ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ನ್ಯೂಜಿಲ್ಯಾಂಡ್: ವಿಶ್ವದಾಖಲೆಗೆ ಕೊಹ್ಲಿಗೆ ಕೇವಲ 57 ರನ್‌ ಬೇಕು!

World Cup 2019: Virat Kohli 57 runs away from massive World Record

ನಾಟಿಂಗ್ಹ್ಯಾಮ್, ಜೂನ್ 13: ನಾಟಿಂಗ್ಹ್ಯಾಮ್‌ನ ಟ್ರೆಂಡ್ ಬ್ರಿಡ್ಜ್‌ನಲ್ಲಿ ಗುರುವಾರ (ಜೂನ್ 13) ನಡೆಯುವ ವಿಶ್ವಕಪ್ 18ನೇ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಮತ್ತು ಭಾರತ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ವಿಶ್ವ ದಾಖಲೆ ನಿರ್ಮಿಸಲು ಅವಕಾಶವಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಇದಕ್ಕೂ ಹಿಂದೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 3ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಕೊಹ್ಲಿ 77 ಎಸೆತಗಳಿಗೆ 82 ರನ್ ಬಾರಿಸಿದ್ದರು. ನ್ಯೂಜಿಲ್ಯಾಂಡ್ ವಿರುದ್ಧ ವಿರಾಟ್ ಕೇವಲ 57 ರನ್ ಬಾರಿಸಿದರೂ ಏಕದಿನ ಕ್ರಿಕೆಟ್‌ನಲ್ಲಿ ವೇಗದ 11,000 ರನ್ ಪೂರೈಸಿದ ದಾಖಲೆ ನಿರ್ಮಿಸಲಿದ್ದಾರೆ.

ಮೆಸ್ಸಿ, ರೊನಾಲ್ಡೊ ಸಾಲಿನಲ್ಲಿ ಟೀಮ್‌ ಇಂಡಿಯಾ ನಾಯಕ ಕೊಹ್ಲಿ!ಮೆಸ್ಸಿ, ರೊನಾಲ್ಡೊ ಸಾಲಿನಲ್ಲಿ ಟೀಮ್‌ ಇಂಡಿಯಾ ನಾಯಕ ಕೊಹ್ಲಿ!

ಕೊಹ್ಲಿ ದಾಖಲೆ ನಿರ್ಮಿಸಲು ಇರುವ ಅವಕಾಶಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಿದ್ದೇವೆ.

ಶಿಖರ್ ಧವನ್ ಗಾಯಾಳು

ಶಿಖರ್ ಧವನ್ ಗಾಯಾಳು

ಎಡಗೈ ಬೆರಳಿಗೆ ಗಾಯ ಮಾಡಿಕೊಂಡಿರುವ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ನ್ಯೂಜಿಲ್ಯಾಂಡ್ ವಿರುದ್ಧ ಮತ್ತು ಪಾಕಿಸ್ತಾನ ವಿರುದ್ಧದ ಪಂದ್ಯಗಳಿಂದ ಹೊರಗೆ ಉಳಿಯಲಿದ್ದಾರೆ. ಹೀಗಾಗಿ ಕೊಹ್ಲಿ ಹೆಗಲ ಮೇಲೆ ಭಾರತದ ಗೆಲುವಿನ ಹೊರೆ ಇದ್ದೇ ಇದೆ. ಹೀಗಾಗಿ ಈ ಪಂದ್ಯದಲ್ಲಿ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವ ನಿರೀಕ್ಷೆಯಿದೆ.

57 ರನ್ ಬಾರಿಸಿದರೆ ದಾಖಲೆ

57 ರನ್ ಬಾರಿಸಿದರೆ ದಾಖಲೆ

ಏಕದಿನದಲ್ಲಿ ವೇಗದ 10,000 ರನ್ ದಾಖಲೆ ಈಗಾಗಲೇ ಕೊಹ್ಲಿ ಮಾಡಿದ್ದಾರೆ. ಸದ್ಯ ಕೊಹ್ಲಿ 221 ಏಕದಿನ ಇನ್ನಿಂಗ್ಸ್‌ಗಳಲ್ಲಿ 10943 ರನ್ ಬಾರಿಸಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧ ಕೊಹ್ಲಿ 57 ರನ್ ಬಾರಿಸಿದರೂ 11 ವರ್ಷಕ್ಕೂ ಕಡಿಮೆ ಅವಧಿಯಲ್ಲಿ 11 ಸಾವಿರ ರನ್ ಬಾರಿಸಿದ ಆಟಗಾರನಾಗಿ ಕೊಹ್ಲಿ ಗುರುತಿಸಿಕೊಳ್ಳಲಿದ್ದಾರೆ.

ಸಚಿನ್, ಗಂಗೂಲಿ ಮೊದಲಿಗರು

ಸಚಿನ್, ಗಂಗೂಲಿ ಮೊದಲಿಗರು

ಏಕದಿನದಲ್ಲಿ 11,000 ರನ್ ಬಾರಿಸಿದರೆ ಕೊಹ್ಲಿ ಈ ಸಾಧನೆ ಮೆರೆದ ಭಾರತದ ಮೂರನೇ ಬ್ಯಾಟ್ಸ್ಮನ್ ಮತ್ತು ವಿಶ್ವದ 9ನೇ ಬ್ಯಾಟ್ಸ್ಮನ್ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಲಿದ್ದಾರೆ. ಈ ಮೊದಲು ಏಕದಿನದಲ್ಲಿ 11,000 ರನ್ ಸಾಧನೆಯನ್ನು ಭಾರತದ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಮಾಡಿದ್ದರು.

ದಾಖಲೆ ಮುರಿಯಲು ಅವಕಾಶ

ದಾಖಲೆ ಮುರಿಯಲು ಅವಕಾಶ

ವಿಶ್ವಕಪ್ ಟೂರ್ನಿಯಲ್ಲಿ ಹೆಚ್ಚು ಹೆಚ್ಚು ರನ್ ಗಳಿಸಿದಷ್ಟೂ ಕೊಹ್ಲಿಗೆ ದಾಖಲೆ ಬರೆಯುವ ಅವಕಾಶ ಹೆಚ್ಚಿದೆ. ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಏಕದಿನದಲ್ಲಿ ಸರ್ವಕಾಲಿಕ ಅತ್ಯಧಿಕ ರನ್‌ಗಾಗಿ ಕೊಹ್ಲಿ, ಗಂಗೂಲಿಯನ್ನು ಹಿಂದಿಕ್ಕಿ 8ನೇ ಸ್ಥಾನಕ್ಕೇರುವ ಅವಕಾಶವಿದೆ. ಗಂಗೂಲಿ ಹೆಸರಿನಲ್ಲಿ 11363 ರನ್ ದಾಖಲೆಯಿದೆ. ಭಾರತ vs ನ್ಯೂಜಿಲ್ಯಾಂಡ್ ಪಂದ್ಯ 3 pmಗೆ ಆರಂಭಗೊಳ್ಳಲಿದೆ.

Story first published: Thursday, June 13, 2019, 10:34 [IST]
Other articles published on Jun 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X