ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸೀಸ್‌ ವಿರುದ್ಧ ಸೆಮಿಫೈನಲ್‌ ಗೆದ್ದು ತೊಡೆತಟ್ಟಿ ಮಾರ್ಗನ್‌ ಹೇಳಿದ್ದಿದು!

ICC World Cup 2019 : ಆಸ್ಟ್ರೇಲಿಯಾ ವಿರುದ್ಧ ತೊಡೆತಟ್ಟಿದ ಮಾರ್ಗನ್ ಹೇಳಿದ್ದೇನು ಗೊತ್ತಾ..? | Ioan Morgan |
World Cup 2019: We have made dramatic improvement since 2015 says Eoin Morgan

ಬರ್ಮಿಂಗ್‌ಹ್ಯಾಮ್‌, ಜುಲೈ 11: ಇಂಗ್ಲೆಂಡ್‌ ತಂಡ 2015ರ ವಿಶ್ವಕಪ್‌ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದ ಬಳಿಕ ಸಾಕಷ್ಟು ಪಾಠ ಕಲಿತಿದೆ ಎಂದು ಇಂಗ್ಲೆಂಡ್‌ ತಂಡದ ನಾಯಕ ಐಯಾನ್‌ ಮಾರ್ಗನ್‌ ಗುರುವಾರ ಆಸ್ಟ್ರೇಲಿಯಾ ವಿರುದ್ಧದ ಸೆಮಿಪೈನಲ್‌ ಗೆಲುವಿನ ಬಳಿಕ ಹೇಳಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಇಲ್ಲಿನ ಎಡ್ಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಅಕ್ಷರಶಃ ಅಧಿಕಾರಯುತ ಪ್ರದರ್ಶ ನೀಡಿದ ಇಂಗ್ಲೆಂಡ್‌ ತಂಡ ಹಾಲಿ ವಿಶ್ವ ಚಾಂಪಿಯನ್ಸ್‌ ಆಸ್ಟ್ರೇಲಿಯಾವನ್ನು 8 ವಿಕೆಟ್‌ಗಳಿಂದ ಬಗ್ಗುಬಡಿದು ಭಾನುವಾರ ನಡೆಯಲಿರುವ ನ್ಯೂಜಿಲೆಂಡ್‌ ವಿರುದ್ಧದ ಫೈನಲ್‌ಗೆ ಮುನ್ನಡೆಯಿತು.

ಇದೇ ವೇಳೆ ಲೀಗ್‌ ಹಂತದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅನುಭವಿಸಿದ ಸೋಲಿಗೆ ಇಂಗ್ಲೆಂಡ್‌ ಸೆಮಿಫೈನಲ್‌ನಲ್ಲಿ ಸೇಡು ತೀರಿಸಿಕೊಂಡಿದೆ ಎಂದು ಮಾರ್ಗನ್‌ ಹೇಳಿದ್ದಾರೆ.

ಇಂಡೊ-ಪಾಕ್‌ ವಿಶ್ವಕಪ್‌ ಪಂದ್ಯದ ಚೆಂಡಿನ ಬೆಲೆ ಎಷ್ಟೂ ಅಂತೀರ!ಇಂಡೊ-ಪಾಕ್‌ ವಿಶ್ವಕಪ್‌ ಪಂದ್ಯದ ಚೆಂಡಿನ ಬೆಲೆ ಎಷ್ಟೂ ಅಂತೀರ!

