ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ಶಾಕಿಬ್‌ ಶತಕ, ವಿಂಡೀಸ್‌ಗೆ ಹೀನಾಯ ಸೋಲುಣಿಸಿದ ಬಾಂಗ್ಲಾದೇಶ

ICC World Cup 2019 : ಶಕೀಬ್ ಅಬ್ಬರಕ್ಕೆ ವಿಂಡೀಸ್ ಧೂಳೀಪಟ..! | Oneindia Kannada
World Cup 2019: West Indies vs Bangladesh, Match 23-Live Updates

ಟೌನ್ಟನ್, ಜೂನ್ 17: ಪ್ರಸಕ್ತ ವಿಶ್ವಕಪ್ ಟೂರ್ನಿಯ 23ನೇ ಪಂದ್ಯದಲ್ಲಿಅಕ್ಷರಶಃ ಅಮೊಘ ಆಟವಾಡಿದ ಬಾಂಗ್ಲಾದೇಶ ತಂಡ ಎರಡು ಬಾರಿಯ ವಿಶ್ವ ಚಾಂಪಿಯನ್ಸ್‌ಗೆ 7 ವಿಕೆಟ್‌ಗಳ ಹೀನಾಯ ಸೋಲುಣಿಸಿತು.

ಇಲ್ಲಿನ ಕೂಪರ್ ಅಸೋಸಿಯೇಟ್ಸ್ ಕೌಂಟಿ ಗ್ರೌಂಡ್‌ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ವೆಸ್ಟ್‌ ಇಂಡೀಸ್‌ ತನ್ನ ಪಾಲಿನ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 321 ರನ್‌ಗಳ ಬೃಹತ್‌ ಮೊತ್ತವನ್ನೇ ದಾಖಲಿಸಿತು.

1
43666

ಬಳಿಕ ಗುರಿ ಬೆನ್ನತ್ತಿದ ಬಾಂಗ್ಲಾದೇಶಕ್ಕೆ ಉಪನಾಯಕ ಶಾಕಿಬ್‌ ಅಲ್‌ ಹಸನ್‌ ಅಜೇಯ ಶತಕ (124*) ದಾಖಲಿಸುವ ಮೂಲಕ ತಂಡಕ್ಕೆ ಜಯ ತಂದುಕೊಟ್ಟರು. ಶಾಕಿಬ್‌ ಹೊರತಾಗಿ ತಮೀಮ್‌ ಇಕ್ಬಾಲ್‌ (48) ಮತ್ತು ಲಿಟನ್‌ ದಾಸ್‌ (69 ಎಸೆತಗಳಲ್ಲಿ 94 ರನ್‌) ಅವರ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ಬಾಂಗ್ಲಾ ಪಡೆ 41.3 ಓವರ್‌ಗಳಲ್ಲಿ 3 ವಿಕೆಟ್‌ಗೆ 322 ರನ್‌ಗಳನ್ನು ಚಚ್ಚಿ ಅವಿಸ್ತಮರಣೀಯ ಗೆಲುವನ್ನು ದಾಖಲಿಸಿತು.

ಇದಕ್ಕೂ ಮುನ್ನ ವೆಸ್ಟ್‌ ಇಂಡೀಸ್‌ ಪರ ಅಮೋಗ ಬ್ಯಾಟಿಂಗ್‌ ಪ್ರದರ್ಶನ ನೀಡಿದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಶೇಯ್‌ ಹೋಪ್‌, 121 ಎಸೆತಗಳಲ್ಲಿ 96 ರನ್‌ಗಳನ್ನು ಗಳಿಸಿ ಶತಕದ ಹೊಸ್ತಿಲಲ್ಲಿ ನಿರಾಸೆ ಅನುಭವಿಸಿದರು. ಆದರೆ ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಯುವ ಪ್ರತಿಭೆ ಶಿಮ್ರಾನ್‌ ಹೆಟ್ಮಾಯೆರ್‌ ಕೇವಲ 26 ಎಸೆತಗಳಲ್ಲಿ 50 ರನ್‌ಗಳನ್ನು ಚಚ್ಚಿದರು. ಅವರ ಈ ಬಿರುಸಿನ ಇನಿಂಗ್ಸ್‌ನಲ್ಲಿ 104 ಮೀ. ದೂರಕ್ಕೆ ಸಿಕ್ಸರ್‌ ಒಂದನ್ನು ಬಾರಿಸಿದ್ದರು. ಇದು ಪ್ರಸಕ್ತ ಟೂರ್ನಿಯಲ್ಲಿ ಅತ್ಯಂತ ದೂರ ತಲುಪಿದ ಸಿಕ್ಸರ್‌ ಆಗಿದೆ.

