್ ಶೋಯೆಬ್ ಮಲಿಕ್‌ಗೆ ಗೆಲುವಿನ ವಿದಾಯ

ಗುರಿ ಬೆಂಬತ್ತಿದ ಭಾರತಕ್ಕೆ ಆರಂಭಿಕ ಬ್ಯಾಟ್ಸ್ಮನ್‌ಗಳ ಭರ್ಜರಿ ಬೆಂಬಲ ಲಭಿಸಿತು. 103 ರನ್ ಬಾರಿಸಿ ರೋಹಿತ್ ಶರ್ಮಾ ಔಟಾಗುವಾಗ ಭಾರತದ ಖಾತೆಯಲ್ಲಿ 189 ರನ್‌ಗಳಿದ್ದವು. ಇದರ ಜೊತೆಗೆ ಮತ್ತೊಬ್ಬ ಆರಂಭಿಕ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಕೂಡ 111 ರನ್ ಬಾರಿಸಿದ್ದು ತಂಡ ಸುಲಭ ಗೆಲುವಾಚರಿಸಲು ನೆರವಾಯ್ತು.

ರವೀಂದ್ರ ಜಡೇಜಾ ಬಗ್ಗೆ ಮೊಹಮ್ಮದ್‌ ಅಝರುದ್ದೀನ್‌ ಹೇಳಿದ್ದೇನು ಗೊತ್ತಾ?ರವೀಂದ್ರ ಜಡೇಜಾ ಬಗ್ಗೆ ಮೊಹಮ್ಮದ್‌ ಅಝರುದ್ದೀನ್‌ ಹೇಳಿದ್ದೇನು ಗೊತ್ತಾ?

ಶರ್ಮಾ-ರಾಹುಲ್ ಶತಕ, ವಿರಾಟ್ ಕೊಹ್ಲಿ ಅಜೇಯ 34, ರಿಷಬ್ ಪಂತ್ 4, ಹಾರ್ದಿಕ್ ಪಾಂಡ್ಯ ಅಜೇಯ 6 ರನ್ ಸೇರಿಸಿದರು. ಭಾರತ 43.3 ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 265 ರನ್ ಬಾರಿಸಿತು.

ಗೆದ್ದಿದ್ದು ಪಾಕಿಸ್ತಾನ, ಸೆಮಿಫೈನಲ್‌ ತಲುಪಿದ್ದು ನ್ಯೂಜಿಲೆಂಡ್‌!ಗೆದ್ದಿದ್ದು ಪಾಕಿಸ್ತಾನ, ಸೆಮಿಫೈನಲ್‌ ತಲುಪಿದ್ದು ನ್ಯೂಜಿಲೆಂಡ್‌!

ಭಾರತ ತಂಡ: ಲೋಕೇಶ್ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ಸಿ), ರಿಷಭ್ ಪಂತ್, ಎಂ.ಎಸ್ ಧೋನಿ (ಪ), ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬೂಮ್ರಾ.

ಶ್ರೀಲಂಕಾ ತಂಡ: ದಿಮುತ್ ಕರುಣರತ್ನ (ಸಿ), ಕುಸಾಲ್ ಪೆರೆರಾ (ಪ), ಅವಿಷ್ಕಾ ಫರ್ನಾಂಡೊ, ಕುಸಲ್ ಮೆಂಡಿಸ್, ಲಹಿರು ತಿರಿಮನ್ನೆ, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ಥಿಸೆರಾ ಪೆರೆರಾ, ಇಸುರು ಉದಾನ, ಕಸುನ್ ರಾಜಿತಾ, ಲಸಿತ್ ಮಾಲಿಂಗ.

{headtohead_cricket_7_3}

Story first published: Saturday, July 6, 2019, 22:39 [IST]
Other articles published on Jul 6, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X