"1992ರ ವಿಶ್ವಕಪ್‌ ವೇಳೆ ನನಗೆ 6 ವರ್ಷ. ಹೀಗಾಗಿ ನನಗೇನು ನೆನಪಿಲ್ಲ. ಆದರೆ ಬಳಿಕ ಆ ಬಗ್ಗೆ ಬಹಳಷ್ಟು ನೋಡಿದ್ದೇನೆ. ಭಾನುವಾರ ಇತಿಹಾಸ ಬರೆಯಲು ನಮ್ಮ ತಂಡಕ್ಕೆ ಉತ್ತಮ ಅವಕಾಶವಿದೆ. 2015ರ ಬಳಿಕ ನಮ್ಮ ತಂಡ ಬಹುದೊಡ್ಡ ನೆಗೆತವನ್ನೇ ನೆಗೆದಿದೆ. ಇದಕ್ಕೆ ಡ್ರೆಸಿಂಗ್‌ ರೂಮ್‌ನಲ್ಲಿರುವ ಪ್ರತಿಯೊಬ್ಬರಿಗೂ ಶ್ರೇಯಸ್ಸು ಸಿಗುತ್ತದೆ," ಎಂದು 2007ರ ವಿಶ್ವಕಪ್‌ನಲ್ಲಿ ಐರ್ಲೆಂಡ್‌ ಪರ ಆಡಿ ಇದೀಗ ಇಂಗ್ಲೆಂಡ್‌ ತಂಡವನ್ನು 27 ವರ್ಷಗಳ ಬಳಿಕ ಫೈನಲ್‌ಗೆ ಮುನ್ನಡೆಸಿರುವ ಮಾರ್ಗನ್‌ ಹೇಳಿದ್ದಾರೆ.

"ಎಆಯ್‌ ಮತ್ತು ಜಾನಿ ಇಬ್ಬರೂ ಕೂಡ ಅಗ್ರ ಕ್ರಮಾಂಕದಲ್ಲಿ ಅವಕಾಶ ಸಿಕ್ಕಾಗಲೆಲ್ಲಾ ಭರ್ಜರಿ ಪ್ರದರ್ಶನ ನೀಡಿದ್ದಾರೆ. ತಮ್ಮ ವೃತ್ತಿ ಜೀವನದ ಶ್ರೇಷ್ಠ ಲಯದಲ್ಲಿ ಅವರಿದ್ದು, ಇದರ ಲಾಭ ತಂಡಕ್ಕೆ ಸಿಗುತ್ತಿದೆ. ವೋಕ್ಸ್‌ ವಿಚಾರವಾಗಿಯೂ ಸಂತಸವಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಅವರು ನಮ್ಮ ತಂಡದ ಅತ್ಯುತ್ತಮ ಬೌಲರ್‌ ಆಗಿದ್ದಾರೆ," ಎಂದಿದ್ದಾರೆ.

ವಿಶ್ವಕಪ್‌: ಆಸ್ಟ್ರೇಲಿಯಾವನ್ನು ಬಗ್ಗುಬಡಿದ ಇಂಗ್ಲೆಂಡ್ ಫೈನಲ್‌ಗೆವಿಶ್ವಕಪ್‌: ಆಸ್ಟ್ರೇಲಿಯಾವನ್ನು ಬಗ್ಗುಬಡಿದ ಇಂಗ್ಲೆಂಡ್ ಫೈನಲ್‌ಗೆ

ಇನ್ನು ವಿಶ್ವಕಪ್‌ ಕ್ರಿಕೆಟ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿ ಸೆಮಿಪೈನಲ್‌ ಹಂತದಲ್ಲಿ ಆಸ್ಟ್ರೇಲಿಯಾ ತಂಡ ಸೋಲನುಭವಿಸಿದೆ. ಈ ಕುರಿತಾಗಿ ಮಾತನಾಡಿದ ಆಸೀಸ್‌ ನಾಯಕ ಆರೊನ್‌ ಫಿಂಚ್‌, "ಇಂಗ್ಲೆಂಡ್‌ ನಮ್ಮೆದುರು ಸಂಪೂರ್ಣ ಪ್ರಾಬಲ್ಯ ಮೆರೆಯಿತು. ಅದರಲ್ಲೂ ಬೌಲಿಂಗ್‌ನಲ್ಲಿ ನಮ್ಮನ್ನು 27ಕ್ಕೆ 3 ಕಳೆದುಕೊಳ್ಳುವಂತೆ ಮಾಡಿದ್ದು ಪಂದ್ಯದ ಅತ್ಯಂತ ಮಹತ್ವದ ಘಟ್ಟ. ಅಲ್ಲಿಂದ ಚೇತರಿಸಲು ನಮಗೆ ಬಹಳ ಕಷ್ಟವಾಯಿತು,'' ಎಂದು ಹೇಳಿದ್ದಾರೆ.

Story first published: Thursday, July 11, 2019, 23:43 [IST]
Other articles published on Jul 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X