ಇದಕ್ಕೂ ಮುನ್ನ ಆರಂಭಿಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ತೀರಾ ವಿರಳ ಎನ್ನುವಂತೆ 13 ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ಔಟಾದರೆ, ಸತತ ವೈಫಲ್ಯಗಳಿಂದ ಹೊರಬಂದ ಎವಿನ್‌ ಲೂಯಿಸ್‌ 67 ಎಸೆತಗಳಲ್ಲಿ 70 ರನ್‌ಗಳನ್ನು ಸಿಡಿಸಿ ಉತ್ತಮ ಆರಂಭ ನೀಡಿದರು. ನಾಯಕ ಜೇಸನ್‌ ಹೋಲ್ಡರ್‌ 15 ಎಸೆತಗಳಲ್ಲಿ 33 ರನ್‌ಗಳನ್ನು ಸಿಡಿಸಿ ಉತ್ತಮ ಕಾಣಿಕೆ ನೀಡಿದರು.

ಸಂಕ್ಷಿಪ್ತ ಸ್ಕೋರ್‌

ವೆಸ್ಟ್‌ ಇಂಡೀಸ್‌: 50 ಓವರ್‌ಗಳಲ್ಲಿ 321/8 (ಎವಿನ್‌ ಲೂಯಿಸ್‌ 70, ಶೇಯ್‌ ಹೋಪ್‌ 96, ಶಿಮ್ರಾನ್‌ ಹೆಟ್ಮಾಯೆರ್‌ 50, ಜೇಸನ್‌ ಹೋಲ್ಡರ್‌ 33; ಮೊಹಮ್ಮದ್‌ ಸೈಫುದ್ದೀನ್‌ 72ಕ್ಕೆ 3, ಮುಸ್ತಾಫಿಝುರ್‌ ರೆಹಮಾನ್‌ 59ಕ್ಕೆ 3, ಶಾಕಿಬ್‌ ಅಲ್‌ ಹಸನ್‌ 54ಕ್ಕೆ 2).

ಬಾಂಗ್ಲಾದೇಶ: 41.3 ಓವರ್‌ಗಳಲ್ಲಿ 322/3 (ತಮೀಮ್‌ ಇಕ್ಬಾಲ್‌ 48, ಸೌಮ್ಯ ಸಕರ್ಕಾರ್‌ 29, ಶಾಕಿಬ್‌ ಅಲ್‌ ಹಸನ್‌ ಅಜೇಯ 124, ಲಿಟನ್‌ ದಾಸ್‌ ಅಜೇಯ 94; ಆಂಡ್ರೆ ರಸೆಲ್‌ 42ಕ್ಕೆ 1, ಒಶೇನ್‌ ಥಾಮಸ್‌ 52ಕ್ಕೆ 1).

ವೆಸ್ಟ್ ಇಂಡೀಸ್ (ಪ್ಲೇಯಿಂದ 11): ಕ್ರಿಸ್ ಗೇಲ್, ಎವಿನ್ ಲೂಯಿಸ್‌, ಡರೆನ್‌ ಬ್ರಾವೋ, ಶೇಯ್‌ ಹೋಪ್ (ವಿಕೆಟ್‌ಕೀಪರ್‌), ನಿಕೋಲಸ್ ಪೂರನ್, ಶಿಮ್ರಾನ್ ಹೆಟ್ಮಾಯೆರ್‌, ಜೇಸನ್ ಹೋಲ್ಡರ್ (ಸಿ), ಆಂಡ್ರೆ ರಸೆಲ್‌, ಶೆಲ್ಡನ್ ಕಾಟ್ರೆಲ್, ಓಶೇನ್ ಥಾಮಸ್, ಶನಾನ್ ಗೇಬ್ರಿಯಲ್.

ಬಾಂಗ್ಲಾದೇಶ (ಪ್ಲೇಯಿಂದ 11): ತಮೀಮ್ ಇಕ್ಬಾಲ್, ಸೌಮ್ಯಾ ಸರ್ಕಾರ್, ಶಾಕಿಬ್ ಅಲ್ ಹಸನ್, ಮುಷ್ಫಿಕರ್ ರಹೀಮ್ (ಪ), ಲಿಟನ್ ದಾಸ್, ಮಹಮ್ಮದುಲ್ಲಾ, ಮೊಸದೆಕ್ ಹುಸೇನ್, ಮೊಹಮ್ಮದ್ ಸೈಫುದ್ದೀನ್, ಮೆಹಿದಿ ಹಸನ್, ಮಶ್ರಫೆ ಮೊರ್ತಾಜಾ (ಸಿ), ಮುಸ್ತಾಫಿಜುರ್ ರೆಹಮಾನ್.

{headtohead_cricket_8_10}

Story first published: Monday, June 17, 2019, 23:39 [IST]
Other articles published on Jun 17, